ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾಸ ಭವಿಷ್ಯ: ಜೂನ್ 2022

Last Updated 1 ಜೂನ್ 2022, 5:09 IST
ಅಕ್ಷರ ಗಾತ್ರ

ಮೇಷ: ಪಿತ್ರಾರ್ಜಿತ ಸಂಪತ್ತು ದೊರೆಯುವ ಸಾಧ್ಯತೆ. ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಉನ್ನತ ಸ್ಥಾನಮಾನ. ನಿರುದ್ಯೋಗಿಗಳಿಗೆ ಸೂಕ್ತ ಉದ್ಯೋಗ ಸಿಗುವುದು. ವಾಹನ ಖರೀದಿ ಯೋಗ. ಆರೋಗ್ಯದ ಬಗ್ಗೆ ಎಚ್ಚರವಿರಲಿ.

ಶುಭ: 12, 18, 22, ಅಶುಭ: 10, 16, 28

ವೃಷಭ: ವಿವಾಹ ಯೋಗ ಹುಡುಕಿ ಬರುವುದು. ಆರ್ಥಿಕ ಸಂಕಷ್ಟ ಬಗೆಹರಿಯುವುದು. ಕಲಾವಿದರಿಗೆ ಉತ್ತಮ ಲಾಭ. ಉದ್ಯೋಗದಲ್ಲಿ ಬಡ್ತಿ. ಕುಟುಂಬ ಜವಾಬ್ದಾರಿಗಳನ್ನು ನಿರ್ವಹಿಸಿ. ಆರೋಗ್ಯದ ಬಗ್ಗೆ ಎಚ್ಚರಿಕೆ ಇರಲಿ.

ಶುಭ: 15, 22, 29, ಅಶುಭ: 17, 26, 30

ಮಿಥುನ: ಬಂಧುಗಳಿಂದ ಸುವಾರ್ತೆ. ಗೃಹ ನಿರ್ಮಾಣ ಕೆಲಸಗಳಲ್ಲಿ ಅನೀರಿಕ್ಷಿತ ಪ್ರಗತಿ. ಸರ್ಕಾರಿ ಉದ್ಯೋಗಿಗಳಿಗೆ ಲಾಭ. ಉದ್ಯಮಿಗಳಿಗೆ ಧನಲಾಭ. ಮಿತ್ರರಿಂದ ತೊಂದರೆ. ತಿಂಗಳ ಎರಡನೇ ಭಾಗದಲ್ಲಿ ಆರ್ಥಿಕ ಪ್ರಗತಿ.

ಶುಭ: 11, 19, 25, ಅಶುಭ: 12, 20, 28

ಕರ್ಕ: ಗೃಹಕಲಹಕ್ಕೆ ಮುಕ್ತಿ ದೊರೆಯುವುದು. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಯಶಸ್ಸು. ಸರ್ಕಾರಿ ಉದ್ಯೋಗಿಗಳಿಗೆ ಪದೋನ್ನತಿ, ಸ್ಥಳ ಬದಲಾವಣೆ. ತಿಂಗಳಾಂತ್ಯದಲ್ಲಿ ಆಪ್ತರಿಂದ ಸನ್ಮಾನ. ದಿಢೀರ್‌ ಪ್ರವಾಸ ಕೈಗೊಳ್ಳುವಿರಿ.

ಶುಭ: 10, 15, 20, ಅಶುಭ: 16, 18, 29

ಸಿಂಹ: ಉದ್ಯಮಿಗಳಿಗೆ ಲಾಭ. ನೌಕರರಿಗೆ ಪ್ರಶಂಸೆ. ಪ್ರವಾಸದಲ್ಲಿ ಅನಾರೋಗ್ಯ ಕಾಡಬಹುದು. ಶತ್ರುಗಳ ಕಾಟದಿಂದ ಮುಕ್ತಿ ದೊರೆಯುವುದು. ಅಪರೂಪದ ಅತಿಥಿಗಳ ಆಗಮನದಿಂದ ಸಂತಸ, ಮನೆಯಲ್ಲಿ ಶುಭ ಸಮಾರಂಭ.

ಶುಭ: 18, 26, 29, ಅಶುಭ: 11, 16, 30

ಕನ್ಯಾ: ನೆನೆಗುದಿಗೆ ಬಿದ್ದ ಕೆಲಸಗಳು ಕೊನೆಯ ಹಂತ ತಲುಪುವವು. ಹೊಸ ನಿವೇಶನ ಖರೀದಿಗೆ ಸಕಾಲ. ಚಿಂತೆಯನ್ನು ದೂರವಿಡಿ. ನಿಮ್ಮ ಸಂಕಟದ ನಡುವೆಯೂ ಮಿಂಚುವಿರಿ. ಮನೆಗೆ ಹೊಸವಸ್ತುಗಳನ್ನು ಖರೀದಿಸುವಿರಿ.

ಶುಭ: 10, 19, 25, ಅಶುಭ: 12, 24, 28

ತುಲಾ: ಉತ್ತಮವಾದ ವ್ಯವಸ್ಥೆಯಲ್ಲಿ ಇದ್ದಂತೆ ಅನ್ನಿಸಿದರೂ ಕೆಲಸದ ಸ್ಥಳದಲ್ಲಿ ಒತ್ತಡವಿರುವುದು. ಸ್ನೇಹಿತರು ದೂರ ಸರಿಯುವರು. ಅವಿವಾಹಿತರಿಗೆ ವಿವಾಹ ಯೋಗ. ಮೋಜಿಗಾಗಿ ಖರ್ಚು. ಕಾಲು ನೋವಿನಿಂದ ಬಳಲುವಿರಿ.

ಶುಭ: 09, 17, 22, ಅಶುಭ: 12, 20, 29

ವೃಶ್ಚಿಕ: ಎಲ್ಲಾ ರೀತಿಯಿಂದ ಉತ್ತಮವಾದ ತಿಂಗಳು. ದೇವಾಲಯ ಪ್ರಮುಖರಿಗೆ ಸರ್ಕಾರಿ ಅನುದಾನ ಸಿಗುತ್ತದೆ. ಸಾಮಾಜಿಕ ಮನ್ನಣೆ. ಹೊಸ ಮಿತ್ರರಿಂದ ಲಾಭ. ತಿಂಗಳ ಕೊನೆಯ ವಾರ ನಷ್ಟವಾಗುವ ಸಾಧ್ಯತೆ ಇದೆ.

ಶುಭ: 10, 15, 22, ಅಶುಭ: 12, 20, 26

ಧನು: ವಿದೇಶದಿಂದ ಸುವಾರ್ತೆ. ಹಣ ಖರ್ಚಾದರೂ ಸಾಮಾಜಿಕ ಮನ್ನಣೆಯಿಂದ ತೃಪ್ತಿ. ಬಹು ದಿನಗಳ ನಂತರ ಮಕ್ಕಳ ಬಗ್ಗೆ ಸುವಾರ್ತೆ ಕೇಳುವಿರಿ. ಉತ್ಸವ, ಪ್ರದರ್ಶನ, ದೇವತಾ ಪೂಜೆ, ಪುನಸ್ಕಾರಗಳಲ್ಲಿ ಭಾಗವಹಿಸುವಿರಿ.

ಶುಭ: 09, 18, 22, ಅಶುಭ: 11, 16, 24

ಮಕರ: ಬಂಧುಗಳು ಶತ್ರುಗಳೊಡನೆ ಸೇರುವರು. ಅಗ್ನಿಯಿಂದ ದೂರವಿರಿ. ಮೂಲವ್ಯಾಧಿ ಸಮಸ್ಯೆ. ಅಧಿಕಾರಕ್ಕೆ ಚ್ಯುತಿಯುಂಟಾಗಬಹುದು. ಭೂಮಿ ಖರೀದಿ ಯೋಗವಿದೆ. ಎಚ್ಚರದಿಂದ ವ್ಯವಹರಿಸಿ.

ಶುಭ: 10, 16, 22, ಅಶುಭ: 1‌1, 18, 28

ಕುಂಭ: ಉದ್ಯೋಗಸ್ಥ ಮಹಿಳೆಯರಿಗೆ ಯಶಸ್ಸು, ಕೆಲಸದಲ್ಲಿ ಪದೋನ್ನತಿ, ಇಚ್ಛಿತ ಸ್ಥಳಕ್ಕೆ ವರ್ಗಾವಣೆ. ಆರ್ಥಿಕವಾಗಿ ನಿರೀಕ್ಷಿತ ಲಾಭ. ಕ್ರಯ ವಿಕ್ರಯಕ್ಕೆ ಸಕಾಲ. ಮಹತ್ವದ ಕೆಲಸದಲ್ಲಿ ಮುನ್ನಡೆ ಸಾಧಿಸುವಿರಿ. ವಿವಾಹ ಯೋಗ.

ಶುಭ: 12, 18, 22, ಅಶುಭ: 11, 16, 20

ಮೀನ: ನವ ವಿವಾಹಿತರಿಗೆ ಸಂತಾನ ಭಾಗ್ಯ. ನಿರುದ್ಯೋಗ ಸಮಸ್ಯೆ ಬಗೆಹರಿಯುವುದು. ಎಲ್ಲ ಕೆಲಸಗಳಿಂದ ಧನಲಾಭ. ಷೇರು ವ್ಯವಹಾರ ಮಾಡುವಾಗ ಬಂಡವಾಳದ ಮೇಲೆ ಹಿಡಿತವಿರಲಿ. ವ್ಯವಹಾರದಲ್ಲಿ ಲಾಭ.

ಶುಭ: 09, 11, 21, ಅಶುಭ: 14, 19, 29

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT