ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಗ್ರಾಮ ಸ್ವರಾಜ್ಯ ಕನಸು ಸಾಕಾರಗೊಳಿಸಿದ್ದು ಕಾಂಗ್ರೆಸ್: ಶಾಸಕ ವಿಜಯಾನಂದ ಕಾಶಪ್ಪ

Published 23 ಜನವರಿ 2024, 15:54 IST
Last Updated 23 ಜನವರಿ 2024, 15:54 IST
ಅಕ್ಷರ ಗಾತ್ರ

ಹುನಗುಂದ: ಪಂಚಾಯತ್ ರಾಜ್ ವ್ಯವಸ್ಥೆ ಆರಂಭಿಸಿದ್ದು, ಬಲಪಡಿಸಿದ್ದು ಕಾಂಗ್ರೆಸ್ ಪಕ್ಷ ಎಂದು ಶಾಸಕ ವಿಜಯಾನಂದ ಕಾಶಪ್ಪನವರ ಹೇಳಿದರು.

ಪಟ್ಟಣದ ವೆಂಕಟೇಶ್ವರ ಕಲ್ಯಾಣ ಮಂಟಪದಲ್ಲಿ ಹುನಗುಂದ ಮತ್ತು ಇಳಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿಯಿಂದ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯ್ತಿ, ಪಿಕೆಪಿಎಸ್ ಅಧ್ಯಕ್ಷ ಹಾಗೂ ಉಪಾದ್ಯಕ್ಷರಿಗೆ ಸನ್ಮಾನ ಸಮಾರಂಭ ಹಾಗೂ ಸಮಾಲೋಚನೆ ಸಭೆಯಲ್ಲಿ ಅವರು ಮಾತನಾಡಿದರು.

ಮಹಾತ್ಮ ಗಾಂಧೀಜಿಯವರ ಗ್ರಾಮ ಸ್ವರಾಜ್ಯ ಕನಸನ್ನು ಸಾಕಾರಗೊಳಿಸಿ ಪಂಚಾಯ್ತಿ ಹಂತದ ವರೆಗೆ ಅಧಿಕಾರ ವಿಕೇಂದ್ರೀಕರಣ ಮಾಡಿದ ಶ್ರೇಯಸ್ಸು ಪಕ್ಷಕ್ಕಿದೆ. ನಿಮಗೆ ಜನರಿತ್ತ ಅಧಿಕಾರಕ್ಕೆ ಸೂಕ್ತ ನ್ಯಾಯ ಒದಗಿಸಿ ಎಂದು ಹೇಳಿದರು.

ಹುನಗುಂದ-ಇಳಕಲ್ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗಂಗಾಧರ ದೊಡ್ಡಮನಿ ಹಾಗೂ ಅಬ್ದುಲ್ ರಜಾಕ್ ತಟಗಾರ, ಜಿಲ್ಲಾ ಪಂಚಾಯ್ತಿ ಮಾಜಿ ಅಧ್ಯಕ್ಷ ವೀಣಾ ಕಾಶಪ್ಪನವರ, ವಿಜಯ ಗದ್ದನಕೇರಿ, ಮಹಾಂತೇಶ ಅವಾರಿ, ಜಬ್ಬಾರ ಕಲ್ಬುರ್ಗಿ ಮಾತನಾಡಿದರು.

ಪಟ್ಟಣದ ಪಿಕೆಪಿಎಸ್ ಅಧ್ಯಕ್ಷ ದೇವು ಡಂಬಳ, ಸಹಕಾರಿ ಸಂಘದಲ್ಲಿ ಆರಂಭದ ಸಾಲವಾಗಿ ಪ್ರತಿ ರೈತನಿಗೆ ₹50 ಸಾವಿರ ಮಾತ್ರ ನೀಡುತ್ತಿದ್ದು, ಅದನ್ನು ಒಂದು ಲಕ್ಷಕ್ಕೆ ಹೆಚ್ಚಿಸುವಂತೆ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಶಾಸಕ ವಿಜಯಾನಂದ ಕಾಶಪ್ಪನವರಲ್ಲಿ ಮನವಿ ಮಾಡಿಕೊಂಡರು.

ಶೇಖರಪ್ಪ ಬಾದವಾಡಗಿ, ಸಂಗಣ್ಣ ಗಂಜಿಹಾಳ, ಶಿವಾನಂದ ಕಂಠಿ, ಸಿದ್ದಪ್ಪ ಹೊಸೂರ, ರವಿ ಹುಚನೂರ, ಮುತ್ತಣ್ಣ ಕಲಗೋಡಿ, ನೀಲಪ್ಪ ತಪೇಲಿ, ಚನ್ನಪ್ಪಗೌಡ ನಾಡಗೌಡ, ಬಸವರಾಜ ಗದ್ದಿ, ಶರಣು ಬೆಲ್ಲದ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT