ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಛಾಯಾಗ್ರಾಹಕನ ಮೇಲೆ ಹಲ್ಲೆ: ಖಂಡನೆ

Published 25 ಮೇ 2024, 14:16 IST
Last Updated 25 ಮೇ 2024, 14:16 IST
ಅಕ್ಷರ ಗಾತ್ರ

ಬಾಗಲಕೋಟೆ: ಬೆಂಗಳೂರಿನ ಶಿವಾಜಿನಗರದ ಮದುವೆ ಸಮಾರಂಭದಲ್ಲಿ ಛಾಯಾಗ್ರಾಹಕನ ಮೇಲೆ ಹಲ್ಲೆ ಮಾಡಿದ್ದನ್ನು ಖಂಡಿಸಿ ಬಾಗಲಕೋಟೆ ಜಿಲ್ಲಾ ಛಾಯಾಚಿತ್ರಗ್ರಾಹಕರ ಸಂಘದ ಸದಸ್ಯರು ಜಿಲ್ಲಾಧಕಾರಿಗೆ ಮನವಿ ಸಲ್ಲಿಸಿದರು.

ಛಾಯಾಗ್ರಾಹಕನ ಮೇಲೆ ಏಕಾಏಕಿ ಹಲ್ಲೆ ಮಾಡಿದ್ದಲ್ಲದೇ, ಬೆಲೆಬಾಳುವ ಕ್ಯಾಮೆರಾ ಸಲಕರಣೆಗಳನ್ನು ನಾಶಮಾಡಿದ್ದಾರೆ. ಮದುವೆ ಮಂಟಪಗಳಲ್ಲಿ ಕ್ಯಾನೆರಾ ಪರಿಕರಗಳ ಕಳ್ಳತನವಾಗುತ್ತಿವೆ. ರಸ್ತೆಗಳಲ್ಲಿ ಛಾಯಾಗ್ರಾಹಕರನ್ನು ತಡೆದು ಕ್ಯಾಮೆರಾಗಳನ್ನು ಕಿತ್ತುಕೊಂಡು ಹೊಗುವ  ಅನೇಕ ಪ್ರಕರಣಗಳು ನಡೆದಿವೆ ಎಂದು ದೂರಿದರು.

ತೊಂದರೆಗೆ ಈಡಾದ ಛಾಯಾಗ್ರಾಹಕನಿಗೆ ನ್ಯಾಯ ಕೊಡಿಸಬೇಕು ಎಂದು ಮನವಿ ಮಾಡಿದರು.

ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಛಾಯಾಗ್ರಾಹಕ ಸಂಘಕ್ಕೆ ಎಲ್ಲ ಸಹಕಾರ ನೀಡುವುದಾಗಿ ಭರವಸೆ ನೀಡಿದರು. ಸಂಘದ ಜಿಲ್ಲಾ ಘಟಕದ ಅಧ್ಯಕ್ಷ  ವಿಠ್ಠಲ ಹಿರೇಮಠ, ತಾಲ್ಲೂಕು ಅಧ್ಯಕ್ಷ ಚಂದ್ರು ಅಂಬಿಗೇರ, ಅಂಬರೀಶ ಗಚ್ಚಿನಮನಿ, ನೀಲಪ್ಪ ಅಂಗಡಿ, ನಾರಾಯಣ ಸೂನಾರ, ಜಗದೀಶ ಅಂಬಿಗೇರ, ರಾಜು ಗೌಳಿ, ಮಂಜುನಾಥ ಗೊಡಪ್ಪನವರ, ಸೈಫು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT