ಬೀದರ್: ರಾಜ್ಯದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಆಶ್ರಯದಲ್ಲಿ ಕರ್ನಾಟಕ ಬಾಲವಿಕಾಸ ಅಕಾಡೆಮಿ ವತಿಯಿಂದ 2021-22ನೇ ಸಾಲಿನ ಬಹುಮುಖ ಪ್ರತಿಭೆ ಕ್ಷೇತ್ರದ ಬಾಲಗೌರವ ಪ್ರಶಸ್ತಿ ಬೀದರ್‌ನ ಪ್ರಾಪ್ತಿ ಪ್ರಭುಗೆ ಲಭಿಸಿದೆ.
ಧಾರವಾಡದಲ್ಲಿ ನಡೆದ ಸಮಾರಂಭದಲ್ಲಿ ಪ್ರಾಪ್ತಿ ಪ್ರಭುಗೆ ಪ್ರಶಸ್ತಿ ಪ್ರದಾನ ಮಾಡಲಾಯಿತು. ರಾಜ್ಯದ ವಿವಿಧ ಜಿಲ್ಲೆಗಳ ಒಟ್ಟು 12 ಮಕ್ಕಳು ಈ ವರ್ಷದ ಪ್ರಶಸ್ತಿಗೆ ಭಾಜನರಾಗಿದ್ದು ಅದರಲ್ಲಿ ಕಲಬುರಗಿ ವಿಭಾಗದಿಂದ ಆಯ್ಕೆಯಾದ ಏಕೈಕ ಬಾಲ ಪ್ರತಿಭೆಯಾಗಿದ್ದಾರೆ. ಬೀದರ್‌ನ ಇನ್ಫಿನಿಟಿ ಪಬ್ಲಿಕ್-ಹನಿಬೀಸ್ ಶಾಲೆಯ 6ನೇ ತರಗತಿ ವಿಧ್ಯಾರ್ಥಿನಿ ಪ್ರಾಪ್ತಿ ಅವರು ಸಹಾರ್ದ ತರಬೇತಿ ಕೇಂದ್ರದ ನಿರ್ಧೇಶಕ ಸುಬ್ರಹ್ಮಣ್ಯ ಪ್ರಭು ಹಾಗೂ ಪ್ರಫುಲ್ಲಾ ಅವರ ಪುತ್ರಿಯಾಗಿದ್ದಾರೆ.
ಶಾಲೆಯ ವತಿಯಿಂದ ಪ್ರಾಚಾರ್ಯೆ ಲಕ್ಷ್ಮೀ ಮುಗಳಿ ಮತ್ತು ಸಹಾರ್ದ ಕೇಂದ್ರದಲ್ಲಿ ಬೀದರ್ ವಿಶ್ವ ವಿದ್ಯಾಲಯದ ಸಮಾಜ ಕಾರ್ಯದ ಉಪನ್ಯಾಸಕ ಶಾಂತಕುಮಾರ ಚಿದ್ರಿ, ರವಿಕುಮಾರ ಅರಗಲ್ಲಿ, ಪ್ರದೀಪ ಕಡೋಣ, ಕೃಷ್ಣಾನಂದ, ಅನಿಲ ಕುಮಾ ಪಿ, ಎಸ್.ಜಿ. ಪಾಟೀಲ ಮಹಾಲಿಂಗ ಅಪ್ಪಣ್ಣಾ ಸನ್ಮಾನಿಸಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.