ತೇರದಾಳ: ಜೈನ ಸಮಾಜದ ಹಿರಿಯರಾಗಿದ್ದ ಹಾಗೂ ಅವಿಭಜಿತ ವಿಜಯಪೂರ ಜಿಲ್ಲಾ ಮಾಜಿ ಅಧ್ಯಕ್ಷ ಬಿ.ಎ.ದೇಸಾಯಿ ಅವರು ನಿಷ್ಟಾವಂತ ರಾಜಕಾರಣಿಯಾಗಿರುವ ಮೂಲಕ ಜನತೆಯ ಮನಗೆದ್ದಿದ್ದರು ಎಂದು ಎಲ್.ಎಸ್.ದಳವಾಯಿ ಹೇಳಿದರು.
ಸಮೀಪದ ಹಳಿಂಗಳಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ ಬುಧವಾರ ಬಿ.ಎ.ದೇಸಾಯಿ ಅವರ ಭಾವಚಿತ್ರಕ್ಕೆ ಪುಷ್ಪನಮನದೊಂದಿಗೆ ಶ್ರದ್ಧಾಂಜಲಿ ಸಲ್ಲಿಸಿ, ಮಾತನಾಡಿದರು.
ಅಕ್ಷರ ಕಲಿತ ಬಹಳಷ್ಟು ರಾಜಕಾರಣಿಗಳು ಇಂದು ಭ್ರಷ್ಟರಾಗಿದ್ದಾರೆ. ಆದರೆ ಅನಕ್ಷರಸ್ಥ ನಾಯಕನೊಬ್ಬ ಯಾವುದೇ ಕಪಟವಿಲ್ಲದೆ ತಮ್ಮ ಬದುಕಿನುದ್ದಕ್ಕೂ ಸಾಗಿಬಂದ ಕಾರ್ಯವು ಎಲ್ಲರಿಗೂ ಮಾದರಿಯಾಗಿದೆ.
ಸಂಘದ ಉಪಾಧ್ಯಕ್ಷ ಬುಜಬಲಿ ಕಲ್ಲೊಳ್ಳಿ, ನಿದರ್ೇಶಕರಾದ ಸುಶೀಲಾ ದೇಸಾಯಿ, ಹೌಸವ್ವ ದೂಪದಾಳ, ಸುರೇಶ ತಿಮ್ಮನ್ನವರ, ಭೀರಪ್ಪ ಪವಾಡಿ, ಸತ್ಯಪ್ಪ ಮಾದರ, ಮಹಾವೀರ ತಬಗೊಂಡ, ಭೀಮಪ್ಪ ಉಗಾರ ಹಾಗೂ ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.