ಗುಳೇದಗುಡ್ಡ: ಪಟ್ಟಣದ ತಿಪ್ಪಾಪೇಟೆಯ ಬಸವೇಶ್ವರ ದೇವಸ್ಥಾನದಲ್ಲಿ ರಥೋತ್ಸವ ಹಾಗೂ ಪಾಲಕಿ ಉತ್ಸವ ಮೆರವಣಿಗೆ ವೈಭವದಿಂದ ಮಂಗಳವಾರ ಜರುಗಿತು.

ರಥೋತ್ಸವದ ಅಂಗವಾಗಿ ಬಸವೇಶ್ವರ ದೇವರಿಗೆ ಅಭಿಷೇಕ, ಪೂಜೆ ಹಾಗೂ ಮಹಾಮಂಗಳಾರತಿ ಕಾರ್ಯಕ್ರಮವನ್ನು ಶ್ರದ್ಧಾಪೂರ್ವಕವಾಗಿ ನೆರವೇರಿಸಲಾಯಿತು. ಬಸವೇಶ್ವರ ದೇವಸ್ಥಾನವನ್ನು ವಿದ್ಯುತ್ ದೀಪಾಲಂಕಾರ ಹಾಗೂ ತಳೀರು ತೋರಣಗಳಿಂದ ಶೃಂಗಾರಿಸಲಾಗಿತ್ತು.

ಪಟ್ಟಣದ ಮುತ್ತು ಬಸಪ್ಪ ರಾಜನಾಳ ಅವರ ಮನೆಯಿಂದ ಕಳಸದ ಮೆರವಣಿಗೆ ಹಾಗೂ ಶಿವಪ್ಪಯ್ಯ ಮಠದಿಂದ ಪಲ್ಲಕ್ಕಿ ಉತ್ಸವ ಬಸವೇಶ್ವರ ದೇವಸ್ಥಾನದಿಂದ ಹೊರಟು ಚೌಬಜಾರ, ಅರಳಿಕಟ್ಟಿ ಮೂಲಕ ಹಾಯ್ದು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಾಗಿ ನಂತರ ಬಸವೇಶ್ವರ ದೇವಸ್ಥಾನಕ್ಕೆ ಬಂದು ತಲುಪಿತು.

ಬಸವೇಶ್ವರ ದೇವಸ್ಥಾನದ ರಥೋತ್ಸವ ಜರುಗಿತು. ಸುರೇಶ ತಿಪ್ಪಾ, ಅಶೋಕ ರೋಜಿ, ಆನಂದ ತಿಪ್ಪಾ ಗೌಡ್ರ, ಶಿವಾನಂದ ಮಳ್ಳಿಮಠ, ಶ್ರೀಕಾಂತ ಹರ್ತಿ, ಶೇಖರಪ್ಪ ಅರುಟಗಿ, ಅಶೋಕ ತಿಪ್ಪಾ, ಸಂತೋಷ್ ತಿಪ್ಪಾ, ವಿಶ್ವನಾಥ ಚಿಂದಿ, ವಿಶ್ವನಾಥ ತಿಪ್ಪಾ, ಸಿ.ಎಂ.ಚಿಂದಿ, ಮುತ್ತು ರಾಜನಾಳ, ಬೊಮ್ಮಣ್ಣ ರೋಜಿ ಇತರರು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.