ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾಗಲಕೋಟೆ: ಸೈಕ್ಲಿಂಗ್‌, ಕುಸ್ತಿಗೆ ಬೇಕಿದೆ ಪ್ರೋತ್ಸಾಹ

ಬಾಗಲಕೋಟೆಯಿಂದ ಕಾಮನ್‌ವೆಲ್ತ್‌ವರೆಗೆ ಸಾಧನೆ; ಸೈಕ್ಲಿಂಗ್‌ನಲ್ಲಿ ಜಿಲ್ಲೆಯದ್ದೇ ಪಾರುಪತ್ಯ
Last Updated 17 ಆಗಸ್ಟ್ 2022, 5:12 IST
ಅಕ್ಷರ ಗಾತ್ರ

ಬಾಗಲಕೋಟೆ: ಜಿಲ್ಲಾ ಮಟ್ಟದಿಂದ ಹಿಡಿದು ಕಾಮನ್‌ವೆಲ್ತ್‌ವರೆಗೆ ಜಿಲ್ಲೆಯ ಕ್ರೀಡಾಪಟು ಭಾಗವಹಿಸಿದ್ದಾರೆ. ಇವರು ಟ್ರ್ಯಾಕ್‌ಗೆ ಇಳಿದರೆ ಸಾಕು ಉಳಿದ ಕ್ರೀಡಾಪಟುಗಳು ಚಿನ್ನದ ಪದಕದ ಆಸೆ ಕೈಬಿಡುತ್ತಾರೆ. ಅದುವೇ ಸೈಕ್ಲಿಂಗ್‌. ರಾಜ್ಯ, ರಾಷ್ಟ್ರಮಟ್ಟದಸೈಕ್ಲಿಂಗ್‌ ಕ್ರೀಡೆಯಲ್ಲಿ ಬಾಗಲಕೋಟೆ ಜಿಲ್ಲೆಯದ್ದೇ ಪಾರುಪತ್ಯ.

ಅವಿಭಜಿತ ವಿಜಯಪುರ ಜಿಲ್ಲೆ ಸೈಕ್ಲಿಂಗ್‌ಗೆ ಹೆಸರುವಾಸಿಯಾಗಿತ್ತು. ಜಿಲ್ಲೆಯ ವಿಭಜನೆಯ ನಂತರವೂ ಬಾಗಲಕೋಟೆ ಜಿಲ್ಲೆಯ ಕ್ರೀಡಾಪಟುಗಳು ಆ ಹಿರಿಮೆಯನ್ನು ಮುಂದುವರೆಸಿದ್ದಾರೆ.

ಜಿಲ್ಲೆಯ ಸೈಕ್ಲಿಂಗ್‌ಗೆ ದೊಡ್ಡ ಇತಿಹಾಸವೇ ಇದೆ. ಜಮಖಂಡಿ ಸಂಸ್ಥಾನಿಕರ ಕಾಲದಿಂದಲೂ ಪ್ರೋತ್ಸಾಹವಿತ್ತು. ಶಂಕರರಾವ್‌ ಪಟವರ್ಧನ ಮಹಾರಾಜರು ಹೆಚ್ಚಿನ ಉತ್ತೇಜನ ನೀಡಿದರು.

ವೆಂಕಪ್ಪ ಎಂಟೆತ್ತು, ರಾಜುಸಾಬ ಅತ್ತಾರ, ಚಂದ್ರಪ್ಪ ಕರುಣಿ, ದುಂಡಪ್ಪ ಅಥಣಿ, ನಿಜಪ್ಪ ಎಂಟೆತ್ತು, ಮಲ್ಲಪ್ಪ ಹಿರೇಕುರುಬರ, ರಾಮು ಎಂಟೆತ್ತು, ಸಂದೀಪ ಅಥಣಿ, ಮಾರುತಿ ಹದಗಲ್ಲ, ಶಿವಪ್ಪ ಲಮಾಣಿ, ಪ್ರೇಮಲತಾ ಸುರೇಬಾನ, ಗಂಗೂ ಬಿರಾದಾರ, ಸವಿತಾ ಅಣ್ಣಪ್ಪನವರ, ಶೀಲಾ ಪಾಟೀಲ, ದುಂಡವ್ವ ಚಿಮ್ಮಡ, ಅನಿತಾ ನಿಂಬರಗಿ ರಾಷ್ಟ್ರ. ಅಂತರರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದ್ದಾರೆ.

ಏಕಲವ್ಯ ಪ್ರಶಸ್ತಿ: ವೆಂಕಪ್ಪ ಕೆಂಗಲಗುತ್ತಿ, ರಾಜೀವ ಭಾಟಿ, ಮೇಘಾ ಗೂಗಾಢ, ಶ್ರೀಧರ ಸವಣೂರ, ರೇಣುಕಾ ದಂಡಿನ, ಕಾವೇರಿ ಬಣಕಾರ ಸೇರಿದಂತೆ ಹಲವು ಮಂದಿ ಏಕಲವ್ಯ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮಾಳಪ್ಪ ಮುರ್ತಣ್ಣವರ, ಶ್ರೀಧರ ಸವಣೂರ, ವಿಜಯಸಿಂಗ್‌ ರಜಪೂತ್‌, ನಿಜಪ್ಪ ಎಂಟೆತ್ತು ಸೇರಿದಂತೆ ಹಲವರು ಸೈಕ್ಲಿಂಗ್‌ ಕ್ರೀಡೆ ಆಧಾರದ ಮೇಲೆಯೇ ರೈಲ್ವೆ ಇಲಾಖೆಯಲ್ಲಿ ಉದ್ಯೋಗ ಪಡೆದಿದ್ದಾರೆ.

ದಾನಮ್ಮ ಚಿಚಖಂಡಿ 2018ರಲ್ಲಿ ಮಲೇಷ್ಯಾದಲ್ಲಿ ನಡೆದ ಅಂತರರಾಷ್ಟ್ರೀಯ ಏಷ್ಯನ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಮತ್ತು ಅದೇ ವರ್ಷ ನವದೆಹಲಿಯಲ್ಲಿ ಜರುಗಿದ ಏಷ್ಯಾ ಕಪ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದಾರೆ.

ಜಿಲ್ಲೆಯ ತುಳಸಿಗೇರಿಯ ವೆಂಕಪ್ಪ ಕೆಂಗಲಗುತ್ತಿ ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ ದೇಶದ ಸೈಕ್ಲಿಂಗ್‌ ತಂಡದಲ್ಲಿ ಸ್ಥಾನ ಪಡೆದಿದ್ದರು. ಜೂನಿಯರ್‌ ಚಾಂಪಿಯನ್‌ಷಿಪ್‌, ಸೌಥ್‌ ಏಷ್ಯನ್‌ ಗೇಮ್ಸ್ ಸೇರಿದಂತೆ ಹಲವು ಕ್ರೀಡಾಕೂಟಗಳಲ್ಲಿ ಪದಕ ಗೆದ್ದುಕೊಂಡಿದ್ದಾರೆ.

ಸೌಮ್ಯ ಅಂತಾಪುರ, ಸವಿತಾ ಆಡಗಲ್ಲ, ಚೈತ್ರಾ ಬೋರ್ಜಿ, ಭಾಗ್ಯಶ್ರೀ ಮಠಪತಿ, ತರುಣ ನಾಯಕ, ವರುಣ ಶಿರೂ, ಮಲ್ಲೇಶ ಬಡಿಗೇರ ಹೀಗೆ ಹೆಸರಗಳನ್ನು ಬರೆಯುತ್ತಾ ಹೋದರೆ ಜಿಲ್ಲೆಯ ಸೈಕ್ಲಿಂಗ್‌ ಪಟುಗಳ ಪಟ್ಟಿ ಪೂರ್ಣಗೊಳ್ಳುವುದಿಲ್ಲ.

ಕುಸ್ತಿ ಅಖಾಡದಲ್ಲಿಯೂ ಜಿಲ್ಲೆಯ ಕ್ರೀಡಾಪಟುಗಳ ದೊಡ್ಡ ಹೆಸರು ಮಾಡಿದ್ದಾರೆ. ಕುಸ್ತಿಗೂ ರಾಜರಕಾಲದಿಂದಲೂ ಪ್ರೋತ್ಸಾಹ ದೊರೆಯುತ್ತಾ ಬಂದಿದೆ. ಮುಧೋಳ, ಜಮಖಂಡಿ, ರಬಕವಿ–ಬನಹಟ್ಟಿ ತಾಲ್ಲೂಕುಗಳಲ್ಲಿ ಗರಡಿ ಮನೆಗಳು ಹೆಚ್ಚಿನ ಸಂಖ್ಯೆಯಲ್ಲಿವೆ. ಬಾಗಲಕೋಟೆ ತಾಲ್ಲೂಕಿನ ತುಳಸಿಗೇರಿ, ಬೇವಿನಮಟ್ಟಿ, ಶಿರೂರನಲ್ಲಿಯೂ ಕಾಣಬಹುದಾಗಿದೆ.

ಕಿರ್ಗಿಸ್ತಾನದಲ್ಲಿ ನಡೆದ 17 ವರ್ಷದ ಒಳಗಿನವರ ಏಷ್ಯನ್‌ ಕುಸ್ತಿ ಚಾಂಪಿಯನ್‌ಷಿಪ್‌ನಲ್ಲಿ ಜಿಲ್ಲೆ ಮುಧೋಳದ ಕುಸ್ತಿಪಟು ನಿಂಗಪ್ಪ ಗೆಣೇನ್ನವರ ಇತ್ತೀಚಿಗೆ ಚಿನ್ನದ ಪದಕ ಗೆದ್ದಿದ್ದಾರೆ. ಅರ್ಜುನ ಹಲಕುರ್ಕಿ, ಸಂದೀಪ ಕಾಟೆ, ಸತೀಶ ಪಡತರೆ ವಿವಿಧ ಇಲಾಖೆಗಳಲ್ದಿ ಲಗದಲ್ಲಿದ್ದಾರೆ.

ಸುನೀಲ ಪಡತರೆ, ಸದಾಶಿವ ನಲವಡೆ, ಆದರ್ಶ ತೋಟದಾರ, ಹೊಳೆಬಸು ಹೆಬ್ಬಾಳ ಮತ್ತಿತರು ರಾಷ್ಟ್ರಮಟ್ಟದಲ್ಲಿ ಪದಕ ಗಳಿಸಿದ್ದಾರೆ.2002ರಲ್ಲಿ ಯುವಜನ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯಿಂದ ಕುಸ್ತಿ ಹಾಗೂ ಸೈಕ್ಲಿಂಗ್‌ ವಸತಿ ನಿಲಯ ಆರಂಭಿಸಲಾಗಿದೆ. ಕಳೆದ ವರ್ಷದಿಂದ ಹಾಕಿಯೂ ಸೇರಿಕೊಂಡಿದೆ. ಸೈಕ್ಲಿಂಗ್‌ ತರಬೇತುದಾರರಾಗಿ ಅನಿತಾ ನಿಂಬರಗಿ, ಕುಸ್ತಿ ತರಬೇತುದಾರರಾಗಿ ಕಾಡೇಶ ನ್ಯಾಮಗೌಡ ಕ್ರೀಡಾಪಟುಗಳನ್ನು ಸಜ್ಜುಗೊಳಿಸುತ್ತಿದ್ದಾರೆ.

ವೆಲೋಡ್ರಮ್‌ ನಿರ್ಮಿಸಿ
ಬಾಗಲಕೋಟೆ
: ಕೃಷ್ಣಾ ತೀರದ ಸೈಕ್ಲಿಂಗ್ ಕಾಶಿ ಎನಿಸಿದ ಬಾಗಲಕೋಟೆ ಜಿಲ್ಲೆಯಲ್ಲಿ ತರಬೇತಿಗೆ ವೆಲೋಡ್ರಮ್ ಬೇಕಿದೆ.

ವೆಲೊಡ್ರಮ್‌ ಇಲ್ಲದ್ದರಿಂದಾಗಿ ಸೈಕ್ಲಿಂಗ್‌ ಕ್ರೀಡಾಪಟುಗಳು ರಸ್ತೆಯ ಮೇಲೆಯೇ ನಿತ್ಯ ಅಭ್ಯಾಸ ಮಾಡುವಂತಾಗಿದೆ. ಬೀಳಗಿ, ಲೋಕಾಪುರ ರಸ್ತೆಯಲ್ಲಿ ವಾಹನಗಳ ನಡುವೆಯೇ ನುಸುಳಿಕೊಂಡು ಅಭ್ಯಾಸ ಮಾಡಬೇಕಿದೆ. ಇದರಿಂದ ಜೀವಕ್ಕೂ ಅಪಾಯವಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT