ಡಿಸೆಂಬರ್ 30ರ ಮಂಗಳವಾರದಂದು ’ಸರ್ವೇಷಮೇಕಾದಶಿ’ ಅಥವಾ ’ವೈಕುಂಠ ಏಕಾದಶಿ’ಯನ್ನು ಆಚರಿಸಲಾಗುತ್ತದೆ. ವೈಕುಂಠ ಏಕಾದಶಿ ವರ್ಷದ ಕೊನೆಯ ಹಾಗೂ ಪ್ರಮುಖ ಆಚರಣೆಗಳಲ್ಲಿ ಒಂದು. ಈ ದಿನದ ಆಚರಣೆ ವೈಕುಂಠಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ನಂಬಿಕೆ ಇದೆ. ಹಾಗಾದರೆ ಈ ದಿನದ ಮಹತ್ವ, ಹಿನ್ನೆಲೆ ಏನೆಂಬುದನ್ನು ತಿಳಿಯೋಣ.

ವೈಕುಂಠ ಏಕಾದಶಿಯನ್ನು ಆಚರಿಸುವುದರಿಂದ ಧನಪ್ರಾಪ್ತಿ, ಇಷ್ಟಾರ್ಥ ಸಿದ್ಧಿ, ರೋಗ ನಿವಾರಣೆ ಹಾಗೂ ದಾರಿದ್ರವೆಲ್ಲವೂ ನಿವಾರಣೆಯಾಗುತ್ತದೆ. ಪುರಾಣ ಕಥೆಗಳ ಪ್ರಕಾರ ನಾರಾಯಣ ತನ್ನ ವಾಸಸ್ಥಾನವಾದ ವೈಕುಂಠದಿಂದ ಏಕಾದಶಿ ತಿಥಿಯ ದಿನ ಭಕ್ತರಿಗೆ ದರ್ಶನ ನೀಡುವುದಕ್ಕಾಗಿ ಲಕ್ಷ್ಮೀಯ ಸಮೇತ ಭೂಲೋಕಕ್ಕೆ ಬರುತ್ತಾರೆ ಎಂಬ ನಂಬಿಕೆ ಇದೆ. ಈ ದಿನ ದೇವಲೋಕದ ದ್ವಾರ ತೆರೆಯಲಿದೆ ಹಾಗೂ ನಮ್ಮೆಲ್ಲ ಪಾಪ ಕರಗಿ ಕರ್ಮ ಕಳೆಯುವ ದಿನವಾಗಿದೆ.
.ವರ್ಷ ಭವಿಷ್ಯ 2026: ತುಲಾ ರಾಶಿಯವರಿಗೆ ಧನಲಾಭ ಸೇರಿ ಇನ್ನಷ್ಟು ಯಶಸ್ಸು.ರಾಶಿ ಭವಿಷ್ಯ 2026: ಸಿಂಹ ರಾಶಿಯವರಿಗೆ ಆದಾಯವಿದೆ; ಉಳಿತಾಯದ ಜಾಗ್ರತೆಯೂ ಅಗತ್ಯ.
ಈ ದಿನ ಮನೆಯಲ್ಲಿಯೇ ವೈಕುಂಠದ ದ್ವಾರವನ್ನು ನಿರ್ಮಿಸಿ, ವೃತವನ್ನು ಆಚರಿಸುವ ಪದ್ಧತಿ ಇದೆ. ವೈಕುಂಠ ಏಕಾದಶಿ ಬೆಳಿಗ್ಗೆ 7:50 ರಿಂದ ಪ್ರಾರಂಭವಾಗಿ ಡಿಸೆಂಬರ್ 31 ರ ಬೆಳಿಗ್ಗೆ 5ರ ವರೆಗೂ ಇರುತ್ತದೆ. ಈ ಅವಧಿಯಲ್ಲಿ ವ್ರತವನ್ನು ಆಚರಿಸುವುದು ಉತ್ತಮ.

ಈ ಅವಧಿಯನ್ನು ’ವೈಕುಂಠ ದ್ವಾರ ಕಾಲ’ ಎಂದು ಕರೆಯುತ್ತಾರೆ. ಇಂದು ವಿಷ್ಣುವಿನ ಸ್ವರ್ಗದ ಬಾಗಿಲು ತೆರೆಯುತ್ತದೆ. ಭೂಮಿ ಮೇಲೆ ವಿಷ್ಣು ಪ್ರತ್ಯಕ್ಷನಾಗುತ್ತಾನೆ. ಆದ್ದರಿಂದ ಇಂದು ಉಪವಾಸ ಮಾಡುವುದು ಸಾವಿರ ಯಜ್ಞ ಫಲಕ್ಕೆ ಸಮ ಎಂಬ ನಂಬಿಕೆ ಇದೆ.

ಇಂದು ಕೈಗೊಂಡ ತಪ, ಜಪದಿಂದ ಅನಂತ ಪುಣ್ಯ ದೊರಕಿ ಮನುಷ್ಯನ ಕರ್ಮ, ಪಾಪಗಳು ಕರಗಿ, ನಾರಾಯಣನ ಕೃಪೆಯಿಂದ ಧನ , ಶಾಂತಿ, ಸಂತಾನ ಹಾಗೂ ಆರೋಗ್ಯ ದೊರೆಯಲಿದೆ ಎಂಬ ನಂಬಿಕೆ ಇದೆ.

ಪೌರಾಣಿಕ ಹಿನ್ನೆಲೆ:

ಪುರಾಣ ಕಥೆಗಳ ಪ್ರಕಾರ ‘ಒಮ್ಮೆ ವಿಷ್ಣುವು ನರಕಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡುತ್ತಾನೆ. ಬಳಿಕ ನಾನು ಯಾವ ದಿನದಂದು ವೈಕುಂಠದ ಬಾಗಿಲನ್ನು ತೆರೆಯುತ್ತೇನೆಯೋ ಆ ದಿನ ಭೂಮಂಡಲದಲ್ಲಿ ಉಪವಾಸ ಮಾಡುವ ಮನುಷ್ಯ ವೈಕುಂಠಕ್ಕೆ ಬರಲು ಅರ್ಹನಾಗುತ್ತಾನೆ’ ಎಂಬ ಸಂದೇಶ ನೀಡಿದರು ಎಂಬ ನಂಬಿಕೆ ಇದೆ.
.ರಾಶಿ ಭವಿಷ್ಯ 2026: ಸಿಂಹ ರಾಶಿಯವರಿಗೆ ಆದಾಯವಿದೆ; ಉಳಿತಾಯದ ಜಾಗ್ರತೆಯೂ ಅಗತ್ಯ.
ಈ ಕಾರಣಕ್ಕಾಗಿ ಈ ದಿನವನ್ನು ’ವೈಕುಂಠ ಏಕಾದಶಿ’ ಎಂದು ಕರೆಯುತ್ತಾರೆ. ಈ ದಿನ ಉಪವಾಸ ಮಾಡುವವರು ವೈಕುಂಠಕ್ಕೆ ಹೋಗುತ್ತಾರೆ ಎಂಬ ನಂಬಿಕೆ ಇದೆ. ಇಂದು ಉಪವಾಸ ಆಚರಣೆ ಮಾಡಿ ವಿಷ್ಣುವಿಗೆ ಪೂಜೆ ಸಲ್ಲಿಸಿದರೆ, ಶುಭಫಲ ದೊರೆಯಲಿದೆ ಎಂದು ಜ್ಯೋತಿಷದಲ್ಲಿ ಹೇಳಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.