ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸರಸ್ವತಿ ಕೃಪೆಯಿಂದ ಸಾಧನೆ ಸಾಧ್ಯ

ಮರೆಗುದ್ದಿಯ ನಿರುಪಾದೀಶ ಸ್ವಾಮೀಜಿ ಹೇಳಿಕೆ
Published 15 ಫೆಬ್ರುವರಿ 2024, 16:21 IST
Last Updated 15 ಫೆಬ್ರುವರಿ 2024, 16:21 IST
ಅಕ್ಷರ ಗಾತ್ರ

ಪ್ರಜಾವಾಣಿ ವಾರ್ತೆ

ಬೀಳಗಿ:  ‘ಎಲ್ಲವನ್ನೂ ಬಲ್ಲೆ ಎನ್ನುವ ಅಂಹಕಾರ ಹೊರಗಿಟ್ಟು, ಎಲ್ಲರೊಂದಿಗೆ ಪ್ರೀತಿ, ವಿಸ್ವಾಸ, ನಂಬಿಕೆ, ಪ್ರಾಮಾಣಿಕತೆಯಿಂದ ಇದ್ದರೆ ಶಾರದಾಂಬೆಯ ಅನುಗ್ರಹ ದೊರೆಯುತ್ತದೆ. ವಿದ್ಯಾದೇವತೆ ಸರಸ್ವತಿ ಕೃಪೆ ಒಂದಿದ್ದರೆ ಏನಾದರೂ ಸಾಧನೆ ಮಾಡಲು ಸಾಧ್ಯ’ ಎಂದು ಮರೆಗುದ್ದಿಯ ನಿರುಪಾದೀಶ ಸ್ವಾಮೀಜಿ ಹೇಳಿದರು.

ಇಲ್ಲಿನ ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ, ಸ್ವಾಮಿ ವಿವೇಕಾನಂದ ಸಮೂಹ ಸಂಸ್ಥೆಗಳ ಆಶ್ರಯದಲ್ಲಿ ಗುರುವಾರ ವಿವೇಕಾನಂದ ಅಂತರ ರಾಷ್ಟೀಯ ಪಬ್ಲಿಕ್ ಶಾಲೆಯಲ್ಲಿ ಸರಸ್ವತಿ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಿ ಅವರು ಮಾತನಾಡಿದರು.

 ‘ಸನ್ಮಾರ್ಗದಲ್ಲಿ ನಡೆದರೆ ಲಕ್ಷಿ ದೇವಿಯ ಕೃಪೆಯೂ ದೊರೆಯುತ್ತದೆ’ ಎಂದರು.  

ಸೋಮಪ್ಪಯ್ಯನ ಮಠದ ಚನ್ನಬಸವ ಸ್ವಾಮೀಜಿ, ನಾಗರಾಳ ದಿಗಂಬರೇಶ್ವರ ಮಠದ ಶೇಷಪ್ಪಯ್ಯ ಸ್ವಾಮೀಜಿ, ಹುಚ್ಚಪ್ಪಯ್ಯನ ಮಠದ ಫಕೀರಯ್ಯ ಸ್ವಾಮೀಜಿ, ಜೆಮ್ ಶುಗರ್ಸ್‌ ನಿರ್ದೇಶಕ ರಾಮನಗೌಡ ಜಕ್ಕನಗೌಡ, ಬಿ.ಪಿ. ಪಾಟೀಲ,ರವಿ ಪಾಟೀಲ, ಸಂತೋಷ ಜಂಬಗಿ, ಬೋಜಪ್ಪ ದೇವೂರ, ಜಿ.ಜಿ. ದೀಕ್ಷಿತ, ಆಡಳಿತಾಧಿಕಾರಿ ಶಂಕರಗೌಡ ಪಾಟೀಲ, ಶೈಕ್ಷಣಿಕ ನಿರ್ದೇಶಕ ಡಿ.ಎಸ್.ಕುಂಠೆ, ಪ್ರಾಚಾರ್ಯ ಜಿ.ಆರ್.ಪಾಟೀಲ, ಎಸ್.ಎಂ.ಕಲಬುರ್ಗಿ, ರಾಜು ಬೋರ್ಜಿ  ಪಾಲ್ಗೊಂಡಿದ್ದರು.

ಶಾಲಾ ಮತ್ತು ಕಾಲೇಜು ವಿದ್ಯಾರ್ಥಿಗಳು ಸಂಗ್ರಹಿಸಿದ ಆಹಾರ ಧಾನ್ಯಗಳನ್ನು ವೃದ್ದಾಶ್ರಮಗಳಿಗೆ ತಲುಪಿಸಲು ದಾನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT