ಬಾಗಲಕೋಟೆ: ಯುವ ವೈದ್ಯ ವಿಜ್ಞಾನಿಗಳು ಸಂಶೋಧನೆ ಮಾಡಿ ಹೊಸ, ಹೊಸ ಔಷಧಗಳನ್ನು ಸಮಾಜಕ್ಕೆ ನೀಡಬೇಕು ಎಂದು ಕೇಂದ್ರ ಸರ್ಕಾರದ ಆಯುಷ್ ಇಲಾಖೆ ವಿಶೇಷ ಹೋಮಿಯೋಪಥಿ ಔಷಧ ಧೃಢಪಡಿಸುವ ಕೇಂದ್ರದ ಚೇರ್ಮನ್ ಡಾ.ಶಶಿಕಾಂತ ತಿವಾರಿ ಹೇಳಿದರು.

ಬಿವಿವಿ ಸಂಘದ ಹೋಮಿಯೋಪಥಿ ವೈದ್ಯಕೀಯ ಕಾಲೇಜು ಹಾಗೂ ಆಸ್ವತ್ರೆಯಲ್ಲಿ ಉತ್ತರ ಕರ್ನಾಟಕದ ಪ್ರಪ್ರಥಮ ಕೇಂದ್ರೀಯ ಹೋಮಿಯೋಪಥಿ ಔಷಧ ಧೃಢಪಡಿಸುವ ಕೇಂದ್ರ ಉದ್ಘಾಟಿಸಿ ಮಾತನಾಡಿದ ಅವರು, ಹೋಮಿಯೋಪಥಿ ವೈದ್ಯ ಪದ್ದತಿಯು ಅತ್ಯಂತ ವೈಜ್ಞಾನಿಕವಾಗಿದ್ದು, ವೇಗವಾಗಿ ಜನಪ್ರಿಯಗೊಳ್ಳುತ್ತಿರುವ ಹಾಗೂ ಸಾಂಕ್ರಾಮಿಕ, ಅಸಾಂಕ್ರಾಮಿಕ ರೋಗಗಳ ಉಪಶಮನ ಮಾಡುವಲ್ಲಿ ಸಂಜೀವಿನಿಯಾಗಿದೆ ಎಂದು ಅಭಿಪ್ರಾಯಪಟ್ಟರು.

ಕ್ರಿಯಾಶೀಲರಾಗಿ ಶ್ರಮಿಸಿ, ಹೊಸ ಔಷಧಗಳನ್ನು ಈ ಕ್ಷೇತ್ರಕ್ಕೆ ನೀಡುವ ಮೂಲಕ ನಿಮಗೆ ನೀಡಿರುವ ಅವಕಾಶ ಸದುಪಯೋಗ ಪಡೆದುಕೊಳ್ಳಬೇಕು ಎಂದರು.

ಸಂಪನ್ಮೂಲ ವ್ಯಕ್ತಿ ವಿಜ್ಞಾನಿ ಡಾ.ಪ್ರೀತಾ ಮೆಹರಾ, ವಿವಿಧ ಸಂಶೋಧನೆ ಹಾಗೂ ಹೋಮಿಯೋಪಥಿ ಔಷಧ ಧೃಢಪಡಿಸುವ ಬಗೆ ಕುರಿತು ಉಪನ್ಯಾಸ ನೀಡಿದರು.

ಕಾಲೇಜು ಆಡಳಿತ ಮಂಡಳಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಸಾಸನೂರ ಮಾತನಾಡಿ, ಸಂಘದ ಕಾಲೇಜಿಗೆ ಕೇಂದ್ರ ಮಂಜೂರು ಮಾಡಿರುವುದಕ್ಕೆ ಸಂಸ್ಥೆ ಅಭಾರಿಯಾಗಿದೆ. ಕೇಂದ್ರದ ಏಳ್ಗೆಗೆ ಶ್ರಮಿಸಲಿದ್ದೇವೆ ಎಂದರು.

ಪ್ರಾಚಾರ್ಯ ಡಾ.ಅರುಣ ಹೂಲಿ ಮಾತನಾಡಿ, ಕೇವಲ ಐದು ವರ್ಷಗಳಲ್ಲಿ ಹೋಮಿಯೋಪಥಿ ವಿಜ್ಞಾನ ರಂಗದಲ್ಲಿ ಬಿವಿವಿ ಸಂಘ ಗುರುತರವಾದ ಸಾಧನೆ ಮಾಡುತ್ತಿದೆ ಎಂದರು.

ಪ್ರಾಧ್ಯಾಪಕರುಗಳಾದ ಡಾ.ರವಿ.ಎಸ್.ಕೋಟೆಣ್ಣವರ, ಡಾ.ಸುಧೀರ ಬೆಟಗೇರಿ, ಡಾ.ರುದ್ರೇಶ ಕೊಪ್ಪಳ, ಡಾ.ಅಮರೇಶ ಬಳಗಾನೂರ, ಡಾ.ವಿಜಯಲಕ್ಷ್ಮಿ ಪಾಟೀಲ, ಡಾ.ಅಖಿಲಾ ಹುಲ್ಲೂರ, ಡಾ.ಫಾತಿಮಾ ಬಾಲಸಿಂಗ್, ಡಾ.ದೀಪಕ ನಾಯಕ, ಡಾ.ಶಶಿಕುಮಾರ ಇಜೇರಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.