ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನನ್ನ ವಿರುದ್ಧ ನಿಲ್ಲಲು ತಯಾರಾಗು: ಸಚಿವ ಶಿವಾನಂದ ಪಾಟೀಲ್‌ಗೆ ಯತ್ನಾಳ್ ಸವಾಲ್

2.5 ಸಾವಿರ ಟನ್ ಕಾರ್ಖಾನೆಗೆ 50 ಲಕ್ಷ, 5 ಸಾವಿರ ಟನ್ ಕಾರ್ಖಾನೆಗೆ ಒಂದು ಕೋಟಿ: ಯತ್ನಾಳ ಆರೋಪ
Published 14 ಏಪ್ರಿಲ್ 2024, 16:05 IST
Last Updated 14 ಏಪ್ರಿಲ್ 2024, 16:05 IST
ಅಕ್ಷರ ಗಾತ್ರ

ಜಮಖಂಡಿ: ‘ಬರುವ ಲೋಕಸಭೆ ಚುಣಾವಣೆಯಲ್ಲಿ ನಾನು ಪಕ್ಷೇತರನಾಗಿ ನಿಲ್ಲುತ್ತೇನೆ, ನೀನು ನನ್ನ ವಿರುದ್ಧ ನಿಲ್ಲಲು ತಯಾರಾಗು ಒಮ್ಮೆ ತಾಕತ್ತು ನೋಡೋಣ’ ಎಂದು ಸಚಿವ ಶಿವಾನಂದ ಪಾಟೀಲ್ ವಿರುದ್ಧ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಸವಾಲೆಸೆದರು.

ತಾಲ್ಲೂಕಿನ ಸಾವಳಗಿ ಗ್ರಾಮದಲ್ಲಿ ಭಾನುವಾರ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರ ಪರ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದ ಅವರು, ‘ಎಲ್ಲರಿಗೂ ಮಾತನಾಡಿದಂತೆ ನನಗೆ ಮಾತನಾಡಿದರೆ ನಡೆಯಲ್ಲ, ನಾವು ವಿಜಯಪುರದಲ್ಲಿ ಪಕ್ಕಕ್ಕೆ ಸರಿಸಿದ್ದೇವೆ. ಇಲ್ಲಿ ಬಂದು ಮರಳು ಮಾಡುತ್ತಿದ್ದಾನೆ. ಬಾಗಲಕೋಟೆಯಲ್ಲಿ ಕಾಂಗ್ರೆಸ್ ನಲ್ಲಿ ಅಭ್ಯರ್ಥಿಗಳು ಇಲ್ಲವಾ? ಇಲ್ಲಿ ಮಗಳ ಪರ ಪ್ರಚಾರ ಮಾಡಿ ವಿಜಯಪುರದಲ್ಲಿ ಬಿಜೆಪಿ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ’ ಎಂದು ದೂರಿದರು.

‘ಡಿಸಿಸಿ ಬ್ಯಾಂಕ್, ಸಕ್ಕರೆ ಕಾರ್ಖಾನೆ, ಎಪಿಎಂಸಿ ಸೇರಿದಂತೆ ಪ್ರತಿಯೊಂದರಲ್ಲಿಯೂ ಕೈ ಹಾಕುತ್ತಾನೆ. ಬಾಗಲಕೋಟೆ ಕಾಂಗ್ರೆಸ್ ಮುಖಂಡರು ಎಚ್ಚರದಿಂದ ಇರಬೇಕು. 2.5 ಸಾವಿರ ಟನ್ ಕಾರ್ಖಾನೆಗೆ ₹50ಲಕ್ಷ,  5 ಸಾವಿರ ಟನ್ ಕಾರ್ಖಾನೆಗೆ ಒಂದು ಕೋಟಿ ಚುಣಾವಣೆಗೆ ಬೇಡುತ್ತಿದ್ದಾರೆ. ಡಿಸಿಸಿ ಬ್ಯಾಂಕ್‌ನಲ್ಲಿ ನೌಕರಿ ತುಂಬಿಕೊಳ್ಳಲು ₹15-20ಲಕ್ಷ ಲಂಚ ತೆಗೆದುಕೊಳ್ಳುತ್ತಾರೆ. ರೈತರ ಹೆಸರಿನಲ್ಲಿ ಜಿರೋ ಬಡ್ಡಿಯಲ್ಲಿ ಕೋಟ್ಯಂತರ ಸಾಲ ತೆಗೆದು ಮನ್ನಾ ಮಾಡಿಸಿ ಮೋಸ ಮಾಡುತ್ತಾರೆ. ಸಾಬಿತು ಮಾಡಿದರೆ ರಾಜಕೀಯ ನಿವೃತ್ತಿ ಎನ್ನುತ್ತಾರೆ, ಕಳ್ಳತನ ಮಾಡಿದರು ಯಾರಾದರು ಹೇಳುತ್ತಾರಾ?’ ಎಂದರು.

ಕಾಂಗ್ರೆಸ್ ಅಭ್ಯರ್ಥಿ ಇನ್ನು ಸಂಸದೆಯಾಗಿಲ್ಲ, ಪ್ರಧಾನಿಯಾಗುತ್ತೇನೆ ಎನ್ನುತ್ತಾರೆ. ಇವರು ಪ್ರಧಾನಿಯಾದರೆ ರಾಹುಲ್ ಗಾಂಧಿ ಇವರ ಮನೆಯ ಗಾರ್ಡ್‌ನ್‌ಗೆ ನೀರು ಹೋಡಿಬೇಕಾ? ಪ್ರಿಯಾಂಕಾ ಗಾಂಧಿ ಇವರ ಮನೆಯಲ್ಲಿ ಅಡುಗೆ ಮಾಡಬೇಕಾ?’ ಎಂದು ಯತ್ನಾಳ ವ್ಯಂಗ್ಯವಾಡಿದರು.

ಅಂಬೇಡ್ಕರ್ ದೇಶದ ದೊಡ್ಡ ಆಸ್ತಿ, ಅವರ ಅಂತ್ಯ ಸಂಸ್ಕಾರಕ್ಕೆ ಕಾಂಗ್ರೆಸ್ ಜಾಗ ನೀಡಿಲಿಲ್ಲ, ಈ ದೇಶದ ಗಾಳಿ ನೀರು ಬಳಸಿ ವಿಧಾನ ಸೌಧದಲ್ಲಿ ಪಾಕಿಸ್ತಾನದ ಬಗ್ಗೆ ಜೈಕಾರ ಹಾಕುತ್ತಾರೆ, ಕಾಂಗ್ರೆಸ್ ಪ್ರಣಾಳಿಕೆ ನೋಡಿದರೆ ಮುಸ್ಲಿಂ ದೇಶದ ಪ್ರಣಾಳಿಕೆ ನೋಡಿದಂತಾಗುತ್ತದೆ, ರಾಮ ಮಂದಿರ ಉದ್ಘಾಟನೆಗೆ ಬಾರದ ಕಾಂಗ್ರೆಸ್ ನಾಯಕರು ರಂಜಾನ್‌ಗೆ ಕರೆಯದೆ ಹೋಗಿ ಟೋಪಿ ಹಾಕುತ್ತಾರೆ. ಅಷ್ಟು ನಾಚಿಕೆ ಬಿಟ್ಟಿದ್ದಾರೆ, ಇಲ್ಲಿನ ಶಾಸಕ ಆನಂದ ನ್ಯಾಮಗೌಡ ಮುಸ್ಲಿಂರ ಬೆನ್ನು ಹತ್ತಿ ಸೋತರು. ಅವರ ಬೆನ್ನು ಹತ್ತಿದರೆ ಹಿಂದೂಗಳು ಎಲ್ಲಿಗೆ ಹೋಗಬೇಕು? ಎಂದರು.

ಅಭ್ಯರ್ಥಿ ಪಿ.ಸಿ.ಗದ್ದಿಗೌಡರ, ಶಾಸಕ ಜಗದೀಶ ಗುಡಗುಂಟಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಮಾತನಾಡಿದರು. ಮಾಜಿ ವಿಪ ಸದಸ್ಯ ಜಿ.ಎಸ್.ನ್ಯಾಮಗೌಡ, ಬಿಡಿಸಿಸಿ ಬ್ಯಾಮಕ ನಿರ್ದೇಶಕ ಯೋಗಪ್ಪ ಸವದಿ, ಮೋಹನ ಜಾಧವ, ಸಿ.ಟಿ.ಉಪಾಧ್ಯ, ಅಜಯ ಕಡಪಟ್ಟಿ, ಸುರೇಶಗೌಡ ಪಾಟೀಲ್, ಸುಜೀತಗೌಡ ಪಾಟೀಲ, ಶಿವಾನಂದ ಪಾಟೀಲ, ಸುರೇಶ ಮಾಳಿ, ಬಸವರಾಜ ಪರಮಗೊಂಡ, ಭರತೇಶ ಜಮಖಂಡಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT