ಗುರುವಾರ , ಮೇ 13, 2021
16 °C

ವಾರ ಭವಿಷ್ಯ: 18-4-2021 ರಿಂದ 24-4-2021 ರವರೆಗೆ

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಡಾ.ಎಂ.ಎನ್. ಲಕ್ಷ್ಮೀನರಸಿಂಹಸ್ವಾಮಿ, ಜ್ಯೋತಿಷ್ಯ ಪದ್ಮಭೂಷಣ
ಸಂಪರ್ಕ: 8197304680

**
ಮೇಷ ರಾಶಿ( ಅಶ್ವಿನಿ ಭರಣಿ ಕೃತಿಕ 1)
ದವಸಧಾನ್ಯಗಳ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಸಿ ಲಾಭ ಹೆಚ್ಚುತ್ತದೆ. ಮಿತ್ರರೊಡನೆ ಮಾಡುವ ವ್ಯವಹಾರಗಳಲ್ಲಿ ಎಚ್ಚರಿಕೆ ಇರಲಿ, ಅದರಲ್ಲೂ ಬಾಯಿ ಮಾತಿನ ವ್ಯವಹಾರಗಳಲ್ಲಿ ಹಣ ತೊಡಗಿಸುವುದು ಬೇಡ. ಬ್ಯಾಂಕ್ ಸಾಲ ಪಡೆಯುವಾಗ ಸರಿಯಾಗಿ ದಾಖಲೆಗಳನ್ನು ಪರಿಶೀಲಿಸಿರಿ ಇಲ್ಲವಾದಲ್ಲಿ ವಂಚನೆಗೆ ಒಳಗಾಗುವ ಸಾಧ್ಯತೆಗಳಿವೆ. ಆದಾಯ ಮತ್ತು ವೆಚ್ಚಗಳನ್ನು ಸರಿಯಾಗಿ ಹೊಂದಾಣಿಕೆ ಮಾಡಿಕೊಳ್ಳಿ. ಎಲ್ಲಾ ಕೆಲಸಗಳನ್ನು ಒಟ್ಟಿಗೆ ಆರಂಭಿಸುವ ಬದಲು ಹಂತಹಂತವಾಗಿ ಆರಂಭಿಸಿರಿ. ದೂರ ಪ್ರಯಾಣ ಅಷ್ಟು ಒಳಿತಲ್ಲ. ವಾರಾಂತ್ಯಕ್ಕೆ ಹಣಕಾಸಿನ ಸ್ಥಿತಿಯು ಉತ್ತಮಗೊಳ್ಳುತ್ತದೆ.

**
ವೃಷಭರಾಶಿ(ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ಆತ್ಮೀಯರೊಡನೆ ಸಮಾಗಮ ಆಗಲಿದೆ. ಆಭರಣ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚುತ್ತದೆ. ಹಿರಿಯ ಅಧಿಕಾರಿಗಳಿಗೆ ರಾಜಕೀಯ ಪ್ರೇರಿತವಾದ ವರ್ಗಾವಣೆಗಳು ಇರುತ್ತವೆ. ಸ್ವಂತ ಆರೋಗ್ಯದಲ್ಲಿ ಸ್ವಲ್ಪ ವ್ಯತ್ಯಾಸಗಳಾಗಬಹುದು. ಪ್ರೀತಿ ಪ್ರೇಮದ ಬಗ್ಗೆ ತಲೆ ಕೆಡಿಸಿಕೊಳ್ಳದಿರುವುದು ಉತ್ತಮ. ನೂತನ ಸ್ನೇಹಿತರ ವಿಷಯದಲ್ಲಿ ಸ್ವಲ್ಪ ಎಚ್ಚರವಾಗಿರಿ. ಬಂದುವರ್ಗದಿಂದ ಸಾಕಷ್ಟು ಸಹಾಯ ದೊರೆಯುತ್ತವೆ. ವಿದೇಶಿ ವ್ಯವಹಾರಗಳನ್ನು ಮಾಡುತ್ತಿರುವವರು ತಮ್ಮ ವ್ಯವಹಾರದ ದಾಖಲೆಗಳನ್ನು ಸರಿಯಾಗಿ ಇಟ್ಟುಕೊಳ್ಳುವುದು ಅತಿ ಅಗತ್ಯ.

*
ಮಿಥುನ ರಾಶಿ(ಮೃಗಶಿರಾ 3.4 ಆರಿದ್ರಾ ಪುರ‍್ವಸು 1 2 3)
ಹೊಸ ವ್ಯವಹಾರಗಳಲ್ಲಿ ಪಾಲುದಾರರೊಂದಿಗೆ ಸಮಾಲೋಚನೆಗಳು ಅಗತ್ಯ, ಇಲ್ಲವಾದಲ್ಲಿ ವ್ಯವಹಾರದಲ್ಲಿ ಹೊಸ ಕಿರಿಕಿರಿಗಳು ಆಗಬಹುದು. ಗೃಹ ನಿರ್ಮಾಣ ಕಾರ್ಯದಲ್ಲಿ ಸಂಬಂಧಿಗಳಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ನ್ಯಾಯಾಲಯದಲ್ಲಿನ ದಾವೆಗಳು ನಿಮ್ಮ ಪರವಾಗಿ ಆಗತೊಡಗುತ್ತವೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಅನಿಶ್ಚಿತತೆಯನ್ನು ಕಾಣಬಹುದು. ಹಣದ ಒಳಹರಿವು ಸಾಕಷ್ಟಿರುತ್ತದೆ. ಕೃಷಿ ಉತ್ಪನ್ನಗಳನ್ನು ಮಾರುವವರಿಗೆ ಲಾಭ ಹೆಚ್ಚುತ್ತದೆ. ರೈತರಿಗೆ ಸಿಗಬೇಕಾದ ಸಹಾಯಧನಗಳು ಸಿಗುತ್ತವೆ. ಪಿತ್ರಾರ್ಜಿತ ಆಸ್ತಿಗಳ ಬಗ್ಗೆ ಆಸಕ್ತಿ ಹೊಂದಿರುವವರಿಗೆ ಶುಭ ಸೂಚನೆ ಸಿಗುತ್ತದೆ.

*
ಕಟಕ ರಾಶಿ( ಪುನರ್ವಸು 4 ಪುಷ್ಯ ಆಶ್ಲೇಷ)
ವ್ಯಾಪಾರ-ವ್ಯವಹಾರಗಳಲ್ಲಿ ವಹಿವಾಟು ಹೆಚ್ಚುತ್ತದೆ. ಉದ್ಯೋಗದಲ್ಲಿದ್ದ ವೃತ್ತಿ ಅಭದ್ರತೆಯು ದೂರವಾಗುತ್ತದೆ. ಸಂಸಾರದಲ್ಲಿ ದಂಪತಿಗಳ ಮಧ್ಯೆ ಕಾವೇರಿದ ಮಾತುಗಳು ಆಗಬಹುದು, ಶಾಂತವಾಗಿರುವುದು ಉತ್ತಮ. ಆಧ್ಯಾತ್ಮಿಕ ವಿಷಯಗಳಲ್ಲಿ ಆಸಕ್ತಿಯನ್ನು ಹೊಂದಿರುವವರಿಗೆ ಉತ್ತಮ ಗುರುಗಳು ದೊರೆಯುವರು. ಹಿರಿಯರ ಆರೋಗ್ಯದಲ್ಲಿ ಸುಧಾರಣೆಯನ್ನು ಕಾಣಬಹುದು. ವಿದೇಶದಲ್ಲಿ ವೃತ್ತಿಗಾಗಿ ಹುಡುಕಾಟ ಮಾಡುತ್ತಿದ್ದವರಿಗೆ ವೃತ್ತಿ ದೊರೆಯುತ್ತದೆ. ಹಳೆಯ ಬಾಕಿ ಹಣ ಈಗ ವಾಪಸ್ಸು ಬರಬಹುದು. ಉಪನ್ಯಾಸಕಾರರಿಗೆ ಉತ್ತಮ ವೇದಿಕೆಯಲ್ಲಿ ಉಪನ್ಯಾಸ ಕೊಡುವ ಭಾಗ್ಯ ದೊರೆಯುತ್ತದೆ.

*
ಸಿಂಹ ರಾಶಿ ( ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ದೈನಂದಿನ ಚಟುವಟಿಕೆಗಳಲ್ಲಿ ಬಹಳ ಉತ್ಸಾಹವನ್ನು ಕಾಣಬಹುದು. ದೇಹದಲ್ಲಿನ ಪಿತ್ತ ಸಮಸ್ಯೆಯನ್ನು ನಿಯಂತ್ರಣ ಮಾಡಿಕೊಳ್ಳುವುದು ಉತ್ತಮ. ಹಿರಿಯ ರಾಜಕೀಯ ನಾಯಕರುಗಳಿಗೆ ಉನ್ನತ ರಾಜಕೀಯ ಹುದ್ದೆಯನ್ನು ಅಲಂಕರಿಸುವ ಭಾಗ್ಯವಿದೆ. ಧನದ ಒಳಹರಿವಿನಲ್ಲಿ ಏರಿಕೆಯನ್ನು ಕಾಣಬಹುದು. ತಂದೆಯಿಂದ ಸಾಕಷ್ಟು ಧನಸಹಾಯಗಳು ಒದಗಿಬರುತ್ತವೆ. ಕೃಷಿ ಚಟುವಟಿಕೆಗಳಲ್ಲಿ ಚೇತರಿಕೆ ಕಾಣಬಹುದು. ನೆರೆಹೊರೆಯವರೊಂದಿಗೆ ಬಾಂಧವ್ಯ ವೃದ್ಧಿಯಾಗುವುದು. ಆಸೆಪಟ್ಟ ಆಭರಣಗಳ ಖರೀದಿ ಮಾಡುವ ಸಂದರ್ಭವಿದೆ. ಸಂಗಾತಿ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು.

*
ಕನ್ಯಾ ರಾಶಿ( ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ಒಂದು ರೀತಿ ಆಲಸಿ ಮನೋಭಾವ ನಿಮ್ಮನ್ನು ಕಾಡುತ್ತದೆ. ವ್ಯವಹಾರದಲ್ಲಿ ಗುಂಪುಗಾರಿಕೆಯಿಂದಾಗಿ ಧನಹಾನಿ ಆಗಬಹುದು. ಅನ್ಯರ ಮೇಲೆ ವಿನಾಕಾರಣ ಸಂಶಯಪಡುವುದು ಅಷ್ಟು ಒಳಿತಲ್ಲ. ಮಕ್ಕಳ ಅಭಿವೃದ್ಧಿಯಲ್ಲಿ ಒಡಕು ಮಾತುಗಳು ಕೇಳಿಬರಬಹುದು. ಯಾರೋ ನಮಗೆ ಸಹಾಯ ಮಾಡುವರೆಂದು ನಂಬಿ ಕುಳಿತುಕೊಳ್ಳುವುದು ಅಷ್ಟು ಸಮಂಜಸವಲ್ಲ. ಆಸ್ತಿಗೆ ಸಂಬಂಧಿಸಿದ ವಿಚಾರಗಳಲ್ಲಿ ಹೊಂದಾಣಿಕೆಯನ್ನು ಮಾಡಿಕೊಳ್ಳುವಿರಿ. ಕೆಲವು ಸರ್ಕಾರಿ ಉದ್ಯೋಗಿಗಳಿಗೆ ಮೇಲಧಿಕಾರಿಗಳಿಂದ ಕಿರಿಕಿರಿಯಾಗಬಹುದು. ಕಳೆದು ಹೋಗಿದ್ದ ವಸ್ತುವೊಂದು ದೊರಕಿ ಮನಸ್ಸಿಗೆ ಸಂತಸವಾಗುವುದು. ಹಿರಿಯರ ಆರೋಗ್ಯದ ಬಗ್ಗೆ ವಿಶೇಷ ಗಮನವನ್ನು ಕೊಡಬೇಕಾದೀತು.

*
ತುಲಾ ರಾಶಿ( ಚಿತ್ತಾ 3 4 ಸ್ವಾತಿ ವಿಶಾಖ 1 2 3)
ಮಕ್ಕಳಿಂದ ಅಗೌರವವನ್ನು ಕಾಣಬೇಕಾದೀತು. ರಾಜಕೀಯ ನಾಯಕರು ಬಾಯಿ ತಪ್ಪಿ ಆಡಿದ ಮಾತಿನಿಂದ ಮುಜುಗರಕ್ಕೆ ಒಳಗಾಗುವರು. ವಿದ್ಯಾರ್ಥಿಗಳಿಗೆ ಕಲಿಕೆಗೆ ಉತ್ತಮ ಅವಕಾಶಗಳು ಇರುತ್ತದೆ. ಇಲಾಖೆಯಲ್ಲಿನ ಬಡ್ತಿಯ ಪರೀಕ್ಷೆಗಳನ್ನು ತೆಗೆದುಕೊಳ್ಳುವವರಿಗೆ ಉತ್ತಮ ಫಲಿತಾಂಶವಿರುತ್ತದೆ. ಬಹಳ ದೂರ ಒಬ್ಬರೇ ವಾಹನ ಚಲಾಯಿಸುವುದು ಅಷ್ಟು ಒಳಿತಲ್ಲ. ಹಿಂದಿನ ನಿಮ್ಮ ವೈಭವವನ್ನು ನೆನೆದು ಚಿಂತಿಸುವುದರ ಬದಲು ಇಂದಿನ ಜೀವನವನ್ನು ಸವಿಯುವುದು ಉತ್ತಮ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಸಾಮಾಜಿಕ ಕೆಲಸ ಮಾಡುವವರ ವಿರುದ್ಧ ವಿರೋಧಿಗಳು ಹುಟ್ಟಿಕೊಳ್ಳುವರು.

*
ವೃಶ್ಚಿಕ ರಾಶಿ( ವಿಶಾಖಾ 4 ಅನುರಾಧ ಜೇಷ್ಠ)
ಶತ್ರುಗಳನ್ನು ಮಣಿಸಲು ನೀವು ಹೂಡುವ ತಂತ್ರಗಳು ಸಾಕಷ್ಟು ಫಲ ಕೊಡುತ್ತವೆ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. ನಿಮ್ಮ ವಿಶ್ವಾಸಿಗಳಿಗೆ ಅಗತ್ಯವಾಗಿ ಸಹಾಯ ಮಾಡಲೇಬೇಕಾದ ಸಂದರ್ಭ ಬರುತ್ತದೆ. ನಿಮ್ಮಿಂದ ಸಹಾಯ ಪಡೆದ ನಿಮ್ಮ ಬಂಧುಗಳು ಈಗ ನಿಮ್ಮ ವಿರುದ್ಧ ತಿರುಗಿಬೀಳಬಹುದು ಎಚ್ಚರ. ಎಂಜಿನಿಯರಿಂಗ್ ತಂತ್ರಜ್ಞರಿಗೆ ಅವರ ಸಾಧನೆಗಾಗಿ ಪ್ರಶಸ್ತಿ ದೊರೆಯುವ ಸಂದರ್ಭವಿದೆ. ನಿಮ್ಮ ಹೆಸರನ್ನು ಇತರರು ದುರ್ಬಳಕೆ ಮಾಡಿಕೊಳ್ಳಬಹುದು. ರಾಜಕೀಯ ನಾಯಕರುಗಳು ತಮ್ಮ ಹೊಗಳುಭಟ್ಟರಿಂದ ದೂರವಿರುವುದು ಉತ್ತಮ. ಹಿರಿಯರ ಆರೋಗ್ಯದಲ್ಲಿ ಸಾಕಷ್ಟು ಸುಧಾರಣೆಯನ್ನು ಕಾಣಬಹುದು.

*
ಧನಸ್ಸು ರಾಶಿ( ಮೂಲ ಪೂರ್ವಷಾಢ ಉತ್ತರಾಷಾಢ 1 )
ಮಕ್ಕಳ ವಿದ್ಯಾಭ್ಯಾಸಕ್ಕೆ ಹಣಕಾಸಿನ ವ್ಯವಸ್ಥೆಯನ್ನು ಮಾಡಬೇಕಾಗಬಹುದು. ಸಾಲ ಕೊಟ್ಟವರು ಎಡಬಿಡದೆ ಬಂದು ಕಾಡಬಹುದು. ಉದ್ಯಮಿಗಳು ತಮ್ಮ ಅಧೀನ ನೌಕರರೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವುದು ಒಳ್ಳೆಯದು. ಎಲೆಕ್ಟ್ರಿಕಲ್ ಗುತ್ತಿಗೆದಾರರಿಗೆ ಹೊಸ ಗುತ್ತಿಗೆಗಳು ದೊರೆಯುವ ಸಾಧ್ಯತೆಗಳಿವೆ. ಹಿರಿಯರು, ಕಿರಿಯರ ಮೇಲೆ ದ್ವೇಷಗಳನ್ನು ಸಾಧಿಸದೆ ಇರುವುದು ಒಳ್ಳೆಯದು ಹಾಗೂ ಕಿರಿಯರೊಡನೆ ಉತ್ತಮ ಸಂಬಂಧ ಹೊಂದುವುದು ಅವರಿಗೆ ಒಳ್ಳೆಯದು. ಮಹಿಳೆಯರ ಸಾಮಾಜಿಕ ಕೆಲಸಗಳಿಗೆ ಅವರ ಮನೆಯವರಿಂದ ಉತ್ತಮ ಸಹಕಾರ ದೊರೆಯುತ್ತದೆ.

*
ಮಕರ ರಾಶಿ( ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಉದ್ಯೋಗದ ನಿಮಿತ್ತ ದೂರದೂರಿಗೆ ಪ್ರಯಾಣ ಮಾಡಬೇಕಾಗಬಹುದು, ಇದಕ್ಕೆ ಬೇಕಾದ ಅನುಕೂಲತೆಗಳು ಒದಗಿಬರುತ್ತವೆ. ಮಹಿಳೆಯರಿಗೆ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶಗಳು ಸಹ ದೊರೆಯುತ್ತವೆ. ಬೇರೆಯವರ ಥಳುಕಿನ ಮಾತಿಗೆ ಮರುಳಾಗಿ ದೊಡ್ಡ ಮೊತ್ತದ ಬಂಡವಾಳ ಮಾಡಬೇಡಿರಿ. ಹಿರಿಯರ ಸಲಹೆಗಳು ನಿಮಗೆ ಅನುಕೂಲವನ್ನು ಉಂಟುಮಾಡುತ್ತವೆ. ಹಿರಿಯರ ಆರೋಗ್ಯದ ಕಡೆ ಗಮನ ಹರಿಸಿರಿ, ಅದರಲ್ಲೂ ಶಸ್ತ್ರಚಿಕಿತ್ಸೆ ಆಗಿರುವ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಕೊಡಿರಿ. ನಿಮ್ಮ ವೈಯಕ್ತಿಕ ಗೌರವದ ಕಡೆಗೆ ಸರಿಯಾಗಿ ಗಮನ ಕೊಡಿರಿ. ಹಣದ ಒಳಹರಿವು ಅಗತ್ಯಕ್ಕಿಂತ ತುಸು ಹೆಚ್ಚಿರುತ್ತದೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಒರಗೆ ಹಚ್ಚಬಹುದು.

*
ಕುಂಭ ರಾಶಿ( ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ಬಂಧು-ಮಿತ್ರರೊಂದಿಗೆ ದೇವತಾ ಕಾರ್ಯಗಳಲ್ಲಿ ಪಾಲ್ಗೊಳ್ಳುವ ಅವಕಾಶಗಳಿವೆ. ಆಹಾರ ವ್ಯತ್ಯಾಸದಿಂದ ವಾಯುಪ್ರಕೋಪ ಕಾಡಬಹುದು. ವ್ಯವಹಾರ ನಿಮಿತ್ತ ಪಾಲುದಾರರೊಂದಿಗೆ ಸಾಕಷ್ಟು ಚರ್ಚೆಗಳನ್ನು ಮಾಡಿ ಅಂತಿಮವಾಗಿ ನಿಮ್ಮ ಅಭಿಪ್ರಾಯವನ್ನು ತಿಳಿಸಿ ಎಲ್ಲರ ಮನಗೆಲ್ಲುವಿರಿ. ಬಂಧುಗಳು ಇಲ್ಲಸಲ್ಲದ ವ್ಯವಹಾರಗಳಿಗೆ ನಿಮ್ಮನ್ನು ಸಿಲುಕಿಸಲು ಪ್ರಯತ್ನ ಮಾಡುವರು, ಎಚ್ಚರವಾಗಿರಿ. ಈ ವಾರ ಸಾಲ ಕೊಡುವುದು ಅಷ್ಟು ಉಚಿತವಲ್ಲ, ಅದರಲ್ಲೂ ಬಂಧುಗಳ ನಡುವೆ ಹಣಕಾಸಿನ ವ್ಯವಹಾರ ಬೇಡವೇ ಬೇಡ. ಆಸ್ತಿಯ ವಿವಾದದ ಮಧ್ಯಸ್ಥಿಕೆಯನ್ನು ವಹಿಸಲು ಕರೆ ಬರುವುದು, ಇದರಲ್ಲಿ ಪಾಲ್ಗೊಳ್ಳುವುದು ಖಂಡಿತ ಬೇಡ. ಧನಾದಾಯ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ.

*
ಮೀನ ರಾಶಿ( ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಸಂಸಾರ ಸಮೇತ ವಿಹಾರಕ್ಕಾಗಿ ಹೋಗಿ ಬರುವಿರಿ. ವಾಹನ ಮಾರಾಟಗಾರರಿಗೆ ವ್ಯವಹಾರ ಹೆಚ್ಚಾಗುವುದು. ಕಂಪ್ಯೂಟರ್ ಬಿಡಿಭಾಗಗಳನ್ನು ತಯಾರಿಸುವವರಿಗೆ ಮತ್ತು ಮಾರುವವರಿಗೆ ವ್ಯವಹಾರದಲ್ಲಿ ಅಭಿವೃದ್ಧಿಯಾಗಿ ಆದಾಯ ಹೆಚ್ಚುವುದು. ಧನಾದಾಯ ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ಕೆಲವು ನೇತ್ರ ತಜ್ಞರಿಗೆ ಬೇಡಿಕೆ ಹೆಚ್ಚಾಗಿ ಕೈತುಂಬಾ ಕೆಲಸವಿರುತ್ತದೆ. ಬೆಳ್ಳಿ ವ್ಯಾಪಾರಿಗಳಿಗೆ ವ್ಯವಹಾರ ವೃದ್ಧಿಸುತ್ತದೆ. ದಿನಸಿ ಸಗಟು ವ್ಯಾಪಾರಿಗಳು ತಮ್ಮ ನಿರೀಕ್ಷಿತ ದಾಸ್ತಾನುಗಳನ್ನು ಮಾಡಿಕೊಳ್ಳಬಹುದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.