ಬಾದಾಮಿ : ಚಾಲುಕ್ಯ ಸಾಮ್ರಾಜ್ಯದ ಅರಸರು ಇನ್ನೂರು (ಕ್ರಿ.ಶ. 534-756) ವರ್ಷಗಳ ಕಾಲ ಗತವೈಭವದದಿಂದ ಸಾಮ್ರಾಜ್ಯವನ್ನಾಳಿ ವಿಶ್ವಕ್ಕೆ ಸಾಂಸ್ಕೃತಿಕ ಹಿರಿಮೆ ಸಾರಿದ್ದಾರೆ.

ಚಾಲುಕ್ಯರ ಸಾಂಸ್ಕೃತಿಕ ಸಾಮ್ರಾಜ್ಯದಲ್ಲಿ ದಶಕಗಳ ನಂತರ ಜ.19 ರಿಂದ 21ರವರೆಗೆ ಚಾಲುಕ್ಯ ಉತ್ಸವ ಹಮ್ಮಿಕೊಳ್ಳಲಾಗಿದೆ.

‘ದಕ್ಷಿಣ ಪಥೇಶ್ವರ’ ಇಮ್ಮಡಿ ಪುಲಿಕೇಶಿ ಉತ್ತರದ ಕನೌಜದ ದೊರೆ ಹರ್ಷವರ್ಧನನನ್ನು ನರ್ಮದಾ ನದಿ ದಂಡೆಯಲ್ಲಿ ನಡೆದ ಯುದ್ಧದಲ್ಲಿ ಸೋಲಿಸಿ, ಗೆದ್ದ ರಾಜ್ಯವನ್ನು ಹರ್ಷವರ್ಧನನಿಗೆ ಮರಳಿಸಿ ಔದಾರ್ಯ ಮೆರೆದದ್ದು ಇತಿಹಾಸದಲ್ಲಿ ದಾಖಲಾಗಿದೆ..

ಉತ್ತರ ಭಾರತದಲ್ಲಿ ಚಾಲುಕ್ಯರು ಸಾಮ್ರಾಜ್ಯವನ್ನಾಳಿ ದಕ್ಷಿಣ ಭಾರತಕ್ಕೆ ಬಂದ ಚಾಲುಕ್ಯರ ಮೂಲ ದೊರೆ ಜಯಸಿಂಹ. ಜಯಸಿಂಹನ ಮಗ ರಣರಾಗ. ರಣರಾಗನ ಮಗ ಮೊದಲನೇ ಪುಲಿಕೇಶಿ ಎಂದು ಇತಿಹಾಸ ಸಂಶೋಧಕ ಆರ್.ಎಸ್. ಪಂಚಮುಖಿ ಉಲ್ಲೇಖಿಸಿದ್ದಾರೆ.

ಚಾಲುಕ್ಯರ ವೈಷ್ಣವ, ಶೈವ, ಜೈನ ಮತ್ತು ಬೌದ್ಧ ಸ್ಮಾರಕಗಳು ಪರಧರ್ಮಸಹಿಷ್ಣುತೆಗೆ ಸಾಕ್ಷಿಯಾಗಿವೆ. ಐಹೊಳೆ ಸ್ಮಾರಕಗಳು ಶಿಲ್ಪಕಲೆಯ ಪ್ರಯೋಗಶಾಲೆಯಾದರೆ ಪಟ್ಟದಕಲ್ಲು ಶಿಲ್ಪಕಲೆಯ ತೊಟ್ಟಿಲಾಗಿದೆ. ಬಾದಾಮಿ ಗುಹಾದೇವಾಲಯಗಳು ದಕ್ಷಿಣ ಭಾರತದಲ್ಲಿಯೇ ಮೊತ್ತ ಮೊದಲ ಗುಹಾಲಯಗಳಾಗಿವೆ.

ಬಾದಾಮಿ ಉತ್ತರ ಬೆಟ್ಟದ ಬೃಹತ್ ಬಂಡೆಗಳ ಸಾಲನ್ನು ಮೊದಲನೇ ಪುಲಿಕೇಶಿ ಮೊದಲು ರಕ್ಷಣಾ ಕೋಟೆಯನ್ನು ಭದ್ರಪಡಿಸಿದನು. ಕ್ರಿ.ಶ. 543 ರಲ್ಲಿ ಅಶ್ವಮೇಧಯಾಗವನ್ನು ಕೈಗೊಂಡು ನೈಸರ್ಗಿಕ ಬಂಡೆಗಳನ್ನೇ ಮೊದಲ ದುರ್ಗವನ್ನಾಗಿ ನಿರ್ಮಿಸಿ ರಾಜಧಾನಿಯನ್ನಾಗಿ ಮಾಡಿಕೊಂಡಿದ್ದನ್ನು ಶಾಸನದ ಉಲ್ಲೇಖದಲ್ಲಿ ಕಾಣಬಹುದು. ಈ ದುರ್ಗವು ದಕ್ಷಿಣ ಭಾರತದಲ್ಲಿಯೇ ಮೊದಲ ದುರ್ಗವಾಗಿದೆ.

ಇಮ್ಮಡಿ ಪುಲಿಕೇಶಿಯು ಚಿಕ್ಕಪ್ಪ ಮಂಗಳೇಶನನ್ನು ಸೋಲಿಸಿ (ಕ್ರಿ.ಶ.610-642 ) ರ ವರೆಗೆ ಗತವೈಭವದಿಂದ ಸಾಮ್ರಾಜ್ಯವನ್ನಾಳಿದನು. ಕಾವೇರಿಯಿಂದ ಗೋದಾವರಿ ನದಿವರೆಗೆ ಸಾಮ್ರಾಜ್ಯವನ್ನು ವಿಸ್ತರಿಸಿ ಮಹಾರಾಷ್ಟ್ರತ್ರಯ ಪ್ರಾಂತ ಎಂದು ಹೆಸರಿಸಿದ್ದನು.

ಐಹೊಳೆಯಲ್ಲಿ ದ್ರಾವಿಡ ಶೈಲಿಯ ಶೈವ, ಜೈನ ದೇವಾಲಯಗಳಿವೆ. ಪಟ್ಟದಕಲ್ಲಿನಲ್ಲಿ ದ್ರಾವಿಡ, ನಾಗರ ಶೈಲಿಯ ದೇವಾಲಯಗಳು ಮತ್ತು ಮಹಾಕೂಟದಲ್ಲಿ ದ್ರಾವಿಡ, ನಾಗರ ಮತ್ತು ಕದಂಬ ಶೈಲಿಯ ದೇವಾಲಯಗಳನ್ನು ನಿರ್ಮಿಸಲಾಗಿದೆ.

ಸ್ಮಾರಕಗಳಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ, ಪಾರ್ವತಿ, ಗಣೇಶ, ಹರಿಕರ, ಅರ್ಧನಾರೀಶ್ವರ, ನಟರಾಜ, ವಾಮನ, ವರಾಹ, ಬುದ್ಧ, ಮಹಾವೀರ, ಆಲಂಕಾರಿಕ ಮೂರ್ತಿಶಿಲ್ಪ ರಾಮಾಯಣ ಮತ್ತು ಮಹಾಭಾರತದ ಕಥೆಯನ್ನು ಶಿಲೆಯಲ್ಲಿ ಅರಳಿಸಿದ್ದಾರೆ. ಪಟ್ಟದಕಲ್ಲಿನ ಪಾಪನಾಥ ದೇವಾಲಯದ ಹೊರಭಿತ್ತಿಯಲ್ಲಿ ಶಿಲ್ಪಿ ಬಲದೇವ ಉಬ್ಬು ಶಿಲ್ಪದಲ್ಲಿ ಸಂಪೂರ್ಣವಾಗಿ ರಾಮಾಯಣ ಸಾಂಪ್ರದಾಯಿಕ ಮೂರ್ತಿ ಶಿಲ್ಪಗಳನ್ನು ಕಾಣಬಹುದಾಗಿದೆ.

ಎರಡನೇ ವಿಕ್ರಮಾದಿತ್ಯ ಮೂರುಬಾರಿ ಪಲ್ಲವರನ್ನು ಸೋಲಿಸಿದ ಕಾರಣ ಪತಿಯ ದಿಗ್ವಿಜಯದ ಸ್ಮರಣೆಗೆ ರಾಣಿಯರಾದ ಲೋಕಮಹಾದೇವಿ ವಿರೂಕ್ಷೇಶ್ವರ ದೇವಾಲಯ ಮತ್ತು ತ್ರೈಲೋಕ್ಯಮಹಾದೇವಿ ಮಲ್ಲಿಕಾರ್ಜುನ ದೇವಾಲಯಗಳನ್ನು ಸರ್ವಸಿದ್ಧಿ ಆಚಾರಿ ಮತ್ತು ಗುಂಡ ಅನಿವಾರಿತಾಚಾರಿ ಸ್ಥಪತಿಗಳಿಂದ ನಿರ್ಮಿಸಿದರು. ವಿಕ್ರಮಾದಿತ್ಯ ದೊರೆ ಸ್ಥಪತಿಗಳಿಗೆ ‘ಪೆರ್ಜೆರಪು’ ಬಿರುದು ನೀಡಿ ಗೌರವಿಸಿದನು.

ಚಾಲುಕ್ಯರ ಕನ್ನಡ ಭಾಷೆಯಲ್ಲಿ ಶಾಸನಗಳನ್ನು ದೇವಾಲಯ ಮತ್ತು ಕಲ್ಲು ಬಂಡೆಗಳಲ್ಲಿ ಕೆತ್ತಲಾಗಿದೆ. ಸಂಗೀತ, ಚಿತ್ರಕಲೆ, ನಾಟಕ ಮತ್ತು ಸಾಹಿತ್ಯ, ಮೂರ್ತಿಶಿಲ್ಪಗಳು ಲಲಿತ ಕಲೆಗಳಿಗೆ ಪ್ರೋತ್ಸಾಹಿಸಿದ್ದಕ್ಕೆ ಸಾಕ್ಷಿಯಾಗಿವೆ.

ಪ್ರಾಗೈತಿಹಾಸ: ಚಾಲುಕ್ಯರಗಿಂತ ಮೊದಲು ಬೆಟ್ಟದ ಪರಿಸರದಲ್ಲಿ, ಮಲಪ್ರಭಾ ನದಿ ದಂಡೆಯ ಪ್ರದೇಶದಲ್ಲಿ ಜನವಸತಿ ಇತ್ತು ಎಂಬುದಕ್ಕೆ ಸಂಶೋಧನೆಯಾಗಿರುವ ರೇಖಾಚಿತ್ರಗಳು, ಶಿಲಾಯುಧಗಳು ಮತ್ತು ಉತ್ಖನನವೇ ಪ್ರಾಗೈತಿಹಾಸದ ಸಾಕ್ಷಿಗಳಾಗಿವೆ.

ಬಾದಾಮಿ ಪರಿಸರದಲ್ಲಿ ಪ್ರಾಗೈತಿಹಾಸದ ನಂತರ ಶಾತವಾಹನರು, ಕದಂಬರು, ಚಾಲುಕ್ಯರು, ಪಲ್ಲವರು, ರಾಷ್ಟ್ರಕೂಟರು, ಕಲ್ಯಾಣಿ ಚಾಲುಕ್ಯರು, ವಿಜಯನಗರ ದೊರೆಗಳು ಮತ್ತು ಪೇಶ್ವೆ ಅರಸರ ಗತವೈಭವದ ಸಾಮ್ರಾಜ್ಯದ ಕುರುಹುಗಳನ್ನು ವೀಕ್ಷಿಸಬಹುದಾಗಿದೆ.

ಪ್ರಾಗೈತಿಹಾಸದ ಶಿಲಾಯುಧ, ರೇಖಾಚಿತ್ರ ಚಾಲುಕ್ಯರಿಂದ ಲಲಿತ ಕಲೆಗಳಿಗೆ ಪ್ರೋತ್ಸಾಹ ರಾಣಿಯರಿಂದ ದೇವಾಲಯ ನಿರ್ಮಾಣ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.