ಶುಕ್ರವಾರ, ನವೆಂಬರ್ 27, 2020
20 °C

ವಾರ ಭವಿಷ್ಯ: 23-8-2020ರಿಂದ 29-8-2020ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ ಎನ್ ಲಕ್ಷ್ಮೀನರಸಿಂಹಸ್ವಾಮಿ, ಮೊಬೈಲ್‌ ನಂಬರ್‌: 8197304680 

***
ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಉದ್ಯೋಗದಲ್ಲಿ ಸ್ವಲ್ಪಮಟ್ಟಿನ ಕಿರಿಕಿರಿ ಎನಿಸಿದರೂ ಕೆಲಸಗಳಲ್ಲಿ ಯಶಸ್ಸು ಸಿಗಲಿದೆ. ಕಳೆದು ಹೋದ ಅಮೂಲ್ಯ ವಸ್ತುವೊಂದು ಈಗ ಸಿಗುತ್ತದೆ. ಯಂತ್ರೋಪಕರಣಗಳ ಮೇಲೆ ಹಣ ಹೂಡಿಕೆ ಸಾಧ್ಯತೆ ಇದೆ. ಬಿಡುವಿಲ್ಲದ ಕೆಲಸಗಳಲ್ಲಿ ದೇಹಾಯಾಸ ಆಗಬಹುದು. ಯಾವುದೇ ಕೆಲಸ ಮಾಡುವಾಗ ಆತುರದ ನಿರ್ಧಾರ ಬೇಡ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಶ್ರದ್ಧೆ ಒಳಿತು. ವ್ಯವಹಾರಕ್ಕಾಗಿ ತಂದೆಯಿಂದ ಧನಸಹಾಯ ಒದಗಿ ಬಂದು ವ್ಯವಹಾರ ಮುಂದುವರಿಯುತ್ತದೆ.

**
ವೃಷಭರಾಶಿ (ಕೃತಿಕಾ 2 3 4 ರೋಹಿಣಿ ಮೃಗಶಿರಾ 1 2)
ಹಣದ ಹರಿವು ನಿಧಾನ ವೃದ್ಧಿ. ಹೆಚ್ಚು ಲವಲವಿಕೆಯಿಂದ ಇರುವಿರಿ. ಹೊಸ ಆದಾಯದ ಮೂಲಗಳನ್ನು ಹುಡುಕುವಿರಿ. ಈ ಬಗ್ಗೆ ಸಂಬಂಧಿಕರ ಬಳಿ ಚರ್ಚಿಸುವಿರಿ. ಹೊಸ ಯೋಜನೆಗಳಿಗೆ ಕಾಲಮಿತಿ ಅತ್ಯಗತ್ಯ. ವಿದ್ಯಾರ್ಥಿಗಳಿಗೆ ಓದಿನ ಮೇಲೆ ಆಸಕ್ತಿ ಹೆಚ್ಚುತ್ತದೆ. ಹಲ್ಲಿನ ತೊಂದರೆ ಕಾಣಿಸಬಹುದು. ಶುಭ ಕಾರ್ಯಗಳಲ್ಲಿ ಭಾಗವಹಿಸುವ ಯೋಗವಿದೆ. ಎಲೆಕ್ಟ್ರಾನಿಕ್ ವಸ್ತುಗಳ ರಿಪೇರಿಯವರಿಗೆ ಕೈತುಂಬಾ ಕೆಲಸ. ವೃತ್ತಿಯಲ್ಲಿ ಹಿತಶತ್ರುಗಳ ಕಾಟ ಇದ್ದರೂ ಅಂತಹ ತೊಂದರೆ ಇರುವುದಿಲ್ಲ.

**

ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಸರ್ಕಾರಿ ಅಧಿಕಾರಿಗಳಿಗೆ ಕೈತುಂಬಾ ಕೆಲಸ. ನಿತ್ಯದ ಕೆಲಸಗಳಲ್ಲದೆ ಹೊಸ ಜವಾಬ್ದಾರಿಗಳು ಹೆಗಲೇರುತ್ತವೆ. ಮನೆಯವರೊಂದಿಗೆ ಆತುರದ ವ್ಯವಹಾರಗಳು ಸರಿಯಲ್ಲ. ನಿಮ್ಮ ಅನಿರೀಕ್ಷಿತ ನಡವಳಿಕೆಯು ಮನೆಯವರಿಗೆ ಅಸಹನೆ ತರುತ್ತದೆ. ಸಂಗಾತಿಯ ಆದಾಯದಲ್ಲಿ ಸ್ವಲ್ಪ ಹೆಚ್ಚಳ. ವ್ಯವಹಾರದಲ್ಲಿ ಲಾಭ ಕಾಣುವ ದಿನಗಳು ಹತ್ತಿರದಲ್ಲಿವೆ. ವಿದ್ಯಾರ್ಥಿಗಳಿಗೆ ಸ್ವಲ್ಪ ಅನುಕೂಲಕರ ಕಾಲ. ವೈದ್ಯರಿಗೆ ಕೆಲಸದ ಒತ್ತಡಗಳು ಹೆಚ್ಚಬಹುದು. ತಂದೆಯ ಜೊತೆ ಸ್ವಲ್ಪ ಕಾವೇರಿದ ಮಾತಾಗಬಹುದು.

**
ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ಬಂಧುಗಳಲ್ಲಿ ಗೌರವಾದರಗಳು ದೊರೆಯುವ ಸಾಧ್ಯತೆ ಇದೆ. ಆರ್ಥಿಕ ಸಬಲತೆ ನಿಧಾನವಾಗಿ ಆಗುತ್ತದೆ. ಉತ್ತಮ ಗೆಳೆಯರು ದೊರೆತು ಸರಿಯಾದ ಮಾರ್ಗದರ್ಶನ ನೀಡುವರು. ಸಹೋದ್ಯೋಗಿಗಳೊಂದಿಗೆ ಮಿತ ಮಾತು ಒಳ್ಳೆಯದು. ವಾಹನ ಮಾರಾಟಗಾರರಿಗೆ ನಿಧಾನ ವ್ಯವಹಾರ ವೃದ್ಧಿ. ಕಾನೂನಿನ ಹೋರಾಟಗಳಲ್ಲಿ ತಜ್ಞರ ಸಲಹೆ ಪಡೆದು ಮುಂದುವರೆಯುವುದು ಉತ್ತಮ. ಸರ್ಕಾರಿ ಸಾಲಗಳು ಸರಾಗವಾಗಿ ಸಿಗುತ್ತವೆ. ಸಂಗಾತಿ ಕಾವೇರಿದ ಮಾತಾದರೂ ನಂತರ ಸರಿಯಾಗುವುದು.

**
ಸಿಂಹ ರಾಶಿ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ಆತ್ಮಸ್ಥೈರ್ಯ ಸ್ವಲ್ಪ ಕಡಿಮೆಯಾದಂತೆ ಅನಿಸುವುದು. ಆದಾಯಕ್ಕಿಂತ ಖರ್ಚು ಹೆಚ್ಚು ಆಗಬಹುದು. ಶೈಕ್ಷಣಿಕ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವವರಿಗೆ ಒತ್ತಡ ಹೆಚ್ಚು ಇರಲಿದೆ. ಭೂಮಿಯ ವಿವಾದಗಳು ಪರಿಹಾರಗೊಂಡು ನಿಮಗೆ ಅನುಕೂಲ ಹೆಚ್ಚುವುದು. ಮಿತ್ರರಿಗೆ ಸಹಾಯ ಮಾಡುವಾಗ ನಿಮಗೆ ತೊಂದರೆ ಆಗದಂತೆ ಎಚ್ಚರ ಇರಲಿ. ನಿಮ್ಮ ಕಠಿಣ ಪರಿಶ್ರಮಕ್ಕೆ ತಕ್ಕಂತೆ ಉದ್ಯೋಗದಲ್ಲಿ ಬದಲಾವಣೆ ಕಾಣಬಹುದು. ಆರೋಗ್ಯದ ಬಗ್ಗೆ ನಿಗಾ ವಹಿಸಿ. ವಾಹನ ಚಾಲನೆಯಲ್ಲಿ ಜಾಗರೂಕತೆ ಅತೀ ಅಗತ್ಯ.

**
ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಲೇವಾದೇವಿ ನಡೆಸುತ್ತಿದ್ದವರಿಗೆ ನಿಂತಿದ್ದ ಹಣಗಳು ಈಗ ಹಂತಹಂತವಾಗಿ ವಾಪಸ್ಸು ಬರಲಾರಂಭಿಸುತ್ತದೆ. ಭೂ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಣಗಳಿಕೆ ಇದೆ. ಸಂಗಾತಿಯ ಗಳಿಕೆಯಲ್ಲಿ ಸ್ವಲ್ಪ ಏರಿಕೆ. ಸಂಗಾತಿಯ ಹಾಗೂ ನಿಮ್ಮ ಆರೋಗ್ಯದ ಕಡೆ ಹೆಚ್ಚಿನ ಗಮನ ಅಗತ್ಯ. ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಹಾಕಿ ಓದುವುದು ಒಳ್ಳೆಯದು. ಕ್ರೀಡಾಪಟುಗಳಿಗೆ ಸೂಕ್ತ ಮಾರ್ಗದರ್ಶನ
ಒದಗಿ ಅವರ ಅಭ್ಯಾಸಕ್ಕೆ ಅನುಕೂಲವಾಗುತ್ತದೆ. ಹಳೆಯ ವಾಹನ ವ್ಯವಹಾರ ಮಾಡುವವರಿಗೆ ವ್ಯವಹಾರ ವೃದ್ಧಿ.

**
ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಹೊಸ ಬರಹಗಾರರಿಗೆ ಅನುವಾದ ಮಾಡುವುದಕ್ಕೆ ಆಹ್ವಾನ ಮತ್ತು ಉತ್ತೇಜನ ದೊರೆಯುತ್ತದೆ. ಮನೆಯ ಜವಾಬ್ದಾರಿಗಳನ್ನು ಸಂಗಾತಿ ಮತ್ತು ಮಕ್ಕಳು ತೆಗೆದುಕೊಂಡು ನಿಮ್ಮ ಭಾರ ಸ್ವಲ್ಪ ಕಡಿಮೆ ಮಾಡುವರು. ನಿಮ್ಮ ಕೆಲವು ಆಸೆಗಳು ಈಡೇರುವ ಸಾಧ್ಯತೆ ಇದೆ. ಪ್ರೇಮಿಗಳ ಪಾಲಿಗೆ ಉತ್ತಮ ದಿನ ಅವರ ಪ್ರೇಮಕ್ಕೆ ಹಿರಿಯರ ಒಪ್ಪಿಗೆ ದೊರೆಯುತ್ತದೆ. ನೆರೆಹೊರೆಯವರಲ್ಲಿ ಉತ್ತಮ ಬಾಂಧವ್ಯ ಬೆಳೆಸುವಿರಿ. ಜನಪ್ರತಿನಿಧಿಗಳಿಗೆ ಮುಖಭಂಗ ಸಾಧ್ಯತೆ ಇದೆ. ಕೃಷಿಕರಿಗೆ ಹೆಚ್ಚಿನ ಲಾಭವಿದೆ.

**
ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ಕೃಷಿ ಉತ್ಪನ್ನಗಳಿಂದ ಹಣ ಗಳಿಸುವಿರಿ. ಉದ್ಯೋಗದಲ್ಲಿ ಕೆಲವರ ಅಸಹಕಾರದಿಂದ ಎದುರಿಸುತ್ತಿದ್ದ ತೊಂದರೆಗಳು ನಿವಾರಣೆಯಾಗಿ ನೆಮ್ಮದಿ ಮೂಡುತ್ತದೆ. ನಿರೀಕ್ಷಿತ ಮೂಲದಿಂದ ಸರಿಯಾಗಿ ಹಣ ಬರದಿದ್ದರೂ ಅನಿರೀಕ್ಷಿತ ಮೂಲದಿಂದ ಅಗತ್ಯಕ್ಕೆ ತಕ್ಕಷ್ಟು ಹಣ ಬರುತ್ತದೆ. ದೂರದಲ್ಲಿರುವ ಮಕ್ಕಳಿಂದ ಶುಭ ವಾರ್ತೆಗಳು ಕೇಳಿ ಬರುವವು. ಗೃಹಾಲಂಕಾರ ವಸ್ತುಗಳನ್ನು ತಯಾರಿಸಿ ಮಾರುವವರಿಗೆ ವ್ಯಾಪಾರವಾಗುವುದು. ಕಾರ್ಯ ಸಾಧಿಸಲು ನೀವು ಹೂಡುವ ತಂತ್ರಗಳು ಫಲ ಕೊಡುತ್ತವೆ. ನಿಮ್ಮ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು.

**
ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಉತ್ತಮ ಕಾರ್ಯಗಳಿಂದ ಗಣ್ಯವ್ಯಕ್ತಿಗಳಿಂದ ಪ್ರಶಂಸೆ ದೊರೆಯಲಿದೆ. ಸಾಮರ್ಥ್ಯ ಅರಿತು ಕೆಲಸ ಮಾಡುವುದು ಮತ್ತು ಕೆಲಸವನ್ನು ಬೇರೆಯವರಿಗೆ ವಹಿಸುವುದು ಬಹಳ ಉತ್ತಮ. ಸಂಗೀತ ಕ್ಷೇತ್ರದವರಿಗೆ ಆ ಕ್ಷೇತ್ರದ ದಿಗ್ಗಜರ ಪರಿಚಯದ ಸಾಧ್ಯತೆ ಇದೆ. ಹಿರಿಯರು ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನಿಮ್ಮ ಕೈಕೆಳಗಿನ ಕೆಲಸಗಾರರನ್ನು ವಿಶ್ವಾಸದಿಂದ ಕಾಣಿ. ಈ ಹಿಂದೆ ಶ್ರಮ ಪಟ್ಟಿದ್ದ ಕೆಲಸಗಳಿಗೆ ಈಗ ಸಂಭಾವನೆ ದೊರೆಯುತ್ತದೆ. ಹರಿತ ಆಯುಧಗಳನ್ನು ಉಪಯೋಗಿಸುವಾಗ ಎಚ್ಚರ ಇರಲಿ.

**
ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಸೋದರಿಯರ ವಿಚಾರದಲ್ಲಿ ಧಾರಾಳತನ ತೋರಿಸುವಿರಿ. ಸಂಪನ್ಮೂಲಗಳ ಅಭಿವೃದ್ಧಿಗಾಗಿ ಹೊಸ ಯೋಜನೆಗಳನ್ನು ರೂಪಿಸುವಿರಿ. ಸಣ್ಣಪುಟ್ಟ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿ. ಕುಟುಂಬ ಸದಸ್ಯರಲ್ಲಿ ಭಿನ್ನಾಭಿಪ್ರಾಯ ಮೂಡಬಹುದು. ವಿದ್ಯಾರ್ಥಿಗಳಿಗೆ ಅಭ್ಯಾಸದಲ್ಲಿ ತೊಡಕಾದರೂ ಗುರಿ ಸಾಧಿಸಲು ತೊಂದರೆ ಇಲ್ಲ. ಕೃಷಿ ಕಾರ್ಮಿಕರಿಗೆ ಉದ್ಯೋಗ ದೊರೆತು ಧನ ಸಂಪಾದನೆಯಾಗುತ್ತದೆ. ಸಂಬಂಧಿಕರಿಂದ ಸಂತಸದ ವಾರ್ತೆಗಳನ್ನು ಕೇಳುವಿರಿ. ವೃತ್ತಿಯಲ್ಲಿ ಅಭಿವೃದ್ಧಿ ಕಾಣಬಹುದು.

**
ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಕೆಲಸ ಕಾರ್ಯಗಳಲ್ಲಿ ಅಡ್ಡಿಗಳು ಉಂಟಾದರೂ ಎದೆಗುಂದದೆ ಯಶಸ್ಸು ಸಾಧಿಸುವಿರಿ. ದೂರದ ಸಂಬಂಧಿಗಳು ಮನೆಗೆ ಆಗಮಿಸುವ ನಿರೀಕ್ಷೆಯಿದೆ. ಮಿತ್ರರ ಸಹಕಾರದಿಂದ ಕೆಲವು ತೊಂದರೆಗಳು ನಿವಾರಣೆ ಆಗುತ್ತದೆ. ಉದ್ಯೋಗ ಅರಸುತ್ತಿರುವವರಿಗೆ ಉದ್ಯೋಗ ದೊರೆಯುತ್ತದೆ. ಅನಿರೀಕ್ಷಿತವಾಗಿ ಧನಸಹಾಯ ಸಿಗಲಿದೆ. ಸ್ತ್ರೀಯರು ನಡೆಸುವ ವ್ಯವಹಾರಗಳು ಅಭಿವೃದ್ಧಿ ಕಾಣುತ್ತವೆ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಯಶಸ್ಸು. ವಯಸ್ಕರಿಗೆ ತಾಯಿಯಿಂದ ಧನಸಹಾಯ ದೊರೆಯುತ್ತದೆ.

**
ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ನ್ಯಾಯಾಲಯದ ಕೆಲಸಗಳಲ್ಲಿ ಪ್ರಗತಿ. ಬಡ್ಡಿ ವ್ಯವಹಾರದವರಿಗೆ ಮಾನಹಾನಿಯ ಸಾಧ್ಯತೆ ಇದೆ. ಆದಾಯದಷ್ಟೇ ಖರ್ಚು. ಮನೆಯಲ್ಲಿ ಸಂತೋಷಕೂಟ ಏರ್ಪಡಿಸಲು ಮುಂದಾಗುವಿರಿ. ದಾಂಪತ್ಯ ಜೀವನದಲ್ಲಿ ಸಂತೋಷ. ನಿವೇಶನ ಖರೀದಿಗಾಗಿ ತಯಾರಿ ನಡೆಸುವಿರಿ. ಕೃಷಿ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಧನ ಗಳಿಕೆ ಹೆಚ್ಚಲಿದೆ. ಹಾಲಿನ ಉತ್ಪನ್ನಗಳನ್ನು ಉತ್ಪಾದಿಸುವವರಿಗೆ ಬೇಡಿಕೆ ಹೆಚ್ಚಲಿದೆ. ಜನ ನಾಯಕರಿಗೆ ಬಾಕಿ ಹಣ ಈಗ ಬರುತ್ತದೆ. ಆರೋಗ್ಯದ ಬಗ್ಗೆ ಹೆಚ್ಚಿನ ನಿಗಾ ಅಗತ್ಯ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.