ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ | ₹7.91 ಲಕ್ಷ ಮೌಲ್ಯದ ವಸ್ತು ಜಪ್ತಿ: ನಾಲ್ವರ ಬಂಧನ

Published 6 ಏಪ್ರಿಲ್ 2024, 16:22 IST
Last Updated 6 ಏಪ್ರಿಲ್ 2024, 16:22 IST
ಅಕ್ಷರ ಗಾತ್ರ

ಬಾದಾಮಿ: ಗಜೇಂದ್ರಗಡ ಪಟ್ಟಣದ ನಾಲ್ಕು ಜನ ಆರೋಪಿಗಳಿಂದ ಇಲ್ಲಿನ ಪೊಲೀಸರು ಅಂದಾಜು ₹7.91 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳನ್ನು ಶುಕ್ರವಾರ ಜಪ್ತಿ ಮಾಡಿದ್ದಾರೆ.

ಚೊಳಚಗುಡ್ಡ ಗ್ರಾಮ ಸಮೀಪದ ಮಲಪ್ರಭಾ ನದಿ ಗೇಟ್ ಕಾವಲುಗಾರ ಗುರುರಾಜ ಹಿರೇಮಠ ಎಂಬುವವರ ಕೈಗೆ ಏ. 3ರಂದು ರಾತ್ರಿ ಐದಾರು ಜನ ಅಪರಿಚಿತರು ಹಗ್ಗದಿಂದ ಕಟ್ಟಿ, ಬೆದರಿಸಿ ₹50,700 ಮೌಲ್ಯದ ಕಬ್ಬಿಣದ ಗೇಟನ್ನು ಮತ್ತು ಮತ್ತು ಅವರಲ್ಲಿದ್ದ ₹ 800 ಕಿತ್ತುಕೊಂಡು ವಾಹನದಲ್ಲಿ ಪರಾರಿಯಾಗಿದ್ದ ಬಗ್ಗೆ ದೂರು ದಾಖಲಾಗಿತ್ತು.

ಗಜೇಂದ್ರಗಡದ ಮುತ್ತಪ್ಪ ಗೋಂದಳೆ ಸೇರಿದಂತೆ ನಾಲ್ಕು ಜನ ಆರೋಪಿಗಳಿಂದ ₹6 ಲಕ್ಷ ಮೌಲ್ಯದ ಎರಡು ಗೂಡ್ಸ್ ವಾಹನ, ₹1.40 ಲಕ್ಷ ಮೌಲ್ಯದ ಎರಡು ಮೋಟಾರ್ ಬೈಕ್, ₹50,700 ಮೌಲ್ಯದ 13 ಕಬ್ಬಿಣದ ಗೇಟುಗಳು ಮತ್ತು ₹800 ನಗದನ್ನು ಜಪ್ತಿ ಮಾಡಿದ್ದಾರೆ. ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ಜಿಲ್ಲಾ ಪೊಲೀಸ್ ಅಧೀಕ್ಷಕ ಅಮರನಾಥ ರಡ್ಡಿ, ಹೆಚ್ಚುವರಿ ಜಿಲ್ಲಾ ಪೋಲಿಸ್ ಅಧೀಕ್ಷಕರಾದ ಪ್ರಸನ್ನ ದೇಸಾಯಿ, ಮಹಾಂತೇಶ ಜಿದ್ದಿ, ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ಮಾರ್ಗದರ್ಶನದ ಮೇರೆಗೆ ಅಪರಾಧಿಗಳನ್ನು ಪತ್ತೆ ಹಚ್ಚುವಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಯಶಸ್ವಿಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT