ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಂತನ ಕೃಪೆಗೆ ಪಾತ್ರರಾಗೋಣ: ಡಾ.ಅಲ್ಲಮಪ್ರಭು ಸ್ವಾಮೀಜಿ

Last Updated 16 ಫೆಬ್ರುವರಿ 2022, 6:09 IST
ಅಕ್ಷರ ಗಾತ್ರ

ಡಾ.ಅಲ್ಲಮಪ್ರಭು ಸ್ವಾಮೀಜಿ, ನಾಗನೂರು ರುದ್ರಾಕ್ಷಿಮಠ, ಬೆಳಗಾವಿ

ಭವಭವದಲ್ಲಿ ಎನ್ನ ಮನವು ನೀವಲ್ಲದೆ

ಭವಭವದಲ್ಲೆನ್ನ ಮನವು ಸಿಲುಕದೆ

ಭವರಾಟಾಳದೊಳು ತುಂಬದೆ, ಕೆಡಹದೆ

ಭವರೋಗವೈದ್ಯ ನೀನು, ಭವವಿರಹಿತ ನೀನು

ಅವಧಾರು! ಕರುಣ ಸುವುದು ಕೂಡಲಸಂಗಮದೇವಾ.

ಎಲ್ಲರೂ ತಿಳಿದಿರುವಂತೆ ಈ ಜಗತ್ತಿನಲ್ಲಿ ಗಂಡು ಮತ್ತು ಹೆಣ್ಣು ಎಂಬ ಎರಡೇ ಜಾತಿಗಳು ಮುಖ್ಯವಾಗಿವೆ. ಆದರೆ, ಬಸವಣ್ಣನವರ ಪ್ರಕಾರ ಭವಿ ಮತ್ತು ಭಕ್ತ ಎಂಬ ಎರಡು ಜಾತಿಗಳು ಅವುಗಳನ್ನು ಮೀರಿದವುಗಳಾಗಿವೆ. ಅದಕ್ಕೆ ಈ ಭವಸಾಗರದಲ್ಲಿರುವ ಭವಿಗಳೆಲ್ಲ ಭಕ್ತರಾಗಬೇಕು. ಪ್ರತಿಯೊಂದು ಜನ್ಮದಲ್ಲಿಯೂ ನನ್ನ ಮನಸ್ಸು ಭಗವಂತನ ಸ್ಮರಣೆ ಮಾಡಲು ಹಾತೊರೆಯುತ್ತದೆ. ಬೇರೆ ಬೇರೆ ಜನ್ಮದಲ್ಲಿಯೂ ನನ್ನ ಮನಸ್ಸು ಚಂಚಲವಾಗದೆ, ಸಾರಚಕ್ರದಲ್ಲಿ(ಭವರಾಟಾಳದೊಳು) ಸಿಲುಕದೆ, ಯಾವುದೇ ಮೋಹಕ್ಕೆ ಒಳಗಾಗದೆ ಕೇವಲ ನಿನ್ನದೆ ಧ್ಯಾನದಲ್ಲಿ ತಲ್ಲೀನನಾಗಿ ಮುಕ್ತಿಯನ್ನು ಪ್ರಾಪ್ತಿ ಮಾಡಿಕೊಳ್ಳುತ್ತದೆ. ಅದಕ್ಕೆಲ್ಲ ಕಾರಣ ನೀನೆ (ಭವರೋಗ ವೈದ್ಯ). ಸಂಸಾರದ ಸೋಂಕು ತಗುಲದೆ ಇರುವ ನೀನು (ಭವವಿರಹಿತ) ನನ್ನ ಕಡೆ ಗಮನ ಕೊಡು (ಅವಧಾರು), ಕರುಣೆಯಿಂದ ಕೃಪೆ ತೋರು ಭಗವಂತ ಎಂದು ಭಕ್ತಿಯಿಂದ ಈ ವಚನದಲ್ಲಿ ಪ್ರಾರ್ಥಿಸಿದ್ದಾರೆ. ಭಗವಂತನ ಕೃಪೆಗೆ ಪಾತ್ರವಾಗಲು ಪ್ರಯತ್ನಿಸುತ್ತಿರಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT