ಶಿವಮೊಗ್ಗ: ಹೊರರಾಜ್ಯಗಳಿಂದ ಬರುವ ಕಳಪೆ ಗುಣಮಟ್ಟದ ಅಡಿಕೆ ತಡೆಗೆ ಎಪಿಎಂಸಿ ಕಠಿಣ ಕ್ರಮ ಕೈಗೊಳ್ಳುತ್ತಿದ್ದರೂ, ಕೆಲವರು ನೇರವಾಗಿ ಅಡಿಕೆ ಬೇಯಿಸುವ ಜಾಗಕ್ಕೇ ಮೂಟೆಗಳನ್ನು ಇಳಿಸುತ್ತಿದ್ದಾರೆ.

ಎಪಿಎಂಸಿ ಪ್ರಾಂಗಣದಲ್ಲಿ ಬಿಗಿ ಕ್ರಮ ಕೈಗೊಂಡ ಮೇಲೆ ಖೇಣಿಮಾಡುವ ಜಾಗಕ್ಕೆ ಹೊರ ರಾಜ್ಯದ ಅಡಿಕೆ ತರಿಸಿಕೊಳ್ಳುತ್ತಿರುವ ಮಾಹಿತಿ ದೊರಕಿದೆ. ರೈತರೇ ಮಾಹಿತಿ ನೀಡಿದ್ದಾರೆ. ಹಣದ ಆಸೆಗೆ ಕೆಲವರು ಈ ರೀತಿ ಮಾಡುತ್ತಿದ್ದಾರೆ. ರೈತ ಸಂಘದ ನಾಯಕರಿಗೂ ಈ ವಿಷಯ ತಿಳಿಸಲಾಗಿದೆ. ಇದಕ್ಕೆ ಕಡಿವಾಣ ಹಾಕಲು ಎಲ್ಲ ರೀತಿಯ ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದು ಎಪಿಎಂಸಿ ಅಧ್ಯಕ್ಷ ದುಗ್ಗಪ್ಪ ಗೌಡ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಎಪಿಎಂಸಿ ಮಾರುಕಟ್ಟೆಗೆ ಹೊರ ರಾಜ್ಯಗಳಿಂದ ಕಳಪೆ ಗುಣಮಟ್ಟದ ಅಡಿಕೆ ನಿರಂತರವಾಗಿ ಬರುತ್ತಿದೆ. ಈಗಾಗಲೇ ವರ್ತಕರ ಸಭೆ ಕರೆದು ಚರ್ಚಿಸಲಾಗಿದೆ. ಕಳಪೆ ಅಡಿಕೆ ಮಾರುಕಟ್ಟೆಗೆ ತಂದರೆ ಇಲ್ಲಿನ ರೈತರಿಗೆ ಅನ್ಯಾಯವಾಗುತ್ತದೆ.ವ್ಯವಹಾರ ಹಳಿ ತಪ್ಪಿತ್ತದೆ. ಕೆಟ್ಟ ಹೆಸರು ಬರುತ್ತದೆ. ಇದಕ್ಕೆ ಕಡಿವಾಣ ಹಾಕಲೇಬೇಕು ಎಂಬ ಬೇಡಿಕೆಗೆ ವರ್ತಕರು ಸಮ್ಮತಿಸಿದ್ದಾರೆ ಎಂದರು.

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಶಿವಮೊಗ್ಗದಿಂದ ಹೊರ ರಾಜ್ಯಗಳಿಗೆ 100ಕ್ಕೂ ಹೆಚ್ಚು ಲೋಡ್ ಅಡಿಕೆ ಬಿಲ್ ಇಲ್ಲದೇ ಸಾಗಣೆ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ತಾವು ಅಧ್ಯಕ್ಷರಾದ ಒಂದು ತಿಂಗಳಲ್ಲೇ 6 ಲಾರಿಗಳನ್ನು ಹಿಡಿದು ದಂಡ ವಿಧಿಸಿದ್ದೇವೆ ಎಂದು ವಿವರ ನೀಡಿದರು.

ಜಿಎಸ್ಟಿ ಬಂದರೂ ಲೋಪ ಹೇಗೆ?

ಕೇಂದ್ರ ಸರ್ಕಾರ ಅಡಿಕೆ ವಹಿವಾಟನ್ನು ಜಿಎಸ್ಟಿ ವ್ಯಾಪ್ತಿಗೆ ತಂದಿದ್ದರೂ, ಬಿಲ್ ಇಲ್ಲದೇ ಅಡಿಕೆ ಹೋಗಲು ಹೇಗೆ ಸಾಧ? ಅಧಿಕಾರಿಗಳು ಇತ್ತ ಗಮನಹರಿಸಬೇಕು. ಅಡಿಕೆ ಆಮದಿನ ಮೇಲೆ ಅಧಿಕ ಶುಲ್ಕ ಹೆಚ್ಚು ವಿಧಿಸಬೇಕು. ಬಿಜೆಪಿ ಸಂಸದರು ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದು ಆಗ್ರಹಿಸಿದರು.

100 ಎಕರೆಯಲ್ಲಿ ಸುಸಜ್ಜಿತ ಮಾರುಕಟ್ಟೆ

ಎಪಿಎಂಸಿ ಮಾರುಕಟ್ಟೆಯಲ್ಲಿ 1,211 ವ್ಯಾಪಾರಿಗಳು ಪರವಾನಗಿ ಹೊಂದಿದ್ದಾರತೆ. 280 ಜನರಿಗೆ ನಿವೇಶನ ಹಂಚಿಕೆ ಮಾಡಲಾಗಿದೆ. 53 ಜನರಿಗೆ ಭೂ ಅಡಮಾನ ಮಾಡಿಕೊಡಲಾಗಿದೆ. 189 ಜನರಿಗೆ ಗೋದಾಮು ಹಂಚಿಕೆ ಮಾಡಲಾಗಿದೆ. ತ್ಯಾವರೆಕೊಪ್ಪ ಬಳಿ ಸುಸಜ್ಜಿತ ಗೋದಾಮು ಸ್ಥಾಪಿಸಲು 101 ಎಕರೆ ಜಾಗ ಖರೀದಿಸಲು ಉದ್ದೇಶಿಸಲಾಗಿದೆ. ಈಗಾಗಲೇ ಜಿಲ್ಲಾಧಿಕಾರಿಗೆ ಪ್ರಸ್ತಾವ ಕಳಿಸಲಾಗಿದೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ಉಪಾಧ್ಯಕ್ಷೆ ಭಾಗ್ಯವತಿ, ಸದಸ್ಯರಾದ ಕುಮಾರನಾಯ್ಕ, ಕರಿಯಪ್ಪ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.