ಭಾನುವಾರ, ಜನವರಿ 16, 2022
28 °C

ಹಿಂದೂಗಳ ವಿರುದ್ಧ ಅಸಹನೆ: ಪೇಜಾವರ ಶ್ರೀ ಬೇಸರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬಾಗಲಕೋಟೆ: ‘ದೇಶದಲ್ಲಿ ಹಿಂದೂಗಳ ಬೆಳವಣಿಗೆಯ ವಿರುದ್ಧ ಅಸಹನೆ ಬೆಳೆಯುತ್ತಿದೆ. ಅದು ನಮ್ಮ (ಹಿಂದೂಗಳ) ಸಹನೆಯ ದೌರ್ಭಾಗ್ಯ’ ಎಂದು ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ‘ಬಿಜೆಪಿ ಸರ್ಕಾರ ಇರುವ ಹಿನ್ನೆಲೆಯಲ್ಲಿಯೇ ವಿರೋಧ ನಡೆಯುತ್ತಿದೆ. ಇದಕ್ಕೆ ಸರ್ಕಾರ ಎಷ್ಟು ಸಾಧ್ಯವೋ ಅಷ್ಟು ಕಡಿವಾಣ ಹಾಕಬೇಕು. ಹಾಗೆಂದು ಜನರ ವಿರೋಧಗಳನ್ನು ನೇರವಾಗಿ ಕಾನೂನು ಮೂಲಕ ಹತ್ತಿಕ್ಕುವುದು ಸರಿಯಲ್ಲ‘ ಎಂದು ಹೇಳಿದರು.

‘ಕೇಂದ್ರ, ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದಾಗಲೇ ಹಿಂದೂ ಧರ್ಮದ ಮೇಲೆ ಟೀಕಾ ಪ್ರಹಾರ ಹೆಚ್ಚುತ್ತಿದೆಯಲ್ಲ’ ಎಂಬ ಮಾಧ್ಯಮದವರ ಪ್ರಶ್ನೆಗೆ ಈ ಪ್ರತಿಕ್ರಿಯೆ ನೀಡಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು