ಡಿಸೆಂಬರ್ 30ರ ಮಂಗಳವಾರ ಸರ್ವೇಷಾಮೇಕಾದಶಿ ಅಥವಾ ವೈಕುಂಠ ಏಕಾದಶಿಯನ್ನು ಆಚರಿಸಲಾಗುತ್ತದೆ. ಈ ಏಕಾದಶಿಯ ತಿಥಿ ಡಿಸೆಂಬರ್ 29 ರ ಬೆಳಗಿನ ಜಾವ 3:29ಕ್ಕೆ ಪ್ರಾರಂಭವಾಗಿ ಡಿಸೆಂಬರ್ 30 ರಾತ್ರಿ 1:17ಕ್ಕೆ ಮುಕ್ತಾಯವಾಗುತ್ತದೆ.

ರಾಶಿ ಚಕ್ರಗಳ ಪ್ರಕಾರ ಡಿಸೆಂಬರ್ 27ರಂದು ಮೂಲ ನಕ್ಷತ್ರದ ನಾಲ್ಕನೆ ಪಾದದಲ್ಲಿ ಶುಕ್ರನ ಸಂಚಾರವಾಗುತ್ತದೆ. ಡಿಸೆಂಬರ್ 29ರಂದು ಮೂಲ ನಕ್ಷತ್ರದ ಒಂದನೇ ಪಾದಕ್ಕೆ ಬುಧ ಪ್ರವೇಶಿಸುತ್ತಾನೆ. ಇದರಿಂದ 3 ರಾಶಿಯವರಿಗೆ ಶುಭ ಯೋಗ ಕೂಡಿ ಬರಲಿದೆ ಎಂದು ಜ್ಯೋತಿಷ ಹೇಳುತ್ತದೆ. ಆ 3 ರಾಶಿಗಳು ಯಾವುವು ಎಂಬುದನ್ನು ತಿಳಿಯೋಣ.
.ವೈಕುಂಠ ಏಕಾದಶಿ: ಹೀಗಿರಲಿ ಪೂಜಾ ವಿಧಾನ.ವೈಕುಂಠ ಏಕಾದಶಿ: ಈ ವಿಷಯಗಳನ್ನು ಪಾಲಿಸಿದರೆ ಸಕಲ ಐಶ್ವರ್ಯ ನಿಮ್ಮದಾಗುತ್ತೆ.
ಸಿಂಹ ರಾಶಿ: ಬುಧ ಮತ್ತು ಶುಕ್ರನ ಸ್ಥಾನ ಬದಲಾವಣೆಯಾಗುವುದರಿಂದ ಈ ರಾಶಿಯವರ ಕುಟುಂಬದಲ್ಲಿ ನೆಮ್ಮದಿ, ವಾತಾವರಣ ನಿರ್ಮಾಣವಾಗಲಿದೆ. ಮಾಡುವ ಕಾರ್ಯಗಳಲ್ಲಿ ಯಶಸ್ಸು, ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆ, ವಿವಾಹ ಕಾರ್ಯ ಹಾಗೂ ಮಂಗಳ ಕಾರ್ಯಗಳು ನಡೆಯುತ್ತವೆ. ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ ಮೊದಲಾದ ಶುಭ ಯೋಗಗಳು ಕೂಡಿ ಬರಲಿವೆ.

ತುಲಾ ರಾಶಿ: ಈ ರಾಶಿಯವರಿಗೆ ಶುಕ್ರ ಮತ್ತು ಬುಧನ ಸಂಚಾರದಿಂದ ವ್ಯಾಪಾರ ವ್ಯವಹಾರಗಳಲ್ಲಿ ಧನ ಲಾಭವಾಗಲಿದೆ. ಕುಟುಂಬದಲ್ಲಿ ಸುಖ, ಆರೋಗ್ಯದಲ್ಲಿ ಸುಧಾರಣೆ, ಬಂಧು ಮಿತ್ರರ ಸಹಾಯ ಹಾಗೂ ಪುಣ್ಯಕ್ಷೇತ್ರ ದರ್ಶನ ಸಾಧ್ಯತೆ ಇದೆ.
.ವೈಕುಂಠ ಏಕಾದಶಿ: ಈ ದಿನ ಉಪವಾಸ ಮಾಡಲು ಕಾರಣ, ಲಾಭಗಳೇನು?.ಇಂದು ವೈಕುಂಠ ಏಕಾದಶಿ: ದಾರಿ ಯಾವುದಯ್ಯಾ ವೈಕುಂಠಕೆ....
ಮಕರ ರಾಶಿ: ವೈಕುಂಠ ಏಕಾದಶಿಯ ನಂತರ ಈ ರಾಶಿಯವರಿಗೆ ಶುಭಫಲ ದೊರೆಯಲಿದೆ. ಆರೋಗ್ಯ ಸ್ಥಿತಿಯಲ್ಲಿ ಸುಧಾರಣೆಯಾಗಲಿದೆ. ಬಂಧು ಮಿತ್ರರಿಂದ ಸಹಾಯ ದೊರೆಯಲಿದೆ.

ವೈಕುಂಠ ಏಕಾದಶಿಯ ತಿಥಿಯಂದು ಶ್ರದ್ಧೆಯಿಂದ ಉಪವಾಸ ಆಚರಿಸಿ ಉತ್ತರ ದ್ವಾರದ ಮೂಲಕ ನಾರಾಯಣನ ದರ್ಶನ ಪಡೆಯುವುದರಿಂದ ಅನಂತ ಪುಣ್ಯ ಪ್ರಾಪ್ತಿಯಾಗುತ್ತದೆ ಎಂಬ ನಂಬಿಕೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.