ಅಮೀನಗಡ : ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನದ ಆಯ್ಕೆಗೆ ಆ.23ರಂದು ಮುಹೂರ್ತ ಫಿಕ್ಸ್ ಆಗಿದ್ದು, ಪರಿಶಿಷ್ಟ ಜಾತಿ ವರ್ಗಕ್ಕೆ ಮೀಸಲಾದ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ಇರುವ ಮೂವರು ಸದಸ್ಯರ ನಡುವೆ ಪೈಪೋಟಿ ಜೋರಾಗಿದ್ದು ಅಧ್ಯಕ್ಷ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದು ಕುತೂಹಲ ಮೂಡಿಸಿದೆ.

ಅಧ್ಯಕ್ಷ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದು, ಉಪಾಧ್ಯಕ್ಷ ಸ್ಥಾನ ಹಿಂದುಳಿದ 'ಅ' ವರ್ಗಕ್ಕೆ ಮೀಸಲಾಗಿದೆ.

ಬಲಾಬಲ: 16 ಸ್ಥಾನಗಳ ಪೈಕಿ ಬಿಜೆಪಿ ಏಳು, ಕಾಂಗ್ರೆಸ್ ನಾಲ್ವರು, ಪಕ್ಷೇತರರು ಐವರಿದ್ದಾರೆ. ಪಕ್ಷೇತರರಲ್ಲಿ ಒಬ್ಬರು ಬಿಜೆಪಿ ಹಾಗೂ ಉಳಿದವರು ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿದ್ದಾರೆ.

ಬಿಜೆಪಿಗಿಲ್ಲ ಅಧ್ಯಕ್ಷ ಸ್ಥಾನ: ಪರಿಶಿಷ್ಟ ಜಾತಿಯಿಂದ ಆಯ್ಕೆಯಾದ ಸದಸ್ಯರಿಲ್ಲದ ಕಾರಣ ಅಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್ ನಲ್ಲಿ ರಮೇಶ ಮುರಾಳ, ತುಕಾರಾಮ ಲಮಾಣಿ ಹಾಗೂ ಬೇಬಿ ಚವ್ಹಾಣ ನಡುವೆ ಪೈಪೋಟಿ ನಡೆದಿದೆ. ಅಧ್ಯಕ್ಷ ಸ್ಥಾನಕ್ಕೆ ಅರ್ಹರಾಗಿರುವ ಕಾಂಗ್ರೆಸ್ ಸದಸ್ಯರನ್ನು ಸೆಳೆದು ಬೆಂಬಲ ನೀಡುವ ಅವಕಾಶವನ್ನು ಬಿಜೆಪಿ ಮುಕ್ತವಾಗಿರಿಸಿಕೊಂಡಿದೆ.

ಏಳು ಸದಸ್ಯ ಬಲ ಹೊಂದಿರುವ ಬಿಜೆಪಿ ತನ್ನೊಂದಿಗೆ ಗುರುತಿಸಿಕೊಂಡಿರುವ ಪಕ್ಷೇತರ ಸದಸ್ಯರ ಬೆಂಬಲದೊಂದಿಗೆ ಉಪಾಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಇಬ್ಬರು ಸದಸ್ಯರಲ್ಲಿ ಪೈಪೋಟಿ ಜೋರಾಗಿದೆ.

ಕಾಂಗ್ರೆಸ್ ನಲ್ಲಿ ಅಧ್ಯಕ್ಷ ಸ್ಥಾನಕ್ಕೆ ಯಾರ ಹೆಸರು ಅಂತಿಮವಾಗುತ್ತದೆ ಎಂಬುದರ ಮೇಲೆ ಉಪಾಧ್ಯಕ್ಷ ಆಯ್ಕೆ ನಿಂತಿದೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಸದಸ್ಯರೇ ಸ್ಪರ್ಧಿಸುತ್ತಾರೆಯೋ ಅಥವಾ ತನ್ನೊಂದಿಗೆ ಗುರುತಿಸಿಕೊಂಡಿರುವ ಪಕ್ಷೇತರ ಸದಸ್ಯರಿಗೆ ಮಣೆ ಹಾಕಲಿದೆಯೇ ಎಂಬುದನ್ನು ಕಾಯ್ದು ನೋಡಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.