ಶನಿವಾರ, ಮಾರ್ಚ್ 25, 2023
23 °C

ವಾರ ಭವಿಷ್ಯ | 23-10-2022 ರಿಂದ 29-10-2022ರವರೆಗೆ

ಎಂ. ಎನ್. ಲಕ್ಷ್ಮೀನರಸಿಂಹಸ್ವಾಮಿ Updated:

ಅಕ್ಷರ ಗಾತ್ರ : | |

ಮೇಷ ರಾಶಿ (ಅಶ್ವಿನಿ ಭರಣಿ ಕೃತಿಕ 1)
ಪ್ರತಿಭೆಗೆ ತಕ್ಕ ಅವಕಾಶಗಳು ಒದಗಿಬರುತ್ತವೆ. ವೈಯಕ್ತಿಕ ಕೆಲಸಗಳ ಬಗ್ಗೆ ಹೆಚ್ಚು ಗಮನಹರಿಸಿರಿ. ಕ್ರಯ ವಿಕ್ರಯ ಒಪ್ಪಂದದ ವ್ಯವಹಾರಗಳಿಂದ ಲಾಭ ಹೆಚ್ಚಾಗಿ ಬರುತ್ತದೆ. ಯಂತ್ರೋಪಕರಣಗಳನ್ನು ಬಳಸಿ ಮಾಡುವ ಕೆಲಸಗಳಲ್ಲಿ ಹೆಚ್ಚಿನ ಪ್ರಗತಿ ಇರುತ್ತದೆ. ಮೇಲಧಿಕಾರಿಗಳು ಸಹೋದ್ಯೋಗಿಗಳೊಡನೆ ಉತ್ತಮ ಹೊಂದಾಣಿಕೆ ಮಾಡಿಕೊಳ್ಳುವುದು ಅತ್ಯಗತ್ಯ. ಬಟ್ಟೆ ವ್ಯಾಪಾರಸ್ಥರಿಗೆ ಉತ್ತಮ ವ್ಯವಹಾರವಿರುತ್ತದೆ. ವಾಹನ ದುರಸ್ತಿ ಮಾಡುವವರಿಗೆ ಹೆಚ್ಚು ಕೆಲಸ ದೊರೆತು ಆದಾಯ ಅಧಿಕವಾಗಿರುತ್ತದೆ. ಲೋಹದ ಪ್ರತಿಮೆಗಳನ್ನು ಮಾಡಿ ಮಾರುವವರ ವ್ಯವಹಾರ ವಿಸ್ತರಣೆಯಾಗುತ್ತದೆ. ಹಣದ ಒಳಹರಿವು ತಕ್ಕಮಟ್ಟಿಗೆ ಇರುತ್ತದೆ. ತಂದೆಯಿಂದ ವ್ಯವಹಾರದ ಒಳಗುಟ್ಟುಗಳನ್ನು ತಿಳಿದುಕೊಳ್ಳಲು ಅವಕಾಶ ದೊರೆಯುತ್ತದೆ.

ವೃಷಭ ರಾಶಿ (ಕೃತಿಕಾ2 3 4 ರೋಹಿಣಿ ಮೃಗಶಿರಾ1 2)
ವ್ಯವಹಾರಗಳಲ್ಲಿ ಬಂಧುಗಳ ನಡುವೆ ಭಿನ್ನಾಭಿಪ್ರಾಯವು ತಲೆದೋರುವ ಸಾಧ್ಯತೆಯಿದೆ. ಅನಾರೋಗ್ಯ ಸಮಸ್ಯೆ ಇದ್ದವರಿಗೆ ಸ್ವಲ್ಪ ಸುಧಾರಣೆ ಕಂಡುಬರುತ್ತದೆ. ಹೆಚ್ಚಿನ ಮೊತ್ತದ ವಸ್ತುಗಳನ್ನು ಖರೀದಿ ಮಾಡುವಾಗ ಎಚ್ಚರವಿರಲಿ. ಕೆಲವೊಂದು ಕೆಲಸ ಕಾರ್ಯಗಳು ಸುಸೂತ್ರವಾಗಿ ನಡೆಯುತ್ತದೆ. ವಿದ್ಯಾರ್ಥಿಗಳು ಪಠ್ಯೇತರ ಚಟುವಟಿಕೆಗಳನ್ನು ಕಡಿಮೆ ಮಾಡಿಕೊಂಡು ಅಧ್ಯಯನದತ್ತ ಗಮನಹರಿಸುವುದು ಒಳ್ಳೆಯದು. ಸ್ವಂತ ವ್ಯವಹಾರದಲ್ಲಿ ಜಾಣತನವನ್ನು ತೋರಿ ಲಾಭ ಹೆಚ್ಚು ಮಾಡಿಕೊಳ್ಳುವಿರಿ. ಕೆಲವು ಅಧಿಕಾರಿಗಳಿಂದ ಸ್ವಲ್ಪ ಕಾನೂನಿನ ತೊಂದರೆ ಬರಬಹುದು.  ವಿದೇಶಿ ಯಂತ್ರಗಳ ಬಿಡಿಭಾಗಗಳನ್ನು ತರಿಸಿ ಮಾರಾಟ ಮಾಡುವವರಿಗೆ ವ್ಯವಹಾರ ಹೆಚ್ಚಾಗುತ್ತದೆ. ತಾಯಿಯ ಕಡೆಯಿಂದ ಧನಸಹಾಯ ಹರಿದು ಬರಬಹುದು.

ಮಿಥುನ ರಾಶಿ (ಮೃಗಶಿರಾ 3.4 ಆರಿದ್ರಾ ಪುನರ್ವಸು 1 2 3)
ಕೃಷಿಕರಿಗೆ ಆದಾಯದಲ್ಲಿ ಸ್ವಲ್ಪ ಅನಿಶ್ಚಿತತೆ ಎದುರಾಗಬಹುದು. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಮಧ್ಯಸ್ಥಿಕೆ ವಹಿಸುವುದು, ಜಾಮೀನು ಕೊಡುವುದು ಬಹಳ ದುಬಾರಿಯಾಗಬಹುದು. ವಿಶ್ವಾಸಪೂರ್ವಕ ಮಾತುಗಳಿಂದಾಗಿ ಎಲ್ಲರಲ್ಲೂ ಸ್ನೇಹ ಸಂಪಾದನೆ ಮಾಡುವಿರಿ. ಹೀಗಾಗಿ ಎಲ್ಲರ ಸಹಕಾರ ನಿಮಗೆ ದೊರೆತು ಕೆಲಸದಲ್ಲಿ ಯಶಸ್ಸನ್ನು ಕಾಣುವಿರಿ. ವಿದ್ಯುತ್ ಗುತ್ತಿಗೆದಾರರಿಗೆ ಬರಬೇಕಾಗಿದ್ದ ಹಣ ಸ್ವಲ್ಪ ನಿಧಾನವಾಗಬಹುದು. ಕೃಷಿಕಾರ್ಯದಲ್ಲಿ ತೊಡಗಿಸಿಕೊಂಡಿರುವವರಿಗೆ ಲಾಭವಿಲ್ಲದಿದ್ದರೂ ನಷ್ಟವಿಲ್ಲ. ಸರ್ಕಾರಿ ಮಟ್ಟದ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ. ಸಂಗಾತಿ ಕಡೆಯವರಿಂದ ಮಾತಿನ ಕಿರಿಕಿರಿ ಉಂಟಾಗಬಹುದು. ಹಿರಿಯರಿಂದ ಅಮೂಲ್ಯ ದಾಖಲೆಗಳು ನಿಮಗೆ ಹಸ್ತಾಂತರ ಆಗಬಹುದು.

ಕಟಕ ರಾಶಿ (ಪುನರ್ವಸು 4 ಪುಷ್ಯ ಆಶ್ಲೇಷ)
ಕೆಲವು ಮಹಿಳೆಯರಿಗೆ ಸ್ಥಾನಮಾನಗಳು ಲಭ್ಯವಾಗುತ್ತವೆ. ನಿಮ್ಮ ಲಾಭದ ಲೆಕ್ಕಾಚಾರಗಳು ಸ್ವಲ್ಪ ವ್ಯತ್ಯಾಸವಾಗಿ ಲಾಭದಲ್ಲಿ ಕಡಿಮೆಯಾಗಬಹುದು. ದೈನಂದಿನ ಕೆಲಸಗಳಲ್ಲಿ ಆಸಕ್ತಿ ಹೆಚ್ಚುತ್ತದೆ. ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸವನ್ನು ಕಾಣಬಹುದು. ಕೆಲಸ ಮಾಡುವ ಸ್ಥಳದಲ್ಲಿ ನಿಮ್ಮ ಒಣಪ್ರತಿಷ್ಠೆಯಿಂದಾಗಿ ವಿರೋಧವನ್ನು ಎದುರಿಸಬೇಕಾಗಬಹುದು. ಸೂಕ್ಷ್ಮ ನೇಯ್ಗೆಯನ್ನು ಮಾಡುವ ನೇಕಾರರಿಗೆ ಬೇಡಿಕೆ ಹೆಚ್ಚಾಗಿ ಕೈತುಂಬಾ ಕೆಲಸಬಂದು ಧನ ಸಂಪಾದನೆಯಾಗುತ್ತದೆ. ಕಟ್ಟಡ ನಿರ್ಮಾಣ ಮಾಡುವ ಕಾರ್ಮಿಕರಿಗೆ ಸಾಕಷ್ಟು ಕೆಲಸಗಳು ದೊರೆಯುತ್ತವೆ.  ಕೆಲವು ಗುತ್ತಿಗೆದಾರರಿಗೆ ಸರ್ಕಾರದಿಂದ ಬರಬೇಕಾಗಿದ್ದ ಬಾಕಿ ಹಣ ಈಗ ಬರುವ ಸಾಧ್ಯತೆ ಇದೆ. ಸರ್ಕಾರಿ ಸಾಲ ಪಡೆದು ಉಳಿದ ಕೈ ಸಾಲಗಳನ್ನು ತೀರಿಸಿಕೊಳ್ಳಬಹುದು.

ಸಿಂಹ ರಾಶಿ (ಮಖ ಪೂರ್ವಪಲ್ಗುಣಿ ಉತ್ತರ ಫಲ್ಗುಣಿ 1)
ವ್ಯಾಪಾರ-ವ್ಯವಹಾರದಲ್ಲಿ ಮಹತ್ವದ ಬೆಳವಣಿಗೆಗಳು ನಡೆದು ನಿಮಗೆ ವ್ಯಾಪಾರದಲ್ಲಿ ಸೂಕ್ತ ಸ್ಥಾನ ಸಿಕ್ಕು ಲಾಭ ಪಡೆಯುವಿರಿ. ಸಾಮಾಜಿಕ ಕ್ಷೇತ್ರದಲ್ಲಿರುವವರಿಗೆ ಕೀರ್ತಿ ಯಶಸ್ಸು ದೊರೆಯುತ್ತದೆ. ವೈಯಕ್ತಿಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವಿರಿ. ಉದ್ಯೋಗದಲ್ಲಿ ನಿಮ್ಮ ವಿಚಾರದಲ್ಲಿ ಸಂತಸದ ಸುದ್ದಿಯೊಂದನ್ನು ಕೇಳುವಿರಿ. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಮಹಿಳಾ ನೌಕರರಿಗೆ ಉದ್ಯೋಗದಲ್ಲಿ ಸ್ವಲ್ಪ ಕಿರಿಕಿರಿಯಾಗುವ ಸಾಧ್ಯತೆಗಳಿವೆ. ಮಾನಸಿಕ ಚಿಂತನೆಗಳು ದೂರವಾಗಿ ಆತ್ಮಸ್ಥೈರ್ಯ ಹೆಚ್ಚಾಗುತ್ತದೆ. ಆತ್ಮೀಯ ಸಲಹೆಗಳು ನಿಮಗೆ ಸೂಕ್ತ ಕಾಲದಲ್ಲಿ ಉಪಯೋಗಕ್ಕೆ ಬರುತ್ತವೆ. ವಿದ್ಯಾರ್ಥಿಗಳಿಗೆ ಉತ್ತಮ ಅಧ್ಯಯನದ ಕಾಲ. ಸ್ಥಿರಾಸ್ತಿಯಲ್ಲಿದ್ದ ತೊಂದರೆಗಳು ಈಗ ಸರಿಯಾಗುತ್ತವೆ.

ಕನ್ಯಾ ರಾಶಿ (ಉತ್ತರ ಫಲ್ಗುಣಿ 2 3 4 ಹಸ್ತಾ ಚಿತ್ತಾ 1.2)
ವ್ಯವಹಾರದಲ್ಲಿ ಮುನ್ನಡೆಯನ್ನು ಸಾಧಿಸುವಿರಿ. ಕೆಲವೊಂದು ಕೆಲಸಗಳು ನಿಮಗೆ ಆಪಾದನೆಯನ್ನು ತರಬಹುದು. ಲೇವಾದೇವಿ ನಡೆಸುವವರಿಗೆ ಮಧ್ಯಮ ಫಲಿತಾಂಶ ಇರುತ್ತದೆ. ನೂತನ ವಾಹನ ಕೊಳ್ಳುವ ಯೋಗವಿದೆ. ದ್ರವ್ಯಾನುಕೂಲತೆ ನಿಮ್ಮ ನಿರೀಕ್ಷೆಯಂತೆ ಇರುತ್ತದೆ. ವ್ಯವಹಾರದಲ್ಲಿ ಬುದ್ಧಿವಂತಿಕೆಯಿಂದ ಸಾಕಷ್ಟು ಹಣ ಉಳಿಸುವಿರಿ. ಕಚೇರಿಯ ಆಂತರಿಕ ಸಮಸ್ಯೆಗಳಿಂದ ಮುಕ್ತಿಯನ್ನು ಹೊಂದುವಿರಿ. ಬೇರೆಯವರ ಔದಾರ್ಯವನ್ನು ದುರುಪಯೋಗ ಮಾಡಿಕೊಳ್ಳಲು ಹೋಗಿ ಮುಜುಗರಕ್ಕೆ ಸಿಲುಕುವಿರಿ. ಕುಶಲಕರ್ಮಿಗಳಿಗೆ ಹೊಸ ಅವಕಾಶಗಳು ತೆರೆದುಕೊಳ್ಳುತ್ತವೆ. ಸರ್ಕಾರಿ ಮಟ್ಟದ ಸಹಾಯಧನಗಳು ಖಂಡಿತಾ ಸಿಗುತ್ತವೆ. ಕೆಲವೊಂದು ಸಾಲಗಳನ್ನು ತೀರಿಸಿಕೊಳ್ಳಲು ಉತ್ತಮ ಅವಕಾಶವಿದೆ.

ತುಲಾ ರಾಶಿ (ಚಿತ್ತಾ 3 4 ಸ್ವಾತಿ ವಿಶಾಖ 1 2 3)
ನ್ಯಾಯಾಲಯದ ತೀರ್ಪುಗಳು ಮುಂದೂಡಿಕೆಯಾಗುವ ಸಾಧ್ಯತೆ ಇದೆ. ಸಹನೆಯಿಂದ ಇದ್ದರೆ ಒಳ್ಳೆಯ ಫಲಿತಾಂಶವನ್ನು ನಿರೀಕ್ಷಿಸಬಹುದು. ಕೃಷಿಕರಿಗೆ ಆದಾಯ ಹೆಚ್ಚುತ್ತದೆ. ಅವರ ಬೆಳೆಗಳಿಗೆ ಉತ್ತಮ ಬೆಲೆ ದೊರೆತು ಸಂತಸಪಡುವರು. ಬಂಧುಗಳೊಡನೆ ನಿಮ್ಮ ಸಂಬಂಧವನ್ನು ಸುಧಾರಿಸಿಕೊಳ್ಳುವುದು ನಿಮಗೆ ಒಳ್ಳೆಯದು. ನೀವು ಇಷ್ಟಪಟ್ಟ ನಿವೇಶನವನ್ನು ಈಗ ಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಸಾಧನೆ ಮಾಡಲು ಉತ್ತಮ ಅವಕಾಶ ದೊರೆಯುತ್ತದೆ. ಮೂತ್ರಕೋಶಕ್ಕೆ ಸಂಬಂಧಪಟ್ಟ ಕಾಯಿಲೆ ಇರುವವರು ಎಚ್ಚರವಹಿಸಿರಿ. ಸಂಸಾರದಲ್ಲಿ ಕಠಿಣ ಮಾತುಗಳು ಕೇಳಿಬರಬಹುದು. ವಿದೇಶಿ ಪ್ರಯಾಣ ಮಾಡಬೇಕೆನ್ನುವವರು ಕಾಯಲೇಬೇಕಾದ ಅನಿವಾರ್ಯವಿದೆ. ತಾಯಿಯೊಂದಿಗೆ ಸಂಬಂಧ ಉತ್ತಮವಾಗಿರುತ್ತದೆ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ.

ವೃಶ್ಚಿಕ ರಾಶಿ (ವಿಶಾಖಾ 4 ಅನುರಾಧ ಜೇಷ್ಠ)
ಕುಟುಂಬ ಸದಸ್ಯರಲ್ಲಿ ವಾದವಿವಾದಗಳ ಸಾಧ್ಯತೆ ಇದೆ. ನ್ಯಾಯಾಲಯದ ವಿಷಯದಲ್ಲಿ ಉತ್ತಮ ವಕೀಲರನ್ನು ನೇಮಿಸಿಕೊಳ್ಳುವುದು ನಿಮಗೆ ಬಹಳ ಅನುಕೂಲ. ಶಸ್ತ್ರಚಿಕಿತ್ಸೆ ಮಾಡುವ ವೈದ್ಯರಿಗೆ ಉತ್ತಮ ಗಳಿಕೆಯ ಜೊತೆ ಹೆಸರು ಬರುವುದು. ಹೊಸ ರೀತಿಯ ವ್ಯವಹಾರದಲ್ಲಿ ನಿರೀಕ್ಷಿತ ವ್ಯಕ್ತಿಗಳಿಂದ ಸಹಕಾರ ದೊರೆಯುವುದು. ವಿವಾಹ ಸಂಬಂಧಗಳಲ್ಲಿದ್ದ ವ್ಯತ್ಯಾಸಗಳು ದೂರವಾಗುತ್ತವೆ. ಧೈರ್ಯದಿಂದ ಮುನ್ನುಗ್ಗಿ ಮಾಡುವ ಕೆಲಸಗಳಲ್ಲಿ ಸಾಕಷ್ಟು ಯಶಸ್ಸು ಇರುತ್ತದೆ. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ಕೊಂಚ ವಿರೋಧವನ್ನು ಎದುರಿಸಬೇಕಾದೀತು. ವಾರಾಂತ್ಯಕ್ಕೆ ಕುಟುಂಬ ಸಮೇತರಾಗಿ ಸಂತೋಷ ಕೂಟಗಳಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ. ಹಣದ ಒಳಹರಿವು ಉತ್ತಮವಾಗಿರುತ್ತದೆ ಮತ್ತು ಸರ್ಕಾರಿ ಸವಲತ್ತುಗಳು ಸರಾಗವಾಗಿ ಬರುತ್ತವೆ.

ಧನಸ್ಸು ರಾಶಿ (ಮೂಲ ಪೂರ್ವಾಷಾಢ ಉತ್ತರಾಷಾಢ 1)
ಉದ್ಯೋಗ ಕ್ಷೇತ್ರದಲ್ಲಿನ ಸಮಸ್ಯೆಗಳಿಗೆ ಪರಿಹಾರ ದೊರಕುವುದು. ಅಧಿಕಾರಿಗಳಿಂದ ಸೂಕ್ತ ಸಹಾಯ ದೊರೆತು ಸಂತೋಷವಾಗುವುದು. ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಹೆಚ್ಚಿನ ಆಸಕ್ತಿ ಮೂಡುವುದು. ನಿರೀಕ್ಷೆಯಂತೆ ಕೆಲವು ಕೆಲಸಗಳು ಕೈಗೂಡುವುದರಿಂದ ಮನಸ್ಸು ನಿರಾಳವಾಗುವುದು. ಕುಟುಂಬದಲ್ಲಿ ಒಮ್ಮತದ ಅಭಿಪ್ರಾಯ ಮೂಡಿ ಎಲ್ಲರಲ್ಲಿ ಒಗ್ಗಟ್ಟು ಮೂಡುವುದು. ಹೊಸ ಆಸ್ತಿಯನ್ನು ಖರೀದಿ ಮಾಡಲು ಆಲೋಚನೆ ಮಾಡುವಿರಿ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ನಿಷ್ಠೆಗೆ ಸೂಕ್ತ ಬೆಲೆ ಸಿಗುತ್ತದೆ. ಆರ್ಥಿಕ ಸಮಸ್ಯೆಗಳಿಗೆ ಪರಿಹಾರ ದೊರೆತು ಆರ್ಥಿಕ ಸ್ಥಿತಿ ಚೇತರಿಸಿಕೊಳ್ಳುತ್ತದೆ. ಕೃಷಿಕರ ಆದಾಯದಲ್ಲಿ ಸ್ವಲ್ಪ ಏರಿಕೆಯನ್ನು ಕಾಣಬಹುದು. ತಾಯಿಯ ಸಹಕಾರ ನಿಮಗೆ ದೊರೆಯುತ್ತದೆ.

ಮಕರ ರಾಶಿ (ಉತ್ತರಾಷಾಢ 2 3 4 ಶ್ರವಣ ಧನಿಷ್ಠ 1.2)
ಆರ್ಥಿಕ ಸ್ಥಿತಿಯು ಚೇತರಿಕೆಯ ಹಾದಿಯಲ್ಲಿ ಇರುತ್ತದೆ. ನ್ಯಾಯಾಲಯದ ವ್ಯವಹಾರಗಳಲ್ಲಿ ನಿಮಗೆ ಯಶಸ್ಸು ಇರುತ್ತದೆ. ಹಿತೈಷಿಗಳಿಂದ ನಿಮ್ಮ ವ್ಯಾಪಾರ ವ್ಯವಹಾರಗಳಿಗೆ ಸಮಯೋಚಿತ ಸಹಾಯ ದೊರೆತು ಅದರಲ್ಲಿ ಉನ್ನತಿಯನ್ನು ಕಾಣಬಹುದು. ಅನವಶ್ಯಕ ವ್ಯವಹಾರಗಳಿಂದ ದೂರ ಇರುವುದು ಒಳ್ಳೆಯದು. ರಾಜಕೀಯ ವ್ಯಕ್ತಿಗಳಿಗೆ ಶುಭ ಸಮಾಚಾರಗಳು ದೊರೆಯುತ್ತವೆ. ಸಂತಾನ ಅಪೇಕ್ಷಿತರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ. ವಸ್ತ್ರಗಳ ಸಗಟು ವ್ಯಾಪಾರ ಮಾಡುವವರಿಗೆ ಅಭಿವೃದ್ಧಿ ಇದೆ. ಹಿರಿಯರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆಯನ್ನು ಕಾಣಬಹುದು. ಭೂಮಿಯನ್ನು ಅಭಿವೃದ್ಧಿಪಡಿಸುವವರಿಗೆ ಹೆಚ್ಚಿನ ಕೆಲಸಕಾರ್ಯಗಳು ದೊರೆಯುತ್ತವೆ. ಕಣ್ಣಿನ ತೊಂದರೆ ಇರುವವರು ಉದಾಸೀನ ಮಾಡದೆ ಚಿಕಿತ್ಸೆಗೆ ಹೋಗುವುದು ಒಳ್ಳೆಯದು.

ಕುಂಭ ರಾಶಿ (ಧನಿಷ್ಠ 3.4 ಶತಭಿಷಾ ಪೂರ್ವಭಾದ್ರ 1 2 3)
ದಾಯಾದಿಗಳ ನಡುವೆ ಇದ್ದ ಕಲಹಗಳು ಕಡಿಮೆಯಾಗುವ ಸಾಧ್ಯತೆಗಳಿವೆ. ಉತ್ಸವ ಹಾಗೂ ಸಮಾರಂಭಗಳಲ್ಲಿ ಭಾಗವಹಿಸುವ ಅವಕಾಶಗಳಿವೆ. ಸಂತಾನ ಅಪೇಕ್ಷಿತರಿಗೆ ಶುಭ ಸಮಾಚಾರಗಳು ಸಿಗುತ್ತವೆ. ಪ್ರಿಯ ವ್ಯಕ್ತಿಗಳಿಂದ ಅಥವಾ ಮಕ್ಕಳಿಂದ ಶುಭ ಸಮಾಚಾರಗಳನ್ನು ಕೇಳುವಿರಿ. ವಯಸ್ಕರ ಉಡಾಫೆ ಗುಣಗಳು ತೊಂದರೆಗೆ ಈಡು ಮಾಡುತ್ತವೆ. ಸರ್ಕಾರಿ ಕೆಲಸಗಳಲ್ಲಿ ಮುನ್ನಡೆ ಇರುತ್ತದೆ. ಅನಿರೀಕ್ಷಿತ ಪ್ರೇಮ ಪ್ರಕರಣಗಳು ನಿಮಗೆ ತೊಂದರೆಯನ್ನುಂಟು ಮಾಡಬಹುದು. ರಾಜಕಾರಣಿಗಳ ಆಶಯದಂತೆ ಅಧಿಕಾರಿಗಳು ನಡೆದುಕೊಳ್ಳಬೇಕಾದ ಪರಿಸ್ಥಿತಿ ಇರುತ್ತದೆ. ಸರ್ಕಾರಿ ಕ್ಯಾಂಟಿನ್‌ಗಳಿಗೆ, ಆಹಾರ ಪದಾರ್ಥಗಳನ್ನು ಸರಬರಾಜು ಮಾಡುವವರಿಗೆ ಹೆಚ್ಚಿನ ಸರಬರಾಜಿಗಾಗಿ ಹೊಸ ಆದೇಶಗಳು ದೊರೆಯುತ್ತವೆ.

ಮೀನ ರಾಶಿ (ಪೂರ್ವಭಾದ್ರ 4 ಉತ್ತರಾಭಾದ್ರ ರೇವತಿ)
ಒಡಹುಟ್ಟಿದವರ ಸಮಸ್ಯೆಗಳು ಉಲ್ಬಣಿಸಬಹುದು. ಮಹಿಳೆಯರಿಗೆ ಉದ್ಯೋಗದಲ್ಲಿ ಬಡ್ತಿ ದೊರೆಯುವ ಸಾಧ್ಯತೆ ಇದೆ. ಅನವಶ್ಯಕ ಖರ್ಚುಗಳಿಂದ ಆರ್ಥಿಕ ಅಸಮತೋಲನ ಆಗಬಹುದು. ಉದ್ಯಮಿಗಳು ಋಣ ಭಾರದಿಂದ ಹೊರಬರಲು ಮಾರ್ಗ ದೊರೆಯುತ್ತದೆ. ಹಣಕಾಸು ಸಂಸ್ಥೆಗಳಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ಗುತ್ತಿಗೆದಾರರಿಗೆ ಒಳ್ಳೆಯ ಗುತ್ತಿಗೆಗಳು ದೊರೆತು ಕೈತುಂಬಾ ಸಂಪಾದನೆ ಇರುತ್ತದೆ. ಹೊಸ ಯೋಜನೆ ಪ್ರಾರಂಭಿಸಲು ಪಾಲುದಾರರ ಜೊತೆ ಮಾತುಕತೆ  ನಡೆಸುವಿರಿ. ಸ್ಥಿರಾಸ್ತಿ ಕೊಳ್ಳುವ ವಿಚಾರದಲ್ಲಿ ಹೆಚ್ಚಿನ ಯಶಸ್ಸನ್ನು ಕಾಣುವಿರಿ. ಸಂಗಾತಿಯಿಂದ ನಿಮ್ಮ ಯೋಜನೆಗಳಿಗೆ ಆರ್ಥಿಕ ಸಹಾಯ ದೊರೆಯುತ್ತದೆ. ಆದಾಯ ಮತ್ತು ಖರ್ಚು ಸಮನಾಗಿರುತ್ತದೆ. ನವೀನ ರೀತಿಯ ಕೃಷಿ ಯಂತ್ರಗಳಿಗೆ ಬೇಡಿಕೆ ಹೆಚ್ಚಾಗುತ್ತದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.