ಗುಳೇದಗುಡ್ಡ: ’ನಾವು ಹುಟ್ಟಿ ಬಂದ ಮೇಲೆ ಸಾಧನೆ ಮಾಡಬೇಕು. ಹೀಗೆ ಹುಟ್ಟಿ ಹೀಗೆ ಸಾಯಬಾರದು. ಹಣದಿಂದ ವ್ಯವಸ್ಥೆ ಬದಲಾಗಬಹುದು. ಶಾಂತಿ, ನೆಮ್ಮದಿ ಇಲ್ಲವಾಗಿದೆ. ಜಗತ್ತಿನ ಜನ ಅಧ್ಯಾತ್ಮದ ಚಿಂತನೆ ಕಡೆ ಬರಬೇಕು. ಆಗ ಸಾಧನೆ ಸಾಧ್ಯ. ಇದು ಸತ್ಯ’ ಎಂದು ನಿಜಗುಣಪ್ರಭು ತೋಂಟದಾರ್ಯ ಶ್ರೀ ಹೇಳಿದರು.

ಪಟ್ಟಣದ ಗುರುಸಿದ್ದೇಶ್ವರ ಬೃಹನ್ಮಠದ ಗುರುಸಿದ್ದ ಪಟ್ಟದಾರ್ಯ ಶ್ರೀಗಳ 39ನೇ ವಾರ್ಷಿಕ ಪುಣ್ಯಾರಾಧನೆ ಅಂಗವಾಗಿಏರ್ಪಡಿಸಿರುವ ಮಾಸಿಕ ಪ್ರವಚನದ ಹದಿನಾಲ್ಕನೇ ದಿನವಾದ ಗುರುವಾರ ಅವರು ಪ್ರವಚನ ನೀಡಿದರು.

‘ಆತ್ಮ ಗುಣಧರ್ಮದಿಂದ ಬದುಕಿದ ಅಕ್ಕಮಹಾದೇವಿ ಭಾವನೆಯನಗಿದು ಜೀವನ ಕೇಳು ತಂದೆ ಎಂದಳು. ಶರಣಧರ್ಮದಲ್ಲಿ ಉಪಾಸನಾ ವಿಧಾನ ಮುಖ್ಯವಾಗಿದೆ. ಪಂಚ ಆಚಾರ ಮತ್ತು ಷಟಸ್ಥಲದಲ್ಲಿ ವಿದ್ಯೆ ಇದೆ. ಉಪಸನಾ ವಿಧಾನದ ಮೂಲಕ ಹೊರತೆಗೆಯುವುದೆ ಷಟಸ್ಥಲವಾಗಿದೆ. ಗುರು, ಲಿಂಗ, ಜಂಗಮ, ವಿಭೂತಿ, ಮಂತ್ರ, ಪಾದೋದಕ, ಪ್ರಸಾದ ಇವು ಬಹಿರಂಗದ ಅಷ್ಟಾವರಣವಾಗಿವೆ. ಮಂತ್ರದೊಳಗೆ ಶಿವ, ಶಿವನಿಂದ ಮಂತ್ರ ಇದರ ಸಮರಸ ಭಾವವನ್ನು ಸಾಧನೆಯಾಗಿದೆ’ ಎಂದರು.

‘ಶರಣರು, ಚಿಂತಕರ ಮಾತನ್ನು ನಾವು ಅನುಸರಿಸಬೇಕು. ಮನೆಯೊಳಗೆ ಮನೆಯನೊಡೆಯನಿದ್ದಾನೊ ಇಲ್ಲವೋ? ತನುವಿನೊಳಗೆ ಹುಸಿ ತುಂಬಿ ಮನದೊಳಗೆ ವಿಷಯ ತುಂಬಿ, ಮನೆಯೊಳಗೆ ಮನೆಯನೊಡೆಯನಿಲ್ಲ. ಕೂಡಲ ಸಂಗಮದೇವ ಎಂದರು. ಇಡೀ ಜಗತ್ತಿನಲ್ಲಿ ಸಮಾಜದ ಸ್ವಾಸ್ಥ್ಯವನ್ನು ವಚನಗಳ ಮೂಲಕ ಬದಲಾಯಿಸಿದವರು ಬಸವಣ್ಣ’ ಎಂದು ಶ್ರೀಗಳು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.