ಬುಧವಾರ, ಆಗಸ್ಟ್ 4, 2021
27 °C

ವಾರ ಭವಿಷ್ಯ | 12-07-2020ರಿಂದ 18-07-2020ರವರೆಗೆ

ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ ಎನ್ ಲಕ್ಷ್ಮೀನರಸಿಂಹಸ್ವಾಮಿ, ಮೊಬೈಲ್‌ ನಂಬರ್‌: 8197304680 

**

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)

ಕೆಲವರು ನಿಮ್ಮನ್ನು ಬಹಳ ಹೊಗಳುವರು. ಇದು ಅವರು ಸ್ವಾರ್ಥಕ್ಕಾಗಿ ಮಾಡುವ ತಂತ್ರ. ಅಧಿಕಾರಿ ವರ್ಗದವರು ತಮ್ಮ ಕೈಕೆಳಗೆ ಕೆಲಸ ಮಾಡುವವರ ಬಳಿ ಎಚ್ಚರಿಕೆಯಿಂದ ಮಾತನಾಡಿ. ಇಲ್ಲವಾದಲ್ಲಿ ಅವರ ಪ್ರತಿರೋಧ ಕಾಣಬೇಕಾಗುತ್ತದೆ. ಸಂಗಾತಿಯಿಂದ ಸ್ವಲ್ಪ ಧನಸಹಾಯ ನಿರೀಕ್ಷಿಸಬಹುದು. ಸಾಂಸಾರಿಕ ಸಮಸ್ಯೆಗಳನ್ನು ಆರಂಭದಲ್ಲೇ ಪರಿಹರಿಸಿ. ಇದರಿಂದ ಸಂತೋಷ ಹೊಮ್ಮುತ್ತದೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಉತ್ತಮ ಕಾಲ. ವೃತ್ತಿಯಲ್ಲಿ ನಿಮ್ಮ ಹೆಸರು ಸಹಿಸದ ಕೆಲವರು ಇರುತ್ತಾರೆ.

**

ವೃಷಭ ರಾಶಿ (ಕೃತಿಕಾ 2 3 4 ರೋಹಿಣಿ ಮೃಗಶಿರಾ 1 2)

ನಿಮ್ಮ ಚಿಂತನೆಗಳನ್ನು ಕುಟುಂಬದೊಡನೆ ಭಾವನಾತ್ಮಕವಾಗಿ ಹಂಚಿಕೊಳ್ಳಿರಿ. ಇದರಿಂದ ಕುಟುಂಬದ ಸಂಪೂರ್ಣ ಬೆಂಬಲ ನಿಮಗಿರುತ್ತದೆ. ಬಹಳ ಚಟುವಟಿಕೆಯಿಂದ ಧನ ಸಂಪಾದನೆಯತ್ತ ಗಮನ ಹರಿಸುವಿರಿ. ಕೃಷಿಕರಿಗೆ ಅವರ ಸ್ಥಳದಲ್ಲೇ ಲಾಭ ಸಿಗುವ ಅವಕಾಶವಿದೆ. ಮಕ್ಕಳಿಂದ ಸ್ವಲ್ಪ ಹಣದ ಸಹಾಯ ಸಿಗಬಹುದು. ಸಂಗೀತಗಾರರಿಗೆ ಉತ್ತಮ ಹೆಸರು ಬರುವುದು. ಹೈನುಗಾರಿಕೆಯನ್ನು ಮಾಡುತ್ತಿರುವವರಿಗೆ ಲಾಭಾಂಶ ಸ್ವಲ್ಪ ಹೆಚ್ಚುತ್ತದೆ.

**

ಮಿಥುನ ರಾಶಿ (ಮೃಗಶಿರಾ 3 4 ಆರಿದ್ರಾ ಪುನರ್ವಸು 1 2 3)

ದೂರದ ಊರಲ್ಲಿ ಕೆಲಸ ಸಿಕ್ಕಿದರೂ ಹೋಗಲು ಕಷ್ಟವಾಗಬಹುದು. ಸರಾಗವಾಗಿ ನಡೆಯುತ್ತಿದ್ದ ವ್ಯವಹಾರಗಳಲ್ಲಿ ಸ್ವಲ್ಪ ಅಡೆತಡೆಗಳಿರುತ್ತವೆ. ರಾಜಕೀಯ ವ್ಯಕ್ತಿಗಳು ತಮ್ಮ ಕ್ಷೇತ್ರದ ಕಡೆ ಹೆಚ್ಚು ಗಮನ ಹರಿಸಬೇಕಾದ ಅನಿವಾರ್ಯ ಇದೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ನಿಧಾನವಾದರೂ ಫಲಿತಾಂಶವಿದೆ. ಸರ್ಕಾರದ ಕಡೆಯಿಂದ ಬರಬೇಕಾಗಿದ್ದ ಹಣ ಬರುತ್ತದೆ. ವೃತ್ತಿಯಲ್ಲಿ ನಿಮ್ಮ ಕೆಲಸ ಮೆಚ್ಚುಗೆ ಪಡೆಯುತ್ತದೆ. ಮಕ್ಕಳ ಯೋಗಕ್ಷೇಮಕ್ಕಾಗಿ ಹಣ ಖರ್ಚಾಗುವ ಸಂಭವವಿದೆ.

**

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)

ಹಳೆಯ ಸಮಸ್ಯೆಯೊಂದು ಪುನಃ ಕಾಡುವ ಸಂದರ್ಭವಿದೆ. ಆತ್ಮಗೌರವಕ್ಕೆ ಪ್ರಾಶಸ್ತ್ಯ ಕೊಡುವಿರಿ. ಹಣದ ಹರಿವು ತಕ್ಕಮಟ್ಟಿಗೆ ಇರುತ್ತದೆ. ಸ್ವಲ್ಪ ನಿಧಾನಗತಿಯ ನಡವಳಿಕೆ ಇರುತ್ತದೆ. ನಂಬಿಕಸ್ಥರು ಮೋಸ ಮಾಡುವ ಸಾಧ್ಯತೆಗಳಿವೆ, ಆದ್ದರಿಂದ ಹಣದ ವ್ಯವಹಾರದಲ್ಲಿ ಎಚ್ಚರಿಕೆ ಇರಲಿ. ಸಂಗಾತಿಯೊಡನೆ ಮುಸುಕಿನ ಗುದ್ದಾಟ ಇರಬಹುದು. ತಾಳ್ಮೆಯಿಂದ ಮಾತನಾಡಿ ಬಗೆಹರಿಸಿಕೊಳ್ಳಿ. ಪಾರಂಪರಿಕ ಬೆಳೆಗಳಿಗೆ ಹೆಚ್ಚು ಬೆಲೆ ಸಿಗುತ್ತದೆ. ವೃತ್ತಿಯಲ್ಲಿ ಹಿರಿಯರ ಸಹಾಯ ನಿಮಗೆ ಸಿಗುತ್ತದೆ.

**

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1) 

ನಾನೇ ಮೇಲೆಂಬ ಭಾವವಿರುತ್ತದೆ ಹಾಗೂ ನಿಮ್ಮನ್ನು ಎಲ್ಲರೂ ಅನುಸರಿಸಬೇಕೆಂಬ ಆಸೆಯೂ ಇರುತ್ತದೆ. ಆರಂಭಿಸಿದ್ದ ವ್ಯವಹಾರಗಳಲ್ಲಿ ಹಣದ ಹರಿವು ಏರತೊಡಗುತ್ತದೆ. ಉದ್ಯೋಗದಲ್ಲಿ ಸ್ತ್ರೀ ಮೇಲಧಿಕಾರಿಯಿಂದ ಸಹಾಯ ಸಿಗುತ್ತದೆ. ಅವರು ನಿಮ್ಮನ್ನು ಕೆಲವು ಸಂಕಷ್ಟಗಳಿಂದ ಪಾರು ಮಾಡುವರು. ಆಸ್ತಿ ಸಂಬಂಧವಾಗಿ ಹಣ ಹೂಡುವುದಕ್ಕೆ ಮೊದಲು ಸರಿಯಾಗಿ ತಿಳಿಯಿರಿ. ವಿದ್ಯಾಭ್ಯಾಸದಲ್ಲಿ ಇದ್ದ ಸಂಕಷ್ಟ ನಿಧಾನವಾಗಿ ದೂರವಾಗುವುದು. ಪಶುಸಂಗೋಪನೆ ಮಾಡುವವರು ತಮ್ಮ ಪಶುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

**

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)

ವೃತ್ತಿಯಲ್ಲಿದ್ದ ತಾಕಲಾಟ ತಹಬಂದಿಗೆ ಬರತೊಡಗುತ್ತದೆ. ಹಿರಿಯರಿಂದ ಸಹಾಯ ಒದಗುವ ಸಾಧ್ಯತೆಗಳಿವೆ. ಸಂಗಾತಿಯ ನಡವಳಿಕೆ ಸ್ವಲ್ಪ ಬೇಸರ ತರಿಸಬಹುದು. ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ಸಮಯ. ಮಕ್ಕಳ ಆರೋಗ್ಯದ ಬಗ್ಗೆ ಗಮನ ಹರಿಸಿ. ಪ್ರೇಮಿಗಳು ಪರಸ್ಪರ ದೂಷಿಸದೆ ಮುಂದಿನ ಜೀವನದ ಬಗ್ಗೆ ಆಲೋಚಿಸಿ. ಕೆಮ್ಮು, ಕಫದ ನಿರ್ಲಕ್ಷ್ಯ ಬೇಡ. ಸರ್ಕಾರಿ ಅಧಿಕಾರಿಗಳಿಗೆ ಹೊಸ ಜವಾಬ್ದಾರಿ ಬರುತ್ತದೆ. ವ್ಯಾಪಾರಸ್ಥರು ಸರ್ಕಾರಿ ಯೋಜನೆಗಳನ್ನು ಅನುಷ್ಠಾನಗೊಳಿಸಿದಲ್ಲಿ   ಹೆಚ್ಚು ಅನುದಾನ ಸಿಗುತ್ತದೆ.

**

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)

ಹಣದ ಒಳಹರಿವು ಕಡಿಮೆ ಇರುತ್ತದೆ. ನಿಮ್ಮ ನಡವಳಿಕೆಯಿಂದ ಬಂಧು–ಮಿತ್ರರು ದೂರವಾಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳು ಅಭ್ಯಾಸದಲ್ಲಿ ಹೆಚ್ಚಿನ ಪರಿಶ್ರಮ ಪಡಬೇಕು. ಶೀತ ನಿರ್ಲಕ್ಷಿಸಬೇಡಿ. ಸಂಗಾತಿಯ ಕಡೆಯವರೆಗೆ ಕೊಟ್ಟ ಹಣ ವಾಪಸ್ಸು ಬರುವುದು ಕಷ್ಟ. ಇದರ ಬಗ್ಗೆ ಸಂಗಾತಿಗೂ ನಿಮಗೂ ಕಾವೇರಿದ ಮಾತಾಗಬಹುದು. ಕಳೆದಿದ್ದ ಹಿರಿಯರ ದಾಖಲೆಗಳು ಸಿಗುತ್ತವೆ. ವೃತ್ತಿಯಲ್ಲಿ ಸ್ಥಾನ-ಮಾನ ನಿರೀಕ್ಷಿಸಬಹುದು. ಆಹಾರ ಉದ್ದಿಮೆ ನಡೆಸುವವರಿಗೆ ಬೇಕಾದ ಸೌಲಭ್ಯ ಬೇಕಾದಾಗ ದೊರೆತು ವ್ಯವಹಾರ ವಿಸ್ತರಣೆಯಾಗುವ ಸಾಧ್ಯತೆಯಿದೆ.

**

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)

ಹಣದ ಒಳಹರಿವು ಸ್ವಲ್ಪ ಅನುಕೂಲಕರವಾಗಿ ಇರುವಂತೆ ತೋರುತ್ತದೆ. ನಿಮ್ಮ ಕಷ್ಟಕ್ಕೆ ಯಾವುದಾದರೊಂದು ಮೂಲದಿಂದ ಹಣ ಬರುತ್ತದೆ. ಬಂಧುಗಳ ಮಧ್ಯೆ ಇದ್ದ ಜಿಜ್ಞಾಸೆ ಪರಿಹಾರವಾಗುತ್ತದೆ. ಕೃಷಿಕರಿಗೆ ತಮ್ಮ ಉತ್ಪನ್ನದ ಮಾರಾಟದ ಬಗ್ಗೆ ಇದ್ದ ಗೊಂದಲ ನಿವಾರಣೆಯಾಗಿ ಹಣ ಬರುತ್ತದೆ. ಸಂಗಾತಿಯು ತಾನು ಕೂಡಿಟ್ಟ ಹಣವನ್ನು ನಿಮ್ಮ ಕಷ್ಟಕ್ಕೆ ಕೊಡುವರು. ವೃತ್ತಿಯಲ್ಲಿ ಅಲ್ಪ ಅಭಿವೃದ್ಧಿ ಇರುತ್ತದೆ. ವ್ಯವಹಾರದಲ್ಲಿನ ಲಾಭ ಸರಿಯಾಗಿ ಗಮನಿಸದಿದ್ದರೆ ಬೇರೆಯವರ ಪಾಲಾಗಬಹುದು. ಸಂಗಾತಿ ಮನೆಯವರ ಕಡೆಯ ಸಂತೋಷ ಕೂಟಗಳಿಗೆ ಹೋಗುವ ಅವಕಾಶವಿದೆ.

**

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)

ಆದಾಯ ಮತ್ತು ಖರ್ಚು ಸಮನಾಗಿ ಇರುತ್ತದೆ. ಹೆಚ್ಚುವರಿ ಬಂಡವಾಳ ಈಗ ಹೂಡುವುದು ತರವಲ್ಲ. ಬಂಧುಗಳು ನಿಮ್ಮಿಂದ ಧನ ಸಹಾಯ ಪಡೆಯಲು ಯತ್ನಿಸಿವರು. ಕೊಡುವುದು ಬೇಡ. ಕೊಟ್ಟಲ್ಲಿ ವಾಪಸ್ ಬರುವ ಸಂಭವ ಕಡಿಮೆ. ನಿಮ್ಮ ಮಾತಿಗೆ ಸಂಗಾತಿ ಬೆಲೆ ಕೊಡುವವರು. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಸ್ವಲ್ಪ ನಿಧಾನಗತಿ ಇರುತ್ತದೆ. ವೃತ್ತಿಯಲ್ಲಿ ನಿಮಗೆ ಬರಬೇಕಾದ ಗೌರವವನ್ನು ಬೇರೆಯವರು ಪಡೆಯಲು ಯತ್ನಿಸುವರು. ಈ ಬಗ್ಗೆ ಎಚ್ಚರವಾಗಿರಿ. ಸ್ವಲ್ಪ ಹಣ ಸಂಗಾತಿಯ ಆಲಂಕಾರಿಕ ವಸ್ತುಗಳಿಗೆ ಖರ್ಚು ಮಾಡಬೇಕಾಗಬಹುದು.

**

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)

ಕಠಿಣ ಪರಿಶ್ರಮದಿಂದ ಕೆಲಸ ಮಾಡಿ ಗುರಿ ತಲುಪುವಿರಿ. ಧನಾದಾಯ ತಕ್ಕಮಟ್ಟಿಗೆ ಇರುತ್ತದೆ. ಬಂಧು ಬಾಂಧವರಿಂದ ನಿಮ್ಮ ಕೆಲಸಗಳಿಗೆ ಉತ್ತಮ ಸಹಕಾರ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಉತ್ತಮವಾದ ವಾರ. ಹಿರಿಯರು ನಡೆಸುವ ವ್ಯವಹಾರಗಳಲ್ಲಿ ನಿಮಗೂ ಪಾಲುದಾರಿಕೆ ದೊರೆಯುವುದು. ಬಹಳ ದಿನಗಳಿಂದ ಕಾಡುತ್ತಿದ್ದ ಸಾಲದ ಸಮಸ್ಯೆ ಈಗ ಬಗೆಹರಿಯುವುದು. ಸ್ತ್ರೀಯರ ಏಳಿಗೆ ಉತ್ತಮವಾಗಿರುತ್ತದೆ. ದೈವ ಕಾರ್ಯದಲ್ಲಿ ಆಸಕ್ತಿ ಹೆಚ್ಚುತ್ತದೆ. ಲೋಹದ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಸುತ್ತದೆ.

**

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)

ಕೃಷಿ ಉತ್ಪನ್ನಗಳಿಗೆ ಬೇಡಿಕೆ ಬಂದು ರೈತರಿಗೆ  ಹಣ ಸಂದಾಯವಾಗುತ್ತದೆ. ನೃತ್ಯ ಪಟುಗಳಿಗೆ ಅಥವಾ ಸಂಗೀತಾಸಕ್ತರಿಗೆ ಕಲಿಯುವ ಅವಕಾಶ ಒದಗಿಬರುತ್ತದೆ. ನಿಮ್ಮ ಮಕ್ಕಳ ಏಳಿಗೆ ಉತ್ತಮವಾಗಿರುತ್ತದೆ. ಕಣ್ಣಿನಲ್ಲಿ ಸೋಂಕಿನ ತೊಂದರೆಯಿರುವವರು ಎಚ್ಚರ ವಹಿಸಿ. ಅನಿರೀಕ್ಷಿತ ಧನಾದಾಯ ನಿರೀಕ್ಷಿಸಬಹುದು. ಪ್ರೇಮಿಗಳ ನಡುವಿನ ಸಂಪರ್ಕ ಕಡಿಮೆಯಾಗಬಹುದು. ಮನೆಪಾಠ ಮಾಡುವವರಿಗೆ ನಿಧಾನಗತಿಯ ಅನುಕೂಲವಿದೆ. ಧಾರ್ಮಿಕ ಸಂಸ್ಥೆ ನಡೆಸುವವರಿಗೆ ದೇಣಿಗೆ ಒದಗಿಬರುತ್ತದೆ. ಇರುವ ಕೆಲಸ ಬಿಟ್ಟು ಬೇರೆ ಕೆಲಸ ಹುಡುಕುವುದು ಒಳಿತಲ್ಲ.

**

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)

ಒಳಗೆ ಅಸಹನೆ ಇದ್ದರೂ ಮುಖದಲ್ಲಿ ಮಂದಹಾಸ ತೋರುವಿರಿ. ಅತಿಯಾಗಿ ಖರ್ಚು ಮಾಡಬೇಡಿ, ಹಣದ ಬಿಕ್ಕಟ್ಟು ಎದುರಾಗಬಹುದು. ಮಕ್ಕಳ ಏಳಿಗೆ ಸಾಮಾನ್ಯವಾಗಿರುತ್ತದೆ. ಅವರ ಬೇಡಿಕೆಗಳಿಗಾಗಿ ಹಣ ವ್ಯಯಿಸುವಿರಿ. ಸಂಗಾತಿಯೊಂದಿಗಿನ ಅನುಬಂಧ ಉತ್ತಮವಾಗಿ ಇರುತ್ತದೆ. ಉದ್ಯೋಗದಲ್ಲಿ ಗೌರವ ಹೆಚ್ಚುತ್ತದೆ. ಕಬ್ಬಿಣದ ವ್ಯಾಪಾರಿಗಳಿಗೆ ವ್ಯಾಪಾರದ ವಿಸ್ತರಣೆ ಆಗುವುದು. ಕೃಷಿ ಸಂಶೋಧಕರ ಸಾಧನೆಗೆ ಪ್ರಾಮುಖ್ಯತೆ ಬರುತ್ತದೆ. ರಾಜಕೀಯ ವ್ಯಕ್ತಿಗಳಿಗೆ ಅವರ ಮುಖಂಡರಿಂದ ಹೊಗಳಿಕೆ ಸಿಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.