ರಾಂಪುರ: ಸಮೀಪದ ಶಿರೂರ ಪಟ್ಟಣದಲ್ಲಿ ಪಟ್ಟಣ ಪಂಚಾಯತಿ ವತಿಯಿಂದ ಮಂಗಳವಾರ ಹರ್ ಘರ್ ತಿರಂಗಾ ಕಾರ್ಯಕ್ರಮದ ಅಡಿ ಪಟ್ಟಣದಲ್ಲಿ ಬೈಕ್ ರ‍್ಯಾಲಿ ನಡೆಸಲಾಯಿತು.
ಪಟ್ಟಣ ಪಂಚಾಯತಿ ಕಾರ್ಯಾಲಯದಿಂದ ಆರಂಭವಾದ ತಿರಂಗಾ ಬೈಕ್ ರ‍್ಯಾಲಿ ಕಮ್ಮಾರ ಓಣಿ, ಲಂಗಟದವರ ಓಣಿ, ನೇಕಾರ ಪೇಟೆ, ದೊಡ್ಡ ಓಣಿ, ಪಂಚಪ್ಪನ ಪೇಟೆ ಸೇರಿದಂತೆ ವಿವಿಧೆಡೆ ಸಂಚರಿಸಿತು. ಈ ಸಂದರ್ಭದಲ್ಲಿ ರಾಷ್ಟ್ರಭಕ್ತಿಯ ವಿವಿಧ ಘೋಷಣೆಗಳನ್ನು ಕೂಗುತ್ತ ಜನರಲ್ಲಿ ರಾಷ್ಟ್ರಪ್ರೇಮದ ಅರಿವು ಮೂಡಿಸಲಾಯಿತು.
ಹಳೇ ಚಾವಡಿಯ ಹತ್ತಿರ ರ‍್ಯಾಲಿ ಮುಕ್ತಾಯಗೊಂಡಿತು. ಈ ಸಂದರ್ಭದಲ್ಲಿ ಮಾತನಾಡಿದ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ಶಿವಾನಂದ ಆಲೂರ, ಸ್ವಾತಂತ್ರ್ಯಕ್ಕಾಗಿ ತ್ಯಾಗ, ಬಲಿದಾನ ಮಾಡಿದ ಹೋರಾಟಗಾರರನನ್ನು ಸ್ಮರಣೆ ಮಾಡುವ ಮೂಲಕ ದೇಶ ಪ್ರೇಮ ಹೊಂದಬೇಕು ಎಂದರು.
ಕಚೇರಿ ವ್ಯವಸ್ಥಾಪಕ ಯು.ಜಿ. ವರದಪ್ಪನವರ, ಹನಮಂತ ಚನ್ನದಾಸರ, ಸೋಮು ಕುರಿಗಾರ, ಜಿ.ಜಿ. ಹಿರೇಮಠ, ಪ್ರಶಾಂತ ಬೂದಿಹಾಳ, ಹನಮಂತ ಹಳ್ಳಿಯವರ, ಎಚ್.ಐ. ಮ್ಯಾಗೇರಿ, ಪೌರ ಕಾರ್ಮಿಕರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.