ಬಾಗಲಕೋಟೆ: ಮನುಷ್ಯನ ವೈಚಾರಿಕ ಪ್ರಜ್ಞೆಗೆ ಎಡ-ಬಲವೆಂಬ ಗುದ್ದಾಟವಿದೆ. ಮನುಷ್ಯತ್ವಕ್ಕೆ ಮಾತ್ರ ಸಮಾನತೆಯ ಕರುಣೆಯ ತತ್ವವಿರುತ್ತದೆ ಎಂಬುದನ್ನು ಹಿರಿಯರು ಸಾರುತ್ತಲೇ ಬಂದಿದ್ದಾರೆ ಎಂದು ಚಿತ್ರದುರ್ಗದ ಶಿವಶರಣ ಮಾದಾರ ಚೆನ್ನಯ್ಯ ಗುರುಪೀಠದ ಬಸವಮೂರ್ತಿ ಮಾದಾರ ಚೆನ್ನಯ್ಯ ಸ್ವಾಮೀಜಿ ಹೇಳಿದರು.

ಶಿವಶರಣ ಮಾದಾರ ಚೆನ್ನಯ್ಯ ಸೇವಾ ಸಮಿತಿ ವತಿಯಿಂದ ಬಿ.ವಿ.ವಿ.ಸಂಘದ ನೂತನ ಸಭಾಂಗಣದಲ್ಲಿ ಬುಧವಾರ ನಡೆದ ಪ್ರೊ.ಎಚ್. ಲಿಂಗಪ್ಪ ರಚಿಸಿರುವ ಆದಿಮರ ಚರಿತ್ರೆ ಮತ್ತು ಎಂಟು ದಲಿತ ಶರಣರ-ಶರಣೆ ವಚನಕಾರರ ಕೃತಿಗಳ ಬಿಡುಗಡೆ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

ಸಾಮಾಜಿಕ, ಸಾಂಸ್ಕೃತಿಕ, ಆರ್ಥಿಕವಾಗಿ ಉಳಿದೆಲ್ಲ ಸಮುದಾಯಗಳಂತೆ ನಮ್ಮ ಇರುವಿಕೆ ಮತ್ತು ಅಸ್ತಿತ್ವ ಸಾಬೀತು ಪಡಿಸುವುದರಿಂದ ಜನರ ಸ್ವಾಭಿಮಾನ ಹೆಚ್ಚುತ್ತದೆ. ಸರ್ಕಾರಗಳ ಸೌಲಭ್ಯ ಹಾಗೂ ಗೌರವ ಪಡೆಯಲು ಒಂದು ಅಸ್ತಿತ್ವ ಹೊಂದಿದಂತಾಗುತ್ತದೆ. ಅಂತಹ ಅಸ್ತಿತ್ವದ ಪ್ರಶ್ನೆಗಳಿಗೆ ಉತ್ತರ ನೀಡಲೆಂದು ಇಂತಹ ಸಂಶೋಧನಾತ್ಮಕ ಹಾಗೂ ವಿಮರ್ಶಾತ್ಮಕ ಕೃತಿಗಳು ಅತ್ಯಂತ ಮಹತ್ವದ ಸಂಗತಿಗಳಾಗಿವೆ ಎಂದು ಹೇಳಿದರು.

ಕೃತಿಗಳನ್ನು ಬಿಡುಗಡೆ ಮಾಡಿ ಮಾತನಾಡಿದ ಮಾಜಿ ಸಚಿವ ಎಸ್.ಆರ್. ಪಾಟೀಲ, ಶರಣ ಪರಂಪರೆಯಯಲ್ಲಿ ಶೋಷಿತ ವರ್ಗಗಳನ್ನು ಕೂಡಿಸಿಕೊಂಡು ಸರ್ವರಿಗೂ ಸಮಾನತೆ ತಂದವರು ಬಸವಣ್ಣನವರು. ಅಂದು ನಡೆ ನುಡಿ ಒಂದಾಗಿತ್ತು. ಇಂದು ನಡೆ ನುಡಿಗೆ ಬಾರಿ ಅಂತರವಿದೆ ಎಂದರು.

ಅದ್ಯಕ್ಷತೆ ವಹಿಸಿದ್ದ ಬಿವಿವಿ ಸಂಘದ ಕಾರ್ಯಾಧ್ಯಕ್ಷ ವೀರಣ್ಣ ಚರಂತಿಮಠ ಮಾತನಾಡಿ, ಶರಣರ ಆದರ್ಶಗಳನ್ನು ಅನುಸರಿಸಿದಲ್ಲಿ ಸಮಸ್ಯೆಗಳಿರುವುದಿಲ್ಲ. ಆ ನಿಟ್ಟಿನಲ್ಲಿ ಸಮಕಾಲೀನ ಸಮಸ್ಯೆಗಳನ್ನು ಅರಿತು ಮಾತನಾಡುವಂತವರು, ಬರೆಯುವಂತಹ, ಚಿಂತಕರು ಶೋಷಿತ ಸಮುದಾಯದಿಂದ ಬೆಳೆಯಬೇಕಿದೆ ಎಂದರು.

ಮುತ್ತಣ್ಣ ಬೆಣ್ಣೂರ, ಶಿವಾನಂದ ಟವಳಿ, ಎನ್.ಎಸ್.ಮಹಾಂತೇಶ, ಮೀರಾಸಾಬಿಹಳ್ಳಿ ಶಿವಣ್ಣ, ಎಂ.ಜಿ.ರಂಗಸ್ವಾಮಿ, ಜಿ.ಎನ್.ಪಾಟೀಲ, ಚನ್ನವಿರೇಗೌಡ, ಎಂ.ಯು. ಮೂಗನೂರ, ಯಲ್ಲಪ್ಪ ಬೆಂಡಿಗೇರಿ, ಸಂತೋಷ ಸವಣೂರ, ಯಲ್ಲಪ್ಪ ನಾರಾಯಣಿ ಇದ್ದರು.

Cut-off box - ನಮ್ಮದು ಶ್ರೇಷ್ಠ ಸಂಸ್ಕೃತಿ ಬಾಗಲಕೋಟೆ:ಜಗತ್ತಿನಲ್ಲಿಯೇ ಅತ್ಯಂತ ಶ್ರೇಷ್ಠ ಸಂಸ್ಕೃತಿ ನಮ್ಮದು. ನಮ್ಮ ಸಮಾಜ ಉತ್ತಮ ಪರಂಪರೆ ಹೊಂದಿದೆ ಎಂದು ಶರಣ ಸಾಹಿತಿ ಪ್ರೊ. ಎಚ್.ಲಿಂಗಪ್ಪ ಹೇಳಿದರು. ಚಾಲುಕ್ಯಶ್ರೀ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು ಶೋಷಣೆ ಅನ್ಯಾಯಕ್ಕೆ ಒಳಗಾದಂತಹ ಈ ಸಮಾಜದಲ್ಲಿ ಹುಟ್ಟಿರುವಂತ ಮಹಾನ ದಾರ್ಶನಿಕರು ಸಾಕಷ್ಟು ಕೊಡುಗೆಗಳನ್ನು ಭಾರತದ ಸಾಹಿತ್ಯಕ್ಕೆ ಕೊಟ್ಟಿದ್ದಾರೆ ಎಂದರು. 12ನೇ ಶತಮಾನದಲ್ಲಿ ಬಸವಣ್ಣ ಕಾಲದಲ್ಲಿದ್ದ ಜಾತಿ ಸೂತಕವನ್ನು ಬಹಳ ಚೆನ್ನಾಗಿ ನಿರ್ವಹಿಸಿದ್ದರು. ಬಸವ ಚಳವಳಿ ನಮ್ಮೆಲ್ಲರ ಚಳವಳಿ ಶರಣರ ಚಳವಳಿಯಾಗಿತ್ತು ಎಂದು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.