ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾತಕಗಳ ಪರಿಹಾರಕ್ಕೆ ಭಗವಂತನ ಪ್ರಾರ್ಥಿಸಿ

Last Updated 13 ಏಪ್ರಿಲ್ 2022, 14:53 IST
ಅಕ್ಷರ ಗಾತ್ರ

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

––––––

ಭವ ಬಂಧನ ದುರಿತಂಗಳ ಗೆಲುವಡೆ

ಓಂ ನಮಃ ಶಿವಾಯ ಶರಣೆಂದಡೆ ಸಾಲದೆ?

ಹರ ಹರ ಶಂಕರ ಶಿವ ಶಿವ ಶಂಕರ

ಜಯ ಜಯ ಶಂಕರ ಶರಣೆನುತ್ತಿದ್ದೇನೆ

ಎನ್ನ ಪಾತಕ ಪರಿಹರ

ಕೂಡಲಸಂಗಮದೇವಾ, ಶರಣೆನುತ್ತಿದ್ದೇನೆ

ಮನುಷ್ಯನು ತನ್ನ ಜೀವನದಲ್ಲಿ ಸದಾ ಕಾಲ ಒಳಿತನ್ನು ಬಯಸುವ ಪ್ರವೃತ್ತಿಯನ್ನು ಹೊಂದಿರಬೇಕು. ಬಾಲ್ಯದಲ್ಲಿ ನಾವು ಪಡೆಯುವ ಸಂಸ್ಕಾರವು ನಮಗೆ ಬಹಳ ಮುಖ್ಯವಾಗುತ್ತದೆ. ಸಂಸಾರದ ಕಷ್ಟಗಳು ನಮ್ಮನ್ನು ಅಧೀರರನ್ನಾಗಿ ಮಾಡುತ್ತವೆ. ಇವುಗಳನ್ನು ಗೆಲುವುದೆ ನಮ್ಮ ಮೂಲ ಮಂತ್ರವಾಗಬೇಕು. ಅದಕ್ಕೆ ಬಸವಣ್ಣನವರು ಭವ–ಬಂಧನಗಳ ದುರಿತಂಗಳ ಗೆಲುವಡೆ ಎಂದಿದ್ದಾರೆ. ಭವ ಬಂಧನ ದುರಿತಗಳು ಹಾಗು ಪಾತಕಗಳು ಎನ್ನುವವು ಮಾನವ ಕೃತ್ಯಗಳಾಗಿವೆ. ಇವು ದೈಹಿಕ, ವಾಚಿಕ, ಮಾನಸಿಕವಾದವುಗಳಾಗಿವೆ. ಕಳ್ಳತನ, ಹಿಂಸೆ ಇವು ದೈಹಿಕವಾದ ಪಾತಕಗಳು. ಸುಳ್ಳು ಹೇಳುವುದು, ನಿಂದೆ ಮಾಡುವುದು, ವಾಚಿಕ ಪಾತಕಗಳು. ಅನ್ಯರ ಸಂಪತ್ತಿನ ಚಿಂತನೆ, ಅನಿಷ್ಟಗಳ ಕುರಿತು ಆಲೋಚಿಸುವುದು ಮಾನಸಿಕ ಪಾತಕಗಳು. ಈ ಎಲ್ಲ ಪಾತಕಗಳ ಪರಿಹಾರವೆ ಭಗವಂತನ ಪ್ರಾರ್ಥನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT