ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಅಪಘಾತ: ಮೃತ ವಿದ್ಯಾರ್ಥಿಗಳ ಕುಟುಂಬಕ್ಕೆ ಪರಿಹಾರ

Published 10 ಜುಲೈ 2024, 15:58 IST
Last Updated 10 ಜುಲೈ 2024, 15:58 IST
ಅಕ್ಷರ ಗಾತ್ರ

ಜಮಖಂಡಿ: ಕಳೆದ ಜನವರಿಯಲ್ಲಿ ತಾಲ್ಲೂಕಿನ ಆಲಗೂರ ಗ್ರಾಮದ ಮಹಾವೀರ ಅಲ್ಪಸಂಖ್ಯಾತರ ಕನ್ನಡ ಹಾಗೂ ಇಂಗ್ಲಿಷ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಶ್ರೀಮತಿ ಚಂದ್ರಪ್ಪ ರಾ. ನ್ಯಾಮಗೌಡ ಪ್ರೌಢಶಾಲೆಯಲ್ಲಿ ಸ್ನೇಹ ಸಮ್ಮೇಳನ ಮುಗಿಸಿಕೊಂಡು ಶಾಲಾ ವಾಹನದಲ್ಲಿ ರಾತ್ರಿ ಮನೆಗೆ ತೆರಳುವಾಗ ನಡೆದ ಅಪಘಾತದಲ್ಲಿ ಮೃತರಾದ ನಾಲ್ವರು ವಿದ್ಯಾರ್ಥಿಗಳ ಕುಟುಂಬಕ್ಕೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ತಲಾ ₹2ಲಕ್ಷ ಪರಿಹಾರ ಮುಂಜೂರು ಮಾಡಲಾಗಿದೆ.

ತಾಲ್ಲೂಕಿನ ಕವಟಗಿ ಗ್ರಾಮದ ವಿದ್ಯಾರ್ಥಿಗಳಾದ ಗೋವಿಂದ ಸದಾಶಿವ ಜಂಬಗಿ (11), ಶ್ವೇತಾ ಪಾಟೀಲ (11), ವಿದ್ಯಾರ್ಥಿ ಬಸವರಾಜ ಕೊಟ್ಟಗಿ (15), ಸಾಗರ ಗುರಲಿಂಗ ಕಡಕೋಳ (16) ಮೃತ ವಿದ್ಯಾರ್ಥಿಗಳು.

‘ಮೃತರ ಕುಟುಂಬಕ್ಕೆ ಪರಿಹಾರ ನೀಡುವಂತೆ ಮಾಜಿ ಶಾಸಕ ಆನಂದ ನ್ಯಾಮಗೌಡ ಮುಖ್ಯಮಂತ್ರಿಗಳಿಗೆ ಮನವಿ ಪತ್ರ ನೀಡಿದ್ದಕ್ಕೆ ಜಿಲ್ಲಾಧಿಕಾರಿ ಖಾತೆಗೆ ಒಟ್ಟು ₹8 ಲಕ್ಷ ಜಮಾ ಮಾಡಲಾಗಿದೆ’ ಎಂದು ಮುಖ್ಯಮಂತ್ರಿ ಜಂಟಿ ಕಾರ್ಯದರ್ಶಿ ಪಿ.ರಂ.ಗೋಪಾಲ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT