ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಶಿವರಾತ್ರಿ | ಯಾಮಪೂಜೆ

Last Updated 21 ಫೆಬ್ರುವರಿ 2020, 9:50 IST
ಅಕ್ಷರ ಗಾತ್ರ

ಹೆಸರೇ ಹೇಳುವಂತೆ ಶಿವರಾತ್ರಿಯು ರಾತ್ರಿಯ ವ್ರತ; ಮಾಘ ಬಹುಳ ಚತುರ್ದಶಿಯಂದು ಆಚರಿಸುತ್ತಾರೆ. ಚತುರ್ದಶಿಯಂದು ಬೆಳಿಗ್ಗೆ ನಿತ್ಯಕರ್ಮ ಮುಗಿದಮೇಲೆ ಈ ವ್ರತದ ಸಂಕಲ್ಪವನ್ನು ಮಾಡುತ್ತಾರೆ. ಆಗ ಮಾಡುವ ಪ್ರಾರ್ಥನೆ ಹೀಗಿದೆ:

ದೇವದೇವ ಮಹಾದೇವ ನೀಲಕಂಠ ನಮೋಸ್ತು ತೇ |
ಕರ್ತುಮಿಚ್ಛಾಮ್ಯಹಂ ದೇವ ಶಿವರಾತ್ರಿವ್ರತಂ ತವ ||
ತವ ಪ್ರಭಾವಾದ್ ದೇವೇಶ ನಿರ್ವಿಘ್ನೇನ ಭವೇದಿದಮ್ |
ಕಾಮಾದ್ಯಾಃ ಶತ್ರವೋ ಮಾಂ ವೈ ಪೀಡಾಂ ಕುರ್ವಂತು ನೈವ ಹಿ ||

ಆ ದಿನ ಸಂಜೆ ಸ್ವಲ್ಪ ಎಳ್ಳನ್ನು ನೀರಿಗೆ ಹಾಕಿಕೊಂಡು ಸ್ನಾನ ಮಾಡಬೇಕು. ಹಣೆಗೆ ವಿಭೂತಿಯನ್ನಿಟ್ಟುಕೊಂಡು ರುದ್ರಾಕ್ಷಿಯನ್ನು ಧರಿಸಿ, ಶಿವಸ್ಥಾನಕ್ಕೆ ಹೋಗಿ ಉತ್ತರಾಭಿಮುಖವಾಗಿ ಕುಳಿತುಕೊಂಡು ದೇಶ-ಕಾಲಗಳನ್ನು ಹೇಳಿ ಶಿವಪೂಜೆಯನ್ನು ಮಾಡುವ ಸಂಕಲ್ಪವನ್ನು ಮಾಡಬೇಕು.

ಯಾಮವೆಂದರೆ ಮೂರು ತಾಸುಗಳ ಕಾಲ. ಹನ್ನೆರಡು ತಾಸುಗಳ ರಾತ್ರಿಯಲ್ಲಿ ಒಂಬತ್ತು ಘಂಟೆಗೆ ಮೊದಲಿನ ಯಾಮವೂ ಹನ್ನೆರಡು ಘಂಟೆಗೆ ಎರಡನೆಯ ಯಾಮವೂ ಮೂರು ಘಂಟೆಗೆ ಮೂರನೆಯ ಯಾಮವೂ ಬೆಳಿಗ್ಗೆ ಆರು ಘಂಟೆಗೆ ನಾಲ್ಕನೆಯ ಯಾಮವೂ ಮುಗಿಯುತ್ತದೆ.

ಯಾಮಪೂಜೆಯನ್ನು ನಮಃ ಶಿವಾಯ ಎಂಬ ಶಿವ ಪಂಚಾಕ್ಷರಿಮಂತ್ರದಿಂದ ಪೂಜೆಯನ್ನು ಮಾಡುವ ರೂಢಿಯಿದೆ. ಶಿವನನ್ನು ಧ್ಯಾನಿಸಿ, ಪ್ರಾಣ ಪ್ರತಿಷ್ಠೆಮಾಡಿ ಸಾಂಬ ಸದಾಶಿವಂ ಆವಾಹಯಾಮಿ ಎಂದು ಹೂಗಳನ್ನು ಅರ್ಪಿಸಿ ಆವಾಹನ ಮಾಡಬೇಕು. ಮೊದಲೇ ಪ್ರತಿಷ್ಠಾಪಿಸಿದ ಸ್ಥಿರ ಹಾಗೂ ಚರಲಿಂಗದಲ್ಲಿ ಆವಾಹನ ಮಾಡಬಾರದು. ಆಸನ ಪಾದ್ಯ ಅರ್ಘ್ಯ ಪಂಚಾಮೃತ ಅಭಿಷೇಕ ವಸ್ತ್ರ ಆಭರಣ ಗಂಧ ಅಕ್ಷತೆ (ಸಣ್ಣಕ್ಕಿ, ಗೋಧಿ ಅಥವಾ ಜವೇಗೋಧಿ) ಹೂಗಳು ಬಿಲ್ವ ಉಮ್ಮತ್ತ ಕರವೀರಗಳನ್ನು ಸಮರ್ಪಿಸಿ ಧೂಪ ದೀಪ ನೈವೇದ್ಯ ಆರತಿ ಪ್ರದಕ್ಷಿಣ ಆದ ಮೇಲೆ ಎಂಟು ನಮಸ್ಕಾರ ಮಾಡಬೇಕು.ಪುಷ್ಪಾಂಜಲಿಯನ್ನು ಸಮರ್ಪಿಸಿ ನೂರೆಂಟು ಸಾರೆ ಪಂಚಾಕ್ಷರಿಯನ್ನು ಜಪಿಸಬೇಕು. ಪ್ರಾರ್ಥಿಸಿ ಪೂಜೆಯನ್ನು ಮುಗಿಸಬೇಕು. ಹೀಗೆ ಎಲ್ಲ ಯಾಮಗಳಲ್ಲಿಯೂ ಪೂಜಿಸಬೇಕು.

ಶಿವರಾತ್ರಿಯ ಮಾಹಾತ್ಮ್ಯವನ್ನು ಮಹಾಜನರೊಂದಿಗೆ ಕೇಳಬೇಕು. ಪ್ರಾತಃಕಾಲದಲ್ಲಿ ಸ್ನಾನ ಮಾಡಿ ಮತ್ತೆ ಶಿವನನ್ನು ಪೂಜಿಸಿ ಪಾರಣೆ ಮಾಡಬೇಕು. ಬಳಿಕಹೂಗಳನ್ನು ಸಮರ್ಪಿಸಿ ಬಡವರಿಗೆ ದಾನ ಮಾಡಿ ವ್ರತವನ್ನು ಮುಗಿಸಬೇಕು. ಎಲ್ಲರಿಗೂ ಊಟ ಮಾಡಿಸಿ ತಾನೂ ಊಟ ಮಾಡಬೇಕು. ಮನೆಯಲ್ಲಿ ಪೂಜೆ ಮಾಡಲಾಗದಿದ್ದವರು, ದೇವಾಲಯಗಳ ಪೂಜೆಯಲ್ಲಿ ಭಾಗವಹಿಸಿ ಕೃತಾರ್ಥರಾಗಲೂಬಹುದು.

ವಿಶೇಷ ವಿಧಿ
ಒಂದೊಂದು ಯಾಮದ ಪೂಜೆಯಲ್ಲಿಯೂ ವಿಶೇಷತೆಯಿದೆ. ಪಂಚಾಕ್ಷರಿಯನ್ನು ಹೇಳಿದ ಮೇಲೆ ಮೊದಲನೆಯ ಯಾಮದಲ್ಲಿ ’ಶಿವಾಯ ನಮಃ’ ಎಂದೂ ಎರಡನೆಯ ಯಾಮದಲ್ಲಿ ‘ಶಂಕರಾಯ ನಮಃ’ ಎಂದೂ ಮೂರನೆಯ ಯಾಮದಲ್ಲಿ ’ಮಹೇಶ್ವರಾಯ ನಮಃ’ ಎಂದೂ ನಾಲ್ಕನೆಯ ಯಾಮದಲ್ಲಿ ‘ರುದ್ರಾಯ ನಮಃ’ ಎಂದೂ ಆವಾಹನಾದಿಗಳಿಂದ ಪೂಜಿಸಬೇಕು.

ಮೊದಲನೆಯ ಯಾಮದಲ್ಲಿ ಪಂಚಾಮೃತ ಅಭಿಷೇಕ ಮಾಡಬೇಕು. ಚಂದನ ಕಣಗಲು ಬಿಲ್ವಫಲ ಪತ್ರ ಮುಂತಾದವುಗಳನ್ನು ಸಮರ್ಪಿಸಬೇಕು. ಎರಡನೆಯ ಯಾಮದಲ್ಲಿ ಬಿಲ್ವಪತ್ರದಿಂದ ವಿಶೇಷವಾಗಿ ಪೂಜಿಸಬೇಕು. ಆಗ ಬಿಲ್ವಾಷ್ಟಕವನ್ನು ಹೇಳಿಕೊಳ್ಳಬಹುದು. ಮೂರನೆಯ ಯಾಮದಲ್ಲಿ ಗೋಧಿಯ ಅಕ್ಷತೆ ಮತ್ತು ಎಕ್ಕೆಯ ಹೂಗಳನ್ನು ಉಪಯೋಗಿಸಬೇಕು.ನಾಲ್ಕನೆಯ ಯಾಮದಲ್ಲಿ ಉದ್ದು ನವಣೆ ಹೆಸರು ಸಪ್ತಧಾನ್ಯ ಶಂಖಪುಷ್ಪ ಬಿಲ್ವಪತ್ರೆಗಳನ್ನು ಪೂಜೆಗಾಗಿ ಉಪಯೋಗಿಸಬೇಕು.

ಯಾಮದ ಅವಧಿ ನಿರ್ಣಯಿಸುವುದು ಹೇಗೆ?

ಈಗ ಬೆಂಗಳೂರಿನಲ್ಲಿ 6.41ಕ್ಕೆ ಸೂರ್ಯಾಸ್ತವೂ 6.25ಕ್ಕೆ ಸೂರ್ಯೋದಯವೂ ಆಗುವುದರಿಂದ ಯಾಮದ ಅವಧಿಯು ಈ ವರ್ಷ ಮೂರು ತಾಸುಗಳಿಗೆ ನಾಲ್ಕು ನಿಮಿಷಗಳಷ್ಟು ಕಡಿಮೆಯಾಗುತ್ತದೆ. ಮೊದಲನೆಯ ಯಾಮ (6.41 + 2.56) ಅಂದರೆ 9.37ಕ್ಕೆ ಮುಗಿಯುತ್ತದೆ. ಎರಡನೆಯ ಯಾಮ (9.37 + 2.56) ಅಂದರೆ 12.33ಕ್ಕೆ ಮುಗಿಯುತ್ತದೆ. ಮೂರನೆಯ ಯಾಮ (12.33 + 2.56) ಅಂದರೆ 3.29ಕ್ಕೆ ಮುಗಿಯುತ್ತದೆ. ನಾಲ್ಕನೆಯ ಯಾಮ (3.29 + 2.56) ಅಂದರೆ 6.25 ಕ್ಕೆ ಮುಗಿಯುತ್ತದೆ.

ಸಾಮಾನ್ಯ ಪೂಜೆ
ಯಾಮ ಪೂಜೆಯನ್ನು ನಮಃ ಶಿವಾಯ ಎಂಬ ಶಿವಪಂಚಾಕ್ಷರೀಮಂತ್ರದಿಂದ ಪೂಜೆಯನ್ನು ಮಾಡುವ ರೂಢಿಯಿದೆ. ಈ ಮಂತ್ರದಿಂದ ನ್ಯಾಸ ಮಾಡಿ, ಶಿವನನ್ನು ಧ್ಯಾನಿಸಿ, ಪ್ರಾಣಪ್ರತಿಷ್ಠೆಮಾಡಿ ‘ಸಾಂಬ ಸದಾಶಿವಂ ಆವಾಹಯಾಮಿ’ ಎಂದು ಹೂಗಳನ್ನು ಅರ್ಪಿಸಿ ಆವಾಹನ ಮಾಡಬೇಕು. ಮೊದಲೇ ಪ್ರತಿಷ್ಠಾಪಿಸಿದ ಸ್ಥಿರ ಹಾಗೂ ಚರಲಿಂಗದಲ್ಲಿ ಆವಾಹನ ಮಾಡಬಾರದು. ಆಸನ ಪಾದ್ಯ ಅರ್ಘ್ಯ ಪಂಚಾಮೃತ ಅಭಿಷೇಕ ವಸ್ತ್ರ ಆಭರಣ ಗಂಧ ಅಕ್ಷತೆ (ಸಣ್ಣಕ್ಕಿ, ಗೋಧಿ ಅಥವಾ ಜವೇಗೋಧಿ) ಹೂಗಳು ಬಿಲ್ವ ಉಮ್ಮತ್ತ ಕರವೀರಗಳನ್ನು ಸಮರ್ಪಿಸಿ ಧೂಪ ದೀಪ ನೈವೇದ್ಯ ಆರತಿ ಪ್ರದಕ್ಷಿಣ ಆದ ಮೇಲೆ ಎಂಟು ನಮಸ್ಕಾರ ಮಾಡಬೇಕು. ಪುಷ್ಪಾಂಜಲಿಯನ್ನು ಸಮರ್ಪಿಸಿ ನೂರೆಂಟು ಸಾರೆ ಪಂಚಾಕ್ಷರಿಯನ್ನು ಜಪಿಸಬೇಕು. ಅಪರಾಧಕ್ಷಮಾಪಣವನ್ನು ಪ್ರಾರ್ಥಿಸಿ ಪೂಜೆಯನ್ನು ಮುಗಿಸಬೇಕು.

ಹೀಗೆ ಎಲ್ಲ ಯಾಮಗಳಲ್ಲಿಯೂ ಆವಾಹನಾದಿಯಾಗಿ ಪೂಜಿಸಬೇಕು. ಶ್ರೀ ಶಂಕರಭಗವತ್ಪಾದರು ಐದು ಶ್ಲೋಕಗಳಿರುವ ಶಿವಪಂಚಾಕ್ಷರಸ್ತೋತ್ರವನ್ನು ಬರೆದಿದ್ದಾರೆ. ಆ ಸ್ತೋತ್ರವನ್ನು ಸಾಧ್ಯವಾದರೆ ಹೇಳಬೇಕು.

ಶಿವಪಂಚಾಕ್ಷರ ಸ್ತೋತ್ರ
ನಾಗೇಂದ್ರಹಾರಾಯ ತ್ರಿಲೋಚನಾಯ
ಭಸ್ಮಾಂಗರಾಗಾಯ ಮಹೇಶ್ವರಾಯ |
ನಿತ್ಯಾಯ ಶುದ್ಧಾಯ ದಿಗಂಬರಾಯ
ತಸ್ಮೈ ಕಾರಾಯ ನಮಃ ಶಿವಾಯನ || 1 ||

ಮಂದಾಕಿನೀ ಸಲಿಲ ಚಂದನ ಚರ್ಚಿತಾಯ
ನಂದೀಶ್ವರ ಪ್ರಮಥನಾಥ ಮಹೇಶ್ವರಾಯ |
ಮಂದಾರ ಮುಖ್ಯ ಬಹುಪುಷ್ಪ ಸುಪೂಜಿತಾಯ
ತಸ್ಮೈರಾಯ ನಮಃ ಶಿವಾಯಮಕಾ || 2 ||

ಶಿವಾಯ ಗೌರೀ ವದನಾಬ್ಜ ಬೃಂದ
ಸೂರ್ಯಾಯ ದಕ್ಷಾಧ್ವರ ನಾಶಕಾಯ |
ಶ್ರೀ ನೀಲಕಂಠಾಯ ವೃಷಧ್ವಜಾಯ
ತಸ್ಮೈ ಶಿಕಾರಾಯ ನಮಃ ಶಿವಾಯ || 3 ||

ವಶಿಷ್ಠ ಕುಂಭೋದ್ಭವ ಗೌತಮಾರ್ಯ
ಮುನೀಂದ್ರ ದೇವಾರ್ಚಿತ ಶೇಖರಾಯ |
ಚಂದ್ರಾರ್ಕ ವೈಶ್ವಾನರ ಲೋಚನಾಯ
ತಸ್ಮೈ ವಕಾರಾಯ ನಮಃ ಶಿವಾಯ || 4 ||

ಯಜ್ಞ ಸ್ವರೂಪಾಯ ಜಟಾಧರಾಯ
ಪಿನಾಕ ಹಸ್ತಾಯ ಸನಾತನಾಯ |
ದಿವ್ಯಾಯ ದೇವಾಯ ದಿಗಂಬರಾಯ
ತಸ್ಮೈ ಯಕಾರಾಯ ನಮಃ ಶಿವಾಯ|| 5 ||

ಪಂಚಾಕ್ಷರಮಿದಂ ಪುಣ್ಯಂ ಯಃ ಪಠೇಚ್ಛಿವ ಸನ್ನಿಧೌ |
ಶಿವಲೋಕಮವಾಪ್ನೋತಿ ಶಿವೇನ ಸಹ ಮೋದತೇ ||

ಶಿವಾಪರಾಧ ಕ್ಷಮಾಪಣ ಸ್ತೋತ್ರ
ಆದೌ ಕರ್ಮಪ್ರಸಂಗಾತ್ಕಲಯತಿ ಕಲುಷಂ ಮಾತೃಕುಕ್ಷೌ ಸ್ಥಿತಂ ಮಾಂ
ವಿಣ್ಮೂತ್ರಾಮೇಧ್ಯಮಧ್ಯೇ ಕ್ವಥಯತಿ ನಿತರಾಂ ಜಾಠರೋ ಜಾತವೇದಾಃ |
ಯದ್ಯದ್ವೈ ತತ್ರ ದುಃಖಂ ವ್ಯಥಯತಿ ನಿತರಾಂ ಶಕ್ಯತೇ ಕೇನ ವಕ್ತುಂ
ಕ್ಷಂತವ್ಯೋ ಮೇಽಪರಾಧಃ ಶಿವ ಶಿವ ಶಿವ ಭೋ ಶ್ರೀ ಮಹಾದೇವ ಶಂಭೋ ||1||

ಬಾಲ್ಯೇ ದುಃಖಾತಿರೇಕೋ ಮಲಲುಲಿತವಪುಃ ಸ್ತನ್ಯಪಾನೇ ಪಿಪಾಸಾ
ನೋ ಶಕ್ತಶ್ಚೇಂದ್ರಿಯೇಭ್ಯೋ ಭವಗುಣಜನಿತಾ ಜಂತವೋ ಮಾಂ ತುದಂತಿ |
ನಾನಾರೋಗಾದಿದುಃಖಾದ್ರುದನಪರವಶಃ ಶಂಕರಂ ನ ಸ್ಮರಾಮಿ
ಕ್ಷಂತವ್ಯೋ ಮೇಽಪರಾಧಃ ಶಿವ ಶಿವ ಶಿವ ಭೋ ಶ್ರೀ ಮಹಾದೇವ ಶಂಭೋ ||2||

ಪ್ರೌಢೋಽಹಂ ಯೌವನಸ್ಥೋ ವಿಷಯವಿಷಧರೈಃ ಪಂಚಭಿರ್ಮರ್ಮಸಂಧೌ
ದಷ್ಟೋ ನಷ್ಟೋ ವಿವೇಕಃ ಸುತಧನಯುವತಿಸ್ವಾದುಸೌಖ್ಯೇ ನಿಷಣ್ಣಃ |
ಶೈವೀಚಿಂತಾವಿಹೀನಂ ಮಮ ಹೃದಯಮಹೋ ಮಾನಗರ್ವಾಧಿರೂಢಂ
ಕ್ಷಂತವ್ಯೋ ಮೇಽಪರಾಧಃ ಶಿವ ಶಿವ ಶಿವ ಭೋ ಶ್ರೀ ಮಹಾದೇವ ಶಂಭೋ ||3||

ವಾರ್ಧಕ್ಯೇ ಚೇಂದ್ರಿಯಾಣಾಂ ವಿಗತಗತಿಮತಿಶ್ಚಾಧಿದೈವಾದಿತಾಪೈಃ
ಪಾಪೈ ರೋಗೈರ್ವಿಯೋಗೈಸ್ತ್ವನವಸಿತವಪುಃ ಪ್ರೌಢಹೀನಂ ಚ ದೀನಮ್ |
ಮಿಥ್ಯಾಮೋಹಾಭಿಲಾಷೈರ್ಭ್ರಮತಿ ಮಮ ಮನೋ ಧೂರ್ಜಟೇರ್ಧ್ಯಾನಶೂನ್ಯಂ
ಕ್ಷಂತವ್ಯೋ ಮೇಽಪರಾಧಃ ಶಿವ ಶಿವ ಶಿವ ಭೋ ಶ್ರೀ ಮಹಾದೇವ ಶಂಭೋ ||4||

ನೋ ಶಕ್ಯಂ ಸ್ಮಾರ್ತಕರ್ಮ ಪ್ರತಿಪದಗಹನಪ್ರತ್ಯವಾಯಾಕುಲಾಖ್ಯಂ
ಶ್ರೌತೇ ವಾರ್ತಾ ಕಥಂ ಮೇ ದ್ವಿಜಕುಲವಿಹಿತೇ ಬ್ರಹ್ಮಮಾರ್ಗೇಽಸುಸಾರೇ |
ಜ್ಞಾತೋ ಧರ್ಮೋ ವಿಚಾರೈಃ ಶ್ರವಣಮನನಯೋಃ ಕಿಂ ನಿದಿಧ್ಯಾಸಿತವ್ಯಂ
ಕ್ಷಂತವ್ಯೋ ಮೇಽಪರಾಧಃ ಶಿವ ಶಿವ ಶಿವ ಭೋ ಶ್ರೀ ಮಹಾದೇವ ಶಂಭೋ ||5||

ಸ್ನಾತ್ವಾ ಪ್ರತ್ಯೂಷಕಾಲೇ ಸ್ನಪನವಿಧಿವಿಧೌ ನಾಹೃತಂ ಗಾಂಗತೋಯಂ
ಪೂಜಾರ್ಥಂ ವಾ ಕದಾಚಿದ್ಬಹುತರಗಹನಾತ್ಖಂಡಬಿಲ್ವೀದಲಾನಿ |
ನಾನೀತಾ ಪದ್ಮಮಾಲಾ ಸರಸಿ ವಿಕಸಿತಾ ಗಂಧಧೂಪೈಃ ತ್ವದರ್ಥಂ
ಕ್ಷಂತವ್ಯೋ ಮೇಽಪರಾಧಃ ಶಿವ ಶಿವ ಶಿವ ಭೋ ಶ್ರೀ ಮಹಾದೇವ ಶಂಭೋ ||6||

ದುಗ್ಧೈರ್ಮಧ್ವಾಜ್ಯಯುಕ್ತೈರ್ದಧಿಸಿತಸಹಿತೈಃ ಸ್ನಾಪಿತಂ ನೈವ ಲಿಂಗಂ
ನೋ ಲಿಪ್ತಂ ಚಂದನಾದ್ಯೈಃ ಕನಕವಿರಚಿತೈಃ ಪೂಜಿತಂ ನ ಪ್ರಸೂನೈಃ |
ಧೂಪೈಃ ಕರ್ಪೂರದೀಪೈರ್ವಿವಿಧರಸಯುತೈರ್ನೈವ ಭಕ್ಷ್ಯೋಪಹಾರೈಃ
ಕ್ಷಂತವ್ಯೋ ಮೇಽಪರಾಧಃ ಶಿವ ಶಿವ ಶಿವ ಭೋ ಶ್ರೀ ಮಹಾದೇವ ಶಂಭೋ ||7||

ಧ್ಯಾತ್ವಾ ಚಿತ್ತೇ ಶಿವಾಖ್ಯಂ ಪ್ರಚುರತರಧನಂ ನೈವ ದತ್ತಂ ದ್ವಿಜೇಭ್ಯೋ
ಹವ್ಯಂ ತೇ ಲಕ್ಷಸಂಖ್ಯೈರ್ಹುತವಹವದನೇ ನಾರ್ಪಿತಂ ಬೀಜಮಂತ್ರೈಃ |
ನೋ ತಪ್ತಂ ಗಾಂಗತೀರೇ ವ್ರತಜಪನಿಯಮೈಃ ರುದ್ರಜಾಪ್ಯೈರ್ನ ವೇದೈಃ
ಕ್ಷಂತವ್ಯೋ ಮೇಽಪರಾಧಃ ಶಿವ ಶಿವ ಶಿವ ಭೋ ಶ್ರೀ ಮಹಾದೇವ ಶಂಭೋ ||8||

ಸ್ಥಿತ್ವಾ ಸ್ಥಾನೇ ಸರೋಜೇ ಪ್ರಣವಮಯಮರುತ್ಕುಂಭಕೇ ಸೂಕ್ಷ್ಮಮಾರ್ಗೇ
ಶಾಂತೇ ಸ್ವಾಂತೇ ಪ್ರಲೀನೇ ಪ್ರಕಟಿತವಿಭವೇ ಜ್ಯೋತಿರೂಪೇಽಪರಾಖ್ಯೇ |
ಲಿಂಗಜ್ಞೇ ಬ್ರಹ್ಮವಾಕ್ಯೇ ಸಕಲತನುಗತಂ ಶಂಕರಂ ನ ಸ್ಮರಾಮಿ
ಕ್ಷಂತವ್ಯೋ ಮೇಽಪರಾಧಃ ಶಿವ ಶಿವ ಶಿವ ಭೋ ಶ್ರೀ ಮಹಾದೇವ ಶಂಭೋ ||9||

ನಗ್ನೋ ನಿಃಸಂಗಶುದ್ಧಸ್ತ್ರಿಗುಣವಿರಹಿತೋ ಧ್ವಸ್ತಮೋಹಾಂಧಕಾರೋ
ನಾಸಾಗ್ರೇ ನ್ಯಸ್ತದೃಷ್ಟಿರ್ವಿದಿತಭವಗುಣೋ ನೈವ ದೃಷ್ಟಃ ಕದಾಚಿತ್ |
ಉನ್ಮನ್ಯಾಽವಸ್ಥಯಾ ತ್ವಾಂ ವಿಗತಕಲಿಮಲಂ ಶಂಕರಂ ನ ಸ್ಮರಾಮಿ
ಕ್ಷಂತವ್ಯೋ ಮೇಽಪರಾಧಃ ಶಿವ ಶಿವ ಶಿವ ಭೋ ಶ್ರೀ ಮಹಾದೇವ ಶಂಭೋ ||10||

ಚಂದ್ರೋದ್ಭಾಸಿತಶೇಖರೇ ಸ್ಮರಹರೇ ಗಂಗಾಧರೇ ಶಂಕರೇ
ಸರ್ಪೈರ್ಭೂಷಿತಕಂಠಕರ್ಣಯುಗಲೇ ನೇತ್ರೋತ್ಥವೈಶ್ವಾನರೇ |
ದಂತಿತ್ವಕ್ಕೃತಸುಂದರಾಂಬರಧರೇ ತ್ರೈಲೋಕ್ಯಸಾರೇ ಹರೇ
ಮೋಕ್ಷಾರ್ಥಂ ಕುರು ಚಿತ್ತವೃತ್ತಿಮಚಲಾಮನ್ಯೈಸ್ತು ಕಿಂ ಕರ್ಮಭಿಃ ||11||

ಕಿಂ ವಾಽನೇನ ಧನೇನ ವಾಜಿಕರಿಭಿಃ ಪ್ರಾಪ್ತೇನ ರಾಜ್ಯೇನ ಕಿಂ
ಕಿಂ ವಾ ಪುತ್ರಕಲತ್ರಮಿತ್ರಪಶುಭಿರ್ದೇಹೇನ ಗೇಹೇನ ಕಿಮ್ |
ಜ್ಞಾತ್ವೈತತ್ಕ್ಷಣಭಂಗುರಂ ಸಪದಿ ರೇ ತ್ಯಾಜ್ಯಂ ಮನೋ ದೂರತಃ
ಸ್ವಾತ್ಮಾರ್ಥಂ ಗುರುವಾಕ್ಯತೋ ಭಜ ಭಜ ಶ್ರೀಪಾರ್ವತೀವಲ್ಲಭಮ್ ||12||

ಪೌರೋಹಿತ್ಯ ರಜನಿಚರಿತಂ ಗ್ರಾಮಣೀತ್ವಂ ನಿಯೋಗೋ
ಮಾಠಾಪತ್ಯಂ ತ್ವನೃತವಚನಂ ಸಾಕ್ಷಿವಾದಃ ಪರಾನ್ನಮ್|
ಬ್ರಹ್ಮದ್ವೇಷಃ ಖಲಜನರತಿಃ ಪ್ರಾಣಿನಾಂ ನಿರ್ದಯತ್ವಂ
ಮಾ ಭೂದೇವಂ ಮಮ ಪಶುಪತೇ ಜನ್ಮ ಜನ್ಮಾಂತರೇಷು || 13 ||

ಆಯುರ್ನಶ್ಯತಿ ಪಶ್ಯತಾಂ ಪ್ರತಿದಿನಂ ಯಾತಿ ಕ್ಷಯಂ ಯೌವನಂ
ಪ್ರತ್ಯಾಯಾಂತಿ ಗತಾಃ ಪುನರ್ನ ದಿವಸಾಃ ಕಾಲೋ ಜಗದ್ಭಕ್ಷಕಃ |
ಲಕ್ಷ್ಮೀಸ್ತೋಯತರಂಗಭಂಗಚಪಲಾ ವಿದ್ಯುಚ್ಚಲಂ ಜೀವಿತಂ
ತಸ್ಮಾನ್ಮಾಂ ಶರಣಾಗತಂ ಶರಣದ ತ್ವಂ ರಕ್ಷ ರಕ್ಷಾಧುನಾ ||14||

ವಂದೇ ದೇವಮುಮಾಪತಿಂ ಸುರಗುರುಂ ವಂದೇ ಜಗತ್ಕಾರಣಂ
ವಂದೇ ಪನ್ನಗಭೂಷಣಂ ಮೃಗಧರಂ ವಂದೇ ಪಶೂನಾಂ ಪತಿಮ್ |
ವಂದೇ ಸೂರ್ಯಶಶಾಂಕವಹ್ನಿನಯನಂ ವಂದೇ ಮುಕುಂದಪ್ರಿಯಂ
ವಂದೇ ಭಕ್ತಜನಾಶ್ರಯಂ ಚ ವರದಂ ವಂದೇ ಶಿವಂ ಶಂಕರಮ್ ||15||

ಗಾತ್ರಂ ಭಸ್ಮಸಿತಂ ಚ ಹಸಿತಂ ಹಸ್ತೇ ಕಪಾಲಂ ಸಿತಂ
ಖಟ್ವಾಂಗಂ ಚ ಸಿತಂ ಸಿತಶ್ಚ ವೃಷಭಃ ಕರ್ಣೇ ಸಿತೇ ಕುಂಡಲೇ |
ಗಂಗಾಫೇನಸಿತಾ ಜಟಾ ಪಶುಪತೇಶ್ಚಂದ್ರಃ ಸಿತೋ ಮೂರ್ಧನಿ
ಸೋಽಯಂ ಸರ್ವಸಿತೋ ದದಾತು ವಿಭವಂ ಪಾಪಕ್ಷಯಂ ಸರ್ವದಾ ||16||

ಕರಚರಣಕೃತಂ ವಾಕ್ಕಾಯಜಂ ಕರ್ಮಜಂ ವಾ
ಶ್ರವಣನಯನಜಂ ವಾ ಮಾನಸಂ ವಾಽಪರಾಧಮ್ |
ವಿಹಿತಮವಿಹಿತಂ ವಾ ಸರ್ವಮೇತತ್ಕ್ಷ್ಮಸ್ವ
ಶಿವ ಶಿವ ಕರುಣಾಬ್ಧೇ ಶ್ರೀ ಮಹಾದೇವ ಶಂಭೋ ||

|| ಶ್ರೀ ಶಂಕರಾಚಾರ್ಯಕೃತಂ ಶಿವಾಪರಾಧಕ್ಷಮಾಪಣ ಸ್ತೋತ್ರಮ್ ||


ಶಿವರಾತ್ರಿಯ ಮಾಹಾತ್ಮ್ಯವನ್ನು ಮಹಾಜನರೊಂದಿಗೆ ಕೇಳಬೇಕು. ಪ್ರಾತಃಕಾಲದಲ್ಲಿ ಸ್ನಾನ ಮಾಡಿ ಮತ್ತೆ ಶಿವನನ್ನು ಪೂಜಿಸಿ ಪಾರಣೆ ಮಾಡಬೇಕು. ಪ್ರಾರ್ಥನೆ ಹೀಗಿದೆ:

ನಿಯಮೋ ಯೋ ಮಹಾದೇವ ಕೃತಶ್ಚೈವ ತ್ವದಾಜ್ಞಯಾ|
ವಿಸೃಜ್ಯಯತೇ ಮಯಾ ಸ್ವಾಮಿನ್ ವ್ರತಂ ಜಾತಮನುತ್ತಮಮ್||
ವ್ರತೇನಾನೇನ ದೇವೇಶ ಯಥಾಶಕ್ತಿ ಕೃತೇನ ಚ |
ಸಂತುಷ್ಟೋ ಭವ ಶರ್ವಾದ್ಯ ಕೃಪಾಂ ಕುರು ಮಮೋಪರಿ ||


(ಮಹಾದೇವನೇ, ನಿನ್ನ ಅನುಜ್ಞೆಯನ್ನು ಪಡೆದು ನಿನ್ನೆ ನಿನ್ನ ವ್ರತವನ್ನು ನಾನು ಆಚರಿಸಿದೆ. ನನ್ನ ಶಕ್ತಿಯನ್ನು ಅನುಸರಿಸಿ ಅನುಷ್ಠಿಸಿದ ಈ ವ್ರತದಿಂದ ನೀನು ಸಂತುಷ್ಟನಾಗು ಹಾಗೂ ನನ್ನ ಮೇಲೆ ದಯೆತೋರು.)

ಹೀಗೆ ಪ್ರಾರ್ಥಿಸಿ ಹೂಗಳನ್ನು ಸಮರ್ಪಿಸಿ ಬಡವರಿಗೆ ದಾನ ಮಾಡಿ ವ್ರತವನ್ನು ವ್ರತವನ್ನು ಮುಗಿಸಬೇಕು. ಎಲ್ಲರಿಗೂ ಊಟ ಮಾಡಿಸಿ ತಾನೂ ಊಟ ಮಾಡಬೇಕು.

ವಿಶೇಷ ವಿಧಿ
ಒಂದೊಂದು ಯಾಮದ ಪೂಜೆಯಲ್ಲಿಯೂ ವಿಶೇಷತೆಯಿದೆ. ಪಂಚಾಕ್ಷರಿಯನ್ನು ಹೇಳಿದ ಮೇಲೆ ಮೊದಲನೆಯ ಯಾಮದಲ್ಲಿ ಶಿವಾಯ ನಮಃ ಎಂದೂ ಎರಡನೆಯ ಯಾಮದಲ್ಲಿ ಶಂಕರಾಯ ನಮಃ ಎಂದೂ ಮೂರನೆಯ ಯಾಮದಲ್ಲಿ ಮಹೇಶ್ವರಾಯ ನಮಃ ಎಂದೂ ನಾಲ್ಕನೆಯ ಯಾಮದಲ್ಲಿ ರುದ್ರಾಯ ನಮಃ ಎಂದೂ ಆವಾಹನಾದಿಗಳಿಂದ ಪೂಜಿಸಬೇಕು.

ಮೊದಲನೆಯ ಯಾಮದಲ್ಲಿ ಪಂಚಾಮೃತ ಅಭಿಷೇಕ ಮಾಡಬೇಕು. ಚಂದನ ಕಣಗಲು ಬಿಲ್ವಫಲ ಪತ್ರ ಮುಂತಾದವುಗಳನ್ನು ಸಮರ್ಪಿಸಬೇಕು. ಎರಡನೆಯ ಯಾಮದಲ್ಲಿ ಬಿಲ್ವಪತ್ರದಿಂದ ವಿಶೇಷವಾಗಿ ಪೂಜಿಸಬೇಕು.

ಬಿಲ್ವಾಷ್ಟಕ
ತ್ರಿದಳಂ ತ್ರಿಗುಣಾಕಾರಂ ತ್ರಿನೇತ್ರಂ ಚ ತ್ರಿಯಾಯುಧಂ
ತ್ರಿಜನ್ಮಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ ||
ತ್ರಿಶಾಖೈಃ ಬಿಲ್ವಪತ್ರೈಶ್ಚ ಅಚ್ಛಿದ್ರೈಃ ಕೋಮಲೈಃ ಶುಭೈಃ|
ತವ ಪೂಜಾಂ ಕರಿಷ್ಯಾಮಿ ಏಕಬಿಲ್ವಂ ಶಿವಾರ್ಪಣಂ ||
ಕೋಟಿಕನ್ಯಾ ಮಹಾದಾನಂ ತಿಲಪರ್ವತಕೋಟಯಃ|
ಕಾಂಚನಂ ಶೈಲದಾನೇನ ಏಕಬಿಲ್ವಂ ಶಿವಾರ್ಪಣಂ ||
ಕಾಶೀಕ್ಷೇತ್ರ ನಿವಾಸಂ ಚ ಕಾಲಭೈರವ ದರ್ಶನಂ|
ಪ್ರಯಾಗೇ ಮಾಧವಂ ದೃಷ್ಟ್ವಾ ಏಕಬಿಲ್ವಂ ಶಿವಾರ್ಪಣಂ ||
ಇಂದುವಾರೇ ವ್ರತಂ ಕೃತ್ವಾ ನಿರಾಹಾರೋ ಮಹೇಶ್ವರಃ|
ನಕ್ತಂ ಅಶ್ನಾಮಿ ದೇವೇಶ ಏಕಬಿಲ್ವಂ ಶಿವಾರ್ಪಣಂ ||
ರಾಮಲಿಂಗ ಪ್ರತಿಷ್ಠಾ ಚ ವಿವಾಹಕರಣಂ ತಥಾ|
ತಟಾಕಾನಾಂ ಚ ಸಂಧಾನಂ ಏಕಬಿಲ್ವಂ ಶಿವಾರ್ಪಣಂ ||
ಅಖಂಡ ಬಿಲ್ವಪತ್ರಂ ಚ ಅಯುತಂ ಶಿವಪೂಜನಂ|
ಕೃತಂ ನಾಮಸಹಸ್ರೇಣ ಏಕಬಿಲ್ವಂ ಶಿವಾರ್ಪಣಂ ||
ಉಮಯಾ ಸಹ ದೇವೇಶ ನಂದಿವಾಹನಮೇವ ಚ|
ಭಸ್ಮಲೇಪನ ಸರ್ವಾಂಗಂ ಏಕಬಿಲ್ವಂ ಶಿವಾರ್ಪಣಂ ||
ಸಾಲಗ್ರಾಮೇಷು ವಿಪ್ರಾಣಾಂ ತಟಾಕಂ ದಶಕೂಪಯೋಃ|
ಯಜ್ಞಕೋಟಿ ಸಹಸ್ರೈಶ್ಚ ಏಕಬಿಲ್ವಂ ಶಿವಾರ್ಪಣಂ ||
ದಂತಿಕೋಟಿ ಸಹಸ್ರೇಷು ಅಶ್ವಮೇಧ ಶತಕ್ರತೌ|
ಕೋಟಿಕನ್ಯಾ ಮಹಾದಾನಂ ಏಕಬಿಲ್ವಂ ಶಿವಾರ್ಪಣಂ ||
ಬಿಲ್ವಾನಾಂ ದರ್ಶನಂ ಪುಣ್ಯಂ ಸ್ಪರ್ಶನಂ ಪಾಪನಾಶನಂ|
ಅಘೋರಪಾಪಸಂಹಾರಂ ಏಕಬಿಲ್ವಂ ಶಿವಾರ್ಪಣಂ ||
ಸಹಸ್ರವೇದಪಾಠೇಷು ಬ್ರಹ್ಮಸ್ಥಾಪನಮುಚ್ಯತೇ|
ಅನೇಕವ್ರತಕೋಟೀನಾಂ ಏಕಬಿಲ್ವಂ ಶಿವಾರ್ಪಣಂ ||
ಅನ್ನದಾನ ಸಹಸ್ರೇಷು ಸಹಸ್ರೋಪನಯನಂ ತಥಾ|
ಅನೇಕ ಜನ್ಮ ಪಾಪಾನಿ ಏಕಬಿಲ್ವಂ ಶಿವಾರ್ಪಣಂ ||
ಬಿಲ್ವಾಷ್ಟಕಮಿದಂ ಪುಣ್ಯಂ ಯಃ ಪಠೇತ್ ಶಿವಸನ್ನಿಧೌ|
ಶಿವಲೋಕಂ ಅವಾಪ್ನೋತಿ ಏಕಬಿಲ್ವಂ ಶಿವಾರ್ಪಣಂ ||
ಎರಡನೆಯ ಯಾಮದಲ್ಲಿ ಮಾದಳ ಕಂಚಿಯನ್ನು ಕೈಯಲ್ಲಿ ಹಿಡಿದುಕೊಂಡು ಅರ್ಘ್ಯವನ್ನು ಕೊಡಬೇಕು. ಪಾಯಸವನ್ನು ನೈವೇದ್ಯ ಮಾಡಬೇಕು.
ಮೂರನೆಯ ಯಾಮದಲ್ಲಿ ಗೋಧಿಯ ಅಕ್ಷತೆ ಮತ್ತು ಎಕ್ಕೆಯ ಹೂಗಳನ್ನು ಉಪಯೋಗಿಸಬೇಕು. ದಾಳಿಂಬೆಯನ್ನು ಹಿಡಿದುಕೊಂಡು ಅರ್ಘ್ಯವನ್ನು ಕೊಡಬೇಕು. ತರಕಾರಿ ಹಾಗೂ ಅಪ್ಪಾಲು ನೈವೇದ್ಯ ಮಾಡಬೇಕು. ಕರ್ಪೂರದ ಆರತಿಯನ್ನು ಮಾಡಬೇಕು.
ನಾಲ್ಕನೆಯ ಯಾಮದಲ್ಲಿ ಉದ್ದು ನವಣೆ ಹೆಸರು ಸಪ್ತಧಾನ್ಯ ಶಂಖಪುಷ್ಪ ಬಿಲ್ವಪತ್ರೆಗಳನ್ನು ಪೂಜೆಗಾಗಿ ಉಪಯೋಗಿಸಬೇಕು. ಬಾಳೆಹಣ್ಣು ಹಿಡಿದುಕೊಂಡು ಅರ್ಘ್ಯವನ್ನು ಕೊಡಬೇಕು. ಉದ್ದಿನ ಅನ್ನವನ್ನು ನೈವೇದ್ಯ ಮಾಡಬೇಕು.


ಯಾಮಪೂಜೆ
ಮೊದಲನೆಯ ಯಾಮದಲ್ಲಿ ನಾಲ್ಕು ಯಾಮಗಳ ಪೂಜೆಯನ್ನು ಮಾಡುವೆನೆಂದು ಸಂಕಲ್ಪ ಮಾಡದಿದ್ದರೆ, ಮುಂದಿನ ಯಾಮಗಳಲ್ಲಿ ಪ್ರತ್ಯೇಕವಾಗಿ ಸಂಕಲ್ಪ ಮಾಡಬೇಕು. ಹೀಗೆ ಸಂಕಲ್ಪ ಎರಡು ವಿಧವಾಗುತ್ತದೆ. ಎಲ್ಲಾ ಯಾಮಗಳಲ್ಲಿಯೂ ಶಿವನನ್ನು ಪೂಜಿಸುವೆನೆಂದು ಹೇಳುವುದು ಒಂದು ಬಗೆಯಾದರೆ, ಪ್ರಥಮ ದ್ವಿತೀಯ ತೃತೀಯ ಮತ್ತು ತುರೀಯ ಎಂದು ಹೇಳುವುದು ಇನ್ನೊಂದು ಬಗೆ. ಮೊದಲನೆಯ ಯಾಮದಲ್ಲಿ ಹೇಳಿದ ಮಂತ್ರಗಳ ಎರಡರಷ್ಟು ಮಂತ್ರಗಳನ್ನು ಎರಡನೆಯ ಯಾಮದಲ್ಲಿ ಹೇಳಬೇಕು. ಎರಡನೆಯ ಯಾಮದ ಎರಡರಷ್ಟು ಮಂತ್ರಗಳನ್ನು ಮೂರನೆಯ ಯಾಮದಲ್ಲಿ ಹೇಳಬೇಕು. ಮೂರನೆಯ ಯಾಮದ ಎರಡರಷ್ಟು ಮಂತ್ರಗಳನ್ನು ನಾಲ್ಕನೆಯ ಯಾಮದಲ್ಲಿ ಹೇಳಬೇಕು.

ಹದಿನಾಲ್ಕು ವರ್ಷಗಳ ವರೆಗೆ ಶಿವರಾತ್ರಿ ವ್ರತವನ್ನು ಆಚರಿಸಿ ಉದ್ಯಾಪನೆ ಮಾಡಬಹುದು. ವ್ರತವನ್ನು ಮುಂದುವರೆಸಲೂ ಬಹುದು. ಪೂಜಾ ಪುನಸ್ಕಾರ ಮಾಡಲಾಗದಿದ್ದರೆ ದೇವಾಲಯಗಳ ಪೂಜೆಯಲ್ಲಿ ಭಾಗವಹಿಸಿ ಕೃತಾರ್ಥರಾಗಲೂಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT