ಬುಧವಾರ, 15 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಾದಾಮಿ | ಶಾರ್ಟ್‌ ಸರ್ಕೀಟ್‌: ₹ 1.34 ಕೋಟಿ ಹಾನಿ

Published 1 ಮೇ 2024, 15:38 IST
Last Updated 1 ಮೇ 2024, 15:38 IST
ಅಕ್ಷರ ಗಾತ್ರ

ಬಾದಾಮಿ: ಪಟ್ಟಣದ ಅರಣ್ಯ ಇಲಾಖೆ ಹಿಂದೆ ವಿದ್ಯುತ್ ಶಾರ್ಟ್ ಸರ್ಕಿಟಿನಿಂದ ನಾಲ್ಕು ಅಂಗಡಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಒಂದು ಅಂಗಡಿ ಭಾಗಶಃ ಸುಟ್ಟ ಘಟನೆ ಮಂಗಳವಾರ ತಡ ರಾತ್ರಿ ನಡೆದಿದೆ.

ಐದೂ ಅಂಗಡಿ ಸೇರಿ ಅಂದಾಜು ₹ 1.34 ಕೋಟಿ ಹಾನಿಯಾಗಿದೆ ಎಂದು ಮಾಲೀಕರು ಪೊಲೀಸ್ ಠಾಣೆ ಮತ್ತು ವಿದ್ಯುತ್ ಇಲಾಖೆ ಅಧಿಕಾರಿಗಳಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಕಟ್ಟಿಗೆಯ ಅಡ್ಡೆಯಲ್ಲಿ ವಿವಿಧ ಯಂತ್ರಗಳು ಮತ್ತು ಸಾಗವಾನಿ ಬಾಗಿಲು, ಕಿಟಕಿ, ಬಾಗಿಲು ಪಡಕುಗಳ ಕಟ್ಟಿಗೆ ಸೇರಿ ಅಂದಾಜು ₹ 1.20 ಕೋಟಿ ಹಾನಿಯಾಗಿದೆ ಎಂದು ಅಂಗಡಿಯ ಮಾಲೀಕ ಸಂತೋಷ ಬಡಿಗೇರ ದೂರಿನಲ್ಲಿ ತಿಳಿಸಿದ್ದಾರೆ.

ಅಟೊ ಸರ್ವಿಸ್ ಸೆಂಟರಿನ ಅಂಗಡಿಯಲ್ಲಿ ಏಳು ಮೋಟಾರ್ ಬೈಕ್ ಸೇರಿದಂತೆ ವಿವಿಧ ವಸ್ತುಗಳು ಬೆಂಕಿಗೆ ಆಹುತಿಯಾಗಿವೆ. ಅಂದಾಜು ₹ 7 ಲಕ್ಷ ಹಾನಿಯಾಗಿದೆ ಎಂದು ಮಾಲೀಕ ಸಲೀಂ ಬಾಗವಾನ ಹೇಳಿದರು.

ಜಹಾಂಗೀರ ನದಾಫ ಮಾಲೀಕತ್ವದ ಗಾದಿ ತಯಾರಿಸುವ ಅಂಗಡಿಯಲ್ಲಿ ₹ 4 ಲಕ್ಷ ಮೌಲ್ಯದ ವಸ್ತುಗಳು, ಇಕ್ಬಾಲ್‌ ಬೇಪಾರಿ ಚಿಕನ್ ಅಂಗಡಿಯಲ್ಲಿ ₹ 1.50 ಲಕ್ಷದ ವಸ್ತುಗಳು ಮತ್ತು ರಂಗಪ್ಪ ರೋಣದ ಅಂಗಡಿಯ ಕಿಚನ್ ಕೊಠಡಿ ಭಸ್ಮವಾಗಿ ಅಂದಾಜು ₹ 1.50 ಲಕ್ಷ ಹಾನಿಯಾಗಿದೆ ಎಂದು ಪೋಲಿಸ್ ಠಾಣೆಗೆ ದೂರು ನೀಡಿದ್ದಾರೆ.

ಜಿಲ್ಲಾ ಅಗ್ನಿಶಾಮಕ ಅಧಿಕಾರಿ ಮಲ್ಲಿಕಾರ್ಜುನಪ್ಪ, ಸ್ಥಳೀಯ ಅಗ್ನಿ ಶಾಮಕ ಅಧಿಕಾರಿ, ಜಿ.ಪಿ.ಮರಡಿ, ಶ್ರೀಕಾಂತ ತೋಟಗೇರ, ಶರಣಬಸಪ್ಪ, ಮಲ್ಲಿಕಾರ್ಜುನ, ಬಾದಾಮಿ, ಬಾಗಲಕೋಟೆ ಅಗ್ನಿಸಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸಿದರು. ಹೆಚ್ಚಿನ ಅನಾಹುತವಾಗದಂತೆ ಅಂಗಡಿಯಲ್ಲಿದ್ದ ಗ್ಯಾಸ್ ಸಿಲೆಂಡರ್ ಹೊರಗೆ ತೆಗೆದು ಹೆಚ್ಚಿನ ಅನಾಹುತ ತಪ್ಪಿಸಿದರು.

ಸಾರ್ವಜನಿಕರೂ ಸಹ ಪಕ್ಕದ ಮನೆಯಲ್ಲಿದ್ದ ನೀರನ್ನು ತಂದು ಬೆಂಕಿ ನಂದಿಸುವಲ್ಲಿ ಸಹಕರಿಸಿದರು. ಸಂಸದ ಪಿ.ಸಿ. ಗದ್ದಿಗೌಡರ, ಶಾಸಕ ಭೀಮಸೇನ ಚಿಮ್ಮನಕಟ್ಟಿ, ತಹಶೀಲ್ದಾರ್ ಜೆ.ಬಿ.ಮಜ್ಜಗಿ ಭೇಟಿ ನೀಡಿದರು. ಹೆಸ್ಕಾಂ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಅಂಗಡಿ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT