ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಮಹಾಲಿಂಗಪುರ: ಆರೋಗ್ಯ ತಪಾಸಣಾ ಶಿಬಿರ 14ಕ್ಕೆ

Published 11 ಜುಲೈ 2024, 12:55 IST
Last Updated 11 ಜುಲೈ 2024, 12:55 IST
ಅಕ್ಷರ ಗಾತ್ರ

ಮಹಾಲಿಂಗಪುರ: ಬಾಗಲಕೋಟೆಯ ಆರ್‌ಎನ್‌ಸಿ ಆಸ್ಪತ್ರೆ ಹಾಗೂ ಪಟ್ಟಣದ ಜಂಗಮ ಕ್ಷೇಮಾಭಿವೃದ್ಧಿ ಸಂಘದ ಆಶ್ರಯದಲ್ಲಿ ಜುಲೈ 14ರಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 4ರವರೆಗೆ ಪ್ರಗತಿ ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ಉಚಿತ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿದೆ.

ಸಂಘದ ಅಧ್ಯಕ್ಷ ಗುರುಪಾದಯ್ಯ ಚಟ್ಟಿಮಠ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ‘ಬಾಗಲಕೋಟೆಯ ನರರೋಗ ತಜ್ಞ ಡಾ.ರಾಕೇಶ ಎ.ವಿ., ಎಲುಬುಕೀಲು ತಜ್ಞ ಡಾ.ಸಚಿನ್ ಕಟ್ಟಿ ಹಾಗೂ ಕಿಡ್ನಿ ತಜ್ಞ ಡಾ.ಗಂಗಾಧರ ಚಿರಾಗ ಶಿಬಿರದಲ್ಲಿ ಭಾಗವಹಿಸುವರು’ ಎಂದರು.

ಶಿಬಿರಾರ್ಥಿಗಳಲ್ಲಿ ಅಗತ್ಯವಿದ್ದವರಿಗೆ ರಿಯಾಯಿತಿ ದರದಲ್ಲಿ ಚಿಕಿತ್ಸೆ ಹಾಗೂ ಶಸ್ತ್ರಚಿಕಿತ್ಸೆ ಮಾಡಲಾಗುವುದು. ಲಭ್ಯವಿರುವ ಔಷಧಗಳನ್ನು ರಿಯಾಯತಿ ದರದಲ್ಲಿ ನೀಡಲಾಗುವುದು. ಉಚಿತವಾಗಿ ರಕ್ತದ ಸಕ್ಕರೆ ಪ್ರಮಾಣ ಮತ್ತು ಬಿಪಿ ತಪಾಸಣೆ ಮಾಡಲಾಗುವುದು. ಪಟ್ಟಣ ಹಾಗೂ ಸುತ್ತಲಿನ ಗ್ರಾಮಸ್ಥರು ಶಿಬಿರದ ಪ್ರಯೋಜನ ಪಡೆದುಕೊಳ್ಳಬೇಕು. ಮಾಹಿತಿಗೆ ಮೊ:8618022827, 9845533416 ಸಂಪರ್ಕಿಸಬಹುದು ಎಂದರು.

ಬಸವರಾಜ ಅಯ್ಯನಗೌಡರ, ಬಸಯ್ಯ ಚಟ್ಟಿಮಠ, ಮಾನಿಂಗಯ್ಯ ಮನ್ನಯ್ಯನವರಮಠ, ಸಾಗರ ಮಠದ, ಮಹಾಂತೇಶ ಮನ್ನಯ್ಯನವರಮಠ, ಚನ್ನಯ್ಯ ಮಸಗುಪ್ಪಿಮಠ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT