ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಪ್ರೌಢಶಾಲೆಗೆ ₹1 ಲಕ್ಷ ದೇಣಿಗೆ

Published 7 ಆಗಸ್ಟ್ 2023, 14:26 IST
Last Updated 7 ಆಗಸ್ಟ್ 2023, 14:26 IST
ಅಕ್ಷರ ಗಾತ್ರ

ಗುಳೇದಗುಡ್ಡ: ಸರ್ಕಾರಿ ಶಾಲೆಗೆ ಬರುವ ಬಡ ಹಾಗೂ ಪ್ರತಿಭಾವಂತ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಶಿಕ್ಷಕರು ಶ್ರಮಿಸಬೇಕೆಂದು ನಿವೃತ್ತ ಶಿಕ್ಷಕಿ ಚಂದ್ರಕ್ಕ ಎಚ್ಚರಪ್ಪ ಹುಣಸಿಮರದ ಹೇಳಿದರು.

ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗಕ್ಕೆ ₹ 1 ಲಕ್ಷ ದೇಣಿಗೆ ನೀಡಿ ಶಾಲೆಯ ಪರವಾಗಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸರ್ಕಾರಿ ಶಾಲೆಯಲ್ಲಿ ಗುಣಾತ್ಮಕ ಶಿಕ್ಷಣ ಸಿಗುವಂತೆ ಮಾಡಿ ವಿದ್ಯಾರ್ಥಿಗಳ ಭವಿಷ್ಯ ಉತ್ತಮವಾಗಿ ರೂಪಿಸಬೇಕೆಂದರು.

ಶಾಲಾ ಅಭಿವೃದ್ಧಿ ಸಮೀತಿ ಅಧ್ಯಕ್ಷ ಶ್ರೀಕಾಂತ ಧಾರವಾಡ ಅಧ್ಯಕ್ಷತೆ ವಹಿಸಿ ಮಾತನಾಡಿ, ಚಂದ್ರಕ್ಕನವರು ನೀಡಿದ ₹ 1 ಲಕ್ಷವನ್ನು ಬ್ಯಾಂಕಿನಲ್ಲಿ ಠೇವಣಿ ಇಟ್ಟು ಅದರಿಂದ ಬರುವ ಬಡ್ಡಿ ಹಣವನ್ನು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೀಡಲಾಗುವುದು ಎಂದು ಹೇಳಿದರು.

ಉಪ ಪ್ರಾಚಾರ್ಯ ಎಂ.ಪಿ.ಮಾಗಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಹಣವನ್ನು ಸದುಪಯೋಗ ಮಾಡಿಕೊಳ್ಳಲಾಗುವುದು. ನಮ್ಮ ಸರ್ಕಾರಿ ಶಾಲೆಯಲ್ಲಿ ಉತ್ತಮ ಶಿಕ್ಷಕರಿದ್ದು ವಿದ್ಯಾರ್ಥಿಗಳ ಬೆಳವಣಿಗೆ ಹೊಂದಲು ಪ್ರೇರಕ ಶಕ್ತಿಯಾಗಿದ್ದಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿ ಚಂದ್ರಕ್ಕ ಎಚ್ಚರಪ್ಪ ಹುಣಸಿಮರದ ಅವರನ್ನು ಶಾಲಾ ಆಡಳಿತ ಮಂಡಳಿ ಪರವಾಗಿ ಗೌರವಿಸಲಾಯಿತು.

ಶಾಲಾ ಹಿತೈಶಿಗಳಾದ ಗಣೇಶ ಯಚ್ಚರಪ್ಪ ಹುಣಸಿಮರದ, ಸಕ್ರಪ್ಪ ಹಿರೇಹಾಳ, ಸಹ ಶಿಕ್ಷಕರಾದ ಎಲ್.ಎಸ್.ಪತ್ತಾರ, ವೈ.ಜಿ.ತಳವಾರ, ಪಿ.ಆರ್.ಮೂಲಂಗಿ, ಎಲ್.ಐ.ಅಂಗಡಿ,ಎಸ್.ಎಂ.ಬೇಸ್‍ಗರ್, ಎಸ್.ಎಸ್‍. ಬಿರಾದಾರ, ಎಸ್.ಎನ್.ದೇವಗಿರಿಕರ, ಎಂ.ಎಂ.ಓಬಾಲಿ, ದೇವರಾಜ ಅಡ್ಡಿ, ರಮೇಶ ಬಳ್ಳಾ, ಶಿಲ್ಪಾ ದಳವಾಯಿ, ಸಿ.ಎಸ್.ಹಲಗಲಿ ಇದ್ದರು. ಸಿ.ಎಂ.ಕುರುಬರ ಸ್ವಾಗತಿಸಿದರು, ಸಂತೋಷ ಪಟ್ಟಣಶೆಟ್ಟಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT