ಮಂಗಳವಾರ, ಆಗಸ್ಟ್ 16, 2022
21 °C

ವಾರ ಭವಿಷ್ಯ: 06–12–2020ರಿಂದ 12–12–2020ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ:
8197304680

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ನಿಮ್ಮ ಬದುಕಿಗೊಂದು ಆಯಾಮ ಕಂಡುಕೊಳ್ಳುವಿರಿ. ನಿಮ್ಮ ಈ ಬದುಕಿನ ತಿರುವಿಗೆ ನಿಮ್ಮ ಸ್ನೇಹಿತರ ಕೊಡುಗೆ ಅತಿ ಹೆಚ್ಚು, ಅವರನ್ನು ಗೌರವಿಸಿರಿ. ಕೃಷಿ ಕ್ಷೇತ್ರದಲ್ಲಿರುವವರಿಗೆ ಹೊಸ ರೀತಿಯ ಒಪ್ಪಂದಗಳಿಂದ ಲಾಭಬರುತ್ತದೆ.  ಜನರೊಡನೆ ಮಾತನಾಡುವಾಗ ಎಚ್ಚರ ವಹಿಸಿ. ಕಠಿಣ ಮಾತುಗಳು ನಿಮ್ಮನ್ನು ಜನರಿಂದ ದೂರ ಮಾಡಬಹುದು. ವೃತ್ತಿಯಲ್ಲಿದ್ದ ಗೊಂದಲಗಳು ದೂರವಾಗುತ್ತವೆ. ಖಾಸಗಿ ಕಂಪನಿಗಳಲ್ಲಿರುವ ಹಂಗಾಮಿ ನೌಕರರಿಗೆ ವೃತ್ತಿ ಕಾಯಂ ಆಗುವ ಅವಕಾಶಗಳಿವೆ. ವಿದೇಶಿ ವ್ಯವಹಾರ ಮಾಡುವವರಿಗೆ ಅಭಿವೃದ್ಧಿ ಇರುತ್ತದೆ. ಸಂಗಾತಿಯ ಸಲಹೆಗಳು ಅಮೂಲ್ಯ ವಾಗಿರುತ್ತದೆ.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ವ್ಯವಹಾರಗಳಲ್ಲಿ ಅನುಕೂಲತೆಗಳು ಒದಗಿ ಬರುತ್ತವೆ. ಸಾಮಾಜಿಕ ಸ್ಥಾನಮಾನಗಳು ಇರುವಂತೆ  ಮುಂದುವರೆಯುತ್ತವೆ. ವ್ಯವಹಾರಗಳಲ್ಲಿ ಮೇಲುಗೈ ಸಾಧಿಸಲು ಕೆಲವು ಆವಕಾಶಗಳು ದೊರೆಯುತ್ತವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಿರಿ. ಸ್ನೇಹಿತನ  ಸಹಾಯಕ್ಕೆ ನಿಲ್ಲಬೇಕಾದ ಸಂದರ್ಭ ಬರಬಹುದು, ಆದರೆ ಜಾಮೀನಿಗೆ ನಿಲ್ಲಬೇಡಿರಿ. ಕಬ್ಬಿಣ, ಸಿಮೆಂಟ್ ಇತರೆ ಕಟ್ಟಡ ಸಾಮಗ್ರಿಗಳನ್ನು ಮಾರುವವರಿಗೆ ವ್ಯವಹಾರ ವೃದ್ಧಿ. ಹಿರಿಯರ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ನಿಮಗೆ ಹಿರಿಯರ ಆಸ್ತಿಯಲ್ಲಿ ಪಾಲು ಬರುವ ಸಂದರ್ಭವಿದೆ. ಸರ್ಕಾರಿ ಕೆಲಸದಲ್ಲಿರುವ ಸಂಗಾತಿಗೆ ಹೊಸ ಅಧಿಕಾರ ದೊರೆಯುತ್ತದೆ.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ನಿಮ್ಮಿಷ್ಟದಂತೆ ಕೆಲಸ ಆಗುವುದರಿಂದ ನೆಮ್ಮದಿಯ ಜೊತೆ ಆತ್ಮವಿಶ್ವಾಸವೂ ಹೆಚ್ಚುತ್ತದೆ. ನಿಮ್ಮ ಬಾಹ್ಯ ಸೌಂದರ್ಯಕ್ಕಾಗಿ ಆಲಂಕಾರಿಕ ವಸ್ತುಗಳನ್ನು ಖರೀದಿಸುವಿರಿ. ಹಣದ ಒಳಹರಿವು ಉತ್ತಮ. ಮಗಳ ಅಭಿವೃದ್ಧಿ ನಿಮ್ಮ ನಿರೀಕ್ಷೆಗೆ ಮೀರಿದಂತೆ ಇರುತ್ತದೆ. ಬೆಂಕಿ ಅಥವಾ ಕಿಡಿಗಳೊಡನೆ ಕೆಲಸ ಮಾಡುವವರು ಕಣ್ಣಿನ ಬಗ್ಗೆ ಎಚ್ಚರ ವಹಿಸಿ. ದಿನಸಿ ವ್ಯಾಪಾರಿಗಳ ವಹಿವಾಟು ನಿಧಾನವಾಗಿ ಏರಲಿದೆ. ವಿದ್ಯುತ್ ಕ್ಷೇತ್ರದಲ್ಲಿ ಬಂಡವಾಳ ಹೂಡಿರುವವರಿಗೆ ಉತ್ತಮ ಆದಾಯ. ವಿದೇಶಿ ವ್ಯವಹಾರ ಮಾಡುವವರಿಗೆ ಮಂದಗತಿ ವ್ಯವಹಾರ.

 ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಚಿತ್ರಕಲೆ ಗಾಯನ ಮುಂತಾದವುಗಳ ಬಗ್ಗೆ ಆಸಕ್ತಿ ಬೆಳೆಯುತ್ತದೆ. ಮುಖ್ಯ ವಿಚಾರವೊಂದನ್ನು ಪತ್ತೆಮಾಡಲು ಸ್ನೇಹಿತರ ಸಹಾಯ ಪಡೆಯಲು ಆಲೋಚಿಸುವಿರಿ. ವಿಲಾಸಿ ಜೀವನದಿಂದ ದೂರ ಇರುವುದು ಒಳಿತು. ತಾಯಿಯಿಂದ ಧನಸಹಾಯ ದೊರೆಯುವ ಸಾಧ್ಯತೆ ಇದೆ. ಕೋರ್ಟು-ಕಚೇರಿ ವ್ಯವಹಾರಗಳಲ್ಲಿ ಸ್ವಲ್ಪ ಹಿನ್ನಡೆ. ಸಾಮಾಜಿಕ ಗೌರವ ಆದರಗಳಿಗಾಗಿ ಪ್ರಯತ್ನಿಸುವಿರಿ. ವಿದ್ಯಾರ್ಥಿಗಳಿಗೆ ಸಾಮಾನ್ಯ ಯಶಸ್ಸು. ಧನದ ಒಳಹರಿವು ಅಗತ್ಯಕ್ಕೆ ತಕ್ಕಷ್ಟು ಇರಲಿದೆ. ಸಾಂಪ್ರದಾಯಿಕ ಕೃಷಿ ಬೆಳೆಗಳಿಗೆ ಉತ್ತಮ ಬೆಲೆ ಸಿಗುತ್ತದೆ.

ಸಿಂಹ ರಾಶಿ(ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ನಿಮ್ಮ ಆರ್ಥಿಕ ಸಮಸ್ಯೆಗಳು ಕಡಿಮೆಯಾಗುತ್ತವೆ. ಗುತ್ತಿಗೆದಾರರು ತಮ್ಮ ಬಾಕಿ ಕೆಲಸ ಮುಗಿಸಿ ನಂತರ ಹಣ ಪಡೆಯಬೇಕಾಗುತ್ತದೆ. ಕಚೇರಿ ಕೆಲಸದಲ್ಲಿರುವ ಅಧಿಕಾರಿಗಳು ಸುಗಮ ಕೆಲಸಕ್ಕಾಗಿ ಉದ್ಯೋಗಿಗಳೊಡನೆ ಚರ್ಚೆ ಮಾಡಬೇಕಾಗುತ್ತದೆ. ಪುಸ್ತಕ ವ್ಯಾಪಾರಿಗಳಿಗೆ ಮತ್ತು ದಿನಬಳಕೆ ವಸ್ತುಗಳ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಸುತ್ತದೆ. ಹೊಸ ವ್ಯಾಪಾರದ ಬಗ್ಗೆ ಚಿಂತಿಸುವಿರಿ. ಸಂಗಾತಿಯ ಆರೋಗ್ಯ ಕಡೆ ಗಮನಹರಿಸುವುದು ಉತ್ತಮ. ಒಂದು ಕಡೆ ಸಾಲ ಮಾಡಿ ಉಳಿದ ಸಣ್ಣಪುಟ್ಟ ಸಾಲ ತೀರಿಸಬಹುದು. ದೀರ್ಘಕಾಲದ ಯೋಜನೆಗಳನ್ನು ಆರಂಭಿಸದಿರುವುದು ಒಳ್ಳೆಯದು.

ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ನಿಮ್ಮ ನಡವಳಿಕೆಯು ಬಹಳ ವ್ಯಾವಹಾರಿಕವಾಗಿ ಇರುತ್ತದೆ. ಕೆಲವೊಂದು ಕೆಲಸಗಳನ್ನು ಮಾಡಿದಲ್ಲಿ ವಿವಾದಗಳು ನಿಮ್ಮನ್ನು ಸುತ್ತಿಕೊಳ್ಳಬಹುದು. ಜವಾಬ್ದಾರಿಯುತ ಸ್ಥಾನದಲ್ಲಿರುವವರು ತಮ್ಮ ಆಲಸ್ಯದಿಂದ ತೊಂದರೆ ಎದುರಿಸ ಬೇಕಾಗಬಹುದು. ಹಣದ ಪರಿಸ್ಥಿತಿಯು ನಿಮ್ಮ ಅಗತ್ಯಕ್ಕೆ ತಕ್ಕಂತೆ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಬಹುದು. ಬಂಧುಗಳ ವಿಚಾರದಲ್ಲಿ ಮಧ್ಯಸ್ತಿಕೆ ಮಾಡಲು ಹೋಗಿ ಮುಜುಗರಪಡುವಿರಿ. ವಾಣಿಜ್ಯ ಬೆಳೆ ಬೆಳೆದವರಿಗೆ ಇಳುವರಿ ಹೆಚ್ಚಾಗಿ ಲಾಭ ಬರುತ್ತದೆ. ಹಿರಿಯರ ನಡುವೆ ವೈಷಮ್ಯ ಕಟ್ಟಿಕೊಳ್ಳುವಿರಿ. ಸಂಗಾತಿಯ ಮೇಲೆ ಮುನಿಸು ತೋರದಿರಿ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಮಿತ್ರರಿಂದ ಸಹಕಾರ ದೊರೆತು ಉತ್ತಮ ವ್ಯವಹಾರ ಮಾಡಿ ಹಣ ಗಳಿಸುವಿರಿ. ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ಮನೆಯ ನವೀಕರಣಕ್ಕಾಗಿ ಹಣ ವ್ಯಯಿಸುವಿರಿ. ನಿಮ್ಮ ಎದುರಾಳಿಗಳನ್ನು ವಾದ-ವಿವಾದಗಳಲ್ಲಿ  ಸೋಲಿಸುವಿರಿ. ಬಂಧುಗಳ ನಡುವೆ ಬುದ್ಧಿ ಹೇಳಲು ಹೋಗದಿರುವುದು ಉತ್ತಮ. ತಂದೆಯಿಂದ ಉತ್ತಮ ಧನಸಹಾಯ ನಿರೀಕ್ಷಿಸಬಹುದು. ವೃತ್ತಿಯಲ್ಲಿದ್ದ ತೊಂದರೆಗಳು ನಿವಾರಣೆಯಾಗುತ್ತವೆ. ಕರಿದ ತಿಂಡಿ- ತಿನಿಸುಗಳ ವ್ಯವಹಾರದವರಿಗೆ ಆದಾಯ ಹೆಚ್ಚುವುದು. ಸಾಕಷ್ಟು ದಿನಗಳಿಂದ ಕಾಡಿಸುತ್ತಿದ್ದ ಕೋರ್ಟ್ ಕೇಸುಗಳು ಈಗ  ನಿಮ್ಮಂತೆ ಆಗುವ ಸೂಚನೆ ಇದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ನಿಮ್ಮ ಮಾತುಕತೆಯಲ್ಲಿ ವ್ಯಾವಹಾರಿಕತೆ ಕಾಣಬಹುದು. ಬಾಡಿಗೆ ವಾಹನ ಓಡಿಸುವವರಿಗೆ ಹೆಚ್ಚಿನ ಆದಾಯ ಬರುವ ಸಾಧ್ಯತೆ ಇದೆ. ಚಿನ್ನಬೆಳ್ಳಿಯ ಒಡವೆ ತಯಾರಿಸುವವರಿಗೆ ಬೇಡಿಕೆ ಹೆಚ್ಚಿ, ಕೈತುಂಬಾ ಕೆಲಸವಿರುತ್ತದೆ. ಕೆಲವು ಅಧಿಕಾರಿಗಳ ನೆರವು ನಿಮಗೆ ದೊರೆತು ಸರ್ಕಾರಿ ಕೆಲಸಗಳಲ್ಲಿ ಬಹಳಷ್ಟು ಅನುಕೂಲವಾಗುತ್ತದೆ. ಕಾರ್ಯಕ್ಷೇತ್ರಗಳಲ್ಲಿ ಕಾರ್ಮಿಕರ ನಡುವೆ ಒಮ್ಮತ ಮೂಡಿಸಲು ನೀವು ಅನುಸರಿಸುವ ತಂತ್ರ ಆಡಳಿತ ಮಂಡಳಿಯ ಮೆಚ್ಚುಗೆಗೆ ಪಾತ್ರವಾಗುತ್ತದೆ ಹಾಗೂ ವಿಶೇಷ ಸವಲತ್ತು ನಿಮಗೆ ಸಿಗುತ್ತದೆ. ಸಂಗಾತಿಯ ಮುನಿಸು ಚಿಂತೆಗೀಡು ಮಾಡುತ್ತದೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಹಳೆಯ ಸ್ನೇಹಿತರನ್ನು ಭೇಟಿ ಮಾಡಿ ಸಂತೋಷಪಡುವಿರಿ. ಧನದ ಆದಾಯ ಸಾಮಾನ್ಯ. ಹೊಸ ಕೆಲಸ ಹುಡುಕುತ್ತಿರುವವರಿಗೆ ಶುಭ ಸಮಾಚಾರ ಸಿಗಲಿದೆ. ಕೆಲವರಿಗೆ ಮದುವೆಯ ಪ್ರಸ್ತಾಪಗಳು ಬರಬಹುದು. ಬಹಳ ದಿನಗಳಿಂದ ಕಾಯುತ್ತಿದ್ದ ನಿವೇಶನ ಈಗ ದೊರೆಯುವ ಲಕ್ಷಣಗಳಿವೆ. ಈ ವಿಚಾರದಲ್ಲಿ ಮಕ್ಕಳು ತಗಾದೆ ತೆಗೆಯಬಹುದು. ಮೂಳೆಯ ತೊಂದರೆಗಳ ಬಗ್ಗೆ ಸರಿಯಾಗಿ ಗಮನ ಹರಿಸಿ. ನಿಮ್ಮ ಕೆಲವೊಂದು ಖರ್ಚುಗಳನ್ನು ಸಂಗಾತಿಯು ವಹಿಸಿಕೊಳ್ಳುವರು. ಸಿದ್ಧ ಉಡುಪುಗಳನ್ನು ಮಾರುವವರಿಗೆ ಉತ್ತಮ ವ್ಯವಹಾರವಿದೆ. ಸ್ತ್ರೀಯರ ಕೇಶಾಲಂಕಾರ ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಮರಮುಟ್ಟುಗಳ ವ್ಯಾಪಾರವನ್ನು ಮಾಡುವವರಿಗೆ ಉತ್ತಮಗಳಿಕೆ ಇರುತ್ತದೆ.ಯೋಧರು ಮತ್ತು ಗಡಿಯಲ್ಲಿ ಕೆಲಸ ಮಾಡುತ್ತಿರುವವರು ಇಲಾಖೆಯಿಂದ ಉತ್ತಮ ಸೌಲಭ್ಯವನ್ನು ನಿರೀಕ್ಷಿಸಬಹುದು. ಕ್ರೀಡಾಪಟುಗಳಿಗೆ ಸಾಕಷ್ಟು ಅವಕಾಶಗಳು ಒದಗಿಬರುತ್ತವೆ. ಸೇವಿಸುವ ಆಹಾರದಿಂದ ಅನಾರೋಗ್ಯ ಉಂಟಾಗಬಹುದು ಈ ಬಗ್ಗೆ ಗಮನ ಹರಿಸಿರಿ. ಕಟ್ಟಡ ನಿರ್ಮಾಣಕಾರರಿಗೆ  ಹೊಸ ನಿರ್ಮಾಣ ಕಾರ್ಯಗಳು ದೊರೆಯುತ್ತವೆ. ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ವಾರ. ಮಕ್ಕಳ ನಡುವೆ  ಭಿನ್ನಾಭಿಪ್ರಾಯ ಬರಬಹುದು. ಆರ್ಥಿಕ ಸಮಸ್ಯೆ ವಿಧಾನವಾಗಿ ಕರಗುವುದು. ಅನಿರೀಕ್ಷಿತ ಪ್ರೇಮ ಪ್ರಸಂಗದಲ್ಲಿ ಸಿಲುಕಿಕೊಳ್ಳುವ ಸಾಧ್ಯತೆ ಇದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಉದ್ಯೋಗದಲ್ಲಿ ಪ್ರಗತಿ ಕಾಣುವಿರಿ. ಕಾರ್ಯದಲ್ಲಿನ ವೈಫಲ್ಯ ತಪ್ಪಿಸಲು ಹೆಚ್ಚಿನ ತಾಳ್ಮೆ ಮತ್ತು ಜಾಗರೂಕರಾಗಿರಿ. ಅಳವಡಿಸಿಕೊಳ್ಳಿರಿ. ನಿಮ್ಮ ತಪ್ಪು ತೀರ್ಮಾನಗಳಿಂದ ವ್ಯವಹಾರದಲ್ಲಿ ವೈಮನಸ್ಯ ಬರಬಹುದು. ಯಂತ್ರೋಪಕರಣಗಳನ್ನು ಮಾರಾಟ ಮಾಡುವವರಿಗೆ ನಿಧಾನವಾಗಿ ವ್ಯವಹಾರ ಬೆಳೆಯುತ್ತದೆ. ಯಂತ್ರೋಪಕರಣಗಳನ್ನು ದುರಸ್ತಿ ಮಾಡುವವರಿಗೆ ಬೇಡಿಕೆ ಹೆಚ್ಚುತ್ತದೆ. ವೃತ್ತಿಯಲ್ಲಿ ಹಿರಿಯ ಅಧಿಕಾರಿಗಳ ಜೊತೆ ಮಾತನಾಡುವಾಗ ಎಲ್ಲೆ ಮೀರದಿರಲಿ. ವಿದೇಶಕ್ಕೆ ಹೋಗಬೇಕೆನ್ನುವವರ ಆಸೆ ನಿಧಾನವಾಗಿ ಈಡೇರುತ್ತದೆ. ಶೀತಬಾಧೆ ನಿಮ್ಮನ್ನು ಬಾಧಿಸಬಹುದು. ಖರ್ಚು ಹೆಚ್ಚಾಗಬಹುದು.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಆದಾಯದಷ್ಟೇ ಖರ್ಚು ಸಹ ಇರುತ್ತದೆ, ಆರ್ಥಿಕ ಸಮತೋಲನ ಸಾಧಿಸಿರಿ. ಆತ್ಮೀಯರ ಜೊತೆ ನಿಮ್ಮ ಆರ್ಥಿಕ ಸಮಸ್ಯೆಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಿರಿ. ರಸಗೊಬ್ಬರ ಮಾರಾಟಗಾರರಿಗೆ ಬೇಡಿಕೆ ಬರುತ್ತದೆ. ಸಂಗಾತಿಗೆ ಅವರ ಹಿರಿಯರಿಂದ ದೇಣಿಗೆ ಸಿಗಬಹುದು. ಕೃಷಿ ಉಪಕರಣ ತಯಾರಿಸಿ ಮಾರುವವರಿಗೆ ವ್ಯಾಪಾರ ಹೆಚ್ಚಲಿದೆ. ಬಾಕಿ ಸಾಲ ಈಗ ವಸೂಲಿಯಾಗಲಿದೆ. ವೃತ್ತಿಯಲ್ಲಿನ ಬದಲಾವಣೆಯ ಬಗ್ಗೆ ಸೂಚನೆ ದೊರೆಯುತ್ತದೆ.  ಬಂಧುಗಳಲ್ಲಿ ನಿಮ್ಮ ಬಗ್ಗೆ ಇರುವ ತಪ್ಪು ಅಭಿಪ್ರಾಯ ಈಗ ಸರಿಪಡಿಸಿಕೊಳ್ಳಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.