ಹುನಗುಂದ: ಹುನಗುಂದ ಮತ್ತು ಇಳಕಲ್ ತಾಲ್ಲೂಕಿನ ಗಾಣಿಗ ಸಮಾಜದ ವತಿಯಿಂದ ನ.19ರಂದು ಬೆಳಿಗ್ಗೆ 10.30 ಗಂಟೆಗೆ ಅಮರಾವತಿ ರಸ್ತೆಯಲ್ಲಿರುವ ಗಾಣಿಗ ಸಮಾಜದ ಸಮುದಾಯ ಭವನ ಉದ್ಘಾಟನೆ ಮತ್ತು ಎರಡನೇ ಮಹಡಿಯ ಪೂಜಾ ಕಾರ್ಯಕ್ರಮ ಹಾಗೂ ಶಾಸಕ, ಸಂಸದರಿಗೆ ಸನ್ಮಾನ ಸಮಾರಂಭ ಜರುಗಲಿದೆ.

ವಿಜಯಪುರ ಗಾಣಿಗ ಗುರುಪೀಠದ ಜಯಬಸವ ಕುಮಾರಸ್ವಾಮೀಜಿ, ಕೊಲ್ಹಾರದ ದಿಗಂಬರೇಶ್ವರ ಸಂಸ್ಥಾನಮಠದ ಕಲ್ಲಿನಾಥದೇವರು ಸಾನ್ನಿಧ್ಯ ವಹಿಸುವರು. ಶಾಸಕ ವಿಜಯಾನಂದ ಕಾಶಪ್ಪನವರ ಕಾರ್ಯಕ್ರಮವನ್ನು ಉದ್ಘಾಟಿಸುವರು. ಗಾಣಿಗ ಸಮಾಜದ ಅಧ್ಯಕ್ಷ ನಿಂಗಪ್ಪ ಅಮರಾವತಿ ಅಧ್ಯಕ್ಷತೆ ವಹಿಸುವರು. ಅಥಣಿ ಶಾಸಕ ಲಕ್ಷ್ಮಣ ಸವದಿ ಜ್ಯೋತಿ ಬೆಳಗಿಸಲಿದ್ದು, ಸಂಸದ ಪಿ.ಸಿ. ಗದ್ದಿಗೌಡರ ಮುಖ್ಯಅತಿಥಿಯಾಗಿ ಆಗಮಿಸುವರು. ಸಮಾಜದ ರಾಜ್ಯಾಧ್ಯಕ್ಷ ಗುರುಣ್ಣ ಗೋಡಿ, ಪುರಸಭೆ ಸದಸ್ಯ ಚಂದಪ್ಪ ಕಡಿವಾಲ, ಮಹೇಶಪ್ಪ ಸಜ್ಜನ,ಬಸವಂತಪ್ಪ ಕುಂಟೋಜಿ, ಚಂದ್ರಶೇಖರ ಸೂಡಿ, ಶರಣಪ್ಪ ಕನ್ನೊಳ್ಳಿ, ಅಮೀನಪ್ಪ ಸಂದಿಗವಾಡ, ಬಸವರಾಜ ಇಸ್ಲಾಂಪೂರ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.