2026ನೇ ವರ್ಷ ಸಿಂಹ ರಾಶಿಯವರಿಗೆ ಧಿಡೀರ್ ಬದಲಾವಣೆ, ಆಂತರಿಕ ಚಿಂತನೆ ಮತ್ತು ನಿಧಾನಗತಿಯ ಪ್ರಗತಿಯ ವರ್ಷವಾಗಿರುತ್ತದೆ. ಕರ್ನಾಟಕದ ಅಕ್ಷಾಂಶ ಹಾಗೂ ರೇಖಾಂಶ ಆಧಾರಿತ ಗ್ರಹ ಸಂಚಾರಗಳನ್ನು ಪರಿಗಣಿಸಿದಾಗ, ಈ ವರ್ಷ ಹೊರಗಿಂತ ಒಳಗಿನ ಶಕ್ತಿಯನ್ನು ಬೆಳೆಸುವ ಕಾಲವೆಂದು ಜ್ಯೋತಿಷ್ಯದಲ್ಲಿ ಸ್ಪಷ್ಟವಾಗಿದೆ.

ಶನಿ ಗ್ರಹ ವರ್ಷಪೂರ್ತಿ ಮೀನ ರಾಶಿಯಲ್ಲಿ ಸಂಚರಿಸುವುದರಿಂದ, ಸಿಂಹ ಲಗ್ನಕ್ಕೆ ಇದು ಅಷ್ಟಮ ಭಾವ ಸಂಚಾರವಾಗಿರಲಿದೆ. ಶನಿ ಅಷ್ಟಮಭಾವದಲ್ಲಿರುವುದರಿಂದ ಜೀವನದಲ್ಲಿ ಅಪ್ರತೀಕ್ಷಿತ ತಿರುವುಗಳು, ವಿಳಂಬಗಳು ಹಾಗೂ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಆರೋಗ್ಯ, ಸಾಲು–ಸಾಲಿಗೆ ಸಂಬಂಧಿತ ವ್ಯವಹಾರಗಳು, ತೆರಿಗೆ ಹಾಗೂ ಕಾನೂನು ವಿಚಾರಗಳಲ್ಲಿ ವಿಶೇಷ ಎಚ್ಚರ ಅಗತ್ಯ. ಆದರೆ ಇದು ಸಂಪೂರ್ಣ ನಕಾರಾತ್ಮಕವಲ್ಲ. ದೀರ್ಘಕಾಲದ ಸಮಸ್ಯೆಗಳು ಕ್ರಮೇಣ ನಿವಾರಣೆಯಾಗುವ ಯೋಗವೂ ಇದೆ.

ಗುರು ಗ್ರಹ ಮೇ 30ರವರೆಗೆ ಮಿಥುನ ರಾಶಿಯಲ್ಲಿ ಇರುವುದರಿಂದ, ಇದು ಏಕಾದಶ ಭಾವ ಸಂಚಾರವಾಗಿರಲಿದೆ.

ಗುರು ಲಾಭ ಭಾವದಲ್ಲಿರುವ ಕಾರಣ, ಆದಾಯ ವೃದ್ಧಿ, ಸ್ನೇಹ ವಲಯ ವಿಸ್ತರಣೆ, ಹಾಗೂ ಹಿಂದಿನ ಶ್ರಮಕ್ಕೆ ಪ್ರತಿಫಲ ಸಿಗುತ್ತದೆ. ಸಂಘಟನೆ, ಸಂಸ್ಥೆ ಮತ್ತು ಸಾಮಾಜಿಕ ಸಂಪರ್ಕಗಳಿಂದ ಲಾಭ ಸಾಧ್ಯ.

ಮೇ 30 ನಂತರ ಗುರು ಕರ್ಕ ರಾಶಿಗೆ ಪ್ರವೇಶಿಸುವುದರಿಂದ, ಇದು ದ್ವಾದಶ ಭಾವ.

ಗುರು ವ್ಯಯಭಾವದಲ್ಲಿರುವುದರಿಂದ ಖರ್ಚು ಹೆಚ್ಚಳ, ವಿದೇಶ ಸಂಪರ್ಕ, ಆಸ್ಪತ್ರೆ ಅಥವಾ ಆಧ್ಯಾತ್ಮಿಕ ಚಟುವಟಿಕೆಗಳು ಹೆಚ್ಚಾಗಬಹುದು. ಆದಾಯ ಇದ್ದರೂ ಉಳಿತಾಯಕ್ಕೆ ಜಾಗ್ರತೆ ಅಗತ್ಯ.

ರಾಹು ನವೆಂಬರ್ ತನಕ ಕುಂಭ ರಾಶಿಯಲ್ಲಿ ಇರುವುದರಿಂದ, ಸಿಂಹ ರಾಶಿಗೆ ಇದು ಸಪ್ತಮ ಭಾವ.

ರಾಹು ಸಪ್ತಮಭಾವದಲ್ಲಿರುವುದರಿಂದ ದಾಂಪತ್ಯ ಮತ್ತು ಪಾಲುದಾರಿಕೆಗಳಲ್ಲಿ ಅಸ್ಥಿರತೆ, ಹೊಸ ಆದರೆ ಗೊಂದಲಕಾರಕ ಸಂಬಂಧಗಳು, ಅಥವಾ ವ್ಯವಹಾರಿಕ ಒಪ್ಪಂದಗಳಲ್ಲಿ ಎಚ್ಚರ ಅವಶ್ಯಕ.
.ವೃಷಭ ರಾಶಿ ಫಲ 2026: ದಾಂಪತ್ಯ ಜೀವನದಲ್ಲಿ ಸುಖ ಸೇರಿ ಇನ್ನಷ್ಟು ಶುಭಫಲ.2026 ಕರ್ಕಾಟಕ ರಾಶಿ ಭವಿಷ್ಯ: ಜೀವನದ ಮಹತ್ವದ ತಿರುವುಗಳು ನಿಮ್ಮದಾಗಲಿವೆ.
ನವೆಂಬರ್ ನಂತರ ರಾಹು ಮಕರ ರಾಶಿಗೆ ಪ್ರವೇಶಿಸುವುದರಿಂದ, ಇದು ಷಷ್ಠ ಭಾವ.

ಸ್ಪರ್ಧೆ, ಸಾಲ ಮತ್ತು ಶತ್ರುಗಳ ಮೇಲೆ ಜಯ ಸಾಧಿಸುವ ಅವಕಾಶ ಸಿಗುತ್ತದೆ. ಉದ್ಯೋಗ ಕ್ಷೇತ್ರದಲ್ಲಿ ವಿರೋಧಿಗಳನ್ನು ಮೀರಿಸುವ ಕಾಲ ಇದು.

ಅದೇ ಸಮಯದಲ್ಲಿ ಕೇತು ಸಿಂಹದಿಂದ ಕರ್ಕ ರಾಶಿಗೆ ಸಂಚರಿಸುವುದರಿಂದ, ಇದು ದ್ವಾದಶ ಭಾವ.

ಕೇತು ವ್ಯಯಭಾವದಲ್ಲಿರುವುದರಿಂದ ಒಂಟಿತನದ ಭಾವ, ನಿದ್ರಾ ಸಮಸ್ಯೆ, ಆಧ್ಯಾತ್ಮಿಕ ಆಸಕ್ತಿ ಹೆಚ್ಚಾಗುತ್ತದೆ. ಧ್ಯಾನ, ಯೋಗ ಮತ್ತು ಮೌನ ಸಾಧನೆ ಲಾಭಕರ.

ವಿವಾಹ ಜೀವನದಲ್ಲಿ ನವೆಂಬರ್ ನಂತರ ನಿಧಾನವಾಗಿ ಸ್ಥಿರತೆ ಕಾಣಿಸುತ್ತದೆ. ಸಂತಾನ ವಿಚಾರದಲ್ಲಿ ಸಹನೆ ಅಗತ್ಯ. ಆರೋಗ್ಯದ ದೃಷ್ಟಿಯಿಂದ ಹೃದಯ, ರಕ್ತದೊತ್ತಡ ಮತ್ತು ನಿದ್ರೆಗೆ ವಿಶೇಷ ಗಮನ ಕೊಡಬೇಕು.

ಒಟ್ಟಾರೆ, 2026ನೇ ವರ್ಷ ಸಿಂಹ ರಾಶಿಯವರಿಗೆ ಹೊರಗಿನ ಸಾಧನೆಗಿಂತ ಒಳಗಿನ ಶುದ್ಧೀಕರಣ, ಜೀವನ ಶೈಲಿಯಲ್ಲಿ ಪರಿವರ್ತನೆ ಮತ್ತು ಮುಂದಿನ ವರ್ಷಗಳ ಸ್ಥಿರತೆಗೆ ನೆಲೆ ಹಾಕುವ ತಾಂತ್ರಿಕವಾಗಿ ಮಹತ್ವದ ವರ್ಷವಾಗಿರುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.