ಶನಿವಾರ, ಜುಲೈ 2, 2022
25 °C

250 ಕೆ.ಜಿ ಸ್ಫೋಟಕ ಪತ್ತೆ: ಇಬ್ಬರು ವಶಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬಾಗಲಕೋಟೆ: ಜಿಲ್ಲೆಯ ಹೊನ್ನಾಕಟ್ಟಿ ಗ್ರಾಮದ ತೋಟದ ಮನೆಯೊಂದರ ಮೇಲೆ ಗುರುವಾರ ಬೆಳಿಗ್ಗೆ ದಾಳಿ ನಡೆಸಿರುವ ಬಾಗಲಕೋಟೆ ಪೊಲೀಸರು 250 ಕೆ.ಜಿ ಸ್ಫೋಟಕ ವಸ್ತುಗಳನ್ನು ಪತ್ತೆ ಹಚ್ಚಿದ್ದಾರೆ. ಘಟನೆಗೆ ಸಂಬಂಧಿಸಿದಂತೆ, ವಿಜಯ ಹಾಗೂ ಮಂಜುನಾಥ ಎಂಬುವರನ್ನು ವಶಕ್ಕೆ ಪಡೆದಿದ್ದಾರೆ.

ಕಂಕನಮೇಲಿ, ನಾರಾ ಎಂಬುವವರು ಭೋಗ್ಯಕ್ಕೆ ಪಡೆದಿದ್ದ ಮನೆಯಲ್ಲಿ ಸ್ಫೋಟಕಗಳ ಜೊತೆಗೆ ಗಂಧಕ, ಸೋಡಿಯಂ ನೈಟ್ರೇಟ್ ಹಾಗೂ ಚಾರ್ಕೋಲ್ ಪೌಡರ್ ಸಹ ಸಿಕ್ಕಿದೆ. ಕಲ್ಲು ಗಣಿಗಾರಿಕೆಗೆ ಇವುಗಳನ್ನು ಮಾರಲಾಗುತ್ತಿತ್ತು ಎಂದು ತಿಳಿದುಬಂದಿದೆ. ತನಿಖೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು