ಸೋಮವಾರ, ಜುಲೈ 26, 2021
27 °C

ಬಾಗಲಕೋಟೆ: ಮತ್ತೆ 60 ಮಂದಿಗೆ ಕೋವಿಡ್ ದೃಢ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲೆಯಲ್ಲಿ ಹೊಸದಾಗಿ ಮಂದಿಗೆ ಭಾನುವಾರ ಕೋವಿಡ್ ದೃಢಪಟ್ಟಿದೆ. ಇದರೊಂದಿಗೆ ಜಿಲ್ಲೆಯಲ್ಲಿ ಇಲ್ಲಿಯವರೆಗೆ ಒಟ್ಟು 689 ಮಂದಿಗೆ ಸೋಂಕು ತಗುಲಿದಂತಾಗಿದೆ. ಅವರಲ್ಲಿ 246 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಮನೆಗೆ ತೆರಳಿದ್ದಾರೆ ಎಂದು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ.ಕೆ.ರಾಜೇಂದ್ರ ತಿಳಿಸಿದ್ದಾರೆ.

ಬಾಗಲಕೋಟೆ ತಾಲ್ಲೂಕಿನ ಬೇವೂರ ಗ್ರಾಮದ ಪುರುಷ, ಬಾಗಲಕೋಟೆ ವಿನಾಯಕ ನಗರದ ಪುರುಷ, ಬೀಳಗಿಯ ವ್ಯಕ್ತಿ, ಮಹಾಲಿಂಗಪುರದ ವೃದ್ಧ, ಜಮಖಂಡಿ ಎಸ್.ಬಿ.ಐ ಬ್ಯಾಂಕ್ ಹತ್ತಿರದ ನಿವಾಸಿ ಬಾಲಕಿ, ಬಾಗಲಕೋಟೆ ಎಸ್ಪಿ ಕಚೇರಿಯ ಇಬ್ಬರು ಸಿಬ್ಬಂದಿ, ಬಾದಾಮಿಯ ವಿದ್ಯಾನಗರದ ಮೂರು ವರ್ಷದ ಬಾಲಕಿ, ಇಳಕಲ್‌ನ ಬಸ್ ನಿಲ್ದಾಣದ ಹತ್ತಿರದ ನಿವಾಸಿ ಮಹಿಳೆ ಹಾಗೂ ಪುರುಷ, ಜಮಖಂಡಿ ಮಲ್ಲಿಕಾರ್ಜುನ ಗಲ್ಲಿಯ ವೃದ್ಧ ಹಾಗೂ ವೃದ್ಧೆ, ಇಳಕಲ್‌ನ ಮಹಿಳೆ, ಮುಧೋಳದ 18 ವರ್ಷದ ಯುವತಿ, 17 ವರ್ಷದ ಬಾಲಕ, ಬಾದಾಮಿ ತಾಲ್ಲೂಕು ಕೆರೂರು ಪೊಲೀಸ್ ಠಾಣೆಯ ನಾಲ್ವರು ಸಿಬ್ಬಂದಿ, ಬೀಳಗಿ ಅಗ್ನಿಶಾಮಕ ದಳದ ಇಬ್ಬರು ಸಿಬ್ಬಂದಿ, ಬಾದಾಮಿ ಪುರಸಭೆಯ ಮೂವರು ಸಿಬ್ಬಂದಿಗೆ ಹೊಸದಾಗಿ ಸೋಂಕು ತಗಲಿದೆ.

ಇಳಕಲ್‌ನ ನಾಲ್ವರು, ಮುಧೋಳದ ಬಸವನಗರದ ನಿವಾಸಿ, ಹುನಗುಂದ ಬಸ್ ನಿಲ್ದಾಣದ ಹತ್ತಿರದ ನಿವಾಸಿ ಪುರುಷ, ತಾಲ್ಲೂಕಿನ ಮನ್ಮಥನಾಳಿನ ಬಾಲಕ, ಬಾದಾಮಿ ತಾಲ್ಲೂಕಿನ ಗೋವನಕೊಪ್ಪದ 36 ವರ್ಷದ ಮಹಿಳೆಗೆ ಸೋಂಕು ತಗಲಿದೆ.

ಕೆರೂರ ಪೊಲೀಸ್ ಠಾಣೆಯ ಹತ್ತಿರದ ವ್ಯಕ್ತಿ, ಬಾದಾಮಿ ವಿದ್ಯಾನಗರದ ನಿವಾಸಿ ಮಹಿಳೆ, ಬಾಲಕಿ,  ರಕ್ಕಸಗಿ ಗ್ರಾಮದ ಬಾಲಕ, ಮುಧೋಳ ಬಸವನಗರದ ಪುರುಷ, ನೀರಲಕೇರಿ ಗ್ರಾಮದ ಯುವಕನಿಗೆ ಸೋಂಕು ದೃಢಪಟ್ಟಿದೆ.

ಜಮಖಂಡಿಯ ದತ್ತಾನಗರದ ಮಹಿಳೆ ಹಾಗೂ ಪುರುಷ, ಶಿವಾಜಿ ಸರ್ಕಲ್‌ನ ಯುವಕ, ಬಾಗಲಕೋಟೆ ವಿದ್ಯಾಗಿರಿಯ ಇಬ್ಬರು ಯುವಕರು, ನವನಗರದ ಪುರುಷ,  ಹಳೆಯ ಬಾಗಲಕೋಟೆಯ ವೃದ್ಧ, ಹೊಸೂರ ಗ್ರಾಮದ ಬಾಲಕಿ, ಕೆರೂರಿನ ಯುವಕ ಹೊಸದಾಗಿ ಸೋಂಕಿತರು.

ಜಮಖಂಡಿ ಲಕ್ಷ್ಮೀನಗರದ ವೃದ್ಧ, ಬಾದಾಮಿ ಜಯನಗರದ ಯುವಕ, ಜಮಖಂಡಿಯ ಮಾತ್ರಿ ಗಲ್ಲಿಯ ವೃದ್ಧ, ಮಹಾಲಿಂಗಪುರದ ವ್ಯಕ್ತಿ, ಜಮಖಂಡಿಯ ಈದ್ಗಾ ಗಲ್ಲಿಯ ಪುರುಷ, ಬಾಗಲಕೋಟೆಯ ಎಸ್.ಎನ್.ಎಂ.ಸಿ ಹತ್ತಿರದ ನಿವಾಸಿ ಪುರುಷ, ಜಮಖಂಡಿಯ ತೇಲಸಂಗ ರಸ್ತೆಯ ಯುವಕ, ಬಾಗಲಕೋಟೆ ನವನಗರದ ಪುರುಷ , ವಿದ್ಯಾಗಿರಿ ಎಂಟನೇ ಕ್ರಾಸ್‌ನ ನಿವಾಸಿ ವೃದ್ಧೆ, ಜಮಖಂಡಿಯ ರೆಹಮತ್ ನಗರದ ವ್ಯಕ್ತಿ ಹಾಗೂ ಮಹಾಲಿಂಗಪುರದ ವ್ಯಕ್ತಿಗೆ ಹೊಸದಾಗಿ ಸೋಂಕು ತಗುಲಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು