ರಬಕವಿ ಬನಹಟ್ಟಿ: ತಾಲ್ಲೂಕಿನ ನಾವಲಗಿ ಗ್ರಾಮದ ಚಂದ್ರಗಿರಿದೇವಿ ಮತ್ತು ಸದಾಶಿವ ಮುತ್ಯಾನ ಜಾತ್ರೆ ಆ.12ರಂದು ನಡೆಯಲಿದೆ.
ಜಾತ್ರೆಯ ಅಂಗವಾಗಿ ಟಗರಿನ ಕಾಳಗ, ಎತ್ತಿನ ಗಾಡಿ, ಕುದರಿ ಗಾಡಿಗಳ ಓಟ, ಕಲ್ಲು ಎತ್ತುವ, ತುಂಬಿದ ಚೀಲ ಎತ್ತುವ, ಗುಂಡು ಎತ್ತುವ, ಕಲ್ಲು ಎತ್ತುವ ಸ್ಪರ್ಧೆಗಳು ಸೇರಿದಂತೆ ಭಜನಾ ಪದಗಳು, ಚೌಡಕಿ ಹಾಡುಗಳು ಕಾರ್ಯಕ್ರಮ ನಡೆಯಲಿವೆ.
ಆ.11 ರಂದು ಚಂದ್ರಗಿರಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮ ನಡೆಯಲಿದೆ. ದೇವಿಗೆ ಅಭಿಷೇಕ ಕಳಸೋತ್ಸವ ನಡೆಯಲಿದೆ. 12 ರಂದು ಬೆಳಿಗ್ಗೆ 10 ರಿಂದ ರಥೋತ್ಸವದವರೆಗೆ ಕರಡಿ, ಸಂಬಾಳ, ಖನಿ, ಶಹನಾಯಿ, ಸಂಪ್ರದಾಣಿ ಹಾಗೂ ಡೊಳ್ಳಿನ ವಾದನಗಳ ಪ್ರದರ್ಶನ ನಿರಂತರವಾಗಿ ನಡೆಯಲಿದೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದರು.