ಬಾದಾಮಿ (ಬಾಗಲಕೋಟೆ ಜಿಲ್ಲೆ): ಸಮೀಪದ ಹಿರೇಮುಚ್ಚಳಗುಡ್ಡ ಗ್ರಾಮದಲ್ಲಿ ತಾಯಿಯೊಬ್ಬರು ಭಾನುವಾರ ಮೂರು ಮಕ್ಕಳಿಗೆ ನೇಣು ಹಾಕಿ ತಾನೂ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.

ರೂಪಾ ಹನುಮಂತ ಗೌಡರ (28) ಎಂಬ ಮಹಿಳೆ ತನ್ನ ಮಕ್ಕಳಾದ ಸಮೃದ್ಧಿ ಹನುಮಂತಪ್ಪ ಗೌಡರ (5), ಪ್ರೀತಂ ಹನುಮಂತಪ್ಪ ಗೌಡರ (4), ಸುಕ್ಷೀತ ಹನುಮಂತಪ್ಪ ಗೌಡರ (2) ಮಕ್ಕಳಿಗೆ ಮನೆಯಲ್ಲಿಯೇ ನೇಣು ಹಾಕಿ ಸಾಯಿಸಿದ್ದಾಳೆ.

‘ವಿಷ ಸೇವಿಸಿದ ತಾಯಿಯ ಜೀವಕ್ಕೆ ಅಪಾಯವಿಲ್ಲ, ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮನೆಯಲ್ಲಿ ಅತ್ತೆ ಸೊಸೆ ನಡುವೆ ನಡೆದ ಜಗಳವೇ ಘಟನೆಗೆ ಕಾರಣ ಎನ್ನಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.