ಶನಿವಾರ, ಡಿಸೆಂಬರ್ 7, 2019
22 °C

ಪೊಲೀಸರ 27 ಮೊಬೈಲ್ ಕಳವು!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶಿವಮೊಗ್ಗ: ಹೊರ ಜಿಲ್ಲೆಯಿಂದ ನಗರಕ್ಕೆ ಬಂದಿದ್ದ ಪೊಲೀಸರ 27 ಮೊಬೈಲ್ ಹಾಗೂ ಒಟ್ಟು ₹ 25 ಸಾವಿರ ನಗದು ಕಳವು ಆಗಿದೆ ಎಂದು ಮೊಬೈಲ್‌ಗಳನ್ನು ಕಳೆದುಕೊಂಡ ಪೊಲೀಸರು ದೊಡ್ಡಪೇಟೆ ಠಾಣೆಯಲ್ಲಿ ದೂರು ನೀಡಿದ್ದಾರೆ.

ನಗರದಲ್ಲಿ ಗುರುವಾರ ನಡೆದ ಹಿಂದೂ ಮಹಾ ಮಂಡಳಿಯ ಗಣಪತಿ ಮೂರ್ತಿ ವಿಸರ್ಜನೆಯ ಬಂದೋಬಸ್ತ್‌ಗೆ ಬಂದಿದ್ದ ಪೊಲೀಸರಿಗೆ ಆರ್‌ಎಂಎಲ್‌ ನಗರದ ಸಮೀಪವಿರುವ ಕಲ್ಯಾಣ ಮಂದಿರದಲ್ಲಿ ವಾಸ್ತವ್ಯಕ್ಕೆ ಏರ್ಪಾಡು ಮಾಡಲಾಗಿತ್ತು. ಗಾಢ ನಿದ್ರೆಯಲ್ಲಿದ್ದಾಗ ಮೊಬೈಲ್ ಹಾಗೂ ನಗದನ್ನು ಕಳ್ಳರು ದೋಚಿಕೊಂಡು ಹೋಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು