ಶನಿವಾರ, ಜುಲೈ 31, 2021
27 °C

ವಾರ ಭವಿಷ್ಯ | 07-06-2020ರಿಂದ 13-06-2020 ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

(ಜ್ಯೋತಿಷ್ಯ ಪದ್ಮಭೂಷಣ ಡಾ.ಎಂ.ಎನ್.ಲಕ್ಷ್ಮೀನರಸಿಂಹಸ್ವಾಮಿ, ಮಾದಾಪುರ ಸಂಪರ್ಕ: 8197304680)

***

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ಜಮೀನಿನಿಂದ ಆದಾಯವಿರುತ್ತದೆ. ಜಮೀನಿಗೆ ಸಂಬಂಧಿಸಿದ ವ್ಯಾಜ್ಯಗಳಲ್ಲಿ ಜಯವಿರುತ್ತದೆ. ಸರ್ಕಾರ ಮತ್ತು ಸಂಘ- ಸಂಸ್ಥೆಗಳಿಂದ ನೀವು ಅಪೇಕ್ಷಿಸಿದ ಸಾಲಗಳು ದೊರೆಯುತ್ತವೆ. ಸ್ವಂತ ಹಿತಾಸಕ್ತಿಯ ನಡವಳಿಕೆಗಳು ಇರುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ವಿದ್ಯೆ ಒದಗುವ ಕಾಲ. ಚರ್ಮದ ಕಾಯಿಲೆಗಳು ತಲೆದೋರಬಹುದು. ನಿಮ್ಮ ಬುದ್ಧಿವಂತಿಕೆಯನ್ನು ಸರಿಯಾಗಿ ಬಳಸಿಕೊಳ್ಳದಿದ್ದಲ್ಲಿ ಧನನಷ್ಟ ಉಂಟಾಗಬಹುದು. ಸಂಗಾತಿಗೆ ಸರ್ಕಾರಿ ಮಟ್ಟದಲ್ಲಿ ಬರಬೇಕಾಗಿದ್ದ ಧನ ಸಹಾಯಗಳು ಸಿಗುತ್ತವೆ.

ವೃಷಭರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)

ವ್ಯಕ್ತಿ ಗೌರವಕ್ಕೆ ಅತಿ ಪ್ರಾಶಸ್ತ್ಯ ಕೊಡುವಿರಿ, ಆದರೆ ಅತಿಯಾದ ವ್ಯಕ್ತಿ ಗೌರವ ಅಹಂಕಾರಕ್ಕೆ ಕಾರಣವಾಗಬಹುದು. ವಾಹನ ದುರಸ್ತಿ ಮಾಡುವವರಿಗೆ ಉತ್ತಮ ಕೆಲಸ ಒದಗಿ ಲಾಭವಿದೆ. ತೆರಿಗೆ ತಜ್ಞರಿಗೆ ಕೈತುಂಬಾ ಕೆಲಸವಿರುತ್ತದೆ. ಸಂಗಾತಿಯ ಸಂತೋಷಕ್ಕಾಗಿ ಧನ ವ್ಯಯ ಆಗುವುದು. ಪಿತ್ರಾರ್ಜಿತ ಆಸ್ತಿಗಾಗಿ ಕಾಯುತ್ತಿರುವವರಿಗೆ ಈಗ ಸಿಗುವ ಸಂದರ್ಭ ಇದೆ. ದೈವ ಕಾರ್ಯಕ್ಕಾಗಿ ಸ್ವಲ್ಪ ಸಹಾಯ ಮಾಡುವಿರಿ. ಕೃಷಿ ಪಂಡಿತರಿಗೆ ಗೌರವ ದೊರೆತು ಅವರು ಸಾಕಷ್ಟು ಕೃಷಿಕರಿಗೆ ಸಹಾಯ ಮಾಡುವರು.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)

ಅತಿಯಾದ ಬುದ್ಧಿವಂತಿಕೆ ನಿಮಗೆ ಕೈಕೊಡಬಹುದು. ಹಣದ ಹರಿವು ಸಾಮಾನ್ಯವಾಗಿ ಇರುತ್ತದೆ. ಧಿಡೀರನೆ ಪ್ರೀತಿ-ಪ್ರೇಮಕ್ಕೆ ಸಿಲುಕಬಹುದು. ವಿವಾಹಿತರಿಗೆ ಸಂಗಾತಿಯ ವೈರಾಗ್ಯ ಒಮ್ಮೊಮ್ಮೆ ಬೇಸರ ತರಬಹುದು. ವೃತ್ತಿಯಲ್ಲಿ ನಿಮ್ಮ ಕೆಳಗಿನ ಕೆಲಸಗಾರರಿಂದ ಸ್ವಲ್ಪ ಕಿರಿಕಿರಿ ಎದುರಾಗಬಹುದು. ಸೈನ್ಯಕ್ಕೆ ಸೇರಲು ಬಯಸುವವರಿಗೆ ಅವಕಾಶ ಒದಗುತ್ತದೆ. ಸರ್ಕಾರಿ ಕೆಲಸಗಳಲ್ಲಿ ಹಿನ್ನಡೆಯಾದರೂ ನಂತರ ಕೆಲಸ ಆಗುತ್ತದೆ. ಭಾಷಣಕಾರರು ಆಡಿದ ಮಾತು ಸಮಾಜದಿಂದ ಟೀಕೆಗೆ ಒಳಗಾಗುತ್ತದೆ. ಶಸ್ತ್ರಚಿಕಿತ್ಸೆಯನ್ನು ಮಾಡುವವರಿಗೆ ಆತ್ಮತೃಪ್ತಿ ಬರುತ್ತದೆ.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)

ಅವಿವಾಹಿತರಿಗೆ ವಿವಾಹ ಒದಗುವ ಸಂದರ್ಭ. ವೃತ್ತಿಯಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಶೀತಬಾಧೆ ಸ್ವಲ್ಪ ತೊಂದರೆ ಕೊಡಬಹುದು. ಕಟ್ಟಬೇಕಾಗಿದ್ದ ಸಾಲದ ಕಂತುಗಳಿಗೆ ಕಾಲಾವಕಾಶ ಸಿಕ್ಕು ಸ್ವಲ್ಪ ನಿರಾಳವಾಗುತ್ತದೆ. ಆತ್ಮಸ್ಥೈರ್ಯ ಹೆಚ್ಚುತ್ತದೆ ಮತ್ತು ಎದುರಾಳಿಗಳನ್ನು ಸಾಮರ್ಥ್ಯದಿಂದ ಎದುರಿಸುವಿರಿ. ಕೃಷಿಕರಿಗೆ ನಿಂತಿದ್ದ ವ್ಯವಹಾರಗಳು ನಿಧಾನವಾಗಿ ಸರಿದಾರಿಗೆ ಬರಲಾರಂಭಿಸುತ್ತವೆ. ಒಡಹುಟ್ಟಿದವರ ಕೆಲಸ ಕಾರ್ಯಗಳಿಗೆ ಸಾಕಷ್ಟು ಸಹಾಯ ನೀಡುವಿರಿ. ಧಾರ್ಮಿಕ ಮುಖಂಡರಿಗೆ ಸಾಮಾಜಿಕ ಜವಾಬ್ದಾರಿ ಹೆಚ್ಚುತ್ತದೆ.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)

ಸರ್ಕಾರಿ ಅಧಿಕಾರಿಗಳು ಆಡಳಿತವನ್ನು ಸುಸೂತ್ರವಾಗಿ ನಡೆಸಲು ಬಳಸಿದ ಉಪಾಯಗಳು ಫಲ ಕೊಡುತ್ತವೆ. ಕ್ರೀಡಾಪಟುಗಳು ಆಯ್ಕೆಯಾಗಿದ್ದರೂ ತಮ್ಮ ಸಾಮರ್ಥ್ಯ ತೋರಿಸಲು ಕೆಲವು ದಿನ ಕಾಯಬೇಕು. ಸಂಬಂಧಿಕರಲ್ಲಿ ಭುಗಿಲೆದ್ದಿದ್ದ ಆಸ್ತಿ ವಿವಾದವು ತಣ್ಣಗಾಗುವ ಲಕ್ಷಣಗಳು ಇವೆ. ಒಡಹುಟ್ಟಿದವರೊಡನೆ ಇದ್ದ ಮುಸುಕಿನ ಗುದ್ದಾಟ ನಿಲ್ಲುತ್ತದೆ. ಮಕ್ಕಳಿಂದ ನಿರೀಕ್ಷಿತ ಸಹಾಯ ದೊರೆಯದಿರಬಹುದು. ಬಾಧಿಸುತ್ತಿದ್ದ ಮೂಳೆ ತೊಂದರೆಗಳು ಈಗ ಕಡಿಮೆಯಾಗುತ್ತವೆ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ಎಷ್ಟೇ ಕಷ್ಟಪಟ್ಟು ಕೆಲಸ ಮಾಡಿದರೂ ಮೇಲಿನ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗುವಿರಿ. ಸಂದರ್ಭಕ್ಕೆ ತಕ್ಕಂತೆ ಹಿರಿಯರಿಂದ ಸಹಾಯ ಬರುತ್ತದೆ. ಬರಬೇಕಾಗಿದ್ದ ತವರಿನ ಕಡೆ ಆಸ್ತಿ ಬಗ್ಗೆ ಶುಭ ಸಮಾಚಾರವಿರುತ್ತದೆ. ಮಕ್ಕಳ ಏಳಿಗೆಯು ನಿಮ್ಮ ನಿರೀಕ್ಷೆಯ ಅರ್ಧದಷ್ಟು ಇರುತ್ತದೆ. ಪಿತ್ತದಿಂದ ಅಥವಾ ಉಷ್ಣದಿಂದ ದೇಹ ಬಳಲುವುದು. ಹಣದ ಹರಿವು ಪರವಾಗಿಲ್ಲ. ಪತ್ರಿಕೋದ್ಯಮದವರಿಗೆ ಗೌರವ ಸಿಕ್ಕು ಹೆಚ್ಚಿನ ಜವಾಬ್ದಾರಿ ಒದಗುತ್ತದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಸ್ವಲ್ಪ ಆಲಸ್ಯ ಭಾವನೆ ಬರಬಹುದು. ಕಟು ಮಾತಿನಿಂದ ಮಕ್ಕಳಲ್ಲಿ ನಿಷ್ಠುರ. ಸಂಸಾರದಲ್ಲಿ ಇದ್ದ ಕಾವೇರಿದ ವಾತಾವರಣ ತಿಳಿಯಾಗುತ್ತದೆ. ಸಹೋದ್ಯೋಗಿಗಳೊಡನೆ ಒಗ್ಗಟ್ಟು ಬೆಳೆದು ನಿಮ್ಮ ಕಾರ್ಯ ಸುಲಭವಾಗುತ್ತದೆ. ಹೊಸ ಸಾಲ ಮಾಡುವುದು ಬೇಡ. ಮಕ್ಕಳ ವಿದ್ಯಾಭ್ಯಾಸದ ಖರ್ಚಿಗೆ ಸಂಬಂಧಿಕರಿಂದ ಸಹಾಯ ಬರುತ್ತದೆ. ಉದ್ಯೋಗದಲ್ಲಿ ಉತ್ತಮ ಹೆಸರು ಬರುತ್ತದೆ. ಅನಿರೀಕ್ಷಿತ ಖರ್ಚುಗಳು ಬಂದರೂ ಅದನ್ನು ಸರಿದೂಗಿಸುವಷ್ಟು ಹಣ ಬರುತ್ತದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)

ಕೆಲವು ಸಮಾಜ ಸೇವೆ ಮಾಡಿ ಧನ್ಯತೆಯನ್ನು ಅನುಭವಿಸುವಿರಿ. ಹಿರಿಯರ ಬೆಂಬಲ ನಿಮಗೆ ಇದ್ದೇ ಇರುತ್ತದೆ. ಸಂಸಾರದಲ್ಲಿ ಸಂತೋಷ ಇರುತ್ತದೆ. ಬಂಧುಗಳ ತುರ್ತು ಕರೆಗೆ ಓಗೊಟ್ಟು ಸಹಾಯ ಮಾಡುವಿರಿ. ಹಿರಿಯರಿಗೆ ಕೆಲವೊಮ್ಮೆ ಪಶ್ಚಾತ್ತಾಪ ಭಾವನೆ ಮೂಡುತ್ತದೆ. ಸರ್ಕಾರದ ಸೂಚನೆಗಳಿಗೆ ಉತ್ತರಿಸುವುದು ಉತ್ತಮ, ಇಲ್ಲವಾದಲ್ಲಿ ನಿಮ್ಮ ವ್ಯವಹಾರಗಳಿಗೆ ತೊಡಕು ಆಗಬಹುದು. ವೃದ್ಧಾಶ್ರಮಗಳಿಗೆ ಸಹಾಯ ಸಿಗುತ್ತದೆ. ಕೃಷಿ ಚಟುವಟಿಕೆಗಳಿಗೆ ಉತ್ತೇಜನ ಸಿಗುತ್ತದೆ.

ಧನುಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)

ಆಧ್ಯಾತ್ಮದತ್ತ ಒಲವು ಹೆಚ್ಚಾಗಿ ಸತ್ಸಂಗಗಳಲ್ಲಿ ಭಾಗವಹಿಸುವಿರಿ. ಹಣದ ಹರಿವು ಸಾಮಾನ್ಯವಾಗಿರುತ್ತದೆ. ನಿಮ್ಮ ಒಡಹುಟ್ಟಿದವರು ನಿಮ್ಮೊಡನೆ ಸಲುಗೆಯಿಂದ ಇರುವರು. ಕೃಷಿಯಿಂದ ಸ್ವಲ್ಪ ಆದಾಯ ಬರುತ್ತದೆ. ಸರ್ಕಾರಿ ಸಾಲ ಪಡೆದು ಉಳಿದ ಸಾಲ ಸಾಲಗಳನ್ನು ತೀರಿಸಬಹುದು. ಭಾಷಾಂತರ ಮಾಡುವವರಿಗೆ ಉತ್ತಮ ಕೆಲಸ ಇರುತ್ತದೆ. ನಿಂತಿದ್ದ ವ್ಯವಹಾರಗಳು ನಿಧಾನವಾಗಿ ಆರಂಭಗೊಳ್ಳುತ್ತವೆ. ಬರಬೇಕಾಗಿದ್ದ ಸಾಲಗಳಲ್ಲಿ ಸ್ವಲ್ಪಭಾಗ ಬರುತ್ತದೆ. ಉದ್ಯೋಗದಲ್ಲಿ ಇದ್ದ ಗೊಂದಲಗಳು ನಿವಾರಣೆಯಾಗುವುದು.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಉದ್ಯೋಗದಲ್ಲಿ ಅಭದ್ರತೆ ಎದುರಿಸುತ್ತಿರುವವರಿಗೆ ಉದ್ಯೋಗದ ಭದ್ರತೆ ಒದಗುತ್ತದೆ. ದ್ರವರೂಪದ ವಸ್ತುಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರವಿದೆ. ಕೃಷಿಕರಿಗೆ ಉತ್ತಮ ಸೌಕರ್ಯ ಮತ್ತು ಸಹಾಯಧನಗಳು ಬರುತ್ತವೆ. ಸಹೋದ್ಯೋಗಿಗಳೊಡನೆ ಹೊಂದಾಣಿಕೆ ಹೆಚ್ಚಾಗಿ ಕೆಲಸ ಸುಲಭವೆನಿಸುತ್ತದೆ. ಮಕ್ಕಳ ಪ್ರಗತಿಯು ಆಶಾದಾಯಕವಾಗಿ ಇರುತ್ತದೆ. ನರ ದೌರ್ಬಲ್ಯ ಇರುವವರಿಗೆ ಔಷಧೋಪಚಾರಗಳಿಂದ ಆರೋಗ್ಯ ಸುಧಾರಿಸುತ್ತದೆ. ಸಂಗಾತಿಯ ಸಲಹೆಗಳು ಧನ ನಷ್ಟವಾಗುವುದನ್ನು ತಪ್ಪಿಸುತ್ತದೆ.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಬಹಳ ಚುರುಕುತನದಿಂದ ಕೆಲಸ ಮಾಡುವಿರಿ. ಹಣದ ಒಳಹರಿವು ಕಡಿಮೆ ಇರುತ್ತದೆ. ವಿದ್ಯಾರ್ಥಿಗಳಿಗೆ ಪರಿಶ್ರಮಕ್ಕೆ ತಕ್ಕ ಫಲವಿರುತ್ತದೆ. ತೆರಿಗೆಯ ತಜ್ಞರಿಗೆ ಲೆಕ್ಕ ಪರಿಶೋಧಕರಿಗೆ ಬೇಡಿಕೆ ಹೆಚ್ಚುತ್ತದೆ. ಶೀತ ಬಾಧೆಯ ಬಗ್ಗೆ ಗಮನ ಹರಿಸಿರಿ. ಸಂಗಾತಿಯೊಡನೆ ಸಂತೋಷವಾಗಿ ಕಾಲವನ್ನು ಕಳೆಯುವಿರಿ. ಹಿರಿಯರೊಂದಿಗೆ ಸಂಬಂಧಗಳು ವೃದ್ಧಿಯಾಗುತ್ತವೆ. ವೃತ್ತಿಯಲ್ಲಿ ನಿಮ್ಮ ಸಲಹೆಗಳು ಎಲ್ಲರ ಮೆಚ್ಚುಗೆಗೆ ಪಾತ್ರವಾಗುತ್ತದೆ. ಪೂಜಾ ವಸ್ತುಗಳನ್ನು ಸರಬರಾಜು ಮಾಡುವವರಿಗೆ ನಿಧಾನವಾಗಿ ವ್ಯವಹಾರ ವೃದ್ಧಿಸುತ್ತದೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ವೃತ್ತಿಯಲ್ಲಿನ ಶ್ರಮವು ಈಗ ಫಲಿತಾಂಶವನ್ನು ಕೊಡಲಾರಂಭಿಸುತ್ತದೆ. ಭೂಮಿಯ ಮೇಲೆ ಹೂಡಿದ್ದ ಹಣದ ಮೌಲ್ಯವು ಕಡಿಮೆಯಾಗಬಹುದು. ನಿಮ್ಮ ಸಂಕಷ್ಟಗಳಿಗೆ ಬಂಧುಗಳು ಸ್ಪಂದಿಸುವರು. ಹಿರಿಯರ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸವನ್ನು ಕಾಣಬಹುದು. ಸಂಪಾದನೆ ಹಂತಹಂತವಾಗಿ ಆರಂಭಗೊಳ್ಳುತ್ತದೆ. ಸಂಗಾತಿಗೆ ವೃತ್ತಿಯಲ್ಲಿದ್ದ ಒತ್ತಡಗಳು ನಿಧಾನವಾಗಿ ಕರಗುತ್ತವೆ. ಖರ್ಚಿನ ಮೇಲೆ ಹಿಡಿತ ಸಾಧಿಸುವುದು ಅತಿ ಮುಖ್ಯ. ಪ್ರಕಾಶಕರು ತಮ್ಮ ದೊಡ್ಡ ದೊಡ್ಡ ಪ್ರಕಾಶನಗಳನ್ನು ಮುಂದೂಡಬೇಕಾಗಬಹುದು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು