ಶುಕ್ರವಾರ, ಸೆಪ್ಟೆಂಬರ್ 30, 2022
26 °C

ಕೆರೂರಿನಲ್ಲಿ ಜಾನಪದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೆರೂರ (ಬಾಗಲಕೋಟೆ): ದೇಶದ ಗ್ರಾಮೀಣ ಸೊಗಡನ್ನು ಶ್ರಿಮಂತಗೊಳಿಸಿದ್ದು ಜಾನಪದ ಕಲೆ. ಅದು ದೇಶದ ಸಂಪತ್ತಾಗಿದೆ ಎಂದು ಕನ್ನಡ ಸಾಹಿತ್ಯ ಪರಿಷತ್ತಿನ ಬಾಗಲಕೋಟೆ ಜಿಲ್ಲಾ ಘಟಕದ ಅಧ್ಯಕ್ಷ ಶಿವಾನಂದ ಶೇಲ್ಲಿಕೆರಿ ಹೇಳಿದರು.

ಕೆರೂರಿನ ದೇವಾಂಗ ಸಮುದಾಯ ಭವನದಲ್ಲಿ ನಡೆದ ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ಕಾರ್ಯ ಚಟುವಟಿಕೆಗಳ ಉಧ್ಘಾಟನೆ ಹಾಗೂ ಜಾನಪದ ಸಂಭ್ರಮ ಕಾರ್ಯಕ್ರಮ ಉಧ್ಘಾಟಿಸಿ ಅವರು ಮಾತನಾಡಿದರು.

ದೇಶದ ಗ್ರಾಮೀಣ ಸೊಗಡಿನಲ್ಲಿ ಜಾನಪದ ಕಲೆ ತನ್ನದೆಯಾದ ಶಕ್ತಿಯೊಂದಿಗೆ ಸಾಂಸ್ಕೃತಿಕ ವಲಯದ ಬೆಳವಣಿಗೆಗೆ ಗಮನಾರ್ಹ ಕೊಡುಗೆ ನೀಡಿದೆ. ಜಾನಪದ ಕಲೆ ಉಳಿದು, ಬೆಳೆಯಬೇಕಾಗಿದೆ. ಯುವ ಜನಾಂಗವನ್ನು ಸಾಹಿತ್ಯ, ಕಲೆಗಳತ್ತ ಸೆಳೆಯಬೇಕಿದೆ ಎಂದರು.

ಜಾನಪದ ಪರಿಷತ್ತಿನ ಬಾದಾಮಿ ತಾಲ್ಲೂಕು ಪದಾಧಿಕಾರಿಗಳು ಇದೇ ಸಂದರ್ಭದಲ್ಲಿ ಅಧಿಕಾರ ಸ್ವೀಕರಿಸಿದರು.

ಕೆರೂರಿನ ದೇವಾಂಗ ಸಮಾಜದ ಅಧ್ಯಕ್ಷ ಸಂಕಣ್ಣ ಹೊಸಮನಿ ಅಧ್ಯಕ್ಷತೆ ವಹಿಸಿದ್ದರು. ಕಸಾಪ ಕಾರ್ಯದರ್ಶಿ ಸಿ.ಎಸ್‌. ಬಾಳಕ್ಕವರ. ಕೋಶಾಧ್ಯಕ್ಷ ಆರ್.ಸಿ. ಚಿತ್ತವಾಡಗಿ, ಬಾದಾಮಿ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಎಫ್. ಹೊರಕೇರಿ, ಕ.ಜಾ.ಪ. ಬದಾಮಿ ತಾಲ್ಲೂಕು ಘಟಕದ ಅಧ್ಯಕ್ಷ ಲಿಂಗರಾಜ ಇದ್ದರು.

ವಿವಿದ ಜಾನಪದ ಕಲಾ ತಂಡಗಳು ದೇಶಭಕ್ತಿ ಗೀತೆ, ಸೋಬಾನೆ, ತತ್ವಪದ, ಬಿಸುಕಲ್ಲಿನ ಪದ ಹಾಡಿದರು. ಕಿತ್ತೂರ ರಾಣಿ ಚನ್ನಮ್ಮ ನಾಟಕ ಪ್ರದರ್ಶಿಸಲಾಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು