ಭಾನುವಾರ, ನವೆಂಬರ್ 28, 2021
20 °C

ಶ್ರೀದೇವಿ ಪುರಾಣ ಪ್ರವಚನ ಸಮಾರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮಹಾಲಿಂಗಪುರ: ಸ್ಥಳೀಯ ಬನಶಂಕರಿದೇವಿ ದೇವಸ್ಥಾನದಲ್ಲಿ ನವರಾತ್ರಿ ಅಂಗವಾಗಿ 9 ದಿನಗಳವರೆಗೆ ಹಮ್ಮಿಕೊಂಡ ಶ್ರೀದೇವಿ ಪುರಾಣ ಹಾಗೂ ದಸರಾ ಸಾಂಸ್ಕೃತಿಕ ಉತ್ಸವದ ಸಮಾರೋಪ ಕಾರ್ಯಕ್ರಮ ಗುರುವಾರ ಸಂಜೆ ನಡೆಯಿತು.

ಹಿರಿಯ ಮಲ್ಲಪ್ಪ ಭಾವಿಕಟ್ಟಿ ಮಾತನಾಡಿ, ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸಿಕೊಂಡು ಹೋಗುವ ಬಹುದೊಡ್ಡ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ. ಮಕ್ಕಳಿಗೆ ಸಂಸ್ಕೃತಿಯನ್ನು ಕಲಿಸಬೇಕಿದೆ. ಜನ್ಮದಿನಾಚರಣೆ ಯಂಥಹ ಕಾರ್ಯಕ್ರಮಗಳನ್ನು ರಸ್ತೆಗಳಲ್ಲಿ ನಿಂತು ಆಚರಿಸಿಕೊಳ್ಳುತ್ತಾರೆ. ಅದರ ಬದಲಿಗೆ ದೇವಸ್ಥಾನಗಳಲ್ಲಿ ಆಚರಿಸಿಕೊಂಡರೆ ಅವರಲ್ಲಿ ಅಧ್ಯಾತ್ಮದ ಭಾವನ ಮೂಡುತ್ತದೆ. ಜತೆಗೆ ಸಂಸ್ಕೃತಿಯನ್ನು ಕಲಿಯಲು ಸಾಧ್ಯವಾಗುತ್ತದೆ ಎಂದರು.

ಮೂಡಲಗಿಯ ಸೋಮಶೇಖರಯ್ಯ ಕಂಟೀಕಾರಮಠ ಶ್ರೀದೇವಿ ಪುರಾಣದ ಪ್ರವಚನ ಹೇಳಿದರು. ಬ್ರಹ್ಮವಿದ್ಯಾಶ್ರಮದ ಸಹಜಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಒಂಬತ್ತು ದಿನಗಳವರೆಗೆ ಸೇವೆ ಸಲ್ಲಿಸಿದ ಮಹನೀಯರನ್ನು ಸನ್ಮಾನಿಸಲಾಯಿತು. ಶ್ರೀಶೈಲಪ್ಪ ಬಾಡನವರ, ನಾರಾಯಣ ಕಿರಗಿ, ಲಕ್ಕಪ್ಪ ಚಮಕೇರಿ, ಗೋಲೇಶ ಅಮ್ಮಣಗಿ, ಶಂಕರ ಅಂಬಿ, ಜಯಪ್ಪಣ್ಣ ಘಟ್ನಟ್ಟಿ, ಡಾ.ಬಿ.ಡಿ. ಸೋರಗಾಂವಿ, ಚಂದು ಕಾಗಿ, ಸುನೀಲ ಜಮಖಂಡಿ, ಸತೀಶ ಸೋರಗಾಂವಿ, ಡಾ.ಎ.ಆರ್.ಬೆಳಗಲಿ ಇದ್ದರು.

ಖ್ಯಾತ ಗಾಯಕ ರವೀಂದ್ರ ಸೋರಗಾಂವಿ ಗಾಯನದ ರಸದೌತಣ ನೀಡಿದರು. ನಂತರ ಜ್ಯೂ. ಉಪೇಂದ್ರ ಖ್ಯಾತಿಯ ಆರ್.ಡಿ.ಬಾಬು ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು