ಶಿರೂರ (ರಾಂಪುರ): ಪಟ್ಟಣದ ಬಳ್ಳಾರಿ ಮುತ್ಯಾನ ಉರುಸಿನ ಪ್ರಯುಕ್ತ ಡಾ.ಎ.ಪಿ.ಜೆ. ಅಬ್ದುಲ್ ಕಲಾಂ ಸಮಿತಿ ಆಶ್ರಯದಲ್ಲಿ ಸಿದ್ಧೇಶ್ವರ ಪ್ರೌಢಶಾಲಾ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದ್ದ ಸೂಪರ್ ಸಿಕ್ಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಸ್ಥಳೀಯ ಬಿ.ಆರ್.ಸರ್ಕಾರ ಕ್ರಿಕೆಟ್ ತಂಡ ಪ್ರಥಮ ಸ್ಥಾನ ಗಳಿಸಿ ಚಾಂಪಿಯನ್ ಪಟ್ಟ ಪಡೆಯಿತು.

ವಾರ ಕಾಲ ಜರುಗಿದ ಪಂದ್ಯಾವಳಿಯಲ್ಲಿ 16 ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಶಿರೂರಿನ ತಂಡ ನೀಲಾನಗರದ ನಿರಂತರ ಜ್ಯೋತಿ ತಂಡವನ್ನು ಸೋಲಿಸಿ 20 ಸಾವಿರ ರೂ.ನಗದು ಬಹುಮಾನ ಹಾಗೂ ಟ್ರೋಫಿ ಪಡೆಯಿತು.

ನೀಲಾನಗರ ನಿರಂತರ ಜ್ಯೋತಿ ತಂಡ ದ್ವಿತೀಯ ಸ್ಥಾನ ಪಡೆದು 15 ಸಾವಿರ ರೂ.ನಗದು ಬಹುಮಾನ ಹಾಗೂ ಟ್ರೋಫಿ ಪಡೆದರೆ, ಬೇವಿನಮಟ್ಟಿಯ ಜಿ.ಸಿ.ಸಿ ತಂಡ ತೃತೀಯ ಸ್ಥಾನ ಮತ್ತು ಶಿರೂರಿನ ಸಿದ್ರಾಮೇಶ್ವರ ತಂಡ ಚತುರ್ಥ ಸ್ಥಾನ ಪಡೆದವು. ವಿಜೇತ ತಂಡಗಳಿಗೆ ಯುವ ಮುಖಂಡ ಬಸವರಾಜ ಬಿಲ್ಲಾರ ಬಹುಮಾನ ವಿತರಿಸಿ, ಯುವಕರು ಪ್ರಶಸ್ತಿ, ಬಹುಮಾನಕ್ಕೆ ಪಡೆಯುವುದಕ್ಕೆ ಅಷ್ಟೇ ಕ್ರೀಡೆಗಳಲ್ಲಿ ಭಾಗವಹಿಸದೇ ಕ್ರೀಡಾ ಮನೋಭಾವ ಹೊಂದಬೇಕು ಎಂದರು. ವಿ.ಎಸ್.ಗಾಣಿಗೇರ, ರವಿ ಮೇಟಿ, ಮುತ್ತು ಕಾಚಿಟ್ಟಿ, ರಾಜು ಮಖಾನದಾರ, ರಫೀಕ್ ತಹಶಿಲ್ದಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.