ಬುಧವಾರ, ಏಪ್ರಿಲ್ 1, 2020
19 °C
ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮೀಜಿ

ಶಿವ ಧ್ಯಾನದಿಂದ ನೆಮ್ಮದಿ ಸಾಧ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ವಿಜಯಪುರ: ‘ಮನುಷ್ಯನಿಗೆ ನೇಮ-ನಿಷ್ಠೆ ಬೇಕು. ಶಿವನ ಧ್ಯಾನದಿಂದ ನೆಮ್ಮದಿ, ಸುಖ, ಶಾಂತಿ ಕಂಡುಕೊಳ್ಳಲು ಸಾಧ್ಯ’ ಎಂದು ಸಿದ್ಧಾರೂಢ ಮಠದ ಶಂಕರಾನಂದ ಸ್ವಾಮೀಜಿ ಹೇಳಿದರು.

ನಗರದ ಕೇಂದ್ರ ಕಾರಾಗೃಹ ಸಮೀಪದ ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ಆವರಣದಲ್ಲಿ ಮಹಾಶಿವರಾತ್ರಿ ನಿಮಿತ್ತ ಗುರುವಾರ ಏರ್ಪಡಿಸಿದ್ದ ಬೃಹದಾಕಾರದ ಶಿವಲಿಂಗ ದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.

‘ಮಾನವನು ನಿಜವಾದ ಸಮಾಧಾನ, ಶಾಂತಿ, ಒಳ್ಳೆ ಗುಣಗಳನ್ನು ಅಳವಡಿಸಿಕೊಳ್ಳಲು ಶಿವನಿಗೆ ಶರಣಾಗಬೇಕು. ವಿನಯವೇ ಜೀವನದ ಮೌಲ್ಯ, ಶಿವನ ದರ್ಶನವನ್ನು ಪಡೆದು ಜನ್ಮವನ್ನು ಸ್ವಾರ್ಥಕ ಮಾಡಿಕೊಳ್ಳಬೇಕು’ ಎಂದು ತಿಳಿಸಿದರು.

ಜಿಲ್ಲಾಧಿಕಾರಿ ವೈ.ಎಸ್.ಪಾಟೀಲ ಮಾತನಾಡಿ, ‘ಒತ್ತಡದ ತಾಪಕ್ಕೆ ಇಂತಹ ಆಶ್ರಮಗಳು ತಂಪು ನೀಡುತ್ತವೆ. ಮನಸ್ಸು ವಿಚಲಿತ; ಅದನ್ನು ಏಕಾತ್ರಮಾಡುವುದು ಕಷ್ಠ. ಪರಮಶಾಂತಿ ಪಡೆಯುವುದು ಅಗತ್ಯ. ವಯಸ್ಸಾದ ಮೇಲೆ ಅಧ್ಯಾತ್ಮದತ್ತ ಒಲಿಯುವ ಬದಲು ವಯಸ್ಸು ಇದ್ದಾಗಲೇ ಆಧ್ಯಾತ್ಮದ ಅಗತ್ಯವಿದೆ’ ಎಂದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್‌ ಮಾತನಾಡಿ, ‘ಒಂದೇ ಸ್ಥಳದಲ್ಲಿ 12 ಜ್ಯೋತಿರ್ಲಿಂಗಗಳ ದರ್ಶನ ಸೌಲಭ್ಯ ಒದಗಿಸಿರುವುದು ಅಭಿನಂದನೀಯ. ನೆಮ್ಮದಿಯ ಜೀವನಕ್ಕೆ ಶಾಂತಿಯ ಅಗತ್ಯವಿದೆ. ಒತ್ತಡಮಯ ಬದುಕಿನಲ್ಲಿ ಮಾನಸಿಕ ಆರೋಗ್ಯ ಬಹುಮುಖ್ಯವಾಗಿದೆ’ ಎಂದು ಹೇಳಿದರು.

ರಾಜಯೋಗಿನಿ ರವಿಕಲಾ ಅವರು ಶಿವರಾತ್ರಿಯ ಶಿವ ಸಂದೇಶ ನೀಡಿದರು. ಉಮೇಶ ವಂದಾಲ, ಸಂಗೀತಾ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀಹರಿ ಅ.ಗೊಳಸಂಗಿ ಇದ್ದರು.

ಗಂಗಾಧರ ಸ್ವಾಗತಿಸಿದರು, ಕೇಂದ್ರ ಸಂಚಾಲಕಿ ಸರೋಜಾ ಅಕ್ಕ ನಿರೂಪಿಸಿದರು. ನಿವೃತ್ತ ಪ್ರಾಚಾರ್ಯ ಪ್ರಭು ವಂದಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)