ಬುಧವಾರ, ಮಾರ್ಚ್ 22, 2023
19 °C

ವಾರ ಭವಿಷ್ಯ: 4-7-2021ರಿಂದ 10-7-2021ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ಮನೆಮಂದಿಯಲ್ಲಾ ಸಂಭ್ರಮದಲ್ಲಿದ್ದರೂ ನಿಮಗೆ ದಿನವಿಡೀ ದೇಹಾಲಸ್ಯ ತಲೆದೋರುವುದು. ಕೆಲಸಕಾರ್ಯಗಳಲ್ಲಿ ಸ್ವಲ್ಪ ನಿರಾಸಕ್ತಿಯನ್ನು ಕಾಣಬಹುದು. ನಿಮ್ಮ ಕಾರ್ಯಚಟುವಟಿಕೆಗಳನ್ನು ಇತರರು ಆಡಿಕೊಳ್ಳುವ ಸಾಧ್ಯತೆಗಳಿವೆ. ಕ್ರಮೇಣ ಎಲ್ಲವೂ ಸರಿಯಾಗುವುದು. ಆಸ್ತಿಗೆ ಸಂಬಂಧಪಟ್ಟ ವಿಚಾರಗಳಲ್ಲಿ ಸ್ಪಷ್ಟ ನಿರ್ಧಾರಗಳನ್ನು ತೆಗೆದುಕೊಳ್ಳುವಿರಿ. ವೃತ್ತಿ ಕ್ಷೇತ್ರದಲ್ಲಿ ನಿರಾಯಾಸವಾಗಿ ನಿಮ್ಮ ಗುರಿಯನ್ನು ತಲುಪುವಿರಿ. ಅಪೇಕ್ಷಿತರನ್ನು ಭೇಟಿ ಮಾಡಿ ವ್ಯವಹಾರದ ಬಗ್ಗೆ ಸೂಕ್ತ ನಿರ್ಣಯಗಳನ್ನು ತೆಗೆದುಕೊಳ್ಳಬಹುದು. ಹಣಕಾಸಿನ ಸ್ಥಿತಿಯು ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ.

***

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ಷೇರುಪೇಟೆ ವ್ಯವಹಾರದಲ್ಲಿ ಹಿನ್ನಡೆ ಇರುತ್ತದೆ, ಆದ್ದರಿಂದ ಅತಿಯಾದ ಬಂಡವಾಳ ಹೂಡಿಕೆ ಬೇಡ. ವ್ಯವಹಾರದಲ್ಲಿ ಸ್ವಲ್ಪಮಟ್ಟಿನ ಅಭಿವೃದ್ಧಿ ಇರುತ್ತದೆ. ಹೊಸ ಆದಾಯದ ದಾರಿ ಕಾಣಿಸಿ ಮನಸ್ಸಿಗೆ ನೆಮ್ಮದಿ ಇರುತ್ತದೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ. ಸರ್ಕಾರದ ಕಡೆಯಿಂದ ಬರಬೇಕಿದ್ದ ಹಣಕಾಸು ಬರುತ್ತದೆ. ಕುಟುಂಬದಲ್ಲಿ ಹೆಚ್ಚಿನ ಸಾಮರಸ್ಯ ಏರ್ಪಡುತ್ತದೆ. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಹೊಸ ಉದ್ಯೋಗ ದೊರೆಯುವ ಎಲ್ಲಾ ಲಕ್ಷಣಗಳಿವೆ. ಪುಸ್ತಕ ವ್ಯಾಪಾರಿಗಳಿಗೆ ಹೆಚ್ಚಿನ ಲಾಭ ಪಡೆಯುವ ಅವಕಾಶವಿರುತ್ತದೆ. ತಂದೆಯಿಂದ ಸಾಂಪ್ರದಾಯಕ ರೀತಿಯ ಕೃಷಿ ಪದ್ಧತಿಯನ್ನು ತಿಳಿಯಬಹುದು. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ.

***

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಅತಿಯಾದ ಆತ್ಮಗೌರವ ನಿಮ್ಮನ್ನು ಕಾಡಬಹುದು. ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯ ದೊರೆಯುವ ಲಕ್ಷಣಗಳಿವೆ. ನಿಮ್ಮ ಕಠಿಣ ಮಾತಿನಿಂದ ಕೈಕೆಳಗಿನ ಕೆಲಸಗಾರರು ತಿರುಗಿಬೀಳಬಹುದು. ನಿಮ್ಮ ಗುರಿ ಸಾಧನೆಗಾಗಿ ತಾಳ್ಮೆವಹಿಸುವುದು ಅತಿ ಅಗತ್ಯ. ಹಣದ ಪರಿಸ್ಥಿತಿಯು ಸಾಮಾನ್ಯವಾಗಿರುತ್ತದೆ, ಹೊಸ ಆದಾಯದ ಮೂಲಗಳನ್ನು ಹುಡುಕುವಿರಿ. ಸರ್ಕಾರಿ ನೌಕರರಿಗೆ ಹೆಚ್ಚು ಒತ್ತಡಗಳು ಬಂದರೂ ಅದಕ್ಕೆ ತಕ್ಕಂತೆ ಆದಾಯವೂ ಇರುತ್ತದೆ. ಸಹೋದರಿಯರ ನಡುವೆ ಉತ್ತಮ ಹೊಂದಾಣಿಕೆ ಕಂಡು ಬರುತ್ತದೆ. ಮಕ್ಕಳಿಂದ ನಿಮಗೆ ಧನಸಹಾಯವಿರುತ್ತದೆ. ಆಹಾರದಿಂದ ಅನಾರೋಗ್ಯದ ಸಾಧ್ಯತೆಯಿದೆ ಎಚ್ಚರ.

***

ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)

ಸಾಮಾಜಿಕ ಕಾರ್ಯಕ್ರಮಗಳಲ್ಲಿ ಒರಟುತನದಿಂದ ಮಾತನಾಡಿ ಇತರರ ತಿರಸ್ಕಾರಕ್ಕೆ ಗುರಿಯಾಗುವಿರಿ. ಕೌಟುಂಬಿಕ ವಿಚಾರಗಳನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಕುಟುಂಬದವರನ್ನು ಸೇರಿಸಿ ದೈವಕಾರ್ಯವನ್ನು ನಡೆಸುವ ಬಗ್ಗೆ ಚರ್ಚೆಮಾಡುವಿರಿ. ರಕ್ಷಣಾ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಬರಬೇಕಿದ್ದ ಪ್ರೋತ್ಸಾಹ ಧನ ದೊರೆಯುತ್ತದೆ. ನಿಮ್ಮ ಯೋಜನೆಗಳನ್ನು ಹಿತೈಷಿಗಳ ಎದುರು ಪ್ರಸ್ತಾಪಿಸಿದಲ್ಲಿ ಅದರ ಆಗುಹೋಗುಗಳ ಬಗ್ಗೆ ವಿಚಾರಗಳು ತಿಳಿಯುತ್ತವೆ. ನಿಂತಿದ್ದ ವ್ಯಾಪಾರ ನಿಧಾನವಾಗಿ ಆರಂಭಗೊಳ್ಳುತ್ತದೆ. ಬಂಧುಮಿತ್ರರ ನಡುವೆ ಒಂದು ಜವಾಬ್ದಾರಿಯುತ ಸ್ಥಾನವನ್ನು ಅಲಂಕರಿಸುವಿರಿ. ಹಣದ ಹರಿವು ನಿರೀಕ್ಷಿತ ಮಟ್ಟದಲ್ಲಿ ಇರುತ್ತದೆ.

***

ಸಿಂಹ ರಾಶಿ (ಮಖ  ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 

ರಾಜಕಾರಣಿಗಳಿಗೆ ಉತ್ತಮ ದಿನ, ಅವರ ಬಹು ದಿನಗಳ ಆಸೆಯೊಂದು ಈಡೇರುವ ಸಂದರ್ಭ ಇದೆ. ಗೃಹಿಣಿಯರಿಗೆ ಕೆಲಸದ ಒತ್ತಡ ಹೆಚ್ಚಾಗುವುದು. ಪತ್ರಿಕೋದ್ಯಮ ನಡೆಸುವವರ ಮೇಲೆ ಕೆಲವೊಂದು ಇಲಾಖಾ ತನಿಖೆಗಳು ಬರಬಹುದು. ಪ್ರೀತಿ ವಾತ್ಸಲ್ಯ ತುಂಬಿದ ಮಾತುಗಳಿಂದಾಗಿ ದಂಪತಿಗಳ ನಡುವೆ ಅನುಬಂಧ ಹೆಚ್ಚುತ್ತದೆ. ದೊಡ್ಡ ಯೋಜನೆಗಳನ್ನು ರೂಪಿಸುವಾಗ ವಿಘ್ನಗಳು  ಉಂಟಾಗದಂತೆ ಎಚ್ಚರ ವಹಿಸಿರಿ. ಎಲ್ಲ ರೀತಿಯ ಸಾಲಗಳನ್ನು ತೀರಿಸಲು ಉತ್ತಮ ಅವಕಾಶವಿದೆ. ಅದೇ ರೀತಿ ಬರಬೇಕಿದ್ದ ಸಾಲಗಳನ್ನು ವಸೂಲಿ ಮಾಡಬಹುದು. ವಯಸ್ಕರಿಗೆ ಸಂಬಂಧಗಳು ಕೂಡಿಬರಬಹುದು. ತಾಯಿಯಿಂದ ಸ್ವಲ್ಪ ಸಹಾಯ ದೊರೆಯುತ್ತದೆ. ವ್ಯವಹಾರಗಳಲ್ಲಿ ಜಿಜ್ಞಾಸೆಗಳು ಬಂದರೂ ನಂತರ ಸರಿಯಾಗುವುದು.

***

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ನಿಮ್ಮ ಜಾಣ್ಮೆಯಿಂದ ನಿಮ್ಮ ಕುಟುಂಬಕ್ಕೆ ಹೆಚ್ಚು ಅನುಕೂಲವಾಗುವುದು. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚಿನ ಆದಾಯ ಇರುತ್ತದೆ. ವಾಹನ ಚಾಲನೆಯಲ್ಲಿ ಸ್ವಲ್ಪ ಹಣಗಳಿಸಬಹುದು. ವ್ಯವಹಾರಗಳಲ್ಲಿ ಮುಲಾಜಿಗೆ ಒಳಗಾಗದೆ ಕಟ್ಟು ನಿಟ್ಟಿನ ವ್ಯವಹಾರಗಳನ್ನು ನಡೆಸಿರಿ, ಇದರಿಂದ ಎಲ್ಲರ ಮೆಚ್ಚುಗೆಗೆ ಪಾತ್ರರಾಗುವಿರಿ. ಮಕ್ಕಳಿಂದ ಹಣದ ವಿಚಾರದಲ್ಲಿ ಗೊಂದಲಗಳು ಆಗಬಹುದು. ನೆರೆಹೊರೆಯವರೊಡನೆ ಉತ್ತಮ ಸಂಬಂಧಗಳನ್ನು ಮಾಡಿಕೊಳ್ಳಲೇಬೇಕಾದ ಅನಿವಾರ್ಯತೆಯಿದೆ. ಹಣದ ಹರಿವು ನಿಮ್ಮ ಅಗತ್ಯವನ್ನು ಪೂರೈಸುತ್ತದೆ. ಸರ್ಕಾರಿ ಹುದ್ದೆಯಲ್ಲಿರುವವರಿಗೆ ಜವಾಬ್ದಾರಿಗಳು ಹೆಚ್ಚುತ್ತವೆ. ಅಸಮರ್ಪಕ ಊಟದಿಂದ ಆರೋಗ್ಯ ಕೆಡಬಹುದು.

***

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಬಂಧುಗಳೊಡನೆ ಸಂಬಂಧಗಳನ್ನು ಸುಧಾರಿಸಿಕೊಳ್ಳುವುದು ನಿಮಗೆ ಉತ್ತಮ. ಮಹಿಳೆಯರ ಬಹುದಿನದ ಆಸೆಯೊಂದು ಪೂರೈಸುತ್ತದೆ. ಸಂಗಾತಿಯ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ಅತಿಯಾದ ಆತ್ಮವಿಶ್ವಾಸದಿಂದ ವ್ಯವಹಾರಗಳಲ್ಲಿ ಹಿನ್ನಡೆಯಾಗಬಹುದು. ಹಣದ ಒಳಹರಿವಿನಲ್ಲಿ ಮಂದಗತಿ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಶುಭ ವಾರ್ತೆಗಳನ್ನು  ಕೇಳುವಿರಿ. ಮಕ್ಕಳ ನಡವಳಿಕೆಯ ಬಗ್ಗೆ ಸರಿಯಾಗಿ ಗಮನಕೊಡಿರಿ. ತಾಯಿಯ ಸಹಕಾರವೂ ನಿಮಗೆ ಇರುತ್ತದೆ. ವೃತ್ತಿಯಲ್ಲಿ ಹಿರಿಯ ಅಧಿಕಾರಿಯಿಂದ ತೊಂದರೆ ಬರಬಹುದು. ಮೂಳೆನೋವು ಇರುವವರು ಸೂಕ್ತ ಚಿಕಿತ್ಸೆಯನ್ನು ಪಡೆಯುವುದು ಉತ್ತಮ.

***

ವೃಶ್ಚಿಕ ರಾಶಿ (ವಿಶಾಖಾ 4  ಅನುರಾಧ  ಜೇಷ್ಠ)  

ಒಂದು ರೀತಿಯ ಆಲಸ್ಯ ಮನೆಮಾಡಿರುತ್ತದೆ. ಬಂಧುಗಳೊಡನೆ ವ್ಯವಹರಿಸುವಾಗ ನಿಷ್ಕಲ್ಮಶ ಮನಸ್ಸಿನಿಂದ ವ್ಯವಹರಿಸಿರಿ, ಆಗ ಉತ್ತಮ ಬಾಂಧವ್ಯ ಮೂಡುತ್ತದೆ. ಕೃಷಿ ಕೆಲಸಗಳಲ್ಲಿ ಪ್ರಗತಿಯನ್ನು ಕಾಣಬಹುದು. ಯಾವುದೇ ಕೆಲಸಗಳಲ್ಲೂ ಆತುರದ  ನಿರ್ಧಾರ ಬೇಡ. ವೃತ್ತಿಯಲ್ಲಿ ಹೊಸ ಗೆಳೆಯರು ದೊರೆತು ಸಂತಸವಾಗುತ್ತದೆ. ಹಣದ ಪೂರೈಕೆಯು ಸಾಮಾನ್ಯವಾಗಿರುತ್ತದೆ. ವಿದ್ಯಾರ್ಥಿಗಳಿಗೆ ಸಾಕಷ್ಟು ಯಶಸ್ಸು ಒದಗಿಬರುತ್ತದೆ. ನಿಮ್ಮ ಅಧಿಕಾರ ವ್ಯಾಪ್ತಿಯಲ್ಲಿ ಕಷ್ಟದಲ್ಲಿರುವವರಿಗೆ ಸಹಾಯ ಮಾಡಿ ಸಂತಸ ಪಡುವಿರಿ. ನಿಮ್ಮವರೇ ನಿಮ್ಮ ತೇಜೋವಧೆ ಮಾಡಲು ಮುಂದಾಗುವರು, ಆದರೆ ಜಾಣ್ಮೆಯಿಂದ ಅದನ್ನು ಎದುರಿಸಿ ನಿಜವನ್ನು ಬಯಲು ಮಾಡುವಿರಿ.

***

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1  )

ಸ್ವಯಂ ಉದ್ಯೋಗ ನಡೆಸುತ್ತಿರುವವರಿಗೆ ಸಾಕಷ್ಟು ಅಭಿವೃದ್ಧಿ ಇದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುವುದರಿಂದ ಖರ್ಚನ್ನು ಕಡಿಮೆ ಮಾಡಿ. ಲೇವಾದೇವಿ ವ್ಯವಹಾರ ಖಂಡಿತಾ ಬೇಡವೇ ಬೇಡ. ಬಂಧುಬಾಂಧವರಿಂದ ನಿಮಗೆ ಎಲ್ಲಾ ರೀತಿಯ ಸಹಕಾರ ದೊರೆಯುತ್ತದೆ. ಅಪರಿಚಿತ ವ್ಯಕ್ತಿಗಳಿಂದ ಹಣದ ವಿಚಾರದಲ್ಲಿ ಮೋಸ ಹೋಗಬಹುದು, ಆದ್ದರಿಂದ ಎಚ್ಚರವಾಗಿರುವುದು ಒಳ್ಳೆಯದು. ನಿಮ್ಮ ಸಹೋದ್ಯೋಗಿಗಳೊಂದಿಗೆ ಉತ್ತಮವಾಗಿ ಮಾತನಾಡಿ ಕೆಲಸಮಾಡಲು ಪ್ರೇರಣೆ ನೀಡುವಿರಿ. ಸಂಗಾತಿಗೆ ಅವರ ಹಿರಿಯರಿಂದ ಆಸ್ತಿ ಒದಗಬಹುದು. ಧಾರ್ಮಿಕ ಕಾರ್ಯಕ್ರಮಗಳಲ್ಲಿ ಆಸಕ್ತಿ ವಹಿಸುವಿರಿ. ಹಿರಿಯರು ತಮ್ಮ ಆರೋಗ್ಯದ ಬಗ್ಗೆ ನಿಗಾವಹಿಸುವುದು ಉತ್ತಮ.

***

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)  

ಕೃಷಿಕರಿಗೆ ತಮ್ಮ ಸೌಲಭ್ಯದ ಜೊತೆಗೆ ಅನುದಾನ ದೊರೆಯುತ್ತದೆ. ನಿರೀಕ್ಷಿತ ಮಟ್ಟದಲ್ಲಿ ಹಣದ ಹರಿವು ಇರುತ್ತದೆ. ಕೆಲವರಿಗೆ   ವ್ಯವಹಾರ ನಿಮಿತ್ತ ದೂರ ಪ್ರಯಾಣದ ಸಾಧ್ಯತೆಗಳಿವೆ. ಸಂಗೀತಗಾರರಿಗೆ ಮಾನ್ಯತೆ ದೊರಕುತ್ತದೆ, ಗೌರವಧನ ಸಹ ದೊರೆಯುವ ಸಾಧ್ಯತೆ ಇದೆ. ಆಕರ್ಷಕ ಮಾತಿನಿಂದ ವ್ಯವಹಾರದಲ್ಲಿ ಮೇಲುಗೈ ಸಾಧಿಸುವಿರಿ. ನಿಮ್ಮ ವಿರೋಧಿಗಳ ಸಂಚನ್ನು ಅರಿತು ಅದಕ್ಕೆ ತಕ್ಕಂತೆ ಪ್ರತಿ ಸಂಚನ್ನು ರೂಪಿಸುವಿರಿ. ಸಂಗಾತಿಯ ಆದಾಯದಲ್ಲಿ ಸಾಕಷ್ಟು ಏರಿಕೆಯನ್ನು ಕಾಣಬಹುದು. ನಿಂತಿದ್ದ ಸರ್ಕಾರಿ ಆದಾಯಗಳು ಹಿರಿಯರಿಗೆ ಪುನಃ ಬರತೊಡಗುತ್ತವೆ. ಮೂರ್ತಿಗಳನ್ನು ತಯಾರಿಸಿ ಮಾರುವವರಿಗೆ ಉತ್ತಮ ಲಾಭವಿರುತ್ತದೆ.

***

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ನಿಮ್ಮ ಯೋಜನೆಗಳನ್ನು ಕೈಬಿಡದೆ ಹಠ ಹಿಡಿದು ಮುನ್ನಡೆಸಿದಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಪ್ರಗತಿ ಇರುತ್ತದೆ. ವ್ಯವಹಾರದ ವಿಚಾರದಲ್ಲಿ ಸಾಕಷ್ಟು ಬಾರಿ ಪರಿಶೀಲನೆ ಮಾಡಿ ಮುಂದುವರೆಯಿರಿ. ಯುವಕರು ವಾಮಮಾರ್ಗದ ದುಡಿಮೆಗೆ ಮುಂದಾಗದಿರುವುದು ಒಳ್ಳೆಯದು. ಪ್ರೀತಿ-ಪ್ರೇಮದ ಆಸೆಯಲ್ಲಿದ್ದವರೆಗೆ ನಿರಾಶಾಭಾವ ಮೂಡಬಹುದು. ಆಸ್ತಿ ವಿಚಾರದಲ್ಲಿ ಹೊಸದಾಗಿ ಗೊಂದಲಗಳು ಮೂಡಬಹುದು. ಬಹಳ ಹಿಂದೆ ನೀವು ಕೂಡಿಟ್ಟಿದ್ದ ಹಣ ಇಂದು ನಿಮ್ಮ ಸಮಯಕ್ಕೆ ಒದಗಿಬರುವುದು. ಹಿರಿಯರಿಗೆ ಸಾಮಾಜಿಕ ಗೌರವ ದೊರೆಯುವ ಸಾಧ್ಯತೆ ಇದೆ.

***

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಗಾಜಿನ ಆಲಂಕಾರಿಕ ವಸ್ತುಗಳನ್ನು ತಯಾರಿಸುವವರಿಗೆ ಉತ್ತಮ ಬೇಡಿಕೆ ಬರುತ್ತದೆ. ಸ್ತ್ರೀಯರ ಕೇಶಾಲಂಕಾರ ಮಾಡುವವರಿಗೆ ಉತ್ತಮ ಧನ ಸಂಪಾದನೆ ಇರುತ್ತದೆ. ಲೋಹದ ಎರಕಗಳನ್ನು ತಯಾರು ಮಾಡುವವರಿಗೆ ಬಿಡುವಿಲ್ಲದ ಕೆಲಸ ಇರುತ್ತದೆ. ಸೂಕ್ಷ್ಮ ಕುಸುರಿ ಕೆಲಸ ಮಾಡುವ ಶಿಲ್ಪಿಗಳಿಗೆ ಕೆಲಸಗಳು ದೊರೆಯುತ್ತವೆ. ಮಹತ್ವದ ವಿಷಯಗಳಲ್ಲಿ ನೀವು ತೆಗೆದುಕೊಳ್ಳುವ ನಿರ್ಣಯವು ನಿಮ್ಮ ಗೌರವವನ್ನು ಕಾಪಾಡುತ್ತದೆ. ಇಂಜಿನಿಯರಿಂಗ್ ವಿನ್ಯಾಸಕಾರರಿಗೆ ಬೇಡಿಕೆ ಬರುತ್ತದೆ. ತಂದೆ ಅಥವಾ ಹಿರಿಯರೊಡನೆ ಮುನಿಸು ಬರಬಹುದು. ಹಣದ ಪೂರೈಕೆಯು ನಿರೀಕ್ಷೆಯಷ್ಟು ಇರುತ್ತದೆ. ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ವಹಿಸಿರಿ. ನಿಮ್ಮ ವೈಯಕ್ತಿಕ ಆರೋಗ್ಯದ ಬಗ್ಗೆ ಗಮನವಿರಲಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.