ಸಂಸ್ಕೃತದ ಪದ್ಯವೊಂದು, ಮನ್ಮಥನನ್ನು ವರ್ಣಿಸಿರುವುದು, ಸೊಗಸಾಗಿದೆ; ಅದರ ತಾತ್ಪರ್ಯ ಹೀಗಿದೆ:

‘ಮನ್ಮಥನ ಶಸ್ತ್ರ ಯಾವುದು? ಬಿಲ್ಲು. ಅದು ಎಂಥ ಬಿಲ್ಲು? ಹೂವಿನ ಬಿಲ್ಲು! ಈ ಬಿಲ್ಲಿನ ಹೆದೆ ಯಾವುದು ಗೊತ್ತೆ? ದುಂಬಿಗಳು! ಇನ್ನು ಇವನು ಹೂಡುವ ಬಾಣಗಳು? ಚಂಚಲೆಯರಾದ ಸುಂದರಿಯ ಕಣ್ಣೋಟವೇ ಬಾಣ. ಇವನು ಎಸಗುವ ಸರಸಸಂಗ್ರಾಮಕ್ಕೆ ನೆರವಾಗುವ ಸ್ನೇಹಿತ ನಾದರೂ ಎಂಥವನು? ಜಡನಾಗಿರುವ ಚಂದ್ರನೇ ಇವನ ಮಿತ್ರ. ಹೋಗಲಿ, ಈ ಮನ್ಮಥನಾದರೂ ಹೇಗಿದ್ದಾನೆ? ಇವನಿಗೆ ಶರೀರವೇ ಇಲ್ಲ! ಹೀಗಿದ್ದರೂ ಇಡಿಯ ಜಗತ್ತನ್ನೇ ಇವನು ವ್ಯಾಕುಲತೆಗೆ ಒಳಪಡಿಸುತ್ತಿದ್ದಾನೆ!’

ಮನ್ಮಥ ಎಂದರೆ ಕಾಮ. ಕಾಮ ಎಂದಕೂಡಲೇ ನಮಗೆ ಒಂದೇ ಅರ್ಥದತ್ತ ಗಮನ ಹೋಗುವುದು ಸಹಜ; ಅದೇ – ಹೆಣ್ಣು ಗಂಡುಗಳ ಒಲವು, ಆಕರ್ಷಣೆ. ಈ ಪದ್ಯದಲ್ಲಿರುವ ವಿವರಗಳು ಕೂಡ ಈ ಅಂಶದ ಸುತ್ತ ಹೆಣೆದಿರುವಂಥವೇ! ಆದರೆ ಕಾಮ ಎಂದರೆ ಅಷ್ಟೇ ಅಲ್ಲ; ಅದು ಪುರುಷಾರ್ಷಗಳಲ್ಲೊಂದು; ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ – ಈ ವಿವರಗಳಲ್ಲಿರುವ ‘ಕಾಮ’ದಲ್ಲಿ, ನಾವೆಲ್ಲರೂ ಇಷ್ಟ ಪಡುವ ಎಲ್ಲ ಸಂಗತಿಗಳೂ ಸೇರಿಕೊಳ್ಳುತ್ತವೆ. ನಮ್ಮ ಎಲ್ಲ ಬಯಕೆಗಳ ಮೂಟೆಯೇ ಕಾಮ. ಅದು ಹೆಚ್ಚು ಸ್ಪಷ್ಟವಾಗಿಯೂ ವಾಚ್ಯವಾಗಿಯೂ ತೀವ್ರವಾಗಿಯೂ ಕಾಣಿಸಿಕೊಳ್ಳುವುದು ಗಂಡು–ಹೆಣ್ಣುಗಳ ಪರಸ್ಪರ ಆಕರ್ಷಣೆ ಯಲ್ಲಿ. ಹೀಗಾಗಿ ಸಾಮಾನ್ಯವಾಗಿ ‘ಕಾಮ’ ಎಂದರೆ ಸ್ತ್ರೀ–ಪುರುಷರ ಸೆಳೆತ ಎಂಬಂತೆ ಸಮೀಕರಿಸಲಾಗುತ್ತದೆಯಷ್ಟೆ. ‘ಕಾಮದಹನ’ ಎಂಬುದು ಕಾಮನ ಹುಣ್ಣಿಮೆಗೆ ಇರುವ ಇನ್ನೊಂದು ಹೆಸರಲ್ಲವೆ? ಹಾಗಾ ದರೆ ‘ಕಾಮ’ ಎಂಬುದು ತಪ್ಪೇ? ಅದನ್ನು ಸುಡಬೇಕೆ? ಹೀಗೆಲ್ಲ ಪ್ರಶ್ನೆಗಳೂ ಮೂಡಬಹುದು. ಪುರುಷಾರ್ಥಗಳಲ್ಲಿ ರುವ ‘ಕಾಮ’ ಎಲ್ಲರೂ ಬಯಸುವ, ಎಲ್ಲರಿಗೂ ಸಹಜವಾಗಿರುವ ಹಂಬಲ ಗಳ ರಾಶಿಯೇ ಹೌದು. ಆದರೆ ಈ ಬಯಕೆಗಳಿಗೆ ಒಂದು ಕಟ್ಟುಪಾಡು ಇರ ಬೇಕು; ಅವು ಧರ್ಮದ ಎಲ್ಲೆಯನ್ನು ಮೀರಬಾರದು. ಹೀಗೆ ಧರ್ಮದ ಪರಿಧಿ ಯನ್ನು ಮೀರಿದಾಗ ಆಗ ‘ಕಾಮ’ ನಮ್ಮ ಪಾಲಿಗೆ ಶತ್ರುವೇ ಆಗುತ್ತದೆ. ಅದನ್ನು ಆಗ ಸುಡದೇ ನಮಗೆ ಬೇರೆ ದಾರಿಯೇ ಇಲ್ಲವಾಗುತ್ತದೆ. ಇದೇ ಕಾಮದಹನ.

ಹೋಳಿ, ಕಾಮನ ಹಬ್ಬ, ಕಾಮ ದಹನ, ಕಾಮನ ಹುಣ್ಣಿಮೆ, ವಸಂತೋತ್ಸವ – ಹೀಗೆ ಹಲವು ಹೆಸರುಗಳಿಂದ ಕರೆಯಿಸಿಕೊಳ್ಳುವ ಹಬ್ಬದ ಹಲವು ಹಿನ್ನೆಲೆಗಳಲ್ಲಿ ಒಂದು ‘ಕಾಮದಹನ‘.

ಕಾಮದಹನಕ್ಕೂ ಶಿವನ ಮದುವೆ ಗೂ ಸಂಬಂಧವಿದೆ. ಲೋಕಕಲ್ಯಾಣಕ್ಕಾ ಗಿ ಶಿವನ ವಿವಾಹ ನಡೆಯಬೇಕಿದೆ. ಇತ್ತ ಪಾರ್ವತಿಯೂ ಶಿವನನ್ನು ಪತಿಯಾಗಿ ಪಡೆಯಬೇಕೆಂಬ ಹಂಬಲದಲ್ಲಿ ದ್ದಾಳೆ. ಆದರೆ ಶಿವನು ತಪಸ್ಸಿನಲ್ಲಿ ತೊಡಗಿದ್ದಾನೆ. ಆಗ ಶಿವನ ಮನಸ್ಸನ್ನು ಪಾರ್ವತಿಯ ಕಡೆಗೆ ತಿರುಗಿಸಲು ದೇವತೆಗಳು ಮನ್ಮಥನನ್ನು, ಎಂದರೆ ಕಾಮನನ್ನು ಶಿವನಲ್ಲಿಗೆ ಕಳುಹಿಸುತ್ತಾರೆ. ಆ ಕ್ಷಣ ಇಡಿಯ ಪ್ರಕೃತಿಯೇ ಶೃಂಗಾರದ ಅಭಿವ್ಯಕ್ತಿಗೆ ಪೂರಕವಾಗುವಂತೆ ಸಿದ್ಧ ವಾಗುತ್ತದೆ; ಅಕಾಲದ ವಸಂತನ ಸಂಭ್ರಮ ಶಿವನ ತಪೋಭೂಮಿಯಲ್ಲಿ ನಳನಳಿಸುತ್ತದೆ. ತಪಸ್ಸಿನಲ್ಲಿದ್ದ ಶಿವನ ಕಡೆಗೆ ಇದೇ ಸಕಾಲ ಎಂದು ಭಾವಿಸಿ ಮನ್ಮಥನು ಬಾಣವನ್ನು ಪ್ರಯೋಗಿ ಸುತ್ತಾನೆ. ಕಾಮನ ಪುಷ್ಪಬಾಣದ ದಾಳಿ ಶಿವನ ಮೇಲಾಗುತ್ತದೆ. ಇದರ ಪರಿಣಾಮ: ಶಿವನ ಕ್ರೋಧಾಗ್ನಿಗೆ ಸಿಕ್ಕಿ ಮನ್ಮಥ ಸುಟ್ಟುಹೋಗುತ್ತಾನೆ. ಅಕಾಲ ದಲ್ಲಿ ಕಾಣಿಸಿಕೊಂಡ ಕಾಮನ ದಹನವು ಶಿವನಿಂದ ಕ್ಷಣಾರ್ಧದಲ್ಲಿ ನಡೆದುಹೋಗುತ್ತದೆ. ಆದರೆ ಕಾಮನೇ ಇಲ್ಲದಿದ್ದರೆ ಜಗತ್ತಿನ ಪಯಣ ಹೇಗಾದೀತು? ರತಿಯ ಪ್ರಾರ್ಥನೆಗೆ ಸ್ಪಂದಿಸಿದ ಶಿವನು ಕಾಮನನ್ನು ಮತ್ತೆ ಬದುಕಿಸುತ್ತಾನೆ. ಜಗತ್ತಿನಲ್ಲಿ ಮತ್ತೆ ಜೀವಸಂಚಾರವಾಗುತ್ತದೆ; ಕಾಮಕ್ಕೂ ನಮ್ಮ ಬದುಕಿಗೂ ಇರುವ ಸಂಬಂಧವನ್ನೂ, ಕಾಮದ ನೆಲೆ–ಬೆಲೆಗಳನ್ನೂ ಎತ್ತಿಹಿಡಿಯುವ ಪರ್ವವೇ ಕಾಮನ ಹುಣ್ಣಿಮೆ. ಅಕಾಲ ದ ಕಾಮವು ನಮಗೆ ಮಾರಕ; ಸಕಾಲದ ಕಾಮವು ಪೂರಕ ಎಂಬ ಸಂದೇಶ ಈ ಹಬ್ಬದಲ್ಲಿದೆ. ಈ ಹಬ್ಬ ವನ್ನು ‘ವಸಂತೋತ್ಸವ’ ಎಂದು ಕರೆದಿರುವುದೂ ಗಮನಾರ್ಹ. ಬಣ್ಣ ಗಳನ್ನು ಎರಚಿಕೊಂಡು ಯುವಕ–ಯುವತಿಯರು ಈ ಹಬ್ಬವನ್ನು ಸಂತೋಷದಿಂದ ಆಚರಿಸುವುದನ್ನು ಕಾಣುತ್ತೇವೆ. ಇದು ಕಾಮನನ್ನು ಸ್ವಾಗತಿಸುವ ಪರಿ. ಈ ಸಮಯದಲ್ಲಿ ಪ್ರಕೃತಿಯಲ್ಲಿಯೂ ಸಹಜವಾಗಿ ಹಬ್ಬದ ವಾತಾವರಣ ಮೂಡಿರುತ್ತದೆ; ಎಲ್ಲೆಲ್ಲೂ ಹಸಿರು; ಬಣ್ಣಬಣ್ಣದ ತೋರಣ. ಶಿವ ನಿಂದ ವರ ಪಡೆದು ಶುದ್ಧನಾಗಿರುವ ಕಾಮ, ಅವನು ಸತ್ಯ ಶಿವ ಸುಂದರಗಳ ಸ್ವರೂಪವೂ ಆಗಿರುತ್ತಾನೆ. ಅಂಥ ವನನ್ನು ಎದುರುಗೊಳ್ಳುವ ಹರ್ಷದ ಹಬ್ಬವೇ ವಸಂತೋತ್ಸವ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.