ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಬಾಗಲಕೋಟೆ: ದಿನವಿಡೀ ಪುನರ್ವಸು ಮಳೆ ಬಿರುಸು, ಚಿತ್ರಗಳಲ್ಲಿ ನೋಡಿ

ಬಾಗಲಕೋಟೆ: ಜಿಲ್ಲೆಯಲ್ಲಿ ಪುನರ್ವಸು ಮಳೆ ಬಿರುಸುಗೊಂಡಿದೆ. ಬುಧವಾರ ಇಡೀ ದಿನ ಮಳೆರಾಯ ಮುನಿಸು ಮರೆತ ಗೆಳಯನಂತೆ ಇಳೆಯ ತಬ್ಬಿನಿಂತನು. ಜೊತೆಗೆ ಕುಳಿರ್ಗಾಳಿಯ ಬಿಸುಪು ಮೈ–ಮನಗಳ ಬಿಸಿಯಾಗಿಸಿತು. ಹೀಗಾಗಿ ಇಡೀ ದಿನ ಕಂಡದ್ದು ಬರೀ ಮಳೆ, ಮಳೆ, ಮಳೆ...ಮುಂಜಾನೆ ಹಾಸಿಗೆಯಿಂದ ಎದ್ದವರಿಗೆ ಮಳೆರಾಯನ ದರ್ಶನವಾಯಿತು. ದಿನವಿಡೀ ಮೋಡ ಮುಸುಕಿದ ವಾತಾವರಣ ಇದ್ದು, ಆಗಾಗ ಬಿರುಸಾಗಿಯೇ ಸುರಿದ ಮಳೆರಾಯ ಇಳೆ ತೋಯ್ದು ತೊಪ್ಪೆಯಾಗಿಸಿದನು. ಹಸಿರೋತ್ಸವಕ್ಕೆ ಮುನ್ನುಡಿ ಬರೆದನು. ಹೀಗಾಗಿ ಬಾಗಲಕೋಟೆ ಅಕ್ಷರಶಃ ಮಲೆನಾಡಿನ ಸ್ವರೂಪ ಪಡೆಯಿತು. ಮೋಡಗಳ ತಾಕಲಾಟ, ಮಳೆಯ ನಿರಂತರತೆ ಥಂಡಿ ವಾತಾವರಣ ಸೃಷ್ಟಿಸಿತು.ಬಾಗಲಕೋಟೆ, ನವನಗರ, ವಿದ್ಯಾಗಿರಿಯಲ್ಲಿ ರಸ್ತೆ, ಬಯಲು, ಗಿಡ–ಮರಗಳಿಗೆ ಮಜ್ಜನದ ಸಂಭ್ರಮ. ಮಾರುಕಟ್ಟೆ ಪ್ರದೇಶ, ಸಂತೆ ಮೈದಾನ ಎಲ್ಲವೂ ಮಳೆಯಲ್ಲಿ ನೆನೆದವು. ಹೊಸದಾಗಿ ಡಾಂಬರೀಕರಣಗೊಂಡ ರಸ್ತೆಗಳ ಕಪ್ಪು ಮೈಬಣ್ಣ ಹೊಳಪು ಪಡೆಯಿತು. ಬಿರುಸಿನ ಮಳೆ ಇದ್ದರೂ ಗುಡುಗು–ಮಿಂಚು, ಸಿಡಿಲಿನ ಆರ್ಭಟ ಕಾಣಸಿಗಲಿಲ್ಲ. ಮಳೆಯ ಕಾರಣ ರಸ್ತೆಗಳಲ್ಲಿ ಜನಸಂಚಾರವೂ ಕಡಿಮೆ ಇತ್ತು. ಮೋಡ ಕವಿದ ವಾತಾವರಣ ನಾಲ್ಕು ಗಂಟೆಗೆ ಬೈಗಿನ ಕಳೆಕಟ್ಟಿತ್ತು. ಹೀಗಾಗಿ ಸಂಜೆಯ ಹೊತ್ತಿಗೆ ಇಡೀ ಊರು ಹೊದ್ದು ಮಲಗಿದಂತೆ ತೋರಿತು.
Published : 14 ಜುಲೈ 2021, 14:45 IST
ಫಾಲೋ ಮಾಡಿ
Comments
ಬಾಗಲಕೋಟೆಯಲ್ಲಿ ಬುಧವಾರ ಇಡೀ ದಿನ ಪುನರ್ವಸು ಮಳೆ ಜಡಿಯಿತು. ಈ ವೇಳೆ ನಗರದ ವಿವಿಧೆಡೆ ಕಂಡ ಚಿತ್ರಗಳನ್ನು ಛಾಯಾಗ್ರಾಹಕರಾದ ಸಂಗಮೇಶ ಬಡಿಗೇರ ಹಾಗೂ ಸೈಯ್ಯದ್ ಕಟ್ಟಿಕೊಟ್ಟಿದ್ದಾರೆ..

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT