ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಚನಾಮೃತ | ತನ್ನ ತಾ ಅರಿತವನು ದೇವರನ್ನು ಕಾಣುತ್ತಾನೆ

Last Updated 13 ನವೆಂಬರ್ 2020, 15:13 IST
ಅಕ್ಷರ ಗಾತ್ರ

ಕಣ್ಣಿಗೆ ಕಾಣುವ ಅಥವಾ ಕಾಣದೆ ಇರುವ ಅಗೋಚರ ಶಕ್ತಿಯೆ ದೇವರು ಎನ್ನುವುದು ಜನರ ನಂಬಿಕೆ.

ದೇವರು ಎಂಬ ಶಬ್ದಕ್ಕೆ ಮೂರು ಅಕ್ಷರಗಳು ಇವೆ. ‘ದೆ’ ಅಂದರೆ ದೇಹ ಅಲ್ಲದ, ‘ವ’ ಅಂದರೆ ವರ್ಣ ವಲ್ಲದ ‘ರು‘ ಅಂದರೆ ರೂಪವಲ್ಲದ ಮಹಾನ್ ಶಕ್ತಿಗೆ ದೇವರು ಎಂದು ಕರೆಯುತ್ತಾರೆ.

ಸಂಸ್ಕೃತ ಭಾಷೆಯಲ್ಲಿ ದೇವ ಎನ್ನುವ ಶಬ್ದಕ್ಕೆ ‘ರು’ ಎಂಬ ಕನ್ನಡದ ಪ್ರತ್ಯಯ ಸೇರಿ ದೇವರು ಎನ್ನುವ ಶಬ್ದ ಚಿರ ಪರಿಚಿತವಾಗಿದೆ. ಸಂಸ್ಕೃತದ ಧೀವ್ ಎಂಬ ಧಾತುವಿನಿಂದ ಉತ್ಪನ್ನವಾದ ಶಬ್ದಕ್ಕೆ ಬೆಳಕು ಪ್ರಜ್ವಲಿಸು, ಪ್ರಕಾಶ ಪಡಿಸು, ಆನಂದಿಸುವುದು ಇನ್ನೂ ಹಲವು ಅರ್ಥಗಳನ್ನು ಕಾಣುತ್ತೇವೆ.

ದೇವರ ಸ್ವರೂಪವನ್ನು ವೇದ, ಉಪನಿಷತ್, ಆಗಮ ಗ್ರಂಥಗಳಲ್ಲಿ ಹಾಗೂ ಸಾಹಿತ್ಯ ಗ್ರಂಥಗಳಲ್ಲಿ ದೇವರ ಕಲ್ಪನೆಯ ಚಿತ್ರಣವನ್ನು ಕಾಣುತ್ತೇವೆ. ಕಣ್ಣಿಗೆ ಕಾಣುವಂತೆ ನಮ್ಮ ಮನಸ್ಸಿಗೆ ತಕ್ಕಂತೆ ರೂಪ ಮತ್ತು ಸ್ವರೂಪವನ್ನು ಕೊಟ್ಟು ಇಂದಿಗೂ ದೇವರು ನಮ್ಮ ಇಚ್ಛೆಯಂತೆ ಪೂಜೆಗೊಳುತ್ತಿದ್ದಾನೆ.

ಜನರಿಗೆ ದೇವರಲ್ಲಿ ಭಕ್ತಿ ಇರಬೇಕು. ಆದರೆ, ಭಯ ಇರಬಾರದು. ದೇವರು ನಮಗೆ ಇಂತಹುದೆ ಪೂಜೆ ಮಾಡಿ, ಇಂತಹುದೆ ಪ್ರಸಾದ ನೀಡಿ ಎಂದು ಯಾವ ವೇದ ಪುರಾಣ ಸಹ ಹೇಳಿಲ್ಲ.

ನಮ್ಮ ಕಲ್ಪನೆಗೆ ಅತೀಥನಾದ ದೇವರ ಸ್ವರೂಪವನ್ನು ತಿಳಿಯಬೇಕಾದರೆ ತನ್ನನ್ನು ತಾನು ಯಾರೆಂದು ಮೊದಲು ತಿಳಿಯಬೇಕು. ಅದಕ್ಕೆ ಶರಣರ ವಚನದಂತೆ

‘ಕಲ್ಲು ದೇವರು ದೇವರಲ್ಲಾ

ಮಣ್ಣು ದೇವರು ದೇವರಲ್ಲಾ

ಮರದ ದೇವರು ದೇವರಲ್ಲಾ

ಪಂಚ ಲೋಹದಲ್ಲಿ ಮಾಡಿದ ದೇವರು ದೇವರಲ್ಲಾ

ಸೇತು, ರಾಮೇಶ್ವರ, ಗೋಕರ್ಣ, ಕಾಶಿ, ಕೇದಾರ ಮತ್ತಿತರ ಅಷ್ಟಾಪುಪ್ಟಿಕೋಟಿ ಪುಣ್ಯ ಕ್ಷೇತ್ರಗಳಲ್ಲಿ ಇರುವ ದೇವರು ದೇವರಲ್ಲಾ

ತನ್ನ ತಾನು ಅರಿತೊಡೆ ತಾನೆ ದೇವ ನೋಡ, ಅಪ್ರಮಾಣ ಕೂಡಲ ಸಂಗಮದೇವ...

ಎಂದು ತಾನು ಯಾರು, ತನ್ನ ಕರ್ತವ್ಯ ಏನು ಎಂಬ ಅರಿವು ಇದ್ದರೆ ಮಾತ್ರ ದೇವರನ್ನು ಕಾಣಲು ಸಾಧ್ಯವಿದೆ. ಮತ್ತೊಬ್ಬರಿಗೆ ಸಹಾಯಕನಾಗಿ ನಂಬಿಕೆಗೆ ಅರ್ಹವ್ಯಕ್ತಿಯಾಗಿ ಗುರು ಹಿರಿಯರಿಗೆ ಗೌರವ ಸಲ್ಲಿಸುವ ಸ್ವಭಾವವನ್ನು ತಿಳಿದಿರುವವನೆ ನಿಜವಾದ ಸಾಕ್ಷಾತ್ ಸದ್ಗುರುವಿನ ರೂಪವಾಗಿ ಕಾಣುತ್ತಾನೆ.

-ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT