ಬೀಳಗಿ: ತಾಲ್ಲೂಕಿನ ತೋಳಮಟ್ಟಿ ಗ್ರಾಮದ ಮಲ್ಲಿಕಾರ್ಜುನ ದೇವರ ಮತ್ತು ಬೀರದೇವರ ಜಾತ್ರಾ ಮಹೋತ್ಸವ ಅಂಗವಾಗಿ ಮಲ್ಲಿಕಾರ್ಜುನ ದೇವರ ದೇವಸ್ಥಾನದಲ್ಲಿ ಬೆಳಿಗ್ಗೆ 7 ಗಂಟೆಗೆ ಅಯ್ಯಾಚಾರ ಮತ್ತು ಶಿವದಿಕ್ಷಾ ಕಾರ್ಯಕ್ರಮ ಮತ್ತು ಬೀರದೇವರ ಸನ್ನಿಧಿಯಲ್ಲಿ ವಿವಿಧ ಧಾರ್ಮಿಕ ಆಚರಣೆಯೊಂದಿಗೆ ರುದ್ರಾಭಿಷೇಕ ಜರುಗಿತು.

ಬೀರದೇವರ ಪಲ್ಲಕ್ಕಿ ಉತ್ಸವವು ಗುರುನಾಥ ಕಲ್ಲಯ್ಯ ಹಿರೇಮಠ ಅವರ ತೋಟದಿಂದ ಮೆರವಣಿಗೆ ಮೂಲಕ ನೂರಾರು ಮಹಿಳೆಯರು ಆರತಿಯೊಂದಿಗೆ ನರಗುಂದ ತಾಲ್ಲೂಕಿನ ಕೊಣ್ಣೂರ ಗ್ರಾಮದ ಮಹಿಳಾ ಕಲಾತಂಡದಿಂದ ಡೊಳ್ಳು ಕುಣಿತ ಜರುಗಿತು.

ಗಿರಿಸಾಗರ ಕಲ್ಯಾಣ ಹಿರೇಮಠದ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ವಿವಿಧ ಕ್ರೀಡೆಗಳಾದ ಸಂಗ್ರಾಣಿ ಕಲ್ಲು, ಸಿಡಿ ಮತ್ತು ಗುಂಡು ಎತ್ತುವ ಸ್ಪರ್ಧೆಗಳು ಸ್ಪರ್ಧಿಗಳಿಗೆ ಚಾಲನೆ ನೀಡಿದರು.

ಶಂಕ್ರಪ್ಪ ಭಾವಿ, ಶ್ರೀಶೈಲ ಭಾವಿ, ನಿಂಗಯ್ಯ ಹಿರೇಮಠ, ಮಾಜಿ ಪೈಲ್ವಾನ ಪರುತಪ್ಪ ಅಕ್ಕೋಜಿ, ಮಲ್ಲಪ್ಪ ಮೇಟಿ, ಪರುತಪ್ಪ ಮೇಟಿ, ನ್ಯಾಯವಾದಿ ಸಂತೋಷ ಸಜ್ಜನ, ಶ್ರೀಶೈಲ ಕುರಿ ಇದ್ದರು.