ಶುಕ್ರವಾರ, ಜನವರಿ 22, 2021
28 °C

ಮಾಸ ಭವಿಷ್ಯ: 2021ರ ಜನವರಿ 1 ರಿಂದ 31ರವರೆಗೆ

ಪ್ರಶಾಂತ ಭಟ್ ಹೆಗ್ಗಾರ್​ Updated:

ಅಕ್ಷರ ಗಾತ್ರ : | |

ಮೇಷ

ಹೊಸ ವರ್ಷ, ಹೊಸ ಬದಲಾವಣೆಗಳನ್ನು ತರಲಿದೆ. ನಿಮ್ಮ ಮನೋಭಾವದಲ್ಲಿಯೂ ಕ್ರಮೇಣ ಬದಲಾವಣೆ ತರುವ ಮೂಲಕ ಹೊಸತನಕ್ಕೆ ಚಾಲನೆ ನೀಡಿ. ಆಂತರಿಕ ಶಕ್ತಿಯನ್ನು ಜಾಗೃತಗೊಳಿಸಿ.

ಶುಭ: 4, 5,7, 6, 15 

ಅಶುಭ: 1,2, 3, 8, 9

***

ವೃಷಭ

ಜನವರಿ ಮೊದಲ ಭಾಗದಲ್ಲಿ ಸಾಮಾಜಿಕ ವಲಯ ವಿಸ್ತರಿಸಲಿದೆ. ಕೆಲಸದ ಸ್ಥಳದಲ್ಲಿ ಹೊಂದಿಕೊಳ್ಳಲು ಆಗಾಗ್ಗೆ ರಾಜಿ ಮಾಡಿಕೊಳ್ಳುವುದು ಅಗತ್ಯ. ಸೋಮಾರಿತನದಿಂದ ಯಾವ ಅವಕಾಶವನ್ನೂ ಕಳೆದುಕೊಳ್ಳಬೇಡಿ.

ಶುಭ:16, 17, 18, 19, 20

ಅಶುಭ: 10, 12, 14, 21, 26

***

ಮಿಥುನ 

ಮಹತ್ವಾಕಾಂಕ್ಷೆ ಹೊಂದುವುದು ತಪ್ಪೇನಲ್ಲ. ಆದರೆ ನಿಮ್ಮ ಯೋಜನೆಗಳು ನಿಮ್ಮ ಸಾಮರ್ಥ್ಯಕ್ಕೆ ತಕ್ಕಂತೆ ಇರಬೇಕು. ನಿಮ್ಮ ಸಾಮರ್ಥ್ಯವನ್ನು ತಿಳಿದುಕೊಳ್ಳಿ ಮತ್ತು ನಿಮ್ಮೆಲ್ಲಾ ಶಕ್ತಿಯನ್ನು ನಿರ್ದಿಷ್ಟ ದಾರಿಯಲ್ಲಿ ಕೇಂದ್ರೀಕರಿಸಿ. ಸಾಧನೆಯ ಹಾದಿ ಗೋಚರಿಸಲಿದೆ.

ಶುಭ:19, 20, 24, 25, 31

ಅಶುಭ: 27, 28, 29, 30

***

ಕರ್ಕಾಟಕ

ಈ ತಿಂಗಳು ನಿಮ್ಮ ಕ್ಷೇತ್ರದಲ್ಲಿ ಉತ್ತಮ ಅವಕಾಶಗಳಿವೆ. ನಿಮ್ಮ ಗುರಿಯ ಮೇಲೆ ಗಮನವಿರಿಸಿದಲ್ಲಿ ನಿರೀಕ್ಷಿತ ಲಾಭಗಳನ್ನು ಸಾಧಿಸುತ್ತೀರಿ. ನಿಮ್ಮ ಕ್ಷೇತ್ರದಲ್ಲಿ ನಿಮ್ಮದೇ ಆದ ಛಾಪು ಮೂಡಿಸಲು ಅತ್ಯುತ್ತಮವಾದ ಸಮಯ.

ಶುಭ: 4, 7, 15, 17, 18

ಅಶುಭ: 3, 10, 13,  22,  27

***

ಸಿಂಹ

ಜನವರಿ ಮಾಸ ನಿಮಗೆ ಆಸಕ್ತಿದಾಯಕ ಕೆಲಸಗಳ ಅವಕಾಶಗಳನ್ನು ಮುಂದಿಡಲಿದೆ. ಸವಾಲುಗಳನ್ನು ಪ್ರೀತಿಸುವ ನೀವು ಹಿಡಿದ ಕೆಲಸ ಸಾಧಿಸಲು ಅಗಾಧ ಮಟ್ಟದಲ್ಲಿ ಶ್ರಮಿಸುವಿರಿ. ಉದ್ಯೋಗ–ಉದ್ಯಮದಲ್ಲಿ ಅಭಿವೃದ್ಧಿ ಕಂಡುಬರಲಿದೆ.

ಶುಭ: 5,16, 20, 25, 31

ಅಶುಭ: 10, 14, 21, 22, 28

***

ಕನ್ಯಾ

ತಿಂಗಳ ಆರಂಭದಲ್ಲಿ, ಶನಿಗ್ರಹದ ಪ್ರಭಾವದಿಂದಾಗಿ ಕೀಳರಿಮೆ ಮತ್ತು ವಿಷಣ್ಣತೆ ಉಂಟಾಗಬಹುದು.ನಿಮ್ಮ ಸ್ವ-ಅಭಿವೃದ್ಧಿಯತ್ತ ಗಮನ ಹರಿಸಿ. ದೈಹಿಕ ಚಟುವಟಿಕೆ ಕಡೆಗಣಿಸಬೇಡಿ. ದೇಹ ಆರೋಗ್ಯಕರವಾಗಿದ್ದಲ್ಲಿ ಮನಸ್ಸೂ ಆರೋಗ್ಯಕರವಾಗಿರುತ್ತದೆ.

ಶುಭ: 1,2, 3, 8, 9

ಅಶುಭ: 23, 26, 29, 30

***

ತುಲಾ

ಈ ಮಾಸ ನಿಮ್ಮ ವೈಯಕ್ತಿಕ ಜೀವನದಲ್ಲಿ ಸೃಜನಶೀಲತೆಯನ್ನು ತುಂಬಲಿದೆ. ಕುಟುಂಬ ಜೀವನದಲ್ಲಿ ಸಂತಸ ಇರುತ್ತದೆ. ನಿಮ್ಮ ಸಂಗಾತಿಯ ವಿಷಯದಲ್ಲಿ ಹಳೆಯ ತಪ್ಪುಗಳು ಮರುಕಳಿಸಬಹುದು. ಜಾಗರೂಕರಾಗಿರಿ ಮತ್ತು ಭಾವನೆಗಳನ್ನು ನಿಯಂತ್ರಿಸಲು ಪ್ರಯತ್ನಿಸಿ.

ಶುಭ: 16, 17, 24, 25, 31

ಅಶುಭ: 3, 8, 14, 21, 27

***

ವೃಶ್ಚಿಕ

ಸಂವಹನ ಕೌಶಲ ವೃದ್ಧಿಸಲಿದೆ. ಈ ಕೌಶಲವನ್ನು ಆಧರಿಸುವ ವೃತ್ತಿ–ವ್ಯವಹಾರಗಳಲ್ಲಿ ಪ್ರಗತಿ ಸಾಧಿಸುವಿರಿ. ಪ್ರಣಯ ಸಂಬಂಧಗಳು ಮತ್ತು ಕುಟುಂಬ ಜೀವನಕ್ಕೆ ಇದು ಅತ್ಯುತ್ತಮ ಸಮಯ.

ಶುಭ: 16, 19, 20, 24, 31

ಅಶುಭ: 3, 8, 13, 26,  30

***

ಧನಸ್ಸು

ಸಾಮಾಜಿಕ ಜೀವನದಲ್ಲಿ ಮತ್ತು ಆರ್ಥಿಕ ಸ್ಥಿತಿಯಲ್ಲಿ ಅದೃಷ್ಟವನ್ನು ತರುವ ಮಾಸ. ನಿಮ್ಮ ಕೆಲಸದ ಮೇಲೆ ಸಂಪೂರ್ಣ ಗಮನ ಕೇಂದ್ರೀಕರಿಸುವ ಜೊತೆಗೆ ಕೌಟುಂಬಿಕ ಜೀವನಕ್ಕೂ ಒಂದಷ್ಟು ಆದ್ಯತೆ ನೀಡುವ ಮೂಲಕ ಸಮತೋಲನ ಕಾಪಾಡಿ.

ಶುಭ: 19, 20, 24, 25, 31

ಅಶುಭ: 13, 14, 21, 22, 23

***

ಮಕರ

ಒಂದಲ್ಲ ಒಂದು ಸಮಯದಲ್ಲಿ, ಬುಧ, ಸೂರ್ಯ ಮತ್ತು ಶುಕ್ರನ ಪ್ರಭಾವದಿಂದ ಒಟ್ಟಾರೆ ಜೀವನ ಸುಸ್ಥಿಯತ್ತ ಸಾಗಲಿದೆ. ಇದು ಹಣಕಾಸು ಮತ್ತು ಸಾಮಾಜಿಕ ಜೀವನದಲ್ಲಿ ಅದೃಷ್ಟವನ್ನು ತರಲಿದೆ.

ಶುಭ: 3, 8, 9,  21, 22

ಅಶುಭ: 23, 26, 27, 29, 30

***

ಕುಂಭ

ಈ ತಿಂಗಳು ನಿಮ್ಮ ಆತ್ಮಾವಲೋಕನಕ್ಕೆ ಸೂಕ್ತ ಸಮಯವಾಗಿದೆ. ಈ ವರ್ಷದಲ್ಲಿ ನೀವೇನು ಸಾಧಿಸಬೇಕೆಂದುಕೊಳ್ಳುವಿರೊ ಅದನ್ನು ಸರಿಯಾದ ದಿಕ್ಕಿನಲ್ಲಿ ಯೋಚಿಸಿ. ಕುಟುಂಬ ಸಂಬಂಧಗಳಿಗೆ ಹೆಚ್ಚಿನ ಒತ್ತು ನೀಡಿ.

ಶುಭ: 4, 5,24, 25, 31

ಅಶುಭ: 10, 113, 22, 27, 28

***

ಮೀನ

ಜನವರಿ ನಿಮ್ಮಲ್ಲಿ ಮಿತಿಯಿಲ್ಲದ ಸೃಜನಶೀಲತೆಯನ್ನು ಸೃಜಿಸುತ್ತದೆ. ಉತ್ಪಾದಕತೆ ಹೆಚ್ಚುತ್ತದೆ. ಈ ಸಮಯವನ್ನು ನಿಮ್ಮ ಕೆಲಸ, ಹವ್ಯಾಸ ಮತ್ತು ಯೋಜನೆಗಳಲ್ಲಿ ಹೊಸತನ ತರಲು ಉಪಯೋಗಿಸಿಕೊಳ್ಳಿ.

ಶುಭ: 15, 16, 17, 18, 20

ಅಶುಭ: 10, 12, 14, 23, 30

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.